ಸ್ವಾಮೀಜಿಗಳಿಗೆ ಮೆಟ್ಟಿನಲ್ಲಿ ಹೊಡೆಯಿರಿ ಎಂದಿದ್ದಕ್ಕೆ ನನ್ನ ಸಮರ್ಥನೆಯಿದೆ: ಯತ್ನಾಳ್

ಬಸವ ಮೀಡಿಯಾ
ಬಸವ ಮೀಡಿಯಾ

‘ಒದಿತೀನಿ ಅಂದ ಮ್ಯಾಲೆ ಲಿಂಗಾಯತ ಧರ್ಮದವರು ಠುಸ್ ಆಗ್ಯಾರ’

ರಬಕವಿ-ಬನಹಟ್ಟಿ:

“ಇನ್ನು ಮೇಲೆ ನಮ್ಮ ಧರ್ಮದ ಬಗ್ಗೆ ಯಾರದ್ರೂ ಮಾತನಾಡಿದ್ರೆ ಸುಮ್ಮನಿರಲ್ಲ. ಇವರಿಗೆ ಸುಮ್ಮನೆ ಹೇಳಿದ್ರೆ ಕೇಳಲ್ಲ, ಒದಿತೀನಿ ಅಂದ್ರೆ ಮಾತ್ರ ಅಂಜುತ್ತಾರೆ,” ಎಂದು ವಿಜಯಪುರ ಶಾಸಕ ಬಸನ ಗೌಡ ಯತ್ನಾಳ್ ಶನಿವಾರ ಹೇಳಿದರು.

ಬನಹಟ್ಟಿಯಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು ಲಿಂಗಾಯತ ಸ್ವಾಮೀಜಿಗಳ ಮೇಲೆ ಏಕ ವಚನದಲ್ಲಿಯೇ ಕಿಡಿ ಕಾರಿದರು.

“ಲಕ್ಷ್ಮಿ ಪೂಜೆ, ಗಣಪತಿ ಪೂಜೆ ಏಕೆ ಮಾಡಬೇಕು ಎಂದು ಒಬ್ಬ ಸ್ವಾಮೀಜಿ ಹೇಳುತ್ತಾನೆ, ಇನ್ನೊಬ್ಬ ಸ್ವಾಮೀಜಿ ಮುಸ್ಲಿಂ ಧರ್ಮ ಶ್ರೇಷ್ಠ ಎನ್ನುತ್ತಾನೆ. ಇವರಿಗೆ ಉತ್ತರವಾಗಿ ಕನ್ನೇರಿ ಸ್ವಾಮಿ ಹೇಳಿದ್ದರಲ್ಲಿ ಏನು ತಪ್ಪಿದೆ. ಸ್ವಾಮೀಜಿಗಳಿಗೆ ಮೆಟ್ಟಿನಲ್ಲಿ ಹೊಡೆಯಿರಿ ಎಂದಿದ್ದಕ್ಕೆ ನನ್ನ ಸಮರ್ಥನೆಯಿದೆ,” ಎಂದು ಹೇಳಿದರು.

“ಕನ್ನೇರಿ ಸ್ವಾಮಿಗಳು ಮಾತಾಡಲು ಶುರುಮಾಡಿದ ಮೇಲೆ ಇವರೆಲ್ಲ ಸುಮ್ಮನಾಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ಯಾರೂ ಲಿಂಗಾಯತ ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ವೀರಶೈವರು, ಲಿಂಗಾಯತರು ಒಂದೇ, ಎಲ್ಲಾ ಸನಾತನಿ ಹಿಂದುಗಳೇ,” ಎಂದು ಹೇಳಿದರು.

ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ಸಂಘ ಪರಿವಾರದ ಸಂಘಟನೆಗಳು ವಿವಿಧ ನಗರಗಳಲ್ಲಿ ಬಸವ ಬಸವಾದಿ ಶರಣರ ಹಿಂದೂ ಸಮಾವೇಶ ಆಯೋಜಿಸುತ್ತಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ ನನಗೆ ಬಸವಾದಿ ಶರಣರ ಹಿಂದೂ ಸಮಾವೇಶದಿಂದ ಲಾಭ ಬೇಕಿಲ್ಲ. ಬೇಕಾದರೆ ಈಗಲೇ ಶಾಸಕ ರಾಜೀನಾಮೆಗೆ ಸಿದ್ದ. ನಮ್ಮ ದೇಶ, ಧರ್ಮ ಉಳಿದರೆ ಸಾಕು. ನಾನು ಮಿಲಿಟರಿಯಲ್ಲಿ ಕೆಲಸ ಮಾಡಿ ಬಂದಿದ್ದೇನೆ, ಎಂದು ಹೇಳಿದರು.

ದೇವಲೋಕದಲ್ಲಿ ದೇವರ ನೋಡಲು ಯಾರೂ ಹೋಗಲಾಗಲ್ಲ. ಇಷ್ಟೊಂದು ಜನ ಸ್ವಾಮೀಜಿಗಳನ್ನು ಒಟ್ಟಿಗೆ ನೋಡಲು ಅವಕಾಶ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ರಬಕವಿ-ಬನಹಟ್ಟಿಯ ಅವಳಿ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಶೋಭಾ ಯಾತ್ರೆ ಕನ್ನೇರಿ ಸ್ವಾಮಿಯ ‘ಪುರ ಪ್ರವೇಶ’ ಕಾರ್ಯಕ್ರಮದೊಂದಿಗೆ ಶುರುವಾಯಿತು.

ಮೆರವಣಿಗೆ ರಬಕವಿಯ ಹಳೇ ಬಸ್ ನಿಲ್ದಾಣ ಹಾಗೂ ಬನಹಟ್ಟಿಯ ವೈಭವ ಚಿತ್ರಮಂದಿರದಿಂದ ಎರಡೂ ಕಡೆಗಳಿಂದ ಆರಂಭವಾಗಿ ಅವಳಿ ನಗರಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ಕಾರ್ಯಕ್ರಮದಲ್ಲಿ ಕನ್ನೇರಿ ಸ್ವಾಮಿ, ಶಿರೋಳದ ಶಂಕರಾರೂಢ ಶ್ರೀಗಳು, ಹಳೇ ಹುಬ್ಬಳ್ಳಿಯ ಜಗದ್ಗುರು ಯೋಗಾಚಾರ್ಯ ಶ್ರೀ, ಶಿವಶಂಕರ ಶಿವಾಚಾರ್ಯರು, ಮೈಗೂರಿನ ಗುರುಪ್ರಸಾದ ಶ್ರೀಗಳು, ಹುಲ್ಯಾಳದ ಹರ್ಷಾನಂದ ಶ್ರೀಗಳು, ಹಿ೦ದೂ ಮುಖಂಡರಾದನಂದು ಗಾಯಕವಾಡ, ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಬಾಬುಗೌಡ ಪಾಟೀಲ, ಗೌರಿ ಮಿಳ್ಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
13 Comments
  • ಬಸವಣ್ಣನವರ ಲಿಂಗಾಯತ ಧರ್ಮದ ಅಥ೯ ಗೊತ್ತಾ ?
    ದೇವನೊಬ್ಬ ನಾಮ ಹಲವು ೧೦೮ ದೇವರ ಪೂಜೆ ಮಾಡಿ ಕನ್ಫ್ಯೂಸ್ ಆಗಬೇಡಿ ಆಚಾರವಿಲ್ಲದ ನಾಲಿಗೆಗೆ ಹಿಡಿತವಿರಲಿ
    ಒದಿತೀನಿ ಹೊಡಿತೀನಿ ಕಡೀತೀನಿ ಅನ್ನೋದು ರಾಜಕೀಯ ರಾಕ್ಷಸ ಗುಣ

  • ಕುಡಿದುಕೊಂಡು ಬಂದು ಮಾತಾಡ್ತಾ ಇರೋದು

    • ರಬಕವಿ ಬನಹಟ್ಟಿ ಯಲ್ಲಿ ಮಾತನಾಡಿದವರೆಲ್ಲಾ ಚಲಾವಣೆ ಇಲ್ಲದವರು.ಕೋರ್ಟ ಮತ್ತು ರಾಜಕೀಯ ಪಕ್ಷದಿಂದ ಛಿಮಾರಿ ಹಾಕಿಸಿಕೊಂಡು ಬಹಿಷ್ಕಾರಕ್ಕೊಳಗಾದವರೇ.. ಕೋರ್ಟಿನಿಂದ ಕನ್ನೇರ ಸ್ವಾಮಿಗೆ ನೀನು ಉತ್ತಮ ನಾಗರಿಕನಲ್ಲ ಎಂದು ಸರ್ಟಿಫಿಕೇಟ್ ಕೊಟ್ಟು ಉತ್ತಮ ನಾಗರಿಕನಾಗಿ ಬಾಳು ಎಂದು ಛಿಮಾರಿ ಹಾಕಿದೆ.ಮತ್ತು ರಾಜಕಾರಣಿಗಳಾದ ಯತ್ನಾಳ್ ಮತ್ತು ಈಶ್ವರಪ್ಪನವರನ್ನು ಅವರು ನಾಲಿಗೆಯಿಂದ ಬರುವ ಅನಾಗರಿಕ ಭಾಷೆಯಿಂದ ಅವರ ಮಾತೃ ಪಕ್ಷದಿಂದಲೇ ಹೊರಗೆ ಹಾಕಿಸಿಕೊಂಡಿದ್ದಾರೆ.ಇವರೆಲ್ಲರೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಡೊಂಬರಾಟ ಮಾಡುತ್ತಿದ್ದಾರೆ . ಹಾಗಾಗಿ ಗುಡ್ಡಕ್ಕೆ ನಾಯಿ ಬೊಗಳಿದರೆ ಎನೂ ಆಗೊಲ್ಲ ಆನೆ ಕಂಡು ನಾಯಿ ಬೊಗಳುವುದು ಸಹಜ.ಕಾಲವೇ ಅವರಿಗೆ ಉತ್ತರ ಕೊಡುತ್ತದೆ.ತಾಳ್ಮೆ ಇರಲಿ.

  • Yatnal is a third grade politician so is his hardcore followers, he continues to insult Lingayat religion, we will protesr this mad yatnal n kanheri team

  • ಬಸವ ಸಂಸ್ಕೃತಿಯನು ಎಲ್ಲಿಗೆ ತಂದು ನಿಲ್ಲುಸುದ್ರೀ,
    ಹೊಡೆಯಿರಿ ಬಡೆಯಿರಿ ಕೊಲ್ಲಿರಿ ನಾಚಿಕೆ ಆಗ ಬೇಕು. ಕನೇರಿ ಅವನೊಬ್ಬ ಕೊಲೇರಿ ದ್ವೇಷದ ಬೀಜವ ಭಿತ್ತಿ ಕಮಲವನು ಅರಳಿಸಲು ಹೊರಟವನು, ಯತ್ನಾಳೊಬ್ಬ ಪಕ್ಕಾ ಕೊತ್ನಾಳ, ಅಸೂವೆಯ ಬೀಜವ ಭಿತ್ತಿ ಮತ್ತೆ ಕಮಲಕ್ಕೆ ಸೇರಲೊರಟವನು. ಇವರಿಗೆ ಎಂದಿಗೂ ಜಯವಾಗದು. ಲಿಂಗಾಯತದೊಳಗಿನ ವಿಷ ಸರ್ಪಗಳೆರಡು.

  • ಯತ್ನಾಳಿಗೆ ಮಗನಿಗೆ ಗೂಟ ಹೊಡಿಬೇಕು ಬಹಳಷ್ಟು ಕಡೆ ಜಿಲ್ಲಾ ತಾಲೂಕು ಸ್ಥಳಗಳಲ್ಲಿ ಕೋಆಪರೇಟಿವ್ ಬ್ಯಾಂಕ್ ಮಾಡಿದ್ದಾನೆ ಅವನ ಬ್ಯಾಂಕುಗಳನ್ನು ಧೂಳೆಬ್ಬಿಸಬೇಕು

  • ಚಲಾವಣೆ ಇಲ್ಲದ ನಾಣ್ಯಗಳು ಎಷ್ಟೇ ಶಬ್ದ ಮಾಡಲಿ ಅವುಗಳಿಗೆ ಕಿಮ್ಮತ್ತು ಇರುವುದಿಲ್ಲ.
    ಒಬ್ಬರು ಮಾತನಾಡಿಲ್ಲವೆಂದರೆ, ಮೌನವಹಿಸಿದ್ದಾರೆಂದರೆ ಅದು ಅವರ ದೌರ್ಬಲ್ಯವಲ್ಲ. ಮೌನವೂ ಕೂಡ ಪ್ರತಿರೋಧದ ಇನ್ನೊಂದು ವರಸೆ. ಮೌನವೂ ಕೂಡ ಒಂದು ಭಾಷೆ. ಮೌನದ ಭಾಷೆಗೂ ಅದರದ್ದೇ ಆದ ಅರ್ಥ ಗಾಂಭೀರ್ಯ ಇರುತ್ತದೆ.
    ಕೆಲವರು ತಮಗೆ ತಾವೇ ನಾವು ಶೂದ್ರರು,ಗುಲಾಮರಾಗಿಯೇ ಇರುತ್ತೇವೆ ಬೌದ್ಧಿಕವಾಗಿ ದಾಸರಾಗಿರುತ್ತೇವೆ ಎಂದು ಬಹಿರಂಗವಾಗಿಯೇ ಒಪ್ಪಿಕೊಳ್ಳುವಂತಹ ಮನಸ್ಥಿತಿಯಲ್ಲಿರುವಾಗ ಬಸವಣ್ಣ ಬಿತ್ತಿದ ಸಮ ಸಮಾಜದ ಕನಸು ಕಾಣಲಿಕ್ಕು ಇವರಿಂದ ಸಾಧ್ಯ ಇಲ್ಲ. ನಮ್ಮ ಶರಣರು ಲೋಕದಿಚ್ಚೆಗೆ ನಡೆಯರು,,ನುಡಿಯರು.

  • ಬಸವನ ನೆನೆಯದವರ
    ಮೂಡರ ಸಂತೆ ನಡೆದಿದೆ ಭರ್ಜೆರಿ
    ಜರತಾರಿ ಸೀರೆಯುಟ್ಟು
    ಇಷ್ಟಗಲ ಕುಂಕುಮ ಬಟ್ಟಿಟ್ಡು
    ಚಲ್ಕದಿಮ್ಮಿ ಸಂತಿಯ ನಡಿಸ್ಯಾರೋ
    ಇವರು ಮಾರುವ ಮಾಲುಗಳನು
    ಕೊಳ್ಳುವರು ಯಾರಿಲ್ಲವೆಂದು,
    ಅದಕೊಂದು ಹೊಸ ಹೆಸರಿಟ್ಟು
    ಬಸವೋತ್ಸವ ನಡಿಸ್ಯಾರೋ
    ಬಸವ ಎಂದಿಗೂ ಅವರೊಳಗಿಲ್ಲ
    ಮಠ ಬಿಟ್ಟಾಗಿದೆ ಮಂದಿರ ತೊರೆದಾಗಿದೆ.
    ದೀನ ದಲಿತ ಧಮನಿತರ ಶೋಷಿತರ
    ಹೃದಯವೆ ಬಸವನ ನಿಜ ಸಿಂಹಾಸನ
    ಕಾಣಿರೆಂದ ನಮ್ಮ ಶಿವಸುತ.

  • ಬಸವ.
    ವಿರಸವರ ಮಠ ಬಿಟ್ಟಾಗಿದೆ.
    ಕಾರಣ ಕೃಷ್ಣ ಬಂದಿದ್ದಾನಲ್ಲಿ
    ಬಸವ.
    ಲಿಂಗಾಯತರ ಮಠ ಬಿಟ್ಟಾಗಿದೆ
    ಕಾರಣ ರಾಮ ಬಂದಿದ್ದಾನಲ್ಲಿ
    ಬಸವ.
    ಲಿಂಗಾಯತರ ಮನೆ ಬಿಟ್ಟಾಗಿದೆ.
    ಕಾರಣ ರಾಘವೇಂದ್ರ ಬಂದಿದ್ದಾನಲ್ಲಿ
    ಇನ್ನೇನು ಕೆಲಸವಲ್ಲಿ
    ಸುಮ್ಮನೆ ಜಾಗ ಖಾಲಿ ಮಾಡಿದ್ದಾನಲ್ಲಿ
    ಇನ್ನೇನಿದ್ದರು ಬಸವನ ಖಾಯಂ ಸ್ಥಾನ
    ದೀನ ದಲಿತ ಧಮನಿತ ಶೋಷಿತರ
    ಹೃದಯವೆ ನಿಜದ ನೆಲೆಯಣ್ಣ
    ಬಡವರ ಹರುಕು ಮುರುಕು
    ಗುಡಿಸಿಲುಗಳೆ ಅವನ ನೆಮ್ಮದಿಯ
    ತಾಣವೆಂದಾತ ನಮ್ಮ ಶಿವಸುತ.

  • ನಾಲಾಯಕ ಜನರಿಗೆ ಎಷ್ಟು ಉಗಿದರೂ ನಾಚಿಕೆಯಿಲ್ಲ. ಒಟ್ನಲ್ಲಿ ಸಮಾಜದಲ್ಲಿ ಅಶಾಂತಿ, ಅಹಿಂಸೆ, ಕ್ರಾಂತಿ ಸಂಭವಿಸಲಿ ಎಂದು ಈ ಎಡಬಿಡಂಗಿಗಳು ಬಾಯಿಗೆ ಬಂದಂಗೆ ಬೊಗಳುತಾ ಇವೆ. ಇವರ ಅಂತ್ಯ ದೂರವಿಲ್ಲ ಅದಕ್ಕೆ ದೀಪ ಆರುವಾಗ ಹೇಗೆ ಒಮ್ಮೆ ಉರಿಯುತ್ತೋ ಹಾಗೆ ಉರಿತಾಯಿವೆ. ಜಯ ಬಸವ! ಜೈ ಲಿಂಗಾಯತ!

  • ನೋಡ್ರಿ ಶರಣರೇ ಈ ಯತ್ನಾಳ ಹೇಗೆ ಮಾತನಾಡುತ್ತಿದ್ದಾನೆ ಈತ ಬಿಜೆಪಿಯಿಂದ ಎರಡು ಮೂರು ಬಾರಿ ಉಚ್ಛಾಟಿತನಾಗಿದ್ದರೂ ತನ್ನ ಬಾಯಿ ಹರುಕತನದಿಂದ ಇನ್ನೂ ಈತನಿಗೆ ಬುದ್ಧಿ ಬಂದಿಲ್ಲ ಕನ್ನೆರಿ ಸ್ವಾಮಿಗಳಿಗೆ ಹೈಕೋರ್ಟ್ ಸುಪ್ರೀಂ ಕೋರ್ಟ್ ಛೀ ಮಾರಿ ಹಾಕಿದರು ಅವರಿಗೂ ಸಹ ಬುದ್ಧಿ ಬಂದಿಲ್ಲ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಈ ಯತ್ನಾಳ್ಗೆ ಅವರ ಕ್ಷೇತ್ರದ ಬಸವಭಕ್ತರೇ ತಕ್ಕ ಪಾಠ ಕಲಿಸುತ್ತಾರೆ ಇವರಿಗೆ ಸಂವಿಧಾನ ಬಸವಧರ್ಮ ಕಾಲ ಕಸದಂತೆ ಕಾಣಿಸುತ್ತದೆ ಈ ಬೆಳವಣಿಗೆಗಳನ್ನು ಬಿಜೆಪಿ ಪಕ್ಷದವರು ಮೂಕ ಪ್ರೇಕ್ಷಕರಾಗಿ ನೋಡುತ್ತಾ ಕುಳಿತರೆ ಅವರಿಗೆ ಭವಿಷ್ಯವಿಲ್ಲ ಬಸವ ಭಕ್ತರು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಇಂಥವರಿಗೆ ತಕ್ಕ ಪಾಠ ಕಲಿಸುತ್ತಾರೆ ವಿಜಯೇಂದ್ರರವರೆ ಸ್ವಲ್ಪ ನೀವು ಯೋಚನೆ ಮಾಡಿ

Leave a Reply

Your email address will not be published. Required fields are marked *