ಪೂಜ್ಯ ದಿಂಗಾಲೇಶ್ವರ ಸ್ವಾಮಿಗಳಿಗೆ ಎಸ್ ಎಂ ಜಾಮದಾರ್ ಪ್ರತಿಕ್ರಿಯೆ
ಬೆಂಗಳೂರು
ನಿಮ್ಮ ಪತ್ರಿಕೆಯಲ್ಲಿ ಪೂಜ್ಯ ದಿಂಗಾಲೇಶ್ವರ ಸ್ವಾಮಿಗಳು ನನ್ನ ಬಗ್ಗೆ ಮಾತನಾಡಿದ ವರದಿ ಪ್ರಕಟವಾಗಿದೆ. ಅದರ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ನಾಳೆಯ ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಈ ಮೂಲಕ ವಿನಂತಿಸುತ್ತೇನೆ. ನನ್ನ ಪ್ರತಿಕ್ರಿಯೆ ಈ ಕೆಳಗಿನಂತಿದೆ.
ಪೂಜ್ಯ ದಿಂಗಾಲೇಶ್ವರ ಸ್ವಾಮಿಗಳು ನಿನ್ನೆಯ ಸುದ್ದಿ ಗೋಷ್ಟಿಯಲ್ಲಿ ಮಾತನಾಡುತ್ತ ಎರಡು ಪ್ರಮುಖ ಸತ್ಯಗಳನ್ನು ಅನಾವರಣಗೊಳಿಸಿದ್ದಾರೆ.
ಮೊದಲನೆಯದು, “ಪಂಚಾಚಾಯ೯ರು ಬಸವಣ್ಣನವರನ್ನು ಒಪ್ಪುವುದಿಲ್ಲ ಎನ್ನುವುದು ಸತ್ಯ. ಮತ್ತು ಬಸವಣ್ಣನವರ ಫೊಟೋ ಕೆಳಗೆ ಕೂಡ ಹೊಗುವುದಿಲ್ಲ ಎನ್ನುವುದು ಸತ್ಯ. ಅವರು ತಪ್ಪು ಮಾಡಿದ್ದಾರೆ” ಎಂದು ಸಾವ೯ಜನಿಕವಾಗಿ ಹೇಳಿದ್ದಕ್ಕೆ ನಾವು ಅವರನ್ನು ಅಭಿನಂದಿಸುತ್ತೇವೆ ಮತ್ತು ಅವರ ಹೇಳಿಕೆಯನ್ನು ಸ್ವಾಗತಿಸುತ್ತೇವೆ.
ಹಾಗಿದ್ದರೆ, ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯಲ್ಲಿ ನಡೆಯುವ ಸಭೆಯಲ್ಲಿ ಎಲ್ಲ ಪಂಚಾಚಾಯ೯ರಿಂದ ದಿಂಗಾಲೇಶ ಸ್ಡಾಮಿಗಳು ‘ಬಸವಣ್ಣನವರನ್ನು ಒಪ್ಪುತ್ತ್ತೇವೆ ಮತ್ತು ಬಸವ ತತ್ವಗಳನ್ನು ಮನ್ನಿಸುತ್ತೇವೆ’ ಎಂದು ಸಾವ೯ಜನಿಕರ ಮುಂದೆ ಹೇಳಿಸುವ ಹೊಣೆ ಹೊತ್ತುಕೊಳ್ಳುತ್ತಾರೆಯೇ?
ಒಂದು ವೇಳೆ ಐದೂ ಪೀಠಗಳು ಆ ರೀತಿ ಒಪ್ಪಿಕೊಂಡರೆ ನಾವೆಲ್ಲ ನಮ್ಮ ನಮ್ಮ ವಿರೋಧಗಳನ್ನು ಹಿಂದೆ ತೆಗೆದುಕೊಳ್ಳುತ್ತೇವೆ. ಮತ್ತು ಒಂದಾಗಲು ಸಿದ್ಧ. ಇದು ನಮ್ಮ ಆಶ್ವಾಸನೆ.
ಎರಡನೆಯದು, ದಿಂಗಾಲೇಶ್ವರರು ಅಖಿಲ ಭಾರತ ವೀರಶೈವ ಮಹಾಸಭೆಯ ಮೂವರನ್ನು ಮಹಾಭಾರತದ ಯುಧಿಷ್ಠಿರ, ಆಜು೯ನ ಮತ್ತು ಭೀಮರಿಗೆ ಹೋಲಿಸಿದ್ದಾರೆ. ತಮ್ಮ ಕಣ್ಣ ಮುಂದೆಯೇ ತಮ್ಮ ಪತ್ನಿ ದ್ರೌಪದಿಯನ್ನು ದುಶ್ಯಾಸನ-ಕೌರವರು ಬೆತ್ತಲೆಗೊಳಿಸುತ್ತಿದ್ದಾಗ ಈ ಮೂವರು ಏನು ಮಾಡುತ್ತಿದ್ದರು?
ಅದೇ ಉಪಮೆಯನ್ನು ಮುಂದುವರೆಸಿ, ದ್ರೌಪದಿಯ ಸ್ಥಳದಲ್ಲಿ ಬಸವಣ್ಣನವರನ್ನು ಇರಿಸೋಣ. ಎಲ್ಲಾ ಪಂಚಾಚಾಯ೯ರು ಪ್ರತಿಯೊಂದು ಮೆರವಣಿಗೆಯಲ್ಲಿ ಬಸವಣ್ಣವರ ಫೋಟೊ, ಬಸವಣ್ಣವರ ಬ್ಯಾನರ್, ಫ್ಲೆಕ್ಷ ಬೋಡ೯ಗಳನ್ನು ಕಿತ್ತೆಸೆದು ಅಪಮಾನ ಮಾಡುತ್ತಿದ್ದಾಗ ವೀರಶೈವ ಮಹಾಸಭೆಯ ನಿಮ್ಮ ಯುಧಿಷ್ಠಿರ, ಅಜು೯ನ ಮತ್ತು ಬಲಭೀಮ ಪೋಲಿಸ ಅಧಿಕಾರಿಗಳು ಎನು ಮಾಡುತ್ತಿದ್ದರು? ಕಡಲೆ ಪುರಿ ತಿನ್ನುತ್ತಾ ಕುಳಿತಿದ್ದರೆ? ಗಾಢ ನಿದ್ರೆಯಲ್ಲಿದ್ದರೆ? ಅಥವಾ ಬಸವಣ್ಣನವರ ಮೇಲೆ ಅವರಿಗೂ ದ್ವೇಷ, ಅಸೂಯೆ ಇತ್ತೇ? ದಯವಿಟ್ಟು ಉತ್ತರಿಸಿರಿ.
ಮೂರನೆಯದು, ದಿಂಗಾಲೇಶ್ವರರು ʼಅಜು೯ನʼ ಎಂದು ಬಣ್ಣಿಸಿದ ಪಾಂಡವನೊಬ್ಬ, ದಿಂಗಾಲೇಶ್ವರರೇ ಬಣ್ಣಿಸಿದ ಕೌರವರಲ್ಲಿ ಒಬ್ಬರಾದ ಶ್ರೀ ರಂಭಾಪುರಿ ಸ್ವಾಮಿಗಳು ಬಸವಣ್ಣನ ಕಮ೯ಭೂಮಿ ಬಸವ ಕಲ್ಯಾಣದಲ್ಲಿಯೇ ಅಡ್ಡ ಪಲ್ಲಕ್ಕಿ ನಡೆಸಲು ಮುಂದಾದಾಗ ನಿಮ್ಮ ಅಜು೯ನ ಏನು ಮಾಡುತ್ತಿದ್ದರು?
ಮೂರನೆಯದು, ಕೌರವರಲ್ಲಿ ಒಬ್ಬರಾದ ಶ್ರೀ ರಂಭಾಪುರಿ ಸ್ವಾಮಿಗಳು ಬಸವಣ್ಣನ ಕಮ೯ಭೂಮಿ ಬಸವ ಕಲ್ಯಾಣದಲ್ಲಿಯೇ ಅಡ್ಡ ಪಲ್ಲಕ್ಕಿ ನಡೆಸಲು ಮುಂದಾಗಿದ್ದಾರೆ. ಇದನ್ನು ನಡೆಸುವ ಸ್ವಾಗತ ಸಮಿತಿಯ ಅಧ್ಯಕ್ಷ ಇದೇ ನಿಮ್ಮ ʼಅಜು೯ನʼ! ಇದರಥ೯ವೇನೂ ಶ್ರೀಗಳೆ?
ಕೊನೆಯದಾಗಿ, ನನ್ನನ್ನು ದಿಂಗಾಲೇಶ್ವರರು ʼಇಂಗ್ಲಿಷ’ ಸಂಸ್ಕೃತಿಯವನೆಂದು ಬಣ್ಣಿಸಿದ್ದಾರೆ. ನಾನು ನಿಜವಾಗಿಯೂ ʼಇಂಗ್ಲಿಷʼ ಸಂಸ್ಕೃತಿಯವನಾಗಿದ್ದರೆ, ದಿಂಗಾಲೇಶ್ವರ ಸ್ವಾಮಿಗಳಂತವರೊಂದಿಗೆ ವಾದಕ್ಕಿಳಿಯುವ ಅಗತ್ಯವೇ ಇರುತ್ತಿರಲಿಲ್ಲ.
ಈಗ ರಾಜ್ಯವ್ಯಾಪಿಯಾಗಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ “ಲಿಂಗಾಯತ ಮಠಾಧೀಶರ ಒಕ್ಕೂಟ”ದ “ಬಸವ ಸಂಸ್ಕೃತಿ ಅಭಿಯಾನಕ್ಕೆ ನಾನು ‘ಮ್ಯಾನೇಜರ’ ಎಂದು ಬಣ್ಣಿಸಿದ್ದಾರೆ. ನಾನು ಎಂದೂ ಯಾವುದೇ ಮಠಗಳ ಮ್ಯಾನೇಜರ ಆಗಿಲ್ಲ. ಆದರೆ, ಅಂಥ ಅವಕಾಶ ಸಿಕ್ಕರೆ ಪವಿತ್ರ ಮಠಗಳ ಸೇವೆ ಮಾಡುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ.
ಮುಂದುವರೆದು, ಒಕ್ಕೂಟದ ಅಭಿಯಾನಕ್ಕೆ ನಾನೇ ಮಾಗ೯ದಶಿ೯ಯಾಗಿದ್ದೇನೆ ಎಂದು ಅವರು ಹೆಳಿದ್ದು ಸಮಸ್ತ ವಿರಕ್ತ ಮಠಗಳ ಬುದ್ದಿವಂತಿಕೆ ಮತ್ತು ಸಾಮರ್ಥ್ಯಕ್ಕೆ ಮಾಡಿದ ಅವಮಾನವಲ್ಲದೇ ಮತ್ತೇನು?
ಡಿಂಗಾಲೇಶ್ ಶ್ರೀಗಳು ಇನ್ನು ರಾಮಾಯಣ ಮಹಾಭಾರತದ ಗುಂಗಿನಲ್ಲಿದ್ದಾರೆ ಅಂದರೆ ಅವರ ಭೌದ್ಧಿಕವಾಗಿ ತುಂಬಾ ಹಿಂದುಳಿದವರು. ನಮ್ಮ ಶರಣರ ಒಂದು ವಚನಕ್ಕೆ ವ್ಯಾಸರ ಒಂದು ಪುರಾಣ ಸಮ ಬಾರದಯ್ಯ..ಅವರು 25 ವರ್ಷದ ಹಿಂದೆ ಇದ್ದಾರೆ. ಇತ್ತೀಚಿನ ಸಂಶೋಧನೆ ಬರಹಗಳನ್ನು ಓದಬೇಕು. ಹಾಗಾದಾಗ ಮಾತ್ರ ಅವರ ದೃಷ್ಟಿಕೋನ ಬಡಲಾದೀತು.. ಸರ್
ದಿಂಗಾಲೇಶರ ಹೇಳಿಕೆ ಗಳು ಅತ್ಯಂತ ಬಾಲಿಶವಾಗಿವೆ. ದಿಂಗಾಲೇಶರು ಕಂಗಾಲೇಶ ಆಗಿದ್ದಾರೆ.
ಅವಕಾಶವನ್ನು ಬಳಸಿಕೊಂಡು ಅಸ್ತಿತ್ವ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ.
ಪಾಪ ಎನಿಸುತ್ತದೆ
ಅನಗತ್ಯ ಸಾರ್ವಜನಿಕ ಕೆಸರು ಕಿರುಚಾಟ ಇದರಿಂದ ಸಾಧನೆ ಏನು ಎಲ್ಲರೂ ಮೇಧಾವಿಗಳು. ಅಹಂ ಬಿಟ್ಟು ಮುಂದೆ ಸಾಗಿ
ಕೌಂಟರ್ ಕೊಡಬೇಕು ಸರ್..ಇಲ್ಲಾಂದ್ರೆ ಇಂಥವರ ಹಾರಾಟದಲ್ಲಿ ನಮ್ಮವರ ಹೋರಾಟ ಗೌಣವಾಗುತ್ತೆ..
Good suggestion
Theres no time street quarreling
Awereness on should reach All Lingayaths to stand United and fight for our next generation wellbeing
Otherwise we will be side lined in all the areas
So called Panchapeeta & Lingayaths leaders should take proper steps not to confuse community members
ಸರಿಯಾಗಿಯೇ ಉತ್ತರಿಸಿದ್ದು ಈದಿ ಸರ್.
ದಿಂಗಾಲೇಶ್ವರ ಅರ್ಧಮರ್ಧ ಸ್ವಾಮಿ ಇದ್ದಾರೆ. ಬಸವ ಸಂಸ್ಕೃತಿ ಅಭಿಯಾನ ನೋಡಿ ಕಂಗಾಲೇಶ್ವರ ಆಗಿದ್ದಾರೆ. ಪೀಠಕ್ಕಾಗಿ ಹೋರಾಡಿ ಸೀಗದೆ ಸೋತು ಸುಣ್ಣವಾಗಿ ಪಂಪೀಗಳು ಹಾಕುವ ಬಿಸ್ಕೆಟ್ ನಿಂದ ಆಗಾಗ ಶಕುನಿಯಂತೆ ಬಂದು ಹೋಗುತ್ತಾರೆ ಕೊನೆಗೂ ಶಕುನಿ ಸ್ಥಿತಿ ಏನಾಯಿತು ಅರ್ಥ ಮಾಡಿಕೊಂಡರೆ ಸಾಕು.
ದಿಂಗಾಲೇಶ್ವರರೇ ಇನ್ನೊಬ್ಬರಿಗೆ ಪ್ರಶ್ನೆ ಮಾಡುವ ನೀವು..
ಈಗಾಗಲೇ ನೀವು ಪೀಠಾಧೀಶರಾಗಿರುವ ಬಾಲೆ ಹೊಸೂರು ಹಾಗೂ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಜನರಿಗಾಗಿ ಭಕ್ತರಿಗಾಗಿ ತಾವೇನು ಕೆಲಸ ಮಾಡಿದ್ದೀರಿ ಎಂಬುದನ್ನು ಮೊದಲು ತಿಳಿಸಿ..
ಈ ಹಿಂದೆ ವಿಧಾನ ಪರಿಷತ್ ಸಭಾಧ್ಯಕ್ಷರಾದ ಶ್ರೀ ಬಸವರಾಜ ಹೊರಟ್ಟಿ ಅವರು ದಿಂಗಾಲೇಶ್ವರ ಸ್ವಾಮೀಜಿ ಬಡ್ಡಿ ದಂಧೆಯಲ್ಲಿ ತೊಡಗಿದ್ದಾನೆ ಎಂದಿದ್ದರು.
ತಾವು ತಮ್ಮ ಸಮಾಜದ ಬೇಡ ಜಂಗಮವನ್ನು ಎಸ್ ಸಿ ಮೀಸಲಾತಿಯನ್ನು ಬೆಂಬಲಿಸುವವರಾಗಿ ನಿಮ್ಮದೇ ದಲಿತ ಸಮುದಾಯದ ಜೊತೆ ಜಮೀನು ವಿಚಾರವಾಗಿ ಜಗಳ ಮಾಡಿ ಜಾತಿ ನಿಂದನೆ ಕೇಸ್ ಹಾಕಿಸಿಕೊಂಡು ಊರು ಬಿಟ್ಟು ಓಡಿ ಹೋಗಿದ್ದಿರಿ.
ಕರ್ನಾಟಕದಲ್ಲಿ ಹಿಂದೂ ಮುಸ್ಲಿಂ ಕೋಮು ದ್ವೇಷ ಹರಡಿಸಿ ಸೌಹಾರ್ದತೆ ಹಾಳಾಗುತ್ತಿರುವ ಸಂದರ್ಭದಲ್ಲಿ ನೋಡಿಕೊಂಡು ಸುಮ್ಮನೆ ಕುಳಿತಿದ್ದೀರಿ..
ಇವೆಲ್ಲ ವಿರಕ್ತ ಸ್ವಾಮಿಯ ಲಕ್ಷಣಗಳೇ ಉತ್ತರ ನೀಡಿ..
– ಬಿ ಎಸ್ ಶೀಲವಂತರ
ಗಜೇಂದ್ರಗಡ
ಲಿಂಗಾಯತ ಮತ್ತು ವೀರಶೈವ ಇವುಗಳ ಮಧ್ಯದ ಸೈದ್ಧಾಂತಿಕ ಭಿನ್ನತೆ ಮತ್ತು ಹೋರಾಟ ತುಂಬಾ ಹಳೆಯದು. ಕಾರಣಾಂತರಗಳಿಂದ ನಾವು ವೀರಶೈವರಲ್ಲ ಬದಲಾಗಿ ಬಸವಪ್ರಣೀತ ಲಿಂಗಾಯತರು ಮತ್ತು ನಾವು ವೀರಶೈವರನ್ನು ಬಸವಣ್ಣ ಮತ್ತು ಲಿಂಗಾಯತ ಧರ್ಮವನ್ನು ಒಪ್ಪಿಕೊಳ್ಳಿ ಎಂದು ಎಂದೂ ಬಲವಂತ ಮಾಡದಿದ್ದರೂ ವೀರಶೈವರು ಲಿಂಗಾಯತರನ್ನು ಅವರ ಕಪಿಮುಷ್ಠಿಯಿಂದ ಕೈಬಿಡಲು ತಯಾರಿಲ್ಲ. ಇದು ಎಲ್ಲಿಗೆ ಬಂದು ನಿಂತಿದೆ ಎಂದರೆ ಸೈದ್ಧಾಂತಿಕವಾಗಿ ಎರಡರ ಬಗ್ಗೆಯೂ ಸಂಪೂರ್ಣ ಅರಿವು ಇಲ್ಲದ ದಿಂಗಾಲೇಶ್ವರ ಸ್ವಾಮೀಜಿಯಂತಹವರು ಬಸವತತ್ವಕ್ಕೆ ಮತ್ತು ಲಿಂಗಾಯತ ಧರ್ಮಕ್ಕೆ ಅವಮಾನ ಆಗುವಂತಹ ಹೇಳಿಕೆ ಕೊಡುವಷ್ಟ್ರರ ಮಟ್ಟಿಗೆ ಬಂದು ನಿಂತಿದೆ. ಇವರಿಗೆ ಧರ್ಮ ಮತ್ತು ರಾಜಕೀಯ ಅಧಿಕಾರಗಳ ಮಧ್ಯೆ ಅಂತರವೇ ತಿಳಿದಿಲ್ಲ. ಹಾಗಾಗಿ ಇವರು ಕೆಲವು ರಾಜಕಾರಣಿಗಳನ್ನು ಇಂದ್ರ, ಚಂದ್ರ, ಪಾಂಡವರು ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರೆಲ್ಲಾ ಧರ್ಮಗಳ ಅರಿವಿನ ಕೊರತೆ ಇರುವ ಭಕ್ತ ಸಮೂಹವನ್ನು ಮತೀಯವಾದಿಗಳಂತೆ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಲ್ಲವಾದಲ್ಲಿ ಲಿಂಗೋದ್ಭವ ಪಂಚಾಚಾರ್ಯರ ಸಿದ್ಧಾಂತದ ವೀರಶೈವಕ್ಕೂ ಐತಿಹಾಸಿಕ ಪುರುಷ ಬಸವಣ್ಣನವರ ಸಿದ್ಧಾಂತಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? “ಮಾನವ ಕುಲಕ್ಕೆ ಜಯವಾಗಲಿ” ಅನ್ನುವ ಘೋಷವಾಕ್ಯಕ್ಕೂ “ಸಕಲ ಜೀವಾತ್ಮರಿಗೂ ಲೇಸಾಗಲಿ” ಅನ್ನುವ ಘೋಷವಾಕ್ಯಕ್ಕೂ ಭೂಮಿ ಆಕಾಶಕ್ಕೂ ಇರುವಷ್ಟು ಅಂತರವಿದೆ ಅನ್ನುವುದು ಅವರಿಗೆ ಅರಿವಾಗಲಿ. ಧರ್ಮದ ಅಳಿವು ಉಳಿವು ಸಂಖ್ಯೆಯಲ್ಲಿ ಇಲ್ಲ ಅನ್ನುವ ಪರಿಜ್ಞಾನವೂ ಬಹು ಮುಖ್ಯ. ರಾಜಕೀಯ ಮುಖಂಡರ ಅಭಿಪ್ರಾಯ ಒಂದರಿಂದಲೇ ಒಂದು ಧರ್ಮವನ್ನು ಕಟ್ಟಲು ಮತ್ತು ಬೆಳೆಸಲು ಸಾಧ್ಯವಿಲ್ಲ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಅನ್ನುವ ಕೂಗು ಮತ್ತು ಹೋರಾಟ ಒಂದು ನಿರ್ಣಾಯಕ ಹಂತ ತಲುಪುವ ಹಂತಕ್ಕೆ ಬಂದಿದೆ. ಈ ಸಂಧರ್ಭವನ್ನು ಲಿಂಗಾಯತ ಸಮಾಜ ಸರಿಯಾಗಿ ಉಪಯೋಗಿಸಿಕೊಂಡು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯಲು ಇನ್ನೂ ದೊಡ್ಡ ಮಟ್ಟದ ಚಳುವಳಿಯನ್ನು ಕಟ್ಟಿ ಹೋರಾಟ ರೂಪಿಸಲಿ.
ಸಂತೋಷದ ವಿಷಯ ದಿಂಗಲೇಶ್ವರ ಶ್ರೀ ಗಳು ಸ್ವಲ್ಪ ಸ್ವಲ್ಪ ಲಿಂಗಾಯತ ಆಗುತಿದ್ದಾರೆ ಅನ್ನುವದಕ್ಕೆ ಈಗ ಅವರು ಕೊಟ್ಟ ಹೇಳಿಕೆಯೇ ಸಾಕ್ಷಿ.ಮುಂದೆ ಪೂರ್ತಿ ಲಿಂಗಾಯತರಾಗುತ್ತಾರೆ ಸ್ವಾಗತ ಮಾಡೊಣ
ವೀರಶೈವ ಲಿಂಗಾಯತ ಅಂತ ಹೆಳತಿರಲ್ಲ ಇದೆ ವೀರಶೈವ ಮಹಾಸಭಾದವರು ಎರಡು ಬಾರಿ ಸ್ವತಂತ್ರ ಧರ್ಮದ ಮಾನ್ಯತೆ ಕೆಳಿದ್ದರಲ್ಲ ಆವಾಗ ಧರ್ಮ ಒಡೆಯಲಿಲ್ಲವಾ ?? ಎರಡು ಸಲ ಯಾಕೆ ವಾಪಸ್ಸು ಕಳಿಸಿದ್ದಾರೆ ಅದು ನಿನಗೆ ಅರ್ಥ ಆಗಿದೆಯಾ ದಿಂಗಾಲೆಶ್ವರ ಸ್ವಾಮಿ ?? ಯಾಕೆ ಅಂದರೆ ವೀರಶೈವ ಪದ ಇದ್ದರೆ ಸಿಗಲ್ಲ ಅದು ನಿನಗೂ ಗೊತ್ತು ಒಂದು ಸಲ ಲಿಂಗಾಯತ ಅಂತ ಹೋಗಿ ಕೆಳೊಣ ಲಿಂಗಾಯತ ಅಂತ ಸ್ವತಂತ್ರ ಮಾನ್ಯತೆ ಸಿಕ್ಕರೆ ಅದರಲ್ಲಿ ವಿರಶೈವರಿಗೂ ಸಿಗುತ್ತೆ ಎಲ್ಲಾ ಸವಲತ್ತು ಇದು ನಿನಗೆ ಗೊತ್ತಾಗಲ್ಲವಾ ನಮ್ಮ ಸಮಾಜದಲ್ಲಿ ಕೂಡ ಎಷ್ಟು ಜನ ಬಡವರಿದ್ದಾರೆ ಅವರಿಗೆ ಎಲ್ಲಾ ಸೌಲಭ್ಯ ಸಿಗಲ್ಲವಾ ?? ಹೀಗೆ ವಿರೋಧ ಮಾಡಿದರೆ ಬಡವರ ಶಾಪ ಖಂಡಿತವಾಗಿ ನಿಮಗೆ ಬಡಿಯುತ್ತೆ ಎರಡನೆಯದು ನಮ್ಮ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಕ್ಕರೆ ಗುರುನಾನಕ ಪೈಗಂಬರ್ ಮಹಾವೀರ ಬುದ್ದ ಅವರ ಸರಿ ಸಮಾನ ಬಸವಣ್ಣನವರು ಬರುತ್ತಾರೆ ಇಡಿ ಜಗತ್ತಿಗೆ ಬಸವಣ್ಣನವರ ವಚನಗಳು ಗೊತ್ತಾಗುತ್ತೆ ಜಗತ್ತಿನ ಎಲ್ಲಾ ವಿದ್ವಾಂಸರು ಬಸವಣ್ಣನವರು ಕೊಟ್ಟ ಮಾನವಿಯ ಮೌಲ್ಯಗಳು ಗೊತ್ತಾಗುತ್ತೆ ಇದು ನಿಮಗೆ ಬೆಡವಾ ದಿಂಗಾಲೆಶ್ವರ
ದಿಂಗಾಲೇಶ್ವರ ಸ್ವಾಮಿಗಳೇ,
ಲಿಂಗಾಯತ ಅಂತ ಹೋದರೆ ಯಾರಿಗೂ ತೊಂದರೆಯಿಲ್ಲ. ನಿಮ್ಮ ಎಲ್ಲಾ ರಾಮಾಯಣ ಮಹಾಭಾರತದ ಪದಾಧಿಕಾರಿಗಳಿಗೆ ತಿಳಿಸಿ ಹೇಳಿರಿ.
ದಿಂಗಾಲೇಶ್ವರ ಸ್ವಾಮಿಗಳು ಡಾಕ್ಟರ್ ಎಸ್ ಎಂ ಜಾಮದಾರ್ ಸರ್ ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡಬೇಕು.
ನಿಜವಾಗಿಯೂ ನಿಮಗೆ ಬಸವಣ್ಣವರ ಬಗ್ಗೆ ಕಳಕಳಿ ಇದ್ದರೆ ತಕ್ಷಣ ಇದಕ್ಕೆ ಪ್ರತಿಕ್ರಿಯಿಸಲು ವಿನಂತಿ.