ಕಲಬುರಗಿ
ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಮೇಲ್ನೋಟಕ್ಕೆ ಸಂಕೇತವಾಗಿರಬಹುದು. ಆದರೆ ನಿಜಕ್ಕೂ ಅದು ದಾರ್ಶನಿಕ ದಿಗ್ವಿಜಯದ ಸಾಧನವಾಗಿದೆ ಎಂದು ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಅಭಿಮತ ವ್ಯಕ್ತಪಡಿಸಿದರು.
ಜಾತಿ, ಬಡತನ, ಅಸಮಾನತೆಯ ಬಗ್ಗೆ ಮಾತನಾಡಿಲ್ಲ ಎಂಬ ಹುನ್ನಾರ ಇತ್ತೀಚಿಗೆ ನಡೆದಿದೆ. ಕಲ್ಯಾಣದಲ್ಲಿ ಕ್ರಾಂತಿ ಆಗಿಲ್ಲರಲಿಕ್ಕಿಲ್ಲ. ಶಾಸನಗಳು ಹೊಟ್ಟೆ ತುಂಬಿದವರ ಸಾಹಿತ್ಯ. ಶರಣರು ಮೌಖಿಕವಾಗಿ ತಮ್ಮ ಪರಂಪರೆಯನ್ನು ಕಟ್ಟಿಕೊಂಡು ಬಂದಿದ್ದಾರೆ. ವೇದ, ಉಪನಿಷತ್ ಗಳನ್ನು ಶರಣರು ನಖಶಿಕಾಂತವಾಗಿ ಖಂಡಿಸಿದರು. ಅಂತೆಯೇ ವೈದಿಕರು ವಚನ ಸಾಹಿತ್ಯಕ್ಕೆ ನಡಗುತ್ತಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಸಕಲ ಜೀವಾತ್ಶರಿಗೆ ಲೇಸ ಬಯಸಿದ ಶರಣರು ವ್ಯಕ್ತಿಯನ್ನು ವಿರೋಧಿಸಲಿಲ್ಲ. ಸಮಾಜಕ್ಕೆ ಧಕ್ಕೆ ತರುವ ವಿಚಾರಗಳನ್ನು ವಿರೋಧಿಸಿದರು. ಶರಣರು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ದಾರ್ಶನಿಕತೆಯನ್ನು ಒದಗಿಸಿದವರು ಎಂದರು.
ಬ್ರಾಹ್ಮಣ್ಯವನ್ನು ಒದ್ದು, ವೈದಿಕತೆಯನ್ನು ವಿರೋಧಿಸಿದ ಬಸವಣ್ಣನವರು ಅನುಭವ ಪ್ರಮಾಣವನ್ನು ಒಪ್ಪಿದವರು. ಯಾವ ವೈದಿಕ ದರ್ಶನದಲ್ಲೂ ಮಹಿಳೆಯನ್ನು ಗುರು ಸ್ಥಾನದಲ್ಲಿ ನೋಡಿಲ್ಲ. ಕಾಯಕವನ್ನು ಕೈಲಾಸದೆತ್ತರದ ಸ್ಥಾನ ನೀಡಿದ ವಚನ ಸಾಹಿತ್ಯ ಹಾಳು ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ಸಂಘ ಪರಿವಾರದ ಪುಸ್ತಕ ‘ವಚನ ದರ್ಶನ’ಕ್ಕೆ ಉತ್ತರವಾಗಿ ಮೀನಾಕ್ಷಿ ಬಾಳಿ ಬರೆದಿರುವ ‘ನಿಜ ವಚನ ದರ್ಶನ’ ಇಂದು ಲೋಕಾರ್ಪಣೆಯಾಗುತ್ತಿದೆ.