ಈಚಘಟ್ಟ ಗ್ರಾಮದಲ್ಲಿ ಹಬ್ಬದ ಸಂಭ್ರಮ ಸೃಷ್ಟಿಸಿದ ಬಸವ ಜಯಂತಿ ರಂಗೋಲಿಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಹೊಳಲ್ಕೆರೆ

ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ರವಿವಾರದಿಂದ ಶುರುವಾಗಿರುವ ಎರಡು ದಿನಗಳ ಸುತ್ತಮುತ್ತಲ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

ಗ್ರಾಮದ ವೀರಭದ್ರೇಶ್ವರ ಅಭಿವೃದ್ಧಿ ಸೇವಾ ಸಮಿತಿ ಕಾರ್ಯದರ್ಶಿ ಯು.ಎಸ್. ಉಜ್ಜಿನಸ್ವಾಮಿ ಅವರು ಮಾತಾಡಿ, ಗ್ರಾಮದಲ್ಲಿ ಬಸವಣ್ಣನವರ ಜಯಂತೋತ್ಸವದ ಹಿನ್ನೆಲೆಯಿಂದ ಹಬ್ಬದ ವಾತಾವರಣ ಮನೆ ಮಾಡಿದೆ.

ಎರಡು ದಿನಗಳ ಕಾಲ ಬಸವಣ್ಣನವರ ಜಯಂತಿ ನಿಮಿತ್ತ ವಿವಿಧ ಸಾ೦ಸ್ಕೃತಿಕ, ಸಾಹಿತ್ಯಿಕ ವಿಚಾರಗಳ ಜೊತೆಗೆ ವಚನ ಕಂಠಪಾಠ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ನಮ್ಮ ಈ ಸಮಾರಂಭಕ್ಕೆ ಬೇರೆ ಗ್ರಾಮಗಳವರು ಬರಲಿ ಎಂದು ಒಂದು ವಾಹನದಲ್ಲಿ ಬಸವಣ್ಣನವರ ಮೂರ್ತಿಯನ್ನು, ವಚನಗಳನ್ನು ಹಾಡಿಸುತ್ತಾ, ಕರಪತ್ರ ಹಂಚಲಾಗಿದೆ ಎಂದರು.

ಗ್ರಾಮದ ರೈತ ಮುಖಂಡ ಸಿ.ಡಿ ಕರಿಬಸಪ್ಪ ಮಾತನಾಡಿ, ಗ್ರಾಮ ಒಗ್ಗಟ್ಟಾಗಿರಲು ಹಿರಿಯರ ಹಾಗೂ ಸ್ವಾಮಿಗಳಂತವರ ಮಾತು ಅವಶ್ಯಕತೆ ಇದೆ. ಯುವಕರಿಗೆ ಧಾರ್ಮಿಕ ಅರಿವಿನ ಅವಶ್ಯಕತೆ ಇದೆ. ಅದರಿಂದ ಸನ್ಮಾರ್ಗದತ್ತ ನಡೆಯಲು ಅವಕಾಶವಾಗುತ್ತದೆ ಎಂದರು.

ಪ್ರತಿಯೊಬ್ಬರೂ ದುಡಿದು ತಿನ್ನಬೇಕೆಂಬುದು ಬಸವಣ್ಣನವರು ಬೋಧಿಸಿದ ಕಾಯಕ ತತ್ವವನ್ನು ಮತ್ತವರ ವಿಚಾರಧಾರೆಗಳನ್ನು ಗ್ರಾಮೀಣ ಭಾಗದ ಜನ ಹೆಚ್ಚಾಗಿ ಅರ್ಥಮಾಡಿಕೊಂಡು ನಡೆಯಬೇಕಾಗಿದೆ. ಅಂತಹ ವಾತಾವರಣ ನಮ್ಮ ಹಿರಿಯರು ಈಗಿನ ಕಿರಿಯರಿಗೆ ಬಸವಣ್ಣನವರ ವಿಚಾರ ಮತ್ತಿತರ ಧಾರ್ಮಿಕ ತತ್ವಗಳನ್ನು ಬೋಧಿಸುತ್ತಾ ಸಾಗಬೇಕಾಗಿದೆ ಎಂದು ಈಚಘಟ್ಟ ಪಂಚಾಯತಿ ಮಾಜಿ ಉಪಾಧ್ಯಕ್ಷ ಯು.ಎಸ್ ತಿಪ್ಪೇಸ್ವಾಮಿ ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಮೂಲೆಮನೆ ವೀರೇಶ, ಡಿ.ಎಂ. ವೀರಭದ್ರಪ್ಪ, ನಾಗರಾಜ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಯುವಕರು ಸೇರಿ ಪ್ರಚಾರ ವಾಹನ ಪ್ರಚಾರಕ್ಕೆ ಸಹಕರಿಸಿದರು. ಗ್ರಾಮದ ಶರಣ-ಶರಣೆಯರು ಪಾಲ್ಗೊಂಡರು.

ಜಯಂತೋತ್ಸವ ಪ್ರಯುಕ್ತ ಈಚಘಟ್ಟ ಗ್ರಾಮದಲ್ಲಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ, ವಿವಿಧ ರಂಗವಲ್ಲಿ ಸೇರಿದಂತೆ ಬಸವಣ್ಣನವರ ರಂಗವಲ್ಲಿ ಚಿತ್ರಗಳು ಗಮನ ಸೆಳೆದವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
1 Comment
  • ಈಚಘಟ್ಟ ಗ್ರಾಮದ ಮುಖಂಡರಿಗೆ,ಜನರಿಗೆ ಮತ್ತು ಅಲ್ಲಿಯ ಸ್ವಾಮಿಯವರಿಗೆ ‘ಬಸವ ಜಯಂತಿಯ ಶುಭಾಶಯಗಳು’ ಹೀಗೆ ಎಲ್ಲ ಊರುಗಳಲ್ಲಿ/ಹಳ್ಳಿಗಳಲ್ಲಿ ಬಸವ ಪ್ರಜ್ಞೆ ಬೆಳೆಯಬೇಕು.ಬಸವಣ್ಣನವರ ಜೊತೆಗೆ ಅವರ ವಚನಗಳನ್ನು ಓದುವ,ಅರ್ಥೈಸುವ,ಆಚರಣೆಯಲ್ಲಿ ತರುವ ಕಾರ್ಯ ಜರುಗಿದಲ್ಲಿ-ಅವರಿದ್ದ ಹಳ್ಳಿಯೇ ಸ್ವರ್ಗದಂತೆ ಕಂಗೊಳಿಸುವುದು. ಮತ್ತೊಮ್ಮೆ ಈ ಈಚಘಟ್ಟದ ಸರ್ವರಿಗೂ ಹೃತ್ಪೂರ್ವಕ ಶರಣಾರ್ಥಿಗಳು.

Leave a Reply

Your email address will not be published. Required fields are marked *