ಪುಣೆ
ಬಸವ ಸೇವಾ ಪ್ರತಿಷ್ಠಾನ ಪುಣೆ ವತಿಯಿಂದ ಜಾಧವನಗರ ವಡಗಾವದಲ್ಲಿ ಬಸವ ಜಯಂತಿ ನಿಮಿತ್ತ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿದ್ದಾರೆ.
ಮೇ. ೨೭ ರಂದು ಬೆಳಿಗ್ಗೆ ತ್ರಿಮೂರ್ತಿ ವೃತ್ತದಲ್ಲಿಯ ಸುಹಾಸಿನಿ ಸಾಂಸ್ಕೃತಿಕ ಭವನದಲ್ಲಿ ಭಾಲ್ಕಿಯ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯುವವು.
ಬೆಳಿಗ್ಗೆ ೭ಕ್ಕೆ ರಕ್ತದಾನ ಶಿಬಿರ ನಡೆಯುವದು. ಸಂಜೆ ೫ಕ್ಕೆ ಗಣ್ಯರಿಂದ ಬಸವಣ್ಣನವರ ಪ್ರತಿಮೆಗೆ ಪೂಜೆ ನಡೆಯುವದು. ಬಾಲಕಿಯರಿಂದ ವಚನನೃತ್ಯ ಕಾರ್ಯಕ್ರಮ, ಬಸವ ಜೀವನ ದರ್ಶನ ಕುರಿತು ವಿಶೇಷ ಪ್ರವಚನ ಕಾರ್ಯಕ್ರಮ, ಸೊಲ್ಲಾಪುರದ ಚನ್ನವೀರ ಭದ್ರೇಶ್ವರ ಮಠರಿಂದ ‘ಶಿವಯೋಗಿ ಸಿದ್ಧರಾಮೇಶ್ವರರ’ ಜೀವನ ಚರಿತ್ರೆ ಮತ್ತು ಸಾಹಿತಿ ರಾಜು ಝುಬರೆಯವರಿಂದ ‘ವರ್ತಮಾನಕಾಲಕ್ಕೆ ಬಸವಣ್ಣನವರ ವಿಚಾರಗಳ ಅವಶ್ಯಕತೆ’ ಕುರಿತು ಉಪನ್ಯಾಸ. ಶಾಸಕ ಭೀಮರಾವ ತಾಪಕೀರ, ಮಾಜಿ ನಗರ ಸೇವಕರುಗಳಾದ ಹರಿಭಾವು ಚಖಡ ಮತ್ತು ವಿಕಾಸನಾನಾ ದಾಂಗಟ ಅತಿಥಿಗಳಾಗಿರುವರು.
ರಾತ್ರಿ ಪ್ರಸಾದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಬಂಧುಗಳು, ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.