ಬಸವಣ್ಣ ವೀರಶೈವರು ಎಂದ ರಂಭಾಪುರಿ ಶ್ರೀಗಳ ವಿರುದ್ಧ ಬೀದರಿನಲ್ಲಿ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡದಿರಲು ಎಚ್ಚರಿಕೆ

ಬೀದರ

ಬಸವಣ್ಣನವರು ವೀರಶೈವ ಧರ್ಮ ಸ್ವೀಕಾರ ಮಾಡಿದ್ದಾರೆ, ಅವರು ಲಿಂಗಾಯತ ಧರ್ಮ ಸ್ಥಾಪಿಸಿಲ್ಲ,ಎಂದೆಲ್ಲಾ ಮಾತನಾಡಿರುವ ಪೂಜ್ಯ ರಂಭಾಪುರಿ ಶ್ರೀಗಳ ಹೇಳಿಕೆ ಬಾಲಿಶತನದಿಂದ ಕೂಡಿದೆ. ಇದನ್ನು ಪ್ರಬಲವಾಗಿ ಖಂಡಿಸುತ್ತೇವೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ನುಡಿದರು.

ರಾಷ್ಟ್ರೀಯ ಬಸವ ದಳ ಸೇರಿದಂತೆ ಹಲವಾರು ಬಸವಪರ ಸಂಘಟನೆಗಳ ಪ್ರಮುಖರು ನಗರದ ಬಸವೇಶ್ವರ ವೃತ್ತದಲ್ಲಿ ರಂಭಾಪುರಿ ಶ್ರೀಗಳ ಹೇಳಿಕೆ ಖಂಡಿಸಿ ಇಂದು ಆಯೋಜಿಸಿದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.

ರಂಭಾಪುರಿ ಶ್ರೀಗಳಾದಿಯಾಗಿ ಪಂಚಾಚಾರ್ಯರು ಹಾಗೂ ಅವರ ಅನುಯಾಯಿಗಳು ಯಾವತ್ತೂ ಬಸವಣ್ಣನವರನ್ನು ನಂಬಿಲ್ಲ. ಪದೇ ಪದೇ ಬಸವಾದಿ ಶರಣರನ್ನು ಹೀಯಾಳಿಸಿ ಮಾತನಾಡುತ್ತಾರೆ. ದಾವಣಗೆರೆಯಲ್ಲಿ ನಡೆದ ಪಂಚಾಚಾರ್ಯರ ಶೃಂಗಸಭೆಯಲ್ಲಿ ಶರಣರ ಮೇಲೆ ಲಂಗು ಲಗಾಮಿಲ್ಲದೆ ವಾಗ್ದಾಳಿ ನಡೆಸಿದ್ದಾರೆ.

ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಬಸವಾದಿ ಶರಣರ ಅವಹೇಳನ ಸಲ್ಲದು. ವಿಶ್ವಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಲಿಂಗಾಯತ ಧರ್ಮ ಸ್ವತಂತ್ರ, ಸ್ವಾವಲಂಬಿ ಮತ್ತು ಪ್ರಗತಿಪರ ಧರ್ಮವಾಗಿದೆ.

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಸಿಎಂ ಸಿದ್ಧರಾಮಯ್ಯನವರು ಸಂಪುಟದಲ್ಲಿ ನಿರ್ಧರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ ಕೇದಾರ ಶ್ರೀಗಳು ನಾನೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿ ತಿರಸ್ಕಾರ ಮಾಡಿಸಿದ್ದೇನೆ ಎಂದು ಹೇಳಿರುವ ವಿಚಾರ ಇತ್ತೀಚೆಗೆ ಎಲ್ಲಾ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಬ್ರಿಟಿಷರ ಕಾಲದಲ್ಲಿ ಲಿಂಗಾಯತ ಎಂಬುದಾಗಿತ್ತು. ನಂತರ ಪಂಚಾಚಾರ್ಯರು ಲಿಂಗಾಯತ ಹಿಂದೂ ಎನ್ನತೊಡಗಿದರು. ನಂತರ ಸನಾತನ ಲಿಂಗಾಯತ ಹಿಂದೂ ಎಂದರು. ಈಗ ಸನಾತನ ಲಿಂಗಾಯತ ಹಿಂದೂ ವೀರಶೈವ ಬೇಡಜಂಗಮ ಎನ್ನುತಿದ್ದಾರೆ. ಮೊದಲು ಅವರ ಜಾತಿ ಯಾವುದು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸ್ವಾಮೀಜಿ ಸವಾಲು ಎಸೆದರು.

ಅವರು ಏನೇ ಹೇಳಿಕೊಳ್ಳಲಿ, ಆದರೆ ಬಸವಣ್ಣನವರ ಮತ್ತು ಲಿಂಗಾಯತ ಧರ್ಮದ ತಂಟೆಗೆ ಮಾತ್ರ ಬರಬಾರದು. ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಾರದೆಂಬುದು ಬಸವ ಭಕ್ತರ ಆಗ್ರಹವಾಗಿದೆ ಎಂದರು.

ಇದೇ ವೇಳೆ ಬಸವ ಮಂಟಪದ ಪೂಜ್ಯ ಸದ್ಗುರು ಮಾತೆ ಸತ್ಯದೇವಿ, ಸಿದ್ರಾಮಪ್ಪ ಕಪಲಾಪುರ, ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ, ಸಿದ್ಧವೀರ ಸಂಗಮದ, ಶಾಂತಪ್ಪ ಮುಗಳಿ, ಸತೀಶ ಪಾಟೀಲ, ಶ್ರೀನಾಥ ಕೋರೆ ಸೇರಿದಂತೆ ನೂರಾರು ಜನ ಬಸವಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
7 Comments
  • ಬಸವಣ್ಣನವರು ವೀರಶೈವ ರಂಭಪುರಿ ಸ್ವಾಮಿ ಗಳ ಹೇಳಿಕೆ ಅವರ ವಿಚಾರ ಧಾರೆ. ಇದನ್ನು ಬಸವಣ್ಣ ನವರ ಅವಹೇಳನ ಅಲ್ಲ. ಇತರಹ ಹೇಳಿಕೆಗಳು ಸಮಾಜ ವನ್ನು ಒಡೆಯುತ್ತವೆ.

    • ಧರ್ಮ ಒಡೆಯಲು ಸಾಧ್ಯವೆ???
      ಕುಂಬಳಕಾಯಿ ಒಡೆಯಬಹುದು

    • ವೀರಶೈವ – ಲಿಂಗಾಯತ ಅಂತ ಯಾವುದೇ ಧರ್ಮ ಅಥವಾ ಜಾತಿ ಇಲ್ಲ. ಹಾಗಾಗಿ ಧರ್ಮ ಅಥವಾ ಸಮಾಜವನ್ನು ಒಡೆಯುವ ಪ್ರಶ್ನೆ ಉದ್ಭವಿಸುವುದೇ ಇಲ್ಲ.

    • ಹಸಿರು ಬಟ್ಟೆ ಧರಿಸುವ ಶ್ರೀಗಳು ಭಾರತದ ಧರ್ಮ ಆಚರಣೆ ಮಾಡುತ್ತಿಲ್ಲ. ವಿದೇಶಿ ಧರ್ಮ ಆಚರಣೆ ಮಾಡುತ್ತಾರೆ. ಅನ್ನುವುದು ನನ್ನ ಅನಿಸಿಕೆ.
      ಅಂತ ಹೇಳಿದರೆ, ಒಬ್ಬ ಸಾಮಾನ್ಯನ ಅನಿಸಿಕೆ ಅಂತ ಸುಮ್ಮನೆ ಇರುತ್ತಾರೆಯೇ?

    • ಬಸವಣ್ಣನವರಿಗೆ ಅವಮಾನ ಮಾಡುವ ಪಂಚಪೀಠ ಸ್ವಾಮಿಗಳು, ಇವರಿಗೆ ಬೆಂಬಲ ನೀಡುವ ವೀರಶೈವ ಮಹಾಸಭೆ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದಾರೆ ಕಾನೂನಿನ ಪ್ರಕಾರ ಈ ರೀತಿ ಮಾಡುವುದು ಅಪರಾಧ ಆಗಿದೆ

  • ಬಸವಣ್ಣನವರಿಗೆ ಅವಮಾನ ಮಾಡುವ ಪಂಚಪೀಠ ಸ್ವಾಮಿಗಳು, ಇವರಿಗೆ ಬೆಂಬಲ ನೀಡುವ ವೀರಶೈವ ಮಹಾಸಭೆ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದಾರೆ ಕಾನೂನಿನ ಪ್ರಕಾರ ಈ ರೀತಿ ಮಾಡುವುದು ಅಪರಾಧ ಆಗಿದೆ

  • ೧೨ ನೇ ಶತಮಾನದಲ್ಲಿ ವೀರಶೈವ ಶಬ್ದ ಇರಲಿಲ್ಲ.೧೫ ನೇ ಶತಮಾನದಲ್ಲಿ ಆಂಧ್ರದ ಲಿಂಗಿ ಬ್ರಾಹ್ಮಣರು ಹೊಟ್ಟೆ ಪಾಡಿಗೆ ಹುಟ್ಟಾ ಹಾಕಿದ್ದು.

Leave a Reply

Your email address will not be published. Required fields are marked *