ಧಾರವಾಡ
ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಎಂಟು ಜೋಡಿಗಳ ವಚನಗಳಾಧಾರಿತ ಸಾಮೂಹಿಕ ಕಲ್ಯಾಣ ಮಹೋತ್ಸವವು ನಡೆಯಿತು. ಮಹೋತ್ಸವವನ್ನು ಬಸವ ಕೇಂದ್ರದ ಸದಸ್ಯರು ನಡೆಸಿಕೊಟ್ಟರು.


ಬಸವ ಕೇಂದ್ರದ ಶರಣೆ ಮಂಜುಳಾ ಎಸ್. ನಿಗದಿ, ಶರಣರಾದ ಬಸವಂತಪ್ಪ ತೋಟದ, ಶಿವರುದ್ರಗೌಡ ಪಾಟೀಲ, ಅನಿಲ ಅಂಗಡಿ, ಮನೋಜ ರಾಮಜಿ ವಚನ ಕ್ರಿಯಾಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದರು.

ಪರಸ್ಪರ ಹಾರ ಬದಲಾಯಿಸಿಕೊಂಡ ವಧು-ವರರಿಗೆ ವಚನ ಪ್ರತಿಜ್ಞೆ ಬೋಧಿಸಲಾಯಿತು. ಕಲ್ಯಾಣ ಮಹೋತ್ಸವಕ್ಕೆ ಬಂದವರು ನೂತನ ದಂಪತಿಗೆ ಪುಷ್ಪವೃಷ್ಟಿ ಮಾಡಿ ಶುಭ ಹಾರೈಸಿದರು. ಶರಣ ಶಿದ್ರಾಮಣ್ಣ ನಡಕಟ್ಟಿ ಎಂಟು ಜೋಡಿಗೆ ಬಸವಾದಿ ಶರಣರ ವಚನ ಪುಸ್ತಕ ನೀಡಿದರು. ಸಹದೇವ ನಿಗದಿ ಅವರು ಬಸವೇಶ್ವರ ಫೋಟೋ ನೀಡಿದರು.


ಬಸವೇಶ್ವರ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸೈಟಿ, ಉಳವಿ ಚನ್ನಬಸವೇಶ್ವರ ಧರ್ಮ ಫಂಡ್ ಸಂಸ್ಥೆ, ರೇವಣಸಿದ್ದೆಶ್ವರ ಸೋಲ್ ಟ್ರಸ್ಟ್ ಹಾಗೂ ಪೂಜಾ ದಾಬಾ (ಹೋಟೆಲ್) ಮಾಲಿಕರು ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ, ದಾಸೋಹ ಸೇವೆ ಸಲ್ಲಿಸಿದರು. ಈ ಎಲ್ಲ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಎಲ್ಲಾ ನವ ದಂಪತಿಗಳಿಗೆ ಶುಭವಾಗಲಿ.
🌹🌹🌹🌹🌹🌹🌹🌹🌹🌹🌹🌹
ಪ್ರತಿಯೊಂದು ಹಳ್ಳಿಯಲ್ಲಿಯೂ ವಚನಾಧಾರಿತ ಕಲ್ಯಾಣಮಹೋತ್ಸವ ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳು ನಡೆಯುವಂತಾಗಬೇಕು.ಅದಕ್ಕಾಗಿ ಬಸವಪರ ಸಂಘಟನೆಗಳು ತಮ್ಮ ತಮ್ಮ ಗ್ರಾಮಗಳಲ್ಲಿ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು ಅಂತ ನನ್ನ ಅಭಿಪ್ರಾಯ. 🙏🙏