(ವಿಶ್ವಗುರು ಬಸವಣ್ಣನವರ ಮೇಲೆ ವಿವಾದಾಸ್ಪದ ಹೇಳಿಕೆ ನೀಡಿರುವ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ತೀವ್ರವಾಗಿ ಖಂಡಿಸಿ ಅನುಭವಮಂಟಪ ಅಧ್ಯಕ್ಷರಾದ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿಕೆ ನೀಡಿದ್ದಾರೆ.)
ಭಾಲ್ಕಿ
ಬಸವನಗೌಡ ಪಾಟೀಲ ಯತ್ನಾಳ ಅವರು ವಿಶ್ವಗುರು ಬಸವಣ್ಣನವರ ಕುರಿತು ಹೇಳಿರುವ ಮಾತುಗಳು ಇತಿಹಾಸದ ಅರುವಿಲ್ಲದ ಮಾತುಗಳಾಗಿವೆ. ಬಸವಜನ್ಮ ಭೂಮಿಯಾದ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದ ಯತ್ನಾಳ ಅವರು ಬಸವಣ್ಣನವರ ಕುರಿತು ಇಂತಹ ಮಾತುಗಳು ಆಡುವುದು ಅವರಿಗೆ ಶೋಭೆ ತರುವಂತಹದ್ದಲ್ಲ.
ಇಂದು ಬಸವಣ್ಣನವರ ತತ್ವಗಳನ್ನು ಜಗತ್ತೆ ಅನುಸರಿಸುತ್ತಿರುವ ಸಂದರ್ಭದಲ್ಲಿ ಬಸವಭೂಮಿಯಲ್ಲಿ ಹುಟ್ಟಿದ ಯತ್ನಾಳ ಅವರಿಗೆ ಬಸವಣ್ಣನವರ ಚರಿತ್ರೆ ಮತ್ತು ಸಿದ್ಧಾಂತಗಳು ಸರಿಯಾಗಿ ಗೊತ್ತಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.
ಅವರು ಬಸವಪ್ರಜ್ಞೆಯನ್ನು ಬೆಳೆಸಿಕೊಂಡು ಬಸವಣ್ಣನವರ ನಿಜವಾದ ಚರಿತ್ರೆ ಅಧ್ಯಯನ ಮಾಡಬೇಕು. ಬಸವಣ್ಣನವರ ಕುರಿತು ಇಲ್ಲಸಲ್ಲದ ಮಾತುಗಳನ್ನು ಆಡಿ ಜನರ ಭಾವನೆಗೆ ಧಕ್ಕೆಯನ್ನುಂಟು ಮಾಡಬಾರದು.
ಬಸವಣ್ಣನವರ ಸಿದ್ದಾಂತದ ಬಗ್ಗೆ ಮತ್ತು ಬಸವಣ್ಣನವರ ಇತಿಹಾಸವನ್ನ ತಿಳಿದುಕೊಳ್ಳುವ ವ್ಯವಧಾನ ಯತ್ನಾಳ್ ಗೆ ಎಲ್ಲಿದೆ. ಅವನಿಗೆ ಅವಿವೇಕಿ ಅಂದ್ರೂ ತಪ್ಪಾಗಲಾರದು
ಹಣ ಅಧಿಕಾರಗಳ ಬೆನ್ನು ಹತ್ತಿದವರ ಹೆಣ ಬಿದ್ದರೂ ಬಸವಣ್ಣ ಹಾಗೂ ಬಸವ ತತ್ವವು ಅವರಿಗೆ ಅರ್ತವಾಗುವುದಿಲ್ಲ…..ಆ ಗುಂಪಿಗೆ ಸೇರಿದ ವ್ಯಕ್ತಿ …ದಾರಿ ತಪ್ಪಿದ ಯತ್ನಾಳ್…