ಅಫಜಲಪೂರ
45ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ಬಸವ ಕಲ್ಯಾಣದಲ್ಲಿ ನವೆಂಬರ್ 23 ಮತ್ತು 24 ರಂದು ನಡೆಯಲಿರುವ ಕಾರ್ಯ ಕ್ರಮದ ಪೂರ್ವಭಾವಿ ಸಭೆ ಅಫಜಲಪೂರ ತಾಲ್ಲೂಕಿನ ಬಸವ ಮಂಟಪದಲ್ಲಿ ಕರೆಯಲಾಗಿತ್ತು. ಈ ಸಭೆಯ ಸಾನ್ನಿಧ್ಯವನ್ನು ಪೂಜ್ಯ ಶ್ರೀ ಮಹಾಲಿಂಗ ದೇವರು ಬಸವಕಲ್ಯಾಣ ವಹಿಸಿದ್ದರು.
ಬಸವಕಲ್ಯಾಣದಲ್ಲಿ ಪೂಜ್ಯ ಶ್ರೀ ನಾಡೋಜ ಡಾ, ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಹಾಗೂ ಮಾರ್ಗ ದರ್ಶನದಲ್ಲಿ ಕಳೆದ ಅನೇಕ ವರುಷಗಳಿಂದ ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಚಿಂತನೆಗಳ ವೇದಿಕೆಯಾಗಿ ಅನುಭವ ಮಂಟಪ ಉತ್ಸವ ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ನಾಡಿನ ಪೂಜ್ಯ ಮಠಾಧೀಶರು, ಅನುಭಾವಿಗಳು, ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ.
ಆದ್ದರಿಂದ ತಮ್ಮ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಶರಣ ಅಮೃತರಾವ ಪಾಟೀಲ ಮಾತನಾಡಿದರು. ಲಿಂಗಾಯತ ಮಹಾಸಭೆ ಅಧ್ಯಕ್ಷರಾದ ಬಸಣ್ಣ ಎಂ. ಗುಣಾರಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರುತ್ತೇವೆ ಎಂದು ಆಶ್ವಾಸನೆ ಕೊಟ್ಟರು.
ಸಭೆಯಲ್ಲಿ ಶರಣ ಸದಾಶಿವ ಮೇತ್ರಿ, ಬಸವರಾಜ ಕೆಂಗನಾಳ, ರಾಜೇಂದ್ರ ನಿರೋಣಿ, ಶಂಕ್ರಪ್ಪ ಮಣ್ಣೂರ, ಜಗದೇವಪ್ಪ ಅಂಜುಟಗಿ. ಸಿದ್ಣಣಗೌಡ, ಶರಣಪ್ಪ ಮೇತ್ರಿ. ಧಾನು ನೂಲಾ, ಜವಳಿ ಸೇರಿದಂತೆ ಅನೇಕ ಶರಣರು ಹಾಜರಿದ್ದರು.