ಬೆಳಗಾವಿ
ಸಂಸ್ಕಾರ ಪಡೆದ ನೀರು ತೀರ್ಥವಾದಂತೆ, ಸಂಸ್ಕಾರ ಪಡೆದ ಆಹಾರ ಪ್ರಸಾದವಾದಂತೆ ಸಂಸ್ಕಾರ ಪಡೆದ ಮಾನವ ದೇವಮಾನವನಾಗಬಲ್ಲ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಂದು ನಾಗನೂರು ರುದ್ರಾಕ್ಷಿ ಮಠದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.