(ವಿಶ್ವಗುರು ಬಸವಣ್ಣನವರ ಮೇಲೆ ವಿವಾದಾಸ್ಪದ ಹೇಳಿಕೆ ನೀಡಿರುವ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ಖಂಡಿಸಿ ಗುಣತೀರ್ಥವಾಡಿಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಹೇಳಿಕೆ ನೀಡಿದ್ದಾರೆ.)
ಬಸವ ಕಲ್ಯಾಣ
ವಕ್ಪ್ ಮಂಡಳಿ ಆಸ್ತಿ ವಿರುದ್ಧ ಸಭೆಯಲ್ಲಿ ಬಸವರಾಜ ಪಾಟೀಲ ಯತ್ನಾಳ ಅವರು ಹಿಂದುಗಳು ಮುಸ್ಲೀಂರ ವಿರುದ್ಧ ಹೋರಾಟ ಮಾಡದಿದ್ದರೆ ಬಸವಣ್ಣನವರ ಹಾಗೆ ಹೊಳೆ ಹಾರಿ ಸಾಯಬೇಕಾಗುತ್ತೆ ಎಂದು ವ್ಯಂಗವಾಗಿ ಮಾತನಾಡಿದ್ದು ಭಂಡತನದ ಪರಮಾವಧಿ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ.
ಸಾಂವಿಧಾನಿಕ ಹುದ್ದೆಯ ಶಾಸಕ ಸ್ಥಾನದಲ್ಲಿರುವ ಯತ್ನಾಳವರಿಗೆ ಬುದ್ಧಿ ಭ್ರಮಣೆಯಾದಂತಿದೆ. ಜಾತಿ ಮತ ಪಂಥ ಧರ್ಮವೆನ್ನದೆ ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನೂ ಸಮನಾಗಿ ಕಾಣುವ ಕನಿಷ್ಟ ವಿಚಾರವು ಇಲ್ಲದೆ ಕೋಮುಗಲಭೆಗೆ ಪ್ರಚೋದನೆ ಕೊಡುತ್ತಿರುವುದು ಕಳವಳಕಾರಿ ಸಂಗತಿ. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಲಿಂಗಾಯತ ಧರ್ಮದಲ್ಲಿ ಹುಟ್ಟಿ, ವೈದಿಕರ ಗುಲಾಮನಂತೆ ವರ್ತಿಸುತ್ತಿರುವುದು, ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿ ಬಸವಾಭಿಮಾನಿಗಳಿಗೆ ನೋವನ್ನುಂಟು ಮಾಡಿರುವ ಯತ್ನಾಳ ಅವರನ್ನು ಬಿಜೆಪಿ ಹೈಕಮಾಂಡ್ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು.
ವಿಶ್ವಮಟ್ಟದಲ್ಲಿ ಬಸವಣ್ಣನವರ ವಚನಗಳು ಚರ್ಚಿತವಾಗಿ ಹೊರ ದೇಶದವರು ಬಸವತತ್ವ ಪಾಲಿಸಲು ಮುಂದಾಗುತ್ತಿದ್ದಾರೆ. ಆದರೆ ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ಯತ್ನಾಳ ದೀಪದ ಬುಡದಲ್ಲಿ ಕತ್ತಲು ಇದ್ದಂತೆ ಇರುವರು. ಬಸವಣ್ಣನವರ ಚರಿತ್ರೆಯನ್ನು ಸರಿಯಾಗಿ ಅರಿಯದೆ ರಾಜಕೀಯ ಕ್ಷೋಭೆಗೊಳಗಾಗಿ ಮಾತನಾಡುತ್ತಿರುವ ಯತ್ನಾಳರವರು ಸ್ವಧರ್ಮ ದ್ವೇಷಿಗಳಾಗಿದ್ದಾರೆ.
ಲಿಂಗಾಯತ ಧರ್ಮ ಸಿದ್ಧಾಂತ ಗಾಳಿಗೆ ತೂರಿ ಆರ್ ಎಸ್ ಎಸ್ ಗುಲಾಮರಾಗಿ ಈ ರೀತಿ ಬಸವಣ್ಣನವರಿಗೆ ಅಪಮಾನ ಮಾಡುವುದು ನಾಚಿಕೆಗೇಡು. ಯತ್ನಾಳ್ ರವರು ವಚನಗಳೆನ್ನುವ ಹಾಲನ್ನು ಕುಡಿಯದೆ, ತಗಣಿಯಾಗಿ ಲಿಂಗಾಯತ ಧರ್ಮಿಯರ ಸ್ವಾಭಿಮಾನದ ರಕ್ತ ಹೀರುತ್ತಿರುವುದನ್ನು ಲಿಂಗಾಯತ ಸಮಾಜ ಗಮನಿಸುತ್ತಿದೆ. ಹಂಜರ ಬಲ್ಲಿತ್ತೆಂದು, ಅಂಜದೆ ಓದುವ ಗಿಳಿಯೇ, ಎಂದೆಂದೂ ಅಳಿಯೆನೆಂದು ಗುಡಿಗಟ್ಟಿದೆಯಲ್ಲಾ ನಿನ್ನ ಮನದಲ್ಲಿ ಮಾಯಾಮಂಜರ ಕೊಲುವರೆ ನಿನ್ನ ಹಂಜರ ಕಾವುದೆ, ಕೂಡಲಸಂಗಮದೇವನಲ್ಲದೆ? ಎಂದು ಗುರು ಬಸವಣ್ಣನವರ ಹೇಳುವಂತೆ
ಕೂಡಲೇ ಎಚ್ಚೆತ್ತುಕೊಂಡು ವೈದಿಕರ ಗುಲಾಯಗಿರಿಯಿಂದ ಹೊರಬಂದು ಬಸವಭಕ್ತರ ಭಾವನೆಗೆ ಬೆಲೆ ಕೊಟ್ಟು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ವೈದಿಕರು ತೋಡುವ ಖೆಡ್ಡಾಕ್ಕೆ ಬಿದ್ದು ಒದ್ದಾಡುವಾಗ ಯಾರು ಬರುವರು ಎಂಬ ಎಚ್ಚರವಿರಲಿ.
ಸರಿಯಾಗಿ ಹೇಳಿದ್ದೀರಿ ಸ್ವಾಮೀಜಿ
ಥು ಅಂತ ಉಗಿರಿ ಬಾಯಿ ಹರಕ ಯತ್ನಾಳ್
ಸ್ವಾಮೀಜಿ ತಮ್ಮ ಭಕ್ತರಿಗೆ ಮತ್ತು ಅನುಯಾಯಿಗಳಿಗೆ ಅವರನ್ನು ರಾಜಕೀಯವಾಗಿ ಬಹಿಷ್ಕಾರ ಹಾಕಲು ತಿಳಿಸಿ.
ಎಲ್ಲಾ ಸ್ವಾಮಿಗಳು ಈ ರೀತಿಯ ಹೇಳಿಕೆ ನೀಡುವದಲ್ಲದೆ ಅವರೊಂದಿಗೆ ಮಾತನಾಡಿ ನಿಜದ ನಿಲುವು ತಿಳಿಸಿ ಅವರ ಭಂಡತನಕ್ಕೆ ತಕ್ಕ ಶಾಸ್ತಿಮಾಡಬೇಕು. ಜಯ ಬಸವ! ಜೈ ಲಿಂಗಾಯತ!