ಬಸವಣ್ಣನವರು ಹೊಳೆ ಹಾರಿ ಸತ್ತರು ಎಂದು ಯತ್ನಾಳ ಹೇಳಿರುವುದು ಸುಳ್ಳು: ಮಾತೆ ಗಂಗಾದೇವಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೂಡಲಸಂಗಮ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ವೈಭವೀಕರಿಸುತ್ತಿರುವ ಸನಾತನ ಧರ್ಮ, ಹಿಂದೆ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಅಡ್ಡಿಯುಂಟು ಮಾಡಿತ್ತು, ಕಿರುಕುಳ ಕೊಟ್ಟಿತ್ತು ಎಂಬುದನ್ನು ಎಲ್ಲರೂ ಅರಿಯಬೇಕು’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ.

‘ಸಾಮಾಜಿಕ ಕ್ರಾಂತಿಯ ಮೂಲಕ ಬದಲಾವಣೆ ತಂದ ಬಸವಣ್ಣನವರು ಕ್ರಾಂತಿಕಾರಿಯಾಗಿದ್ದರು. ‘ಬಸವಣ್ಣನವರು ಹೊಳೆ ಹಾರಿ ಸತ್ತರು’ ಎಂದು ಯತ್ನಾಳ ಹೇಳಿರುವುದು ಶುದ್ಧ ಸುಳ್ಳು. ಸನಾತನಿಗಳನ್ನು ವೈಭವಿಕರಿಸಲು, ಪ್ರಚಾರದ ಹುಚ್ಚಿಗೆ ತಪ್ಪು ಮಾತನಾಡಬಾರದು. ಬಸವಣ್ಣನವರ ಜೀವನ, ವಚನಗಳ ಕುರಿತು ಅಧ್ಯಯನ ಮಾಡುವ ಕೆಲಸ ಮಾಡಬೇಕು’ ಎಂದಿದ್ದಾರೆ.

‘ಬಸವಣ್ಣನಿಗೆ ಜನ್ಮ ಕೊಟ್ಟ ಜಿಲ್ಲೆಯಲ್ಲಿಯೇ ಬಸವಣ್ಣನ ಹೆಸರು ಇಟ್ಟುಕೊಂಡು ಬದುಕುತ್ತಿರುವ ನೀವು (ಯತ್ನಾಳ) ಬಸವಣ್ಣನ ಚರಿತ್ರೆ ಅರಿಯುವ ಕೆಲಸ ಮಾಡಿ. ಇತಿಹಾಸಕ್ಕೆ ಅಪಾಚಾರ ಮಾಡಬೇಡಿ. ಬಸವಣ್ಣನ ಕುರಿತು ಮಾತನಾಡುವಾಗ ಎಚ್ಚರಿಕೆ ಇರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಬಸವಾಭಿಮಾನಿಗಳು ತಕ್ಕ ಉತ್ತರ ಕೊಡುತ್ತಾರೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
3 Comments

Leave a Reply

Your email address will not be published. Required fields are marked *