ರಾಯಚೂರು ಕಮ್ಮಟದಲ್ಲಿ ಒಡಕು ಮೂಡಿಸಿದ ರೇಣುಕಾಚಾರ್ಯರ ಭಾವಚಿತ್ರ

ರೇಣುಕಾಚಾರ್ಯರ ಭಾವಚಿತ್ರ ಹಾಕಲು ಲಿಂಗಾಯತ ಸಂಘಟನೆಗಳು ನಿರಾಕರಿಸಿದ ಮೇಲೆ ವೀರಶೈವ ಸಂಘಟನೆಗಳು ಹೊರನಡೆದವು.

ರಾಯಚೂರು

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಫೆಬ್ರವರಿ 27ರಂದು ಬೆಂಗಳೂರು ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ವಿಷಯದಲ್ಲಿ ಹತ್ತಿಸಿದ ಕಿಡಿ ಇನ್ನೂ ರಾಜ್ಯವ್ಯಾಪ್ತಿ ಉರಿಯುತ್ತಿದೆ.

ಸುಮಾರು ಅದೇ ಸಮಯದಲ್ಲಿ ರೇಣುಕಾಚಾರ್ಯ ಭಾವಚಿತ್ರ ರಾಯಚೂರಿನ ಲಿಂಗಾಯತ ಮತ್ತು ವೀರಶೈವ ಸಂಘಟನೆಗಳ ಮಧ್ಯೆ ದೊಡ್ಡ ಒಡಕು ಮೂಡಿಸಿದ ವಿಷಯವೂ ಈಗ ಬೆಳಕಿಗೆ ಬಂದಿದೆ.

ಈ ವಿವಾದ ಸೃಷ್ಟಿಯಾದ ಮೇಲೆ ಮಾರ್ಚ್ 1 ಮತ್ತು 2 ನಗರದಲ್ಲಿ ನಡೆದ ನಿಜಾಚರಣೆ ಕಮ್ಮಟದಿಂದ ಎರಡು ವೀರಶೈವ ಸಂಘಟನೆಗಳು ಮತ್ತು ಮೂವರು ವೀರಶೈವ ಆಚಾರ್ಯರು ದೂರವುಳಿದರು. ಕೊನೆಗಳಿಗೆಯಲ್ಲಿ ಕಮ್ಮಟದ ಆಮಂತ್ರಣ ಪತ್ರಿಕೆ, ಕರ ಪತ್ರಗಳು ಬದಲಾದವು. ಕಮ್ಮಟದ ಸ್ಥಳವೂ ಕೊನೆಗಳಿಗೆಯಲ್ಲಿ ಬದಲಾದರೂ, ಬಸವ ಸಂಘಟನೆಗಳು ಹಠ ಹಿಡಿದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದವು.

ಕಮ್ಮಟದ ಸ್ಥಳವೂ ಕೊನೆಗಳಿಗೆಯಲ್ಲಿ ಬದಲಾದರೂ, ಬಸವ ಸಂಘಟನೆಗಳು ಹಠ ಹಿಡಿದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದವು.

ಹಿನ್ನೆಲೆ

ಕಮ್ಮಟ ನಡೆಸುವ ಮಾತುಕತೆ ಶುರುವಾಗಿದ್ದು ಬಸವ ಕೇಂದ್ರದಲ್ಲಿ ಜನವರಿ 14ರ ಕಾರ್ಯಕ್ರಮದಲ್ಲಿ. ಅದರಲ್ಲಿ ಜೆ.ಎಲ್.ಎಂ ಜಿಲ್ಲಾಧ್ಯಕ್ಷ ಅನುಭಾವಿ ಪಿ. ರುದ್ರಪ್ಪನವರು ಲಿಂಗಾಯತ ಧರ್ಮ, ಧರ್ಮಗುರು ಬಸವಣ್ಣ, ಬಸವಾದಿ ಶರಣರ ಸಂದೇಶಗಳ ಬಗ್ಗೆ ಮಾತನಾಡಿದ್ದರು. ಅದನ್ನು ಕೇಳಿದ ವೀರಶೈವ-ಲಿಂಗಾಯತ ಸಮಾಜದ ಭೂಪಾಲ ನಾಡಗೌಡರು ಈ ವಿಚಾರಗಳನ್ನು ಲಿಂಗಾಯತ ಯುವಕರಿಗೆ ತಲುಪಿಸಲು ಒಂದು ಕಮ್ಮಟ ನಡೆಸಬೇಕೆಂದು ಹೇಳಿದ್ದರು.

ಆ ಸಲಹೆಗೆ ಎಲ್ಲರೂ ಒಪ್ಪಿಕೊಂಡು ರಾಯಚೂರಿನ ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಮಾಜ, ಬಸವ ಕೇಂದ್ರ ಹಾಗೂ ಹಲವಾರು ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕಮ್ಮಟ ನಡೆಸುವ ನಿರ್ಧಾರ ತೆಗೆದುಕೊಂಡರು.

ಕಮ್ಮಟವನ್ನು ಮಾರ್ಚ್ 1 ಮತ್ತು 2 ವೀರಶೈವ-ಲಿಂಗಾಯತ ಸಮಾಜದ ನಿಯಂತ್ರಣದಲ್ಲಿರುವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ನಡೆಸಲೂ ನಿರ್ಧಾರವಾಯಿತು. ಅದರಂತೆಯೇ ಆಮಂತ್ರಣ ಪತ್ರಿಕೆ, ಕರಪತ್ರಗಳೂ ಮುದ್ರಣವಾಗಿ ಹಂಚಿಕೆಯಾದವು.

ರೇಣುಕಾಚಾರ್ಯರ ಭಾವಚಿತ್ರ

ಸಮಸ್ಯೆ ಶುರುವಾಗಿದ್ದು ಕಮ್ಮಟ ನಡೆಯಲು ಮೂರು ದಿನಗಳು ಇರುವಂತೆ ನಡೆದ ಸಭೆಯಲ್ಲಿ. ಕಮ್ಮಟದ ಪೂರ್ವಸಿದ್ಧತೆಯ ಸಭೆಯಲ್ಲಿ ಮೊದಲ ಭಾರಿಗೆ ಭಾಗವಹಿಸಿದ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ವೇದಿಕೆ, ಆಮಂತ್ರಣ ಪತ್ರಿಕೆ, ಕರ ಪತ್ರಗಳಲ್ಲಿ ರೇಣುಕಾಚಾರ್ಯರ ಭಾವಚಿತ್ರವನ್ನು ಹಾಕಬೇಕೆಂದು ಸೂಚಿಸಿದರು. ಇದಕ್ಕೆ ಬಸವ ಸಂಘಟನೆಗಳಿಂದ ತಟ್ಟನೆ ವಿರೋಧ ಬಂದಿತು.

“ರೇಣುಕರ ಫೋಟೋ ಹಾಕೋಕು ನಮ್ದೇನು ಅಭ್ಯಂತರ ಇಲ್ಲ. ನಾಳೆ ಬಂದೋರು ಇವರು ಯಾರು, ಇವರ ಇತಿಹಾಸ ಏನು ಅಂತ ಕೇಳಿದರೆ ನಾವೇನು ಉತ್ತರ ಕೊಡಬೇಕು? ಉತ್ತರ ಕೊಡುವುದಕ್ಕೆ ರೇಣುಕರ ಬಗ್ಗೆ ದಾಖಲೆಗಳಿದ್ದರೆ ಹಾಕ್ರಿ ಅಂತ ನಾವು ಹೇಳಿದ್ವಿ. ಇಲ್ಲಿಯವರ್ಗು ಅದಕ್ಕೆ ದಾಖಲೆ ಇಲ್ಲದಿರುವುದಕ್ಕೆ ನಾವು ಯಾವ ಕಾರ್ಯಕ್ರಮದಲ್ಲೂ ರೇಣುಕರ ಫೋಟೋ ಹಾಕಿಲ್ಲ,” ಎಂದು ಪಿ. ರುದ್ರಪ್ಪ ಸಭೆಯಲ್ಲಿ ಹೇಳಿದರು.

ರೇಣುಕರ ಫೋಟೋ ಹಾಕೋಕು ನಮ್ದೇನು ಅಭ್ಯಂತರ ಇಲ್ಲ. ನಾಳೆ ಬಂದೋರು ಇವರು ಯಾರು, ಇವರ ಇತಿಹಾಸ ಏನು ಅಂತ ಕೇಳಿದರೆ ನಾವೇನು ಉತ್ತರ ಕೊಡಬೇಕು?

ಹೊರನಡೆದ ವೀರಶೈವ ಸಂಘಟನೆಗಳು

ಬಹಳ ಚರ್ಚೆಯಾದ ಮೇಲೂ ಬಸವ ಸಂಘಟನೆಗಳು ರೇಣುಕಾಚಾರ್ಯರ ಚಿತ್ರ ಹಾಕಲು ನಿರಾಕರಿಸಿದವು. ಅದನ್ನು ಪ್ರತಿಭಟಿಸಿ ವೀರಶೈವ-ಲಿಂಗಾಯತ ಸಮಾಜ ಮತ್ತು ವೀರಶೈವ ಮಹಾಸಭಾ ಕಮ್ಮಟದಿಂದ ಹೊರ ನಡೆದವು. ಕೊನೆಗಳಿಗೆಯಲ್ಲಿ ಕಮ್ಮಟ ಮಹಾಂತೇಶ ಕಲ್ಯಾಣ ಮಂಟಪದಿಂದ ಬಸವ ಕೇಂದ್ರಕ್ಕೆ ಸ್ಥಳಾಂತರವಾಯಿತು.

ಹೊಸ ಆಮಂತ್ರಣ ಪತ್ರಿಕೆಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಹೆಸರನ್ನು ಸಹಯೋಗಿ ಸಂಘಟನೆಗಳ ಪಟ್ಟಿಯಿಂದ ಕೈಬಿಡಲಾಯಿತು. ಮಿರ್ಜಾಪುರ ಅವರ ಹೆಸರನ್ನೂ ಕೈಬಿಡಲಾಯಿತು.

ಹೊಸ ಆಮಂತ್ರಣ ಪತ್ರಿಕೆಯಲ್ಲಿ ವೀರಶೈವ-ಲಿಂಗಾಯತ ಸಮಾಜದ ಹೆಸರನ್ನು ಸಹಯೋಗಿ ಸಂಘಟನೆಗಳ ಪಟ್ಟಿಯಿಂದ ಕೈಬಿಡಲಾಯಿತು. ಮಿರ್ಜಾಪುರ ಅವರ ಹೆಸರನ್ನೂ ಕೈಬಿಡಲಾಯಿತು.

ಆಹ್ವಾನ ಪತ್ರಿಕೆಯ ಪ್ರಕಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರು ವಹಿಸಬೇಕಿತ್ತು. ಅವರು ಬಾರದ ಕಾರಣದಿಂದ ಬಸವ ಕೇಂದ್ರದ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದರು.

ಸಾನಿಧ್ಯ ಹಾಗೂ ಸಮ್ಮುಖ ವಹಿಸಬೇಕಾಗಿದ್ದ ಮೂವರು ವೀರಶೈವ ಶಿವಾಚಾರ್ಯ ಸ್ವಾಮಿಗಳು ಸಮಾರಂಭಕ್ಕೆ ಗೈರಾದರು.

ಯಶಸ್ವೀ ಕಮ್ಮಟ

ವೀರಶೈವ ಸಂಘಟನೆಗಳು ಕೊನೆಗಳಿಗೆಯಲ್ಲಿ ಹೊರ ನಡೆದರೂ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಕದಳಿ ವೇದಿಕೆ ಮತ್ತು ಇತರ ಬಸವಪರ ಸಂಘಟನೆಗಳು ಬಸವ ಕೇಂದ್ರದಲ್ಲಿ ಕಮ್ಮಟವನ್ನು ಯಶಸ್ವಿಯಾಗಿ ನಡೆಸಿದವು.

ಕಮ್ಮಟ ಕಾರ್ಯಕ್ರಮದ ಸ್ವರೂಪವೇನೂ ಬದಲಾಗಲಿಲ್ಲ. ಶಿಬಿರಾರ್ಥಿಗಳಾಗಿ ಬರುವವರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು, ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸರ್ವಮಂಗಳ ಸಕ್ರಿ ಹೇಳಿದರು.

ಬಸವ ಮೀಡಿಯಾದ ಜೊತೆ ಮಾತನಾಡುತ್ತ ಕಮ್ಮಟದ ಆಯೋಜಕರೊಬ್ಬರು, ‘ಜನವರಿ ತಿಂಗಳಲ್ಲಿ ಸಿದ್ಧತೆ ಶುರುವಾದರೂ, ರೇಣುಕಾಚಾರ್ಯರ ಚಿತ್ರದ ವಿಷಯ ಬಂದಿದ್ದು ಕೊನೆ ಕ್ಷಣದಲ್ಲಿ. ಈ ಸಮಸ್ಯೆಯನ್ನು ಹುಟ್ಟುಹಾಕುವುದರಲ್ಲಿ ಯಾರೋ ದೊಡ್ಡವರ ಕೈವಾಡವಿದೆ ಎಂದು ಅನಿಸುತ್ತದೆ.

ರೇಣುಕಾಚಾರ್ಯರ ಚಿತ್ರದ ವಿಷಯ ಬಂದಿದ್ದು ಕೊನೆ ಕ್ಷಣದಲ್ಲಿ. ಈ ಸಮಸ್ಯೆಯನ್ನು ಹುಟ್ಟುಹಾಕುವುದರಲ್ಲಿ ಯಾರೋ ದೊಡ್ಡವರ ಕೈವಾಡವಿದೆ ಎಂದು ಅನಿಸುತ್ತದೆ.

ಬಸವ ತತ್ವ ಸಂಘಟನೆಗಳಲ್ಲಿ ಸೈದ್ಧಾಂತಿಕ ಸ್ಪಷ್ಟತೆಯಿದೆ, ಯಾವ ಸಂದರ್ಭದಲ್ಲಿಯೂ ರೇಣುಕಾಚಾರ್ಯರ ಚಿತ್ರ ಒಪ್ಪಿಕೊಳ್ಳುವ ಪ್ರಶ್ನೆಯೇ ಬರಲಿಲ್ಲ. ಆದರೆ ವೀರಶೈವ ಸಂಘಟನೆಗಳ ಪದಾಧಿಕಾರಿಗಳ ನಡುವೆ ಬಿನ್ನಾಭಿಪ್ರಾಯ ಕಂಡುಬಂದವು.

ವೀರಶೈವ ಸಂಘಟನೆಗಳು ಹೊರನಡೆದರೂ ಅವರಲ್ಲಿ ಅನೇಕರು ವೈಯಕ್ತಿಕವಾಗಿ ಕಮ್ಮಟಕ್ಕೆ ಬೆಂಬಲಿಸಿ, ಹಣ ಸಹಾಯ ಮಾಡಿ, ಕಮ್ಮಟ ಯಶಸ್ವಿಗೊಳಿಸುವಲ್ಲಿ ಶ್ರಮಿಸಿದರು. ಮಿರ್ಜಾಪುರ ಅವರೂ ಕೂಡ ಮೊದಲನೇ ದಿನ ಕಮ್ಮಟಕ್ಕೆ ಬಂದು ಪ್ರಸಾದ ಸ್ವೀಕರಿಸಿಕೊಂಡು ಹೋದರು,’ ಎಂದು ಹೇಳಿದರು.

ನಂಬಿಕೆಗೆ ಬೆಲೆಯಿರಲಿ

ಬಸವ ಮೀಡಿಯಾದ ಜೊತೆ ಮಾತನಾಡುತ್ತ ಮಿರ್ಜಾಪುರ ಅವರು ನಾನು ಊರಲ್ಲಿರಲಿಲ್ಲವಾದ್ದರಿಂದ ಮೊದಲ ಸಭೆಗಳಲ್ಲಿ ಭಾಗವಹಿಸಲು ಆಗಲಿಲ್ಲ. ಅದಕ್ಕೆ ಕೊನೆಗಳಿಗೆಯಲ್ಲಿ ರೇಣುಕಾಚಾರ್ಯರ ವಿಷಯ ಪ್ರಸ್ತಾಪ ಮಾಡಬೇಕಾಯಿತು, ಎಂದರು.

ಕಮ್ಮಟವನ್ನು ವೀರಶೈವ ಮಹಾಸಭಾವನ್ನು ಬಿಟ್ಟು ನಡೆಸುವ ಪ್ರಯತ್ನ ಮಾಡಲಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಸಂಘಟನೆಯ ಹೆಸರೂ ಹಾಕಿರಲಿಲ್ಲ. ಅದಕ್ಕೂ ಆಕ್ಷೇಪಣೆಯೆತ್ತಿದೆ ಎಂದರು.

‘ರೇಣುಕಾಚಾರ್ಯರು ಕಾಲ್ಪನಿಕ ವ್ಯಕ್ತಿಯೋ ಅಲ್ಲವೋ ಅದು ಬೇರೆ ಪ್ರಶ್ನೆ. ನಮ್ಮ ಭಾವನೆ, ನಂಬಿಕೆಗಳಿಗೆ ಬೆಲೆ ಕೊಟ್ಟು ಲಿಂಗಾಯತ ಸಂಘಟನೆಯವರು ಅವರ ಚಿತ್ರ ಹಾಕಲು ಅವಕಾಶ ಮಾಡಿಕೊಡಬೇಕಿತ್ತು.

‘ರೇಣುಕಾಚಾರ್ಯರು ಕಾಲ್ಪನಿಕ ವ್ಯಕ್ತಿಯೋ ಅಲ್ಲವೋ ಅದು ಬೇರೆ ಪ್ರಶ್ನೆ. ನಮ್ಮ ಭಾವನೆ, ನಂಬಿಕೆಗಳಿಗೆ ಬೆಲೆ ಕೊಟ್ಟು ಲಿಂಗಾಯತ ಸಂಘಟನೆಯವರು ಅವರ ಚಿತ್ರ ಹಾಕಲು ಅವಕಾಶ ಮಾಡಿಕೊಡಬೇಕಿತ್ತು.

ಸಮಾಜವನ್ನು ಒಗ್ಗೂಡಿಸಬೇಕು, ಒಡೆಯಬಾರದು. ಇದರಿಂದಲೇ ಲಿಂಗಾಯತರ ಜನಸಂಖ್ಯೆ ಕಡಿಮೆಯಾಗುತ್ತಿರುವುದು,’ ಎಂದು ಮಿರ್ಜಾಪುರ ಹೇಳಿದರು.

ಪ್ರತಿಯೊಂದು ಜೀವಿಯಲ್ಲೂ ಬಸವಣ್ಣನವರನ್ನು ಮಾತ್ರ ಕಾಣೋ ಮನಸ್ಥಿತಿ ನಮ್ದು. ಇದನ್ನ ಅರ್ಥ ಮಾಡಿಕೊಂಡು ನಮ್ಜೊತೆ ಇರ್ತೀನಿ ಅನ್ನುವರಿಗೆ ನಾವು ಯಾವತ್ತು ವಿರೋಧ ಮಾಡಲ್ಲ, ಎಂದು ರುದ್ರಪ್ಪ ಹೇಳಿದರು.

ಇದು ವೀರಶೈವ ಪ್ರಾಬಲ್ಯವಿರುವ ಜಿಲ್ಲೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿ ಲಿಂಗಾಯತ ಸಂಘಟನೆಗಳು ಚುರುಕಾಗಿ ಕೆಲಸ ಮಾಡುತ್ತಿವೆ. ಅದಕ್ಕೆ ಈ ರೀತಿ ಸಂಘರ್ಷಗಳಾಗುತ್ತಿವೆ, ಎಂದು ಸಕ್ರಿ ಹೇಳಿದರು.

ಮೊದಲ ಆಮಂತ್ರಣ ಪತ್ರಿಕೆ

ಬದಲಾದ ಆಮಂತ್ರಣ ಪತ್ರಿಕೆ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
13 Comments
  • ಇವರು ರೇಣುಕಾಚಾರ್ಯರ ಫೋಟೊ ಹಾಕಲು ಹೇಳಿದರೆ ನಾಳೆ ಇನ್ನೂ ನಾಲ್ವರು ಆಚಾರ್ಯರ ಫೋಟೊ ಹಾಕಲು ಹೇಳುತ್ತಾರೆ ಆಗೇನು ಮಾಡೋದು ?

    • ಜೈ ಬಸವ
      ಲಿಂಗಾಯತ ಧರ್ಮಕ್ಕೆ ಜಯವಾಗಲಿ

      ವೀರಶೈವ ಮೂಡ ನಂಬಿಕೆಗಳ ಆಗರ…. ಕಾಲ್ಪನಿಕ ಧರ್ಮ ನಮಗೆ ಬೇಡ

      ನಮಗೆ ಬಸವ ಧರ್ಮ ಬೇಕು

  • ವೀರಶೈವ ವಾದಿಗಳು ಹೋದರೆ ಹೋಗಲಿ ತಲೆಕೆಡಿಕೊಳ್ಳದೆ ರಾಜ್ಯಾದ್ಯಂತ ತಳಮಟ್ಟದಿಂದ ಲಿಂಗಾಯತ ಧರ್ಮದ ತತ್ವಸಿದ್ದಾಂತಗಳನ್ನ ಜನಸಾಮಾನ್ಯರಿಗೆ ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮುಖಾಂತರ ತಿಳಿಸಿದರೆ ಮುದೊಂದು ದಿನ ವೀರಶೈವರೆಲ್ಲ ಓಡೋಡಿ ಲಿಂಗಾಯತಕ್ಕೆ ಬಂದೆ ಬರುತ್ತಾರೆ.
    ಲಿಂಗಾಯತ ಧರ್ಮ ಪರರು ಕಲಿಗಳು,ಹುಲಿಗಳು ನಿಧಾನವಾದರೂ ಛಲಬಿಡದೆ ಬಸವಣ್ಣನವರ ಸಿದ್ದಾಂತವನ್ನ ಜಗತ್ತಿಗೆ ಮುಟ್ಟೆಮುಟ್ಟಿಸಲಾಗುವುದು. ಇದಕ್ಕೆ ಬಸವ ಮೀಡಿಯಾ ಸಹಕಾರವಿರುವುದರಿಂದ ವಿಶ್ವಕ್ಕೆ ಬೇಗ ಮುಟ್ಟುತ್ತೇವೆ. ಜನಸಾಮಾನ್ಯರನ್ನು ಬೇಗ ತಲುಪುತ್ತೇವೆ

  • ನಮ್ಮದು ಲಿಂಗಾಯತ ಧರ್ಮ,
    ನಾವು ವೀರಶೈವ ಧರ್ಮದ ಕಾಲ್ಪನಿಕ ಗುರುಗಳ ಮತ್ತು ಅವರ ಮೂಢ ಭಕ್ತರ, ಮೂಢ ಸ್ವಾಮಿಗಳ ಮಾತಿಗೆ ಬೆಲೆ ಏಕೆ ಕೊಡಬೇಕು?
    ಕಲ್ಲಿನಲ್ಲಿ ಹುಟ್ಟಲು ಸಾಧ್ಯವೇ?
    ಅದೇ ಕಲ್ಲಿನ ಶಿವಲಿಂಗದ ಮೇಲೆ ಕಾಲು ಇಟ್ಟುಕೊಂಡು ಪೂಜೆ ಮಾಡಿಸಿ ಕೊಳ್ಳುವುದು ವೀರಶೈವರ ಸಂಪ್ರದಾಯ.
    ಇವರು ಲಿಂಗಾಯತರು ಕೊಡುವ ಬಿಕ್ಷೆಗಾಗಿ ಲಿಂಗಾಯತ ಧರ್ಮಕ್ಕೆ ಬಂದಿದ್ದಾರೆ.
    ಮೊದಲು ಇವರನ್ನು ಕರೆಯುವುದು, ಬಿಕ್ಷೆ ಕೊಡುವುದು ಬಂದು ಮಾಡಿರಿ.

  • ರೇಣುಕಾಚಾಯ೯ರಿಲ್ಲದನೆ & ವೀರಶೈವ ಪದಬಳಕೆಯಿಲ್ಲದೆನೆ ರಾಜ್ಯದಾದ್ಯಂತ ಲಿಂಗಾಯತರ ಸಂಘಟೆನೆಗಳು ಈ ಹಿಂದೆ ಗಿಂತ ಇಂದು ಚುರುಕಾಗಿ ಸೈದ್ದಾಂತಿಕ ಸವಾಲುಗಳನ್ನು ಯದುರಿಸುವಲ್ಲಿ ಯಶಸ್ವಿಯಾಗಿದೆ ,ಇದನ್ನರಿತ ವೀರಶೈವ ವಾದಿಗಳು ಸಮಯಸಾಧಕತನಕ್ಕೆ ಮುಂದಾಗಿ ಒಳನುಸುಳಿ ಬಸವಾಯತರ ಚುರಕುತನಕ್ಕೆ ಅಡ್ಡಿಪಡಿಸುವ ಪ್ರಯತ್ನವನ್ನು ಹಿಂದಿನಿಂದ ಮುಂದೆಯೂ ಮಾಡುವ ಪ್ರಯತ್ನದ ಹುನ್ನಾರವಿದು .ಇದಕ್ಕೆ ಲಿಂಗಾಯತರು ತಕ್ಕ ಉತ್ತರ ನೀಡಲು ಸನ್ನದ್ದರಾಗಿದ್ದಾರೆ.

  • ವೀರಶವ (Brave Dead Body)ರೇಣುಕಾಚಾರ್ಯ ಪೀಡೆ ತೊಲಗಿದರೆ ಲಿಂಗಾಯತರಿಗ ಒಳ್ಳೆಯದೆ.🤣

    • You are right sir, lingayath means Basavashwararu ,why people unnecessarily inervene veerashaiva ,this that.Their argument is so adamant and untrue. Long live lingayath religion. Sharanu sharanarthi

  • ಬಸವರಾಜ ರೊಟ್ಟಿ ನ್ಯಾಯವಾದಿ ಅಧ್ಯಕ್ಷರು JLM ಬೆಳಗಾವಿ says:

    ಇವನಾರವ ಇವನಾರವ ಎಂದೆನಿಸಿದೆ, ಇವ ನಮ್ಮವ ಇವ ನಮ್ಮವ ಎಂಬ ಬಸವಣ್ಣನವರ ವಚನದಂತೆ ಎಲ್ಲರನ್ನೂ, ಎಲ್ಲವನ್ನು ಒಪ್ಪಿಕೊಳ್ಳುವ, ಅಪ್ಪಿ ಕೊಳ್ಳುವ ಸ್ವಭಾವ ಲಿಂಗಾಯತರದ್ದು.
    ಬಸವಣ್ಣನವರೇ ಧರ್ಮ ಗುರು, ವಚನ ಸಾಹಿತ್ಯವೇ ಧರ್ಮ ಗ್ರಂಥ, ಎಂದು ಒಪ್ಪುವ ಯಾರೇ ಆಗಲಿ ಅವರು ನಮ್ಮ ಜೊತೆಗಿರಬಹುದು. ನಮ್ಕಾಮ ರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಇದರ ಹೊರತಾಗಿ ರೇಣುಕಾಚಾರ್ಯ ಭಾವಚಿತ್ರ ಬೇಕು ಎನ್ನುವವರು ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ. ಬಸವಣ್ಣನವರೇ ಧರ್ಮಗುರು ಎಂದು ನಂಬುವ ಜನರು 99℅ ರಷ್ಟು ಇರುವಾಗ ಅವರನ್ನೇ ನಾವು ಸಂಘಟಿತರನ್ನಾಗಿ ಮಾಡೋಣ. ಉಳಿದವರು ಬಸವಣ್ಣನವರನ್ನು ಒಪ್ಪಿ ಬಂದರೆ ಸ್ವಾಗತಿಸೋಣ. ಇಲ್ಲವಾದರೆ ಅವರು ದೂರ ಉಳಿದರೂ ಚಿಂತೆ ಇಲ್ಲ. ರಾಯಚೂರು JLM ಘಟಕವು ದಿಟ್ಟ ಕ್ರಮ ಕೈಗೊಂಡದ್ದನ್ನು ಅಭಿನಂದಿಸುತ್ತೇವೆ.
    ಜೈ ಬಸವೇಶ, ಜೈ ಲಿಂಗಾಯತ.

  • ಲಿಂಗಾಯತ ಸಂಘಟನೆಗಳ ನಿಲುವು ಮೆಚ್ಚತಕ್ಕದ್ದು. ಇದು ಭವಿಷ್ಯದಲ್ಲಿ ಲಿಂಗಾಯತರ ನಿಲುವನ್ನು ಮುಖಂಡರಿಗೆ‌ ಸ್ಪಷ್ಟಪಡಿಸಿದೆ.

  • ವೀರಶೈವ ರನ್ನು ಹೊರಗೆ ಇಟ್ಟಿದ್ದು ಶ್ಲಾಘನೀಯವಾದ ವಿಷಯ ಎಷ್ಟು ದಿನಾಂತ ಅವರನ್ನು ಓಲೈಸುವದನ್ನು ಬಿಟ್ಟು ಬಿಡಿ.ಯಾವುದು ಕಾಲ್ಪನಿಕ ಯಾವುದು ವಾಸ್ತವ ಅಂತ ಅವರು ತಿಳಿಯದ ಮೂಢರೆನು ಅಲ್ಲಾ. ಅವರಲ್ಲಿ ಸ್ವಾರ್ಥ ಭಾವನೆ ಎದ್ದು ಕಾಣುತ್ತದೆ ಅವರ ಅಸ್ತಿತ್ವ ಅಲುಗಾಡುತ್ತಿದೆ ಅದಕ್ಕೆ ಅವರು ಹೆದರಿದ್ದಾರೆ

  • 🙏🙏🙏🙏🙏 ಬಸವಣ್ಣನವರು ಮಾತ್ರ ಸಾಕು . ಇಂತಹ ಕಮಟುಗಳನ್ನು ನಡೆಸುತ್ತಾ ಹೋದಂತೆ ಜನರು ಜಾಗೃತಿ ಗೊಳ್ಳುತ್ತಾರೆ. ಚೆಲುವೆ ದಿನಗಳು ಮಾತ್ರ ಈ ವಾದ ವಿವಾದ – ತದನಂತರ ಎಲ್ಲವೂ ಎಲ್ಲರೂ ಗುರು ಬಸವಣ್ಣನವರಲ್ಲಿಯೇ ಸಮರಸ ಗೊಳ್ಳುವ ಸಮಯ ಬಂದೊದುಗುತ್ತದೆ .

    • ಧರ್ಮಗುರು ಬಸವಣ್ಣನವರು ಧರ್ಮ ಸಂಹಿತೆ ವಚನ ಸಾಹಿತ್ಯ ಇವೆರಡು ಹಳಿಗಳ ಮೇಲೆ ಹೊಗಿದರೆ ಖಂಡಿತವಾಗಿ ಗುರಿ ಮುಟ್ಟಬಹುದು ಇನ್ನೂ ಮುಂದೆಯು ಕೂಡ ಲಿಂಗಾಯತ ಧರ್ಮಗುರು ಬಸವಣ್ಣನವರು ಎಂದು ಒಪ್ಪುವ ಸ್ವಾಮಿಗಳಿಗಷ್ಟೆ ಕರೆಸಬೇಕು ನಮ್ಮ ಕಾರ್ಯಕ್ರಮಕ್ಕೆ ಅವರಿಗೂ ಗೊತ್ತಾಗುತ್ತೆ

Leave a Reply

Your email address will not be published. Required fields are marked *