ಇದು ‘ಬಸವ’ ಅನ್ನೋ ಮೂರಕ್ಷರದ ಸರಳ ಪದವನ್ನು ಎಷ್ಟು ಎಚ್ಚರಿಕೆಯಿಂದ ಉಚ್ಚರಿಸಬೇಕು ಅನ್ನೋ ಪಾಠ ಕಲಿಸುವ ಸಮಯ
ಬೆಂಗಳೂರು
ನವೆಂಬರ್ 25 ಬೀದರಿನಲ್ಲಿ ವಿಶ್ವಗುರು ಬಸವಣ್ಣನವರ ಮೇಲೆ ಬಸವನ ಗೌಡ ಯತ್ನಾಳ್ ಹಗುರವಾಗಿ ಮಾತನಾಡಿದ ಮೇಲೆ ಲಿಂಗಾಯತರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಇಲ್ಲಿ ಚರ್ಚೆಯಾಗಬೇಕಿರುವುದು ಬಸವಣ್ಣನವರ ಕೊನೆಯ ದಿನಗಳಲ್ಲ. ಅದನ್ನು ಚರ್ಚಿಸಲೇ ಬೇಕಾದರೆ ಅದು ಬೇರೊಂದು ಗಂಭೀರವಾದ ಸಮಯ, ಸಂಧರ್ಭದಲ್ಲಿ ನಡೆಯಲಿ. ಯತ್ನಾಳನಂತಹ ತಿಳಿಗೇಡಿ ರಾಜಕಾರಣಿಯ ಮುಖಾಂತರ ಆ ಚರ್ಚೆ ನಡೆಯುವುದು ಬೇಡ.
ಬಸವಣ್ಣನವರು ಸಾಮಾನ್ಯ ಧಾರ್ಮಿಕ ಗುರುವಲ್ಲ. ಕರ್ನಾಟಕದ ಸಾಮಾಜಿಕ ಧಾರ್ಮಿಕ ಇತಿಹಾಸಕ್ಕೆ ತಿರುವು ಕೊಟ್ಟ ಮಹಾನ್ ವ್ಯಕ್ತಿ. ಅಂದು ಅವರ ನೇತೃತ್ವದಲ್ಲಿ ನಡೆದ ದಂಗೆಯಿಂದ ದಕ್ಷಿಣ ಭಾರತದ ಒಂದು ಬಹು ದೊಡ್ಡ ಭಾಗ ಇನ್ನೂ ಅದುರುತ್ತಿರುವುದನ್ನು ನಾವು ನೋಡಬಹುದು. ಅವರ ಕಾರ್ಯ ಆಪೂರ್ಣವಾಗಿದ್ದರೂ, 900 ವರ್ಷಗಳಿಂದ ಅವರ ಆಶಯ, ತತ್ವ ಸಿದ್ದಂತ ದಾರಿ ದೀಪವಾಗಿಯೇ ಉಳಿದಿವೆ. ಇಂತಹ ವ್ಯಕಿಯ ಬಗ್ಗೆ, ಅವರ ಕೋಟಿ ಕೋಟಿ ಭಕ್ತರ, ಅಭಿಮಾನಿಗಳ ಭಾವನೆಗೆ ಬೆಲೆ ಕೊಡದೆ, ಉಡಾಫೆಯಾಗಿ ಮಾತನಾಡಿರುವುದು ಮೊದಲು ಚರ್ಚೆಯಾಗಬೇಕು.
ಯತ್ನಾಳರಿಗೆ ಪ್ರತಿಭಟನೆ ಬಿಸಿ ಮುಟ್ಟಿಲ್ಲ
ವಕ್ಫ್ ವಿರುದ್ಧ ಹೋರಾಟ ಮಾಡದಿದ್ದರೆ ಬಸವಣ್ಣನವರಂತೆ ಹೊಳೆಗೆ ಜಿಗಿಯಿರಿ, ಯತ್ನಾಳರ ಈ ಟೀಕೆಯ ಅರ್ಥವೇನು? 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನೇತಾರ ಬಸವಣ್ಣನವರು ಯಾವುದೇ ಹೋರಾಟ ಮಾಡಲಿಲ್ಲ, ಅವರು ಹೊಳೆಗೆ ಹಾರುವಷ್ಟು ಹೇಡಿಯಾಗಿದ್ದರು ಎನ್ನುವುದೇ ಇದರ ಅರ್ಥ.
ಯತ್ನಾಳರ ಭಾಷಣವನ್ನು ನಾವು ಮಾತ್ರ ಈ ರೀತಿ ಅರ್ಥೈಸುತ್ತಿಲ್ಲ. ಅವರ ವಿಡಿಯೋ ನೋಡಿ ವಿಶ್ಲೇಷಿಸಿರುವ ವಿದ್ವಾಂಸರ ಅಭಿಪ್ರಾಯ ಇದು. ರಾಜ್ಯದ ಹಲವೆಡೆ ನಡೆದಿರುವ ಪ್ರತಿಭಟನೆಗಳಲ್ಲಿ ಕಾಣಿಸುತ್ತಿರುವ ಆಕ್ರೋಶ ಇದು. ಯತ್ನಾಳರ ಬೇಜವಾಬ್ದಾರಿ ಮಾತನ್ನು ಜನ ಅರ್ಥ ಮಾಡಿಕೊಂಡಿರುವುದು ಹೀಗೆ.
ಯತ್ನಾಳ ವಿರುದ್ಧ ಪಕ್ಷಾತೀತವಾಗಿ ಬಸವ ಪರ ಸಂಘಟನೆಗಳಿಂದ, ಸಾಮಾನ್ಯ ಲಿಂಗಾಯತರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ನೆನ್ನೆ ಮೊನ್ನೆ ಯತ್ನಾಳ್ ನೀಡಿರುವ ಹೇಳಿಕೆ ಗಮನಿಸಿದರೆ, ಅವರಿಗೆ ಇನ್ನೂ ಇದರ ಬಿಸಿ ಮುಟ್ಟಿರುವ ಸೂಚನೆಯಿಲ್ಲ. ಯಾವುದೇ ಆತಂಕವಿಲ್ಲದೆ ತಮ್ಮ ಮೊಂಡುವಾದ ಮುಂದುವರೆಸುತ್ತಿದ್ದಾರೆ. ಬನ್ನಿ ಒಂದು ಕೈ ನೋಡಿಕೊಳ್ಳುತೇನೆ ಎನ್ನುವ ರೀತಿಯಲ್ಲಿಯೇ ಮಾತನಾಡುತ್ತಿದ್ದಾರೆ.
RSS, ಯತ್ನಾಳ್ ಲವ ಕುಶ
ಇಷ್ಟೆಲ್ಲಾ ರಾದ್ದಂತವಾದರೂ ಕುಂದದ ಯತ್ನಾಳ್ ಧೈರ್ಯಕ್ಕೆ ಕಾರಣವೇನು. ಒಂದು, ಅವರಿಗಿರುವ RSS ಬೆಂಬಲ. ಯಡಿಯೂರಪ್ಪನವರನ್ನು ಹಣಿಯಲು RSS ಬಿಟ್ಟಿರುವ ಆಸ್ತ್ರ ಯತ್ನಾಳ್. ತಾವು ಏನೇ ಮಾಡಿದರೂ RSS ನಾಯಕ ಬಿ ಎಲ್ ಸಂತೋಷ್ ತಮ್ಮ ಖಾಸಾ ಅಂಗ ರಕ್ಷೆಕರ ಹಾಗೆ ಇದ್ದಾರೆ ಎನ್ನುವುದು ಯತ್ನಾಳ್ ನಂಬಿಕೆ.
ಯತ್ನಾಳರ ದುರ್ವರ್ತನೆಯಲ್ಲಿ BJP ಪಾಲೂ ಇದೆ ಎನ್ನವುದು ಮರೆಯಬಾರದು. ಅವರ ಹೇಳಿಕೆಯಿಂದ ಇಷ್ಟೆಲ್ಲಾ ಪ್ರತಿರೋಧ ಬರುತ್ತಿದ್ದರೂ ಲಿಂಗಾಯತರ ಓಟು ತಿಂದು ಬೆಳೆದ ಪಕ್ಷ ಅದನ್ನು ಖಂಡಿಸುವ, ನಿಲ್ಲಿಸುವ ಗೋಜಿಗೆ ಹೋಗಿಲ್ಲ. ಇದು ಬಸವಣ್ಣನವರಿಗೆ ಯತ್ನಾಳ್ ಮಾತ್ರವಲ್ಲ, BJP, RSS ಕೂಡ ತೋರಿಸುತ್ತಿರುವ ಅಗೌರವ.
ಬಸವಣ್ಣನವರು ಹೋರಾಟ ಮಾಡದೆ ಹೊಳೆಗೆ ಹಾರಿದರು ಎನ್ನುವ ಮಾತು RSSಗೆ ಹಿಡಿಸುವ ಮಾತು. ಕಲ್ಯಾಣದ ಕ್ರಾಂತಿಯ ನೆನಪನ್ನು ಅಳಿಸುವ ಬಹು ದೊಡ್ಡ ಸಾಹಸಕ್ಕೆ RSS ಕೈ ಹಾಕಿದೆ. ಕಲ್ಯಾಣದಲ್ಲಿ ಕ್ರಾಂತಿ ನಡೆಯಲಿಲ್ಲ ಎನ್ನುವುದು ಅವರ ವಚನ ದರ್ಶನ ಪುಸ್ತಕದ ಮುಖ್ಯ ವಾದ. RSS ಮತ್ತು ಈ ವಿಷಯದಲ್ಲಿ ಲವ ಕುಶರಂತೆ RSS, ಯತ್ನಾಳ್ ಕೆಲಸ ಮಾಡುತ್ತಿದ್ದಾರೆ.
ಯತ್ನಾಳ್ ಮತ್ತು RSSನವರಿಗೆ ಪ್ರಶ್ನೆ ಕೇಳುವ ಲಿಂಗಾಯತರು ಅಲ್ಪ ಸಂಖ್ಯಾತರು ಎಂಬ ಭಾವನೆ ಇದೆ. ಅವರು ಪ್ರಕಾರ ಬಹುತೇಕ ಲಿಂಗಾಯತರು ಬಹಳ ವರ್ಷಗಳಿಂದ ಯಡಿಯೂರಪ್ಪ ಕುಟುಂಬದ ತರಹ ಹೋಮ ಹವನ ಮಾಡಿಕೊಂಡು, ವಾಟ್ಸ್ ಆಪ್ ಯೂನಿವರ್ಸಿಟಿಯಲ್ಲಿ ಓದಿಕೊಂಡು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ.
ಇವರಿಗೆ ಮಾಧ್ಯಮಗಳ ಮೇಲೆ ಮೇಲೆ ಸಂಪೂರ್ಣ ಹಿಡಿತವಿದೆ. TV ಚಾನಲುಗಳಲ್ಲಿ, ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ತಮ್ಮ ವಿರುದ್ಧವಾಗಿ ಯಾವುದೇ ವಿಚಾರ ಜನರಿಗೆ ತಲಪದಂತೆ ನೋಡಿಕೊಳ್ಳುವ ಸಾಮರ್ಥ್ಯವಿದೆ.
ನಿಮ್ಮ ವಿಡಿಯೋ ಕಳಿಸಿ
ಈ ಸನ್ನಿವೇಶದಲ್ಲಿ ಬಸವ ಅನುಯಾಯಿಗಳ ಮುಂದಿರುವ ಮಾರ್ಗವೇನು?
ಯತ್ನಾಳರು ಮತ್ತೆ ಅವರ ಹಿಂದಿರುವ ತಂಡ ಬಸವಣ್ಣನವರಿಗೆ ತೋರಿಸುತ್ತಿರುವ ಅಗೌರವವನ್ನು ಜನರಿಗೆ ತಲುಪಿಸಬೇಕು. ಈ ಕೆಲಸ ಮಾಡಲು ಬಸವ ಮೀಡಿಯಾದಿಂದ ಒಂದು ವಿಡಿಯೋ ಅಭಿಯಾನ ಶುರು ಮಾಡುತ್ತಿದ್ದೇವೆ.
ಯತ್ನಾಳರ ಹೇಳಿಕೆ ವಿವರಿಸುವ ಒಂದು ಸಣ್ಣ ವಿಡಿಯೋ ಮಾಡಿ ನಮ್ಮ ಓದುಗರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಇದನ್ನು ದಯವಿಟ್ಟು ನೋಡಿ ನಿಮ್ಮ ಪ್ರತಿಕ್ರಿಯೆಯನ್ನು ಒಂದು ನಿಮಿಷದ ವಿಡಿಯೋ ಮೂಲಕ ಹಂಚಿಕೊಳ್ಳಿ. ಇದನ್ನು ನಿಮ್ಮ ಮೊಬೈಲ್ ಫೋನಿನಲ್ಲಿ ನೀವೇ ಮಾಡಬಹುದು. ನಿಮ್ಮ ಮುಂದೆ, ಮುಖದ ಮೇಲೆ ಬೆಳಕಿರಲಿ. ಸುತ್ತಾ ನಿಶ್ಯಬ್ದವಾಗಿರಲಿ, ಧ್ವನಿ ಸ್ಪಷ್ಟವಾಗಿ ಬರಲಿ.
ಉತ್ತಮವಾದ ಪ್ರತಿಕ್ರಿಯೆಗಳನ್ನು ಪ್ರಕಟಿಸುತ್ತೇವೆ. ಎಲ್ಲರೊ ಸೇರಿ ಅವುಗಳನ್ನು ಹಂಚಿಕೊಳ್ಳೋಣ. ಒಂದಷ್ಟು ವಿಡಿಯೋಗಳನ್ನು ವೈರಲ್ ಮಾಡಿ ಅದರ ಚುರುಕನ್ನು ಯತ್ನಾಳ್ ಮತ್ತವರ ಹಿತೈಷಿಗಳಿಗೆ ಮುಟ್ಟಿಸೋಣ.
‘ಬಸವ’ ಅನ್ನೋ ಮೂರಕ್ಷರದ ಸರಳ ಪದವನ್ನು ಎಷ್ಟು ಎಚ್ಚರಿಕೆಯಿಂದ ಉಚ್ಚರಿಸಬೇಕು ಅನ್ನೋ ಪಾಠ ಕಲಿಸೋಣ.
ವಿಡಿಯೋ ಕಳಿಸಲು ವಾಟ್ಸ್ ಆಪ್ ಲಿಂಕ್
https://chat.whatsapp.com/G1fMixQAz6kE2dYl6n2tq1
ಬಸವ ಎಂಬ ಪದ ಬಳಕೆ ಮಾಡಬೇಕಾದರೆ ಯೋಚಿಸಿ ನುಡಿಯಬೇಕು ಆ ರೀತಿಯ ಕೆಲಸವಾಗಬೇಕಿದೆ…ಬಸವ ಮೀಡಿಯಾದ ಆಲೋಚನೇ ಸರಿಯಿದೆ. ನಾನು ಕಳುಹಿಸುತ್ತೇನೆ
ಯತ್ನಾಳ್ ಹೇಳಿಕೆ ಆತನ ವಿರುದ್ಧ
ಮತ್ತು ಆತನ ಹಿಂದೆ ನಿಂತು ಲಿಂಗಾಯತ
ಧರ್ಮದ ವಿರುದ್ಧ ಕುತಂತ್ರ ಮಾಡುತ್ತಾ
ನಿಂತಿರುವ ಸಂಘ ಪರಿವಾರ ಮತ್ತು
ಬಿಜೆಪಿ ಪಕ್ಷದ ವಿರುದ್ಧ ಆ ಪಕ್ಷದ ಯಾವ ಲಿಂಗಾಯತ ರಾಜಕಾರಣಿಯು ಪ್ರತಿಕ್ರಿಯೆ
ನೀಡುತ್ತಿಲ್ಲ ಈ ಬಗ್ಗೆ ಲಿಂಗಾಯತ ರಾಜಕಾರಣಿಗಳು ತಾವು ಲಿಂಗಾಯತರೇ
ಅಥವಾ ಮನು ಸಿದ್ದಾಂತ ಪಕ್ಷದ ಗುಲಾಮರು
ಎಂಬುದನ್ನು ಸ್ಪಷ್ಟೀಕರಣ ನೀಡಬೇಕು.