ರಾಜ್ಯಮಟ್ಟದ ವಚನ ಸಂಗ್ರಹ ಮತ್ತು ಭಾವಾರ್ಥ ಬರೆಯುವ ಸ್ಪರ್ಧೆ

ಸೊಲ್ಲಾಪುರ

ಬಸವ ಜಯಂತಿ ನಿಮಿತ್ತ ಇಂಡಿ ಬಸವ ಸಮಿತಿ ಇವರ ಆಶ್ರಯದಲ್ಲಿ ರಾಜ್ಯಮಟ್ಟದ ವಚನ ಸಂಗ್ರಹ ಮತ್ತು ಭಾವಾರ್ಥ ಬರೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಆಯೋಜಕ ಪ್ರಥಮ ದರ್ಜೆಯ ಸರಕಾರಿ ಗುತ್ತಿಗೆದಾರ ಶರಣಾಭಿಮಾನಿ ಸೊಲ್ಲಾಪುರದ ಪರಮಾನಂದ ಅಲಗೊಂಡ ಪಾಟೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸ್ಪರ್ಧೆ ಎಲ್ಲರಿಗಾಗಿ ಇದ್ದು ವಯಸ್ಸಿನ ಮಿತಿ ಇಲ್ಲ. ವಿಶಿಷ್ಠವಾದ ವಚನಗಳು ಸಂಗ್ರಹಿಸಿ ಅದರ ಭಾವಾರ್ಥ ಬರೆದು ಕಳಿಸುವ ಸ್ಪರ್ಧೆ ಇದಾಗಿದ್ದು, ಒಬ್ಬ ಸ್ಪರ್ಧಾಳು ೧೦೦ ರಿಂದ ೧೫೦ ವಚನಗಳು ಬರೆದು ಇಲ್ಲವೇ ಮುದ್ರಿಸಿ ಎರಡು ಪ್ರತಿಯಲ್ಲಿ ಕಳುಹಿಸಬೇಕು.

ವಚನಗಳು ಭಕ್ತಿ, ಜ್ಞಾನ, ಮೌಢ್ಯತೆ, ಕರ್ಮಯೋಗ, ದಾಸೋಹ, ಸಾಮಾಜಿಕ ಸಮಾನತೆ, ಸಾಮಾಜಿಕ ಕಳಕಳಿ, ವೈರಾಗ್ಯ ಆಚಾರ-ಅನಾಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಇರಬೇಕು. ೨೫ ಮಾರ್ಚ್ ವರೆಗೆ ವಚನಗಳು ಕಳುಹಿಸಬೇಕು.

ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಮಾಂಕ ಪಡೆಯುವ ಮೊದಲ ಸ್ಪರ್ಧಾಳುವಿಗೆ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ೫೦, ೨೫ ಮತ್ತು ೧೦ ಸಾವಿರ ಮತ್ತು ೫ ಸಾವಿರ ೫ ಮೆಚ್ಚುಗೆಯ ಬಹುಮಾನಗಳು ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುತ್ತದೆ.

ಈ ವರ್ಷದ ಬಸವಜಯಂತಿ ಏ.೩೦ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೫೩೫೨೭೫೧೦೫, ೯೭೪೦೨೨೪೫೫೩, ೯೮೪೫೨೫೫೭೦೬ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸ ಬಹುದು.

Share This Article
Leave a comment

Leave a Reply

Your email address will not be published. Required fields are marked *