ಶ್ರೀಗಳಿಂದ ಟ್ರಸ್ಟ್ ನಿಯಮಗಳ ಉಲ್ಲಂಘನೆ; ವೈಯಕ್ತಿಕ ಆಸ್ತಿ ಮಾಡಿರುವ ಆರೋಪ; ವಾರದಲ್ಲಿ ಮತ್ತೆ ಸಭೆ
ಹುಬ್ಬಳ್ಳಿ
ಯಾವುದೇ ರಾಜಕೀಯ ಪಕ್ಷದ ಪರವಾಗಿ, ವ್ಯಕ್ತಿ ಪರವಾಗಿ ಮಾತನಾಡದಂತೆ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೇವೆ. ಒಂದು ವೇಳೆ ಮತ್ತೆ ಮಾತನಾಡಿದರೆ, ಪೀಠದಿಂದ ಸ್ವಾಮೀಜಿ ಉಚ್ಛಾಟನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಹೇಳಿದ್ದೆವು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನೀಡಿದೆ.
ನಗರದ ಖಾಸಗಿ ಹೊಟೆಲ್ ನಲ್ಲಿ ಸಮಾಜದ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸದಸ್ಯರು ಮುಂದಿನ ವಾರದಲ್ಲಿ ಮತ್ತೆ ಸಭೆ ನಡೆಸುತ್ತೇವೆ. ಅಷ್ಟರಲ್ಲಿ ಸ್ವಾಮೀಜಿಯವರ ವರ್ತನೆ ಬದಲಾವಣೆಯಾಗದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಟ್ರಸ್ಟ್ನ ನಿಯಮಗಳ ವಿರುದ್ಧ ನಡೆದುಕೊಂಡರೆ ಅವರನ್ನು ಪೀಠದಿಂದ ಕೆಳಗೆ ಇಳಿಸುವ ಅಧಿಕಾರ ಟ್ರಸ್ಟ್ಗೆ ಇದೆ ಎಂದು ಹೇಳಿದರು.
ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಪ್ರಮುಖರಾದ ಪ್ರಭಣ್ಣ ಹುಣಸಿಕಟ್ಟೆ, ವಿಜಯಾನಂದ ಕಾಶಪ್ಪನವರ, ಮೋಹನ ಲಿಂಬಿಕಾಯಿ, ನೀಲಕಂಠ ಅಸೂಟಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಒಬ್ಬ ವ್ಯಕ್ತಿ ಪರವಾಗಿ ರಾಜಕೀಯ ಧ್ವನಿ ಎತ್ತುವ ಮೂಲಕ ಟ್ರಸ್ಟ್ ನ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಹೇಳಿದರು.
ಸುದ್ದಿಘೋಷ್ಠಿಯಲ್ಲಿ ಮೃತ್ಯುಂಜಯ ಶ್ರೀಗಳು ವೈಯಕ್ತಿಕ ಆಸ್ತಿ ಮಾಡಿದ ಆರೋಪವೂ ಕೇಳಿಬಂತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯನ್ನು ನೇಮಸಿದ್ದು ಟ್ರಸ್ಟ್. ಟ್ರಸ್ಟ್ ನಿಬಂಧನೆಗಳಿಗೆ ಒಳಪಟ್ಟು ಸ್ವಾಮೀಜಿಗಳು ಸಮಾಜವನ್ನು ಸಂಘಟಿಸಬೇಕು. ಆದರೆ ಓರ್ವ ವ್ಯಕ್ತಿ ಹಾಗೂ ಪಕ್ಷವನ್ನು ಬೆಂಬಲಿಸಿ ನಿಲ್ಲುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ಸಮಾಜ ಕಟ್ಟುನಿಟ್ಟಿನ ಕಠಿಣ ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿ ಟ್ರಸ್ಟ್ ಅಡಿಯಲ್ಲಿ ಶ್ರೀಗಳು ಮತ್ತು ನಾವು ಇದ್ದೇವೆ. ಸಮಾಜ ಅನ್ನೋದು ಎನ್ನುವುದು ಬಹಳಷ್ಟು ದೊಡ್ಡದು. ಶ್ರೀಗಳನ್ನು ಸಮಾಜ ಎಲ್ಲಾ ಜನರು ಗುರುತಿಸಿ ಪೀಠಕ್ಕೆ ಆಯ್ಕೆ ಮಾಡಿದೆ. ಆದರೆ ಒಬ್ಬ ವ್ಯಕ್ತಿಯ, ಪಕ್ಷದ ಪರವಾಗಿ ಕೆಲಸ ಮಾಡಲು ಅಲ್ಲ. ಶ್ರೀಗಳು ಒಬ್ಬ ವ್ಯಕ್ತಿಯ ಹಿಂದೆ ನಿಲ್ಲುವುದು ಸರಿಯಲ್ಲ. ಎಲ್ಲಾ ಟ್ರಸ್ಟಿಗಳು ಚರ್ಚೆ ಮಾಡಿ ಮುಂದಿನ ನಿರ್ಧಾರ ಮಾಡುತ್ತೇವೆ ಎಂದರು.
ಸ್ವಾಮೀಜಿಗೆ ಮುಂದೆ ಕಾವಿ ತೊರೆದು ಖಾದಿ ಧರಿಸಲು ಹೊರಟ್ಡಿದ್ದಾರೆ. ಮುಂದಿನ ಲೋಕಸಭೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಅದೇ ತಯಾರಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಹೊರಟ್ಟಿದ್ದಾರೆ. ಸ್ವಾಮೀಜಿ ಯತ್ನಾಳ ಜೊತೆ ಸೇರಿ ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ವೈಯಕ್ತಿಕ ಆಸ್ತಿ
2D, 2C ಡೀಲ್ ಮಾಡಿಕೊಂಡಿದಕ್ಕೆ ಸ್ವಾಮೀಜಿ ವೈಯಕ್ತಿಕ ಆಸ್ತಿ ಮಾಡಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ವೈಯಕ್ತಿಕ ಶಿಕ್ಷಣ ಸಂಸ್ಥೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ಆಸ್ತಿಮಾಡಿಕೊಂಡಿದ್ದಾರೆ. ಕೂಡಲ ಸಂಗಮದಲ್ಲಿ ಪ್ರತ್ಯೇಕ ಸಂಸ್ಥೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲ ಸಂಗಮ , ದಾವಣಗೆರೆಯಲ್ಲಿ ಸಾಕಷ್ಟು ಸಂಸ್ಥೆ, ಶಾಲಾ ಕಾಲೇಜು ಆರಂಭಿಸಿದ್ದಾರೆ. ಶ್ರೀಗಳ ಶಾಲೆಗಳನ್ನೆಲ್ಲಾ ಟ್ರಸ್ಟ್ ವಶಕ್ಕೆ ತೆಗೆದುಕೊಳ್ಳುತ್ತದೆ ಎಂದರು.
ಯತ್ನಾಳ್ ಸಂಸ್ಕಾರ
ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಯತ್ನಾಳರು ಅತ್ಯಂತ ಬಹಳ ಕೀಳುಮಟ್ಟದಲ್ಲಿ ಯತ್ನಾಳ ಮಾತನಾಡಿದ್ದಾರೆ. ಹಂದಿ, ನಾಯಿ, ನರಿ ಅಂತ ಭಾಷೆ ಬಳಸ್ತಾರೆ.
ಅದು ಅವರ ಸಂಸ್ಕೃತಿ, ಆ ಸಂಸ್ಕೃತಿ ನೋಡಿಯೇ ಅವರ ಪಕ್ಷದವರು ಉಚ್ಚಾಟನೆ ಮಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ ಅವರ ಸಂಸ್ಕಾರ ನಾನು ನೋಡಿದ್ದೇನೆ. ನಮ್ಮ ಸಮಾಜ ವೇದಿಕೆಯನ್ನು ತಮ್ಮ ವಯಕ್ತಿಕವಾಗಿ ಹಿಂದೂತ್ವದ ಪರವಾಗಿ ಬಳಕೆ ಮಾಡಿಕೊಂಡಿದ್ದಾರೆ.
ಯತ್ನಾಳ ಅವರಿಗೆ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಬಗ್ಗೆ ನಿತ್ಯ ಮಾತನಾಡದಿದ್ರೆ ತಿಂದದ್ದು ಅರಗಲ್ಲ. ನಾನು ಟಿಕೇಟ್ ಕೇಳಲು ಶ್ರೀಗಳನ್ನು ಬಳಕೆ ಮಾಡಿಕೊಂಡಿಲ್ಲ. ನಾನು ಕೂಡಲ ಸಂಗಮ ದೇವರ ಮೇಲೆ ಆಣೆ ಮಾಡಿ ಹೇಳತ್ತಿನಿ. ನಾನು ಯಾವತ್ತೂ ಹೋರಾಟ ನಿಲ್ಲಸಬೇಡಿ ಅಂತ ಹೇಳಿಲ್ಲ.
ರಾಜಕೀಯ ಕ್ಷೇತ್ರ ಕ್ಕೆ ಸ್ವಾಮೀಜಿ ಗಳು ಬಂದರೆ ಹೀಗೆ ಆಗುವುದು ಧರ್ಮ ದ ಪಾಲನೆ ಮಾಡುವ ಕಾಯಕ ಸ್ವಾಮೀಜಿ ಮಾಡಬೇಕು ಆದರೆ ಸ್ವಾಮೀಜಿ ಗಳಿಗೆ ಧಾರ್ಮಿಕ ಕ್ಷೇತ್ರಕ್ಕಿಂತ ರಾಜಕೀಯ ಕ್ಷೇತ್ರ ಬಹಳ ಆಸಕ್ತಿ ಇದೆ ಅದೇ ಸಮಸ್ಯೆ ಆಗಿರುವುದು