ಬಸವ ಮೀಡಿಯಾ: ಕಳೆದ ಮೂರು ತಿಂಗಳ ಆದಾಯ ಮತ್ತು ವೆಚ್ಚ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಬಂಧುಗಳೇ,

ಶರಣು ಶರಣಾರ್ಥಿಗಳು.

ನಿಮಗೆ ತಿಳಿದಿರುವ ಹಾಗೆ ಶರಣ ಸಮಾಜದ ಸಾಮೂಹಿಕ ಒಡೆತನದ ಬಸವ ಮೀಡಿಯಾ ಶರಣ ಸಮಾಜದ ದಾಸೋಹದಿಂದಲೇ ನಡೆಯುತ್ತಿರುವ ಪತ್ರಿಕೆ.

ಬಸವ ಮೀಡಿಯಾಕ್ಕೆ ಬರುವ ನೆರವನ್ನು ಅತ್ಯಂತ ಜವಾಬ್ದಾರಿ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಲು ಬದ್ಧರಾಗಿದ್ದೇವೆ.

ನಮ್ಮ ಟ್ರಸ್ಟಿನ ನಿಯಮದ ಅನುಸಾರವಾಗಿ ಮೂರು ತಿಂಗಳಿಗೊಮ್ಮೆ (ಏಪ್ರಿಲ್ 7, ಜೂಲೈ 7, ಅಕ್ಟೋಬರ್ 7 ಮತ್ತು ಜನವರಿ 7) ನಮ್ಮ ಆದಾಯ ಮತ್ತು ವೆಚ್ಚದ ಲೆಕ್ಕವನ್ನು ಬಹಿರಂಗವಾಗಿ ಪ್ರಕಟಿಸುತ್ತೇವೆ.

ಬಸವ ಮೀಡಿಯಾದ ಪ್ರತಿಯೊಂದು ವೆಚ್ಚವು ಟ್ರಸ್ಟಿಗಳ ಸಭೆಯಲ್ಲಿ ಚರ್ಚೆಯಾಗಿ ಅಂಗೀಕೃತವಾಗಿರುತ್ತದೆ. ನಮ್ಮ ಸಲಹಾ ಮಂಡಳಿಯ ಪ್ರತಿಯೊಬ್ಬ ಸದಸ್ಯರಿಗೂ ಬಸವ ಮೀಡಿಯಾದ ಲೆಕ್ಕವನ್ನು ಪರಿಶೀಲಿಸುವ ಅಧಿಕಾರವಿರುತ್ತದೆ. ವರ್ಷಕ್ಕೊಮ್ಮೆ ಬರುವ ಲೆಕ್ಕ ಪರಿಶೋಧನಾ ವರದಿಯನ್ನೂ ಪ್ರಕಟಿಸುತ್ತೇವೆ.

ಇಲ್ಲಿಯವರೆಗೆ ಬಂದಿರುವ ದಾಸೋಹ

ಜೊತೆಗೆ ನಮಗೆ ಬರುವ ಪ್ರತಿಯೊಂದು ದಾಸೋಹವೂ ವೆಬ್ಸೈಟಿನಲ್ಲಿ 24 ಗಂಟೆಗಳ ಒಳಗೆ ಈ ಲಿಂಕುಗಳಲ್ಲಿ ದಾಖಲಾಗುತ್ತವೆ.

ಬಸವ ಮೀಡಿಯಾ ಬಳಗ
(ಬಂದಿರುವ ಪ್ರತಿಯೊಂದು ದಾಸೋಹವನ್ನು ಇಲ್ಲಿ ನೋಡಬಹುದು)

https://basavamedia.com/basava-media-balaga/

ವಿಶೇಷ ನೆರವು
(ಪೋಷಕ, ಮಹಾ ಪೋಷಕ, ವಾರದ ಮಾಸಿಕ ದಾಸೋಹಿಗಳ, ಅಜೀವ ಸದಸ್ಯರ ವಿವರ ಇಲ್ಲಿ ನೋಡಬಹುದು.)

https://basavamedia.com/vishesha-neravu/

ಏಪ್ರಿಲ್, ಮೇ, ಜೂನ್ ತಿಂಗಳುಗಳ ವಿವರ

ಎರಡು ವರ್ಷಗಳಿಗೆ 35 ಲಕ್ಷ ಅವಶ್ಯವಿದೆ

ಬಸವ ಮೀಡಿಯಾವನ್ನು ವೃತ್ತಿಪರತೆಯಿಂದ ನಡೆಸಲು ನಮಗೆ ಮೂರು ಪೂರ್ಣಾವಧಿ ಸಿಬ್ಬಂದಿಯ ಅವಶ್ಯಕತೆಯಿದೆ. ಜೊತೆಗೆ ನಮ್ಮ ಓದುಗರು ಬೆಳೆದ ಹಾಗೆ ನಮ್ಮ ವೆಬ್ಸೈಟ್ ಗೆ ಸಂಬಂದಿಸಿದ ಖರ್ಚುಗಳೂ ಬೆಳೆಯುತ್ತವೆ.

ಇವುಗಳನ್ನು ನಿಭಾಯಿಸಲು ನಮಗೆ ಮುಂದಿನ ಎರಡು ವರ್ಷಗಳಿಗೆ 35 ಲಕ್ಷ ರೂಪಾಯಿ ಅವಶ್ಯಕತೆಯಿರುತ್ತದೆ. ಬಸವ ಅನುಯಾಯಿಗಳು ತನು-ಮನ-ಧನದೊಂದಿಗೆ ಬಸವ ಮೀಡಿಯಾ ಜೊತೆ ಕೈ ಜೋಡಿಸಲು ಕೋರುತ್ತಿದ್ದೇವೆ.

ಧನ್ಯವಾದ

ಬಸವ ಮೀಡಿಯಾ ಟ್ರಸ್ಟಿಗಳ ಪರವಾಗಿ

ಬಸವ ಮೀಡಿಯಾಗೆ ದಾಸೋಹ ನೀಡುವುದು ಹೇಗೆ

ಬಸವ ಮೀಡಿಯಾ ಶರಣ ಸಮಾಜದ ಸಾಮೂಹಿಕ ಆಸ್ತಿಯಾಗಿ

Share This Article
Leave a comment

Leave a Reply

Your email address will not be published. Required fields are marked *