ಲಿಂಗಾಯತರಿಗೆ ಕುಂಭಮೇಳ ಭಾಗ್ಯ: ಹಿಂದುತ್ವದ ಬೇಳೆ ಬೇಯುತ್ತಿಲ್ಲ (ಪ್ರಸನ್ನ. ಎಸ್. ಎಂ)

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಪ್ರಸನ್ನ. ಎಸ್. ಎಂ ಅವರ ಪ್ರತಿಕ್ರಿಯೆ.

193
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ

1) ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು ?

ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳಿದ್ದು ಅವುಗಳು ಹಿಂದುತ್ವದ ಪರವಿಲ್ಲ. ಇದು ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಭಿತಾಗಿದೆ. ಇವು ಬಿಜೆಪಿಯೊಡನೆ ಮೈತ್ರಿ ಮಾಡಿಕೊಳ್ಳಬಹುದೇ ಹೊರತು ಸಂಪೂರ್ಣವಾಗಿ ಹಿಂದುತ್ವದ ಪರವಾಗಿಲ್ಲ. ಈ ರಾಜ್ಯಗಳಲ್ಲಿ RSS ಹೇಗಾದರು ಮಾಡಿ ತನ್ನ ಹಿಡಿತವನ್ನು ಸಾಧಿಸಲು ಹವಣಿಸುತ್ತಿದ್ದರೂ ಸಾಧ್ಯವಾಗಿಲ್ಲ .

ಇನ್ನು ಕರ್ನಾಟಕಕ್ಕೆ ಬಂದರೆ ಇಲ್ಲಿ ಬುದ್ದ, ಬಸವ, ಕನಕ, ಅಂಬೇಡ್ಕರ್, ರೈತಸಂಘ ದಲಿತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಪ್ರಭಾವವಿದೆ. ಇನ್ನು ಕುವೆಂಪುರವರಿಂದ ಹಿಡಿದು ಆನೇಕ ಸಾಹಿತ್ಯಗಳ ವಿಚಾರ ಧಾರೆಯಿದೆ. ಎಲ್ಲಾ ಧರ್ಮದವರು ಶಾಂತಿಯಿಂದ ಬಾಳುತ್ತಿದ್ದಾರೆ. ಇದನ್ನು ಒಡೆಯಲು ಸತತ ಪ್ರಯತ್ನಪಟ್ಟರೂ ಕರ್ನಾಟಕದ ಅಲ್ಪ ಭಾಗ ಬಿಟ್ಟು ಅವರ ತಂತ್ರಗಾರಿಕೆ ಯಶಸ್ಸನ್ನು ಕಂಡಿಲ್ಲ. ಆದರೆ ಕರ್ನಾಟಕದಲ್ಲಿರುವ ಬಹುಸಂಖ್ಯಾತ ಲಿಂಗಾಯತರ ಬಿಜೆಪಿ ಪರವಾಗಿ (65% ಜನ) ಮತ ಹಾಕುತ್ತಿದ್ದು,ಇವರನ್ನು ಇನ್ನಷ್ಟು ಹಿಂದುತ್ವದ ಕಡೆ ಎಳೆಯುವುದು ಇವರು ಉದ್ದೇಶ.

2) ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ ಯಾರಿಗೆ ಬರುತ್ತದೆ?

ಕರ್ನಾಟಕದಲ್ಲಿ ಸುಮಾರು 3000 ಲಿಂಗಾಯತ ಮಠಗಳಿವೆ. ಲಿಂಗಾಯತ ಧರ್ಮ ಹೋರಾಟದಲ್ಲಿ ಕೆಲವು ವಿರಕ್ತ ಮಠಗಳು ಬಿಟ್ಟರೆ ಉಳಿದ ಮಠಗಳು ಹೋರಾಟವನ್ನು ಅಷ್ಟಾಗಿ ಬೆಂಬಲಿಸಲಿಲ್ಲ. ಇತ್ತಿಚೆಗೆ ವಚನ ದರ್ಶನ ಪುಸ್ತಕ ಬಿಡುಗಡೆಯಾದ ಮೇಲೂ ಲಿಂಗಾಯತ ಸಮುದಾಯದ ಸಂಘಟಿತವಾಗಿ ಪ್ರತಿಭಟಿಸಲಿಲ್ಲ. ಇದರ ಮುಂದುವರೆದ ಭಾಗವೆ ಕುಂಭಮೇಳಕ್ಕೆ ಆಹ್ವಾನ. ಎಲ್ಲಾ ಲಿಂಗಾಯತ ಮಠಗಳಿಗೆ ಆಹ್ವಾನವಿರುತ್ತದೆ. ಲಿಂಗಾಯತ ಪಂಗಡಗಳನ್ನು ಅವುಗಳ ಸ್ವಾಮೀಗಳ ಮೂಲಕ ಸೆಳೆಯುವ ತಂತ್ರ ಉಪಯೋಗಿಸುತ್ತಾರೆ. ಊಟ, ವಸತಿ ಮತ್ತು ಪ್ರಯಾಣ ವೆಚ್ಚವನ್ನು ಬರಿಸಬಹುದು.

3) ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?

ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ನಿರಸವಾಗಿರುತ್ತದೆ. ಜಾಗೃತಗೊಂಡ 10% ಲಿಂಗಾಯತ ಸಮುದಾಯ ಪ್ರತಿಭಟಿಸುತ್ತದೆ (ಕೆಲವು ಮಠಗಳೂ ಪ್ರತಿಭಟಿಸಬಹುದು). ರಾಜಕಾರಣಿಗಳು ಮತ್ತು ಮಠಾಧೀಶರು ಎಂದಿನಂತೆ ತಟಸ್ಥವಾಗಿರುತ್ತಾರೆ.

4) ನಿಮ್ಮ ವೈಯುಕ್ತಿಕ ಪ್ರತಿಕ್ರಿಯೆ ಏನು? ನೀವು ಏನು ಮಾಡುತ್ತೀರಿ?

ನನ್ನ ವೈಯಕ್ತಿಕ ಪ್ರತಿಕ್ರಿಯೆ ಎಂದಿನಂತೆ ಇರುತ್ತದೆ. ನನಗೆ RSSನ ತಂತ್ರಗಾರಿಕೆ ಚೆನ್ನಾಗಿ ಗೊತ್ತಿರುವುದರಿಂದ ನನಗೆ ಗೊತ್ತಿರುವ ಲಿಂಗಾಯತ ಸಮುದಾಯದವರಲ್ಲಿ ಜಾಗೃತಿ ಮೂಡಿಸುತ್ತೇನೆ. ವಾಟ್ಸಾಪ್, ಫೇಸ್ಬುಕ್ ನಲ್ಲಿ ಬರೆಯುತ್ತೇನೆ. ಇಂದಿನಿಂದ ಲಿಂಗಾಯತ ಸಮುದಾಯದ ಜನ ಪ್ರತಿನಿಧಿಗಳನ್ನು ಮತ್ತು ಮಠಾಧೀಶರನ್ನು ಬಸವಪರ ಸಂಘಟನೆಗಳು ಭೇಟಿ ಮಾಡಿ ಇದರ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕಿದೆ.

ಮತ್ತಷ್ಟು ಓದು

Share This Article
3 Comments
  • ಮೊದಲನೆಯದಾಗಿ ಯಾವುದೇ ನದಿ ಸಾಗರ ದ ಲ್ಲಿನ ಸ್ನಾನ ಯಾವ ಪುಣ್ಯವನ್ನೂ ಕೊಡುವುದಿಲ್ಲ..ಅದು ಮೌಡ್ಯ,ಶರಣ ತತ್ವ ವಿರೋಧಿ..ಅಷ್ಟು ಮಾನವ ಶಕ್ತಿ ಯ waste.ಬೇಡದ ಪ್ರಯಾಣ ಮತ್ತು ಖರ್ಚು. ಕಾಲ್ತುಳಿತ. ಕೊಳಕು, ನಮ್ಮ ಮನೆಗೇ ಬರುವ ಕಾವೇರಿಗಿಂತ ಪವಿತ್ರ ಇನ್ನಾವುದಿಲ್ಲ..ನಾವು ಕುಡಿವ ನೀರೇ ತೀರ್ಥ.ಯಾರದೋ ಹುನ್ನಾರಕ್ಕೆ ನಾವು ಬಲಿ ಆಗಬಾರದು. ಕುಂಭ ಮೇಳವೂ ಬೇಡ, ದಿಂಬ ಮೇಳ ವೂ ಬೇಡ….ಮಾನವ ಮೇಳ ಸಾಕು.

  • ಲಿಂಗಾಯತರು ಈ ಆಹ್ವಾನದ ಹಿಂದಿನ ಹುನ್ನಾರಗಳನ್ನು ಅರಿತಷ್ಟು ಲಿಂಗಾಯತರಿಗೆ ಒಳ್ಳೆಯದು. ಸಂಘಪರಿವಾರದ ಪ್ರಭಾವಕ್ಕೆ ಒಳಗಾಗಿರುವ ಲಿಂಗಾಯತ ಮಠಾಧೀಶರುಗಳ ಬಗ್ಗೆ ಹಾಗೂ ಇಂತಹ ಆಹ್ವಾನಕ್ಕೆ ಅವರುಗಳ ಪ್ರತಿಕ್ರಿಯೆಗಳ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು.

  • ಅಲ್ಲಮ ಪ್ರಭುಗಳು ತಮ್ಮ ಒಂದುವಚನದಲ್ಲಿ ಪ್ರಯಾಗ ಅಥವಾ ಕುಂಭಮೇಳದಂಥ ಮೌಡ್ಯಾಚರಣೆಗಳ ಬಗ್ಗೆ *ಸುತ್ತಿ ಸುತ್ತಿ ಬಂದಡಿಲ್ಲ ಲಕ್ಷ ಗಂಗೆಯ ಮಿಂದೊಡಿಲ್ಲ ತುಟ್ಟ ತುದಿಯ ಮೆಟ್ಟಿ ಕೂಗಿದಡಿಲ್ಲ ನಿತ್ಯ ನೇಮದಿಂದ ತನುವ ಮುತ್ತಿಕೊಂಡಿಲ್ಲ ನಿಚ್ಚಕ್ಕೆ ನಿಚ್ಚ ಗಮನವ ಅತ್ತಲಿತ್ತಲರಿಯದಂತೆ ಚಿತ್ತದಲ್ಲಿ ನಿಲಿಸಬಲ್ಲಡೆ ಬಚ್ಚ ಬರಿ ಬೆಳಗೂ ಗುಹೆಶ್ವರನೆಂಬ ಲಿಂಗವು*
    ಸಮಸ್ತ ಲಿಂಗಾಯತ ಯುವಕ ಯುವತಿಯರೆ ಹಾಗೂ ಬಂಧುಗಳಿಗೆ ವನಂತಿಸಿಕೊಳ್ಳುವದೆನೆಂದರೆ ವಿಶ್ವದಲ್ಲಿಯೆ ಶ್ರೆಷ್ಟವಾದ ಏಕೈಕ ಧಮ೯ ಲಿಂಗಾಯತ ಧಮ೯ ಇದನ್ನು ರಕ್ಷಿಸಿ ನಮ್ಮ ಮುಂದಿನ ಜನಾಂಗಕ್ಕೆ ಉಳಿ ಬೆಳಸೋಣ RSS ಕುತಂತ್ರಕ್ಕೆ ಬಲಿಯಾಗಬೇಡಿ ಭಯವನ್ನು ಬಟ್ಟವನೆ ನಿಜ ಲಿಂಗಾಯತ.

Leave a Reply

Your email address will not be published. Required fields are marked *