ಅಮರಗಣಂಗಳನ್ನು ಆಯ್ಕೆ ಮಾಡುವ ಅಧಿಕಾರ ಬಿದರಿಗೆ ಕೊಟ್ಟವರು ಯಾರು?

ಇಂಥಹ ಬಸವ ದ್ರೋಹ ಸಹಿಸಲು ಅಸಾಧ್ಯ.

ದಾವಣಗೆರೆ

ಶರಣ ಬಂಧುಗಳೇ ಬಸವ ಜಯಂತಿ ದಿನ ಸರ್ವರನ್ನು ಅಪ್ಪಿಕೊಂಡ ವಿಶ್ವಗುರು ಬಸವಣ್ಣನವರ ಜಯಂತಿಯ ದಿನ ಕಾಲ್ಪನಿಕ ರೇಣುಕಾಚಾರ್ಯ ಅವರ ಭಾವ ಚಿತ್ರ ಪ್ರದರ್ಶನ ಮಾಡುವ ನಿರ್ಧಾರವನ್ನು ಲಿಂಗಾಯಿತರ ವಿರೋಧಿ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷರಾದ ಶಂಕರ್ ಬಿದರಿ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಹಾಗೂ ಅನುಭವ ಮಂಟಪದ 770 ಶರಣ ಅಮರಗಣಂಗಳ ಜೊತೆಗೆ ಕಾಲ್ಪನಿಕ ರೇಣುಕಾಚಾರ್ಯ ಅವರನ್ನು 771 ನೇ ಅಮರಗಂಣಂಗಳಾಗಿ ಆಯ್ಕೆ ಮಾಡಿದ್ದಾರೆ.

ಇಂಥಹ ಬಸವ ದ್ರೋಹ ಸಹಿಸಲು ಅಸಾಧ್ಯ.

ಈ ಅಮರಗಣಂಗಳನ್ನು ಆಯ್ಕೆ ಮಾಡುವ ಅಧಿಕಾರ ಶಂಕರ್ ಬಿದರಿ ಸಾಹೇಬರಿಗೆ ಕೊಟ್ಟವರು ಯಾರು? ರೇಣುಕಾಚಾರ್ಯರೇನು ಅನುಭವ ಮಂಟಪದ ಸದಸ್ಯರೇ?

ಬಸವ ಜಯಂತಿಯ ದಿನ ಕಾಲ್ಪನಿಕ ರೇಣುಕಾಚಾರ್ಯ ಅವರ ಜಯಂತಿ ಮಾಡುವ ಉದ್ದೇಶ ಏನಿರಬಹುದು? ಮಾರ್ಚ್ ತಿಂಗಳಲ್ಲಿ ಕಾಲ್ಪನಿಕ ರೇಣುಕಾಚಾರ್ಯ ಅವರ ಜಯಂತಿ ಮಾಡಿದ್ದಾರೆ.

ಈಗ ಮಾತ್ತೆ ಬಸವ ಜಯಂತಿ ದಿನ ರೇಣುಕಾಚಾರ್ಯ ಅವರ ಜಯಂತಿ ಏಕೆ ಮಾಡುತ್ತಿದ್ದಾರೆ
ಎಂಬುದನ್ನು ಶರಣ ಬಂಧುಗಳಾದ ನೀವೆಲ್ಲರೂ ಚಿಂತಿಸಿದರೆ ಶಂಕರ್ ಬಿದರಿ ಅವರ ಕುಟಿಲತೆ ಅರ್ಥ ಆಗುತ್ತದೆ.

ಇದರ ವಿರುದ್ಧ ನಾವೆಲ್ಲರೂ ಸೆಟೆದು ನಿಲ್ಲುವ ಸಮಯ ಬಂದಿದೆ. ಬಸವಾದಿ ಶರಣರನ್ನು ಮರೆಮಾಚುವ ಹುನ್ನಾರ ನಡೆಯುತ್ತಿದೆ. ಈಗ ಸುಮ್ಮನೆ ಇರಲು ಸಾಧ್ಯವೇ ಯೋಚಿಸಿ ಬಂಧುಗಳೇ.

ದಿನಾಂಕ 30/04/2025 ಶನಿವಾರ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ವತಿಯಿಂದ ದಾವಣಗೆರೆ ನಗರದಲ್ಲಿ ಬಸವ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರು ಬಸವ ದ್ರೋಹದ ಕೆಲಸ ಮಾಡಿದ್ದೇ ಆದರೆ ಉಗ್ರ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ.

ಶರಣರಿಗೆ ಆಗುವ ಅಪಮಾನವನ್ನು ತಡೆಯಲು ಬಸವಣ್ಣನವರ ಅನುಯಾಯಿಗಳು ಎದ್ದು ನಿಲ್ಲಲೇ ಬೇಕಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು