ನ್ಯಾಮತಿ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಬಸವ ಪ್ರಜ್ಞೆ ಹೆಚ್ಚುತ್ತಿದ್ದು, ವಿವಿಧ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಬಸವ ಜಯಂತಿ ಆಚರಣೆಗಳು ನಡೆಯುತ್ತಿವೆ.
1) ನ್ಯಾಮತಿಗೆ ಸಮೀಪದ ದಾನಿಹಳ್ಳಿಯಲ್ಲಿ ಬಸವೇಶ್ವರ ಅಭಿಮಾನಿಗಳಿಂದ ಘೋಷಣೆಗಳ ಮೂಲಕ ಬಸವಣ್ಣನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

2) ಗಂಜೀನಹಳ್ಳಿ ಗ್ರಾಮದಲ್ಲಿ ವಚನ ಭಜನೆ ಮೂಲಕ ಬಸವ ಜಯಂತಿ ಆಚರಿಸಲಾಯಿತು.

3) ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ವಚನ ಭಜನೆಯೊಂದಿಗೆ ಬಸವೇಶ್ವರರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

4) ನ್ಯಾಮತಿ ಗಾಂಧಿ ರಸ್ತೆಯಲ್ಲಿ ಇರುವ ಪೇಟೆ ಬಸವೇಶ್ವರ ಸೇವಾ ಟ್ರಸ್ಟ್ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.

5) ನ್ಯಾಮತಿ ನಗರದಲ್ಲಿರುವ ಜವಳಿ ಸಹಕಾರ ಸಂಘ ನಿ. ಇವರು ಬಸವ ಜಯಂತಿಯನ್ನು ಆಚರಿಸಿ ಅಂಗವಾಗಿ ಪ್ರಸಾದ ವಿತರಣೆ ಮಾಡಿದರು.

6) ಸಮೀಪದ ಕತ್ತಿಗೆ ಗ್ರಾಮದಲ್ಲಿ ನೆನಹು ಕಾರ್ಯಕ್ರಮವನ್ನು ಆಯೋಜಿಸಿ ಬಸವ ಜಯಂತಿಯನ್ನು ಆಚರಿಸಲಾಯಿತು.

ತಾಲೂಕಿನ ಕೆಂಚಿಕೊಪ್ಪ, ಜೀನಹಳ್ಳಿ, ಬೆಳಗುತ್ತಿ, ಸುರುಹನ್ನೆ ಮುಂತಾದ ಗ್ರಾಮಗಳಲ್ಲಿ ಮೊದಲಿನಿಂದಲೂ ಬಸವ ಜಯಂತಿಯನ್ನು ಆಚರಿಸಿಕೊಂಡು ಬಂದರೆ, ಕೆಲವು ಕಡೆ ಈ ವರ್ಷದಿಂದ ಆಚರಣೆ ಪ್ರಾರಂಭವಾಗಿವೆ.
“ಮಳೆ ಬಿಟ್ಟರು ಮರದ ಹನಿ ಬಿಡದು” ಎಂಬುವಂತೆ ತಾಲೂಕಿನಾದ್ಯಂತ ಬಸವ ಜಯಂತಿ ಆಚರಣೆ, ಕಾರ್ಯಕ್ರಮಗಳು ಮುಂದುವರೆದಿವೆ.