ಬಸವ ಕಲ್ಯಾಣ
ಇಲ್ಲಿನ ಅನುಭವ ಮಂಟಪದ ಹತ್ತಿರದ ಬಸವ ಮಹಾಮನೆ ಸಂಸ್ಥೆ ವತಿಯಿಂದ ರವಿವಾರ ಹಮ್ಮಿಕೊಂಡ “ಸಮಾನತಾ ಸಮಾವೇಶ” ಉದ್ಘಾಟಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಮಾತನಾಡಿದರು. ಇತಿಹಾಸವನ್ನು ನಾವು ಸರಿಯಾಗಿ ತಿಳಿದುಕೊಂಡಿದ್ದರೆ ಮಾತ್ರ ಚರಿತ್ರೆ ಬರೆಯಬಹುದು. ಇತಿಹಾಸವನ್ನು ನೆನೆಸುವಂತಹ ಮಹಾ ಸಮಾವೇಶ ಇದಾಗಿದೆ ಎಂದು ಹೇಳಿದರು.
ದೇಶದಲ್ಲಿ ಅಶಾಂತಿ, ಧರ್ಮಾಂಧತೆ ಮತ್ತು ಅಸಹಿಷ್ಣುತೆ ಹೆಚ್ಚಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಸಂಘರ್ಷಗಳು ಕಂಡುಬರುತ್ತಿವೆ. ಮತ್ತು ಮೇಲು ಕೀಳು ಭಾವನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಸರಿಯಾದ ಉತ್ತರ ವಚನ ಸಾಹಿತ್ಯದಲ್ಲಿದೆ, ಇಡೀ ವಿಶ್ವಕ್ಕೆ ವಚನ ಸಾಹಿತ್ಯದ ಮೂಲಕ ಮೌಲ್ಯಭರಿತ ಸಂದೇಶಗಳನ್ನು ಶರಣರು ಕೊಟ್ಟಿದ್ದಾರೆ ಎಂದು ಹೇಳಿದರು.