2025 ಬಜೆಟಿಗೆ ಶರಣ ಸಮಾಜದ ಪ್ರತಿಕ್ರಿಯೆ
ವಿಜಯಪುರ
ಆಯವ್ಯಯಕ್ಕೆ ಮುಂಚೆ ಲಿಂಗಾಯತ ಮಠಾಧೀಶರುˌ ರಾಜಕಾರಣಿಗಳುˌ ಚಿಂತಕರುˌ ಹಾಗೂ ಸಮಾಜದ ಹಿರಿಯರು ಸೇರಿ ಶರಣ ತತ್ವದ ಪ್ರಚಾರˌ ಹಾಗೂ ಪ್ರಸಾರಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು.
ಆದರೆ ನಿನ್ನೆ ಮಂಡಿಸಲಾದ ಆಯವ್ಯಯದಲ್ಲಿ ಲಿಂಗಾಯತರ ಬೇಡಿಕೆಗೆ ಸರಕಾರ ಯಾವ ರೀತಿಯಲ್ಲಿ ಸ್ಪಂದಿಸಿದೆ ಎನ್ನುವ ಕುರಿತು ಸಮಾಜದ ಹಿರಿಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
೧. ಶರಣ ಸಮಾಜದ ಬೇಡಿಕೆಗಳ ಕುರಿತು ಬಜೆಟ್ ಸ್ಪಂದಿಸಿದೆಯೆ?
ಶರಣ ಸಮಾಜದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲವೆಂದೇ ಹೇಳಬೇಕು.
೨. ಸ್ಪಂದಿಸದಿರಲು ಕಾರಣ?
ಮುಖ್ಯಮಂತ್ರಿ ಸಿದ್ಧರಿಮಯ್ಯನವರು ತಮ್ಮ ಅಧಿಕಾರದ ಎರಡೂ ಅವಧಿಯಲ್ಲಿ ಶರಣ ಸಮಾಜದ ಅನೇಕ ಬೇಡಿಕೆಗಳನ್ನು ಈಡೇರಿಸಿದ ಏಕೈಕ ಮುಖ್ಯಮಂತ್ರಿ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.
ಆದರೆ ಲಿಂಗಾಯತ ಸಮುದಾಯವನ್ನು ಹಾಗೂ ಶರಣ ಸಂಸ್ಕೃತಿಯನ್ನು ನಾಶಗೊಳಿಸುವ ಹುನ್ನಾರ ಮಾಡುತ್ತಿರುವ ಸಂಘ-ಪರಿವಾರ ಮತ್ತು ಬಿಜೆಪಿಯೊಂದಿಗೆ ಲಿಂಗಾಯತ ಮಠಾಧೀಶರ ಒಡನಾಟ ಸಹಜವಾಗಿ ಜಾತ್ಯಾತೀತರು ಮತ್ತು ಸಮಾಜವಾದಿಗಳಿಗೆ ಸರಿ ಬರುವುದಿಲ್ಲ. ಮುಖ್ಯಮಂತ್ರಿಗಳು ಸ್ಪಂದಿಸದೆ ಇರಲು ನಮ್ಮ ಕೆಲವು ಮಠಾಧೀಶರ ಈ ಇಬ್ಬಗೆ ನೀತಿಯೆ ಕಾರಣವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
೩. ಬಸವ ಅನುಯಾಯಿಗಳ ಪ್ರತಿಕ್ರಿಯೆ ಹೇಗಿರಬೇಕು?
ಬಸವಾನುಯಾಯಿಗಳು ಸರಿಯಾಗಿಯೆ ಇದ್ದಾರೆ. ಕೆಲವು ಬಸವಪ್ರಣೀತ ವಿರಕ್ತ ಮಠಗಳ ಇಬ್ಬಂದಿತನˌ ಲಿಂಗಾಯತ ಸಂಸ್ಕೃತಿ ನಾಶ ಮಾಡುವ ಶಕ್ತಿಗಳೊಂದಿಗಿನ ಒಡನಾಟ ನಿಲ್ಲಬೇಕು. ನಿಜವಾದ ಬಸವತತ್ವದ ಆಶಯದಂತೆ ಮಠಗಳು ಕಾರ್ಯ ಮಾಡಬೇಕು. ಲಿಂಗಾಯತರಲ್ಲಿ ತಮ್ಮ ಸಂಸ್ಕೃತಿಯ ವೈರಿಗಳು ಯಾರು ಎನ್ನುವ ರಾಜಕೀಯ ಪ್ರಜ್ಞೆ ಜಾಗೃತಗೊಳಿಸುವ ಕಾರ್ಯ ಮಠಗಳು ಮಾಡಬೇಕಿದೆ.
ಮೊದಲು ಮಠಗಳೆ ಬದಲಾಗಬೇಕಿದೆ. ವೀರಶೈವ ಮಹಾಸಭಾˌ ಪಂಚಪೀಠಗಳು ಮತ್ತು ವಿರಕ್ತ ಮಠಾಧೀಶರ ಅಸ್ಪಷ್ಟ ರಾಜಕೀಯ ನಿಲುವು ನಮ್ಮ ಸಮಾಜವು ಛಿದ್ರಗೊಳ್ಳಲು ಕಾರಣವಾಗಿದೆ. ಕಾಲಕಾಲಕ್ಕೆ ನಮ್ಮ ರಾಜಕೀಯ ನಿಲುವುಗಳು ನಮ್ಮ ಸಮಾಜದ ಬೇಡಿಕೆಗನುಗುಣವಾಗಿ ಬದಲಾಗದಿದ್ದರೆ ಈ ಸಮಸ್ಯೆಗೆ ಪರಿಹಾರವಿಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ.
ಪಾಟೀಲರು ಹೇಳಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಲಿಂಗಾಯತ ವಿರೋಧಿಗಳ ಕುತಂತ್ರ ಬಜೆಟಿನಲ್ಲಿ ಶರಣತತ್ವ ಪ್ರಚಾರಕ್ಕಾಗಿ ಯಾವುದೇ ಆಸಕ್ತಿ ತೋರದಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ.
ಮುಖ್ಯಮಂತ್ರಿಗಳನ್ನು ಮಠಾಧೀಶರು ಭೇಟಿಯಾಗಲು ಹೋದಾಗ
ಮಠಾಧೀಶರಿಗೆ ನಾನು ಬಸವ ತತ್ವದ ಅನುಯಾಯಿ ಇದ್ದೇನೆ ಆದರೆ ನಿಮ್ಮಲ್ಲಿನ ಕೆಲವರು ಬಸವ ನಿಷ್ಟರಾಗಿಲ್ಲ ಎರಡು ದಂಡೆಯ ಮೇಲೆ ಕಾಲಿಡುತ್ತಾರೆ. ಹೀಗೆ ಹೋದರೆ ನಾವು ಉಳಿಯಲ್ಲ ನೀವೂ ಉಳಿಯಲ್ಲ ಎಂದು ನೇರವಾಗಿಯೆ ಹೇಳಿದ್ದಾರಂತೆ.
ಮುಖ್ಯ ಮಂತ್ರಿಗಳು ಬಸವತತ್ವ ಅನುಯಾಯಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಆದರೆ ಮಠಾಧೀಶರ ಇಬ್ಬಗೆಯ ನೀತಿಗೆ ಇವರು ಕಿವಿಗೊಡದೆ ಬಸವ ಅನುಯಾಯಿಯಾದ ಸಿದ್ಧರಾಮಯ್ಯನವರು ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಂದು ಘೋಷಿಸಿದ ನಂತರ ತಾವಾಗೇ ಸ್ವತಃ ಮುಂದೆ ನಿಂತು ಮಠಾಧೀಶರ ಬೇಡಿಕೆಗೆ ಕಾಯದೆ ಬಸವ ತತ್ವದ ಪ್ರಚಾರಕ್ಕೆ ಬೇಕಾದ ಎಲ್ಲಾ ನಿಲುವುಗಳನ್ನು ತೆಗೆದುಕೊಳ್ಳಬಹುದಾಗಿತ್ತು.ಇದು ನನ್ನ ಅನಿಸಿಕೆ..
ಪಾಟೀಲರು ಕೆಲವು ಮಠಾಧೀಶರ ಬಗ್ಗೆ ಮಾಡಿರುವ ಅರೋಪ ಸತ್ಯ. ಆದರೆ ಮುಖ್ಯಮಂತ್ರಿ ಗಳು ಮಠಾಧೀಶರ ಮನವಿಯನ್ನು ಗೌರವಿಸಿ ಅವರ ಬೇಡಿಕೆಯಂತೆ ಮುಂದಿನ ವರ್ಷ ಆ ಯೋಜನೆ ಪ್ರಾರಭಿಸುವುದಾಗಿ ಬಜೆಟ್ ಮಂಡನೆ ಸಮಯದಲ್ಲಿಯೇ ಘೋಷಿಸಿದ್ದಾರೆ. ಮಠಾಧೀಶರು ಅಂತಿಮ ಕ್ಷಣದಲ್ಲಿ ಬೇಡಿಕೆ ಇಟ್ಟಿರುವುದರಿಂದ ಮತ್ತು ಸೂಕ್ತ ಸ್ಥಳ ಗೊತ್ತುಪಡಿಸುವುದು ಈ ಯೋಜನೆಗೆ ಮುಖ್ಯವಾಗಿರುವುದರಿಂದ, ಸ್ಥಳ ಆಯ್ಕೆಯ ನಂತರ ಅದಕ್ಕೆ ಅನುಸರಿಸಿ ಯೋಜನೆ ರೂಪಿಸ ಬೇಕಾಗಿರುವುದರಿಂದ ಅದನ್ನು ಮುಂದಿನ ವರ್ಷಕ್ಕೆ ನಿಶ್ಚಹಿಸಿದ್ದಾರೆ.
ಲಿಂಗಾಯತರು ಸಕಾ೯ರದ ಅನುದಾನ ಕ್ಕೆ ಕಾಯಬೇಕಿಲ್ಲ , ಏಕೆಂದರೆ ನಮ್ಮ ಅಣ್ಣ ಬಸವಣ್ಣ ಅಂದು ಮಂತ್ರಿ ಯಾಗಿದ್ದರೂ ಒಂದೀ ಸಾಸುವೆ ಕಾಳಿನಷ್ಟು ರಾಜ್ಯ ಬೊಕ್ಕಸಕ್ಕೆ ಕೈ ಹಾಕದೇ ಧರ್ಮ ವನ್ನು ಸ್ಥಾಪನೆ ಮಾಡಿದರು ಎಂಬುದನ್ನು ನಾವು ಮರೆಯಬಾರದು, ಜೊತೆಗೆ ನಾವು ಮೊದಲು ಇನ್ನೋಬ್ಬರನ್ನು ಟೀಕೆ ಮಾಡುವುದನ್ನು ನಿಲ್ಲಿಸಬೇಕು ,ನಮ್ಮ ಗುರಿ ಬಸವ ತತ್ವಗಳನ್ನು ಪ್ರಚಾರ ಮಾಡುತ್ತಿ ಹೋಗುವುದು .
ಎಲ್ಲಾ. ಮಠದ ಸ್ವಾಮಿಜಿ ಯವರು ಮೊದಲು ಬಸವ ಧರ್ಮ ಓಪಪ್ಲಿ, ಹಾಗಾದ್ರೆ ರಾಜಕೀಯ ಹಿಡೆತ ಬರುತ್ತದೆ