ಸಮುದಾಯವನ್ನು ಅಜ್ಞಾನದಲ್ಲಿರಿಸಿ ಬದುಕು ಕಟ್ಟಿಕೊಳ್ಳುವ ಹುನ್ನಾರ
ಗಂಗಾವತಿ
ಕಾವಿಕಾಷಾಂಬರವ ಹೊದ್ದು ಕಾಯವಿಕಾರಕ್ಕಾಗಿ ತಿರುಗುವ ಕರ್ಮಿಗಳ ಮುಖವ ನೋಡಲಾಗದು.
ಸೆಪ್ಟಂಬರ್ 19 ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ದಿಂಗಾಲೇಶ್ವರ ಸ್ವಾಮಿಗಳು ಮಾತಾಡಿರುವುದು ನೋಡಿದರೆ ಕುಂಬಳಿ ಕಾಯಿ ಕಳ್ಳ ಯಾರು ಅಂದ್ರೆ ನಾವು ಅಂತ ಹೆಗಲ ಮುಟ್ಟಿ ನೋಡಿಕೊಂಡಂತೆ ಆಗಿದೆ.
ಬಸವಣ್ಣನವರು ಈ ನೆಲದ ಶ್ರಮಿಕ ಜೀವಿಗಳಿಗಾಗಿ ಕಟ್ಟಿದ ಈ ನೆಲದ ಧರ್ಮ ಲಿಂಗಾಯತ. ಇದಾವುದೆ ಉದ್ಭವಲಿಂಗಿಗಳು ಸ್ಥಾಪಿಸಿದ ಧರ್ಮವಲ್ಲ. ಈ ನೆಲದ ಮೂಲ ನಿವಾಸಿಗಳಿಗೆ ತಮ್ಮದೆ ದೇವರು ಧರ್ಮವಿಲ್ಲದ ಸಂಧರ್ಭದಲ್ಲಿ ಆ ಶೋಷಿತ ಸಮುದಾಯಕ್ಕಾಗಿ ಹುಟ್ಟಿದ್ದು ಲಿಂಗಾಯತ ಧರ್ಮ.
ಲಿಂಗಾಯತ ಪ್ರತ್ಯೇಕ ಧರ್ಮವೆಂದು ಈಗಾಗಲೆ ಎಲ್ಲಾ ಸಂಶೋಧನೆಗಳಿಂದ ಸಾಬೀತಾಗಿದೆ. ಆದರೂ ವೀರಶೈವ ಎಂದು ಎಂದೂ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನಕ್ಕೆ ಕಾರಣವೇನು?
“ದೇಶದೇಶವ ತಿರುಗಿ ಮಾತುಗಳ ಕಲಿತು
ಗ್ರಾಸಕ್ಕೆ ತಿರುಗುವ ದಾಸಿವೇಸಿಯ ಮಕ್ಕಳ ವಿರಕ್ತನೆಂಬೆನೆ
ತನುವಿನಲಿಪ್ಪ ತಾಮಸ ಕಳೆಯದೆ
ಕಾಬವರ ಕಂಡು ವಿರಕ್ತರೆಂದಡೆ ಕುಂಭೀಪಾಕ ನಾಯಕನರಕ ತಪ್ಪದು ಅಮುಗೇಶ್ವರಾ “
ಎನ್ನುವ ಅಮುಗೆ ರಾಯಮ್ಮನ ವಚನ ಇಂತವರನ್ನೆ ನೋಡಿ ಬರೆದಿರಬೇಕು ಎನಿಸುತ್ತದೆ.
ಇಂದು ಲಿಂಗಾಯತರು ಮತ್ತು ಲಿಂಗಾಯತ ಸಮುದಾಯ ಏಚ್ಚರಗೊಂಡಿರುವ ಪರಿ ನೋಡಿ ತಮ್ಮ ಭವಿಷ್ಯದ ಗತಿ ಏನೂ ಎಂದು ದಿಂಗು ಬಡಿಸಿಕೊಂಡವರಂತಾಗಿದೆ ದಿಂಗಾಲೇಶ್ವರ ಮತ್ತು ಪಟಾಲಂ ಸ್ವಾಮಿಗಳ ಸ್ಥಿತಿ. ಇಂದು ಲಿಂಗಾಯತ ಸಮುದಾಯಗಳಲ್ಲಿ ಬಸವಾದಿ ಶರಣರ ವಿಚಾರಧಾರೆಗಳು ಶರವೇಗದಂತೆ ಮನೆ ಮನಗಳನ್ನು ತಲುಪುತ್ತಿವೆ. ಒಂದು ವೇಳೆ ಈ ಸಮುದಾಯಗಳು ಶರಣರ ವಿಚಾರಗಳಿಂದ ಏಚ್ಚೆತ್ತುಕೊಂಡರೆ ತಮ್ಮ ಉದರ ಪೋಷಣೆಯ ಗತಿ ಏನು ಇಂದು ಬಹುತೇಕ ಸ್ವಾಮಿಗಳಿಗೆ ಕಾಡುತ್ತಿರುವುದು ಮಾತ್ರ ಸತ್ಯ.
ಸನಾತನ ಧರ್ಮ ಎಂದರೆ ಕೇವಲ ಹಳೆಯದನ್ನು ಹೇಳುತ್ತಾ ಹೋಗುವುದೆ ಆಗಿದೆ. ಜನರನ್ನು ಬರೀ ಪೂಜೆ, ಭಜನೆ, ಜೈಕಾರಕ್ಕೆ ಸೀಮಿತ ಮಾಡಿ ತಮ್ಮ ಬದುಕು ಕೊಟ್ಟಿಕೊಂಡಿರುವ ಬಹುತೇಕ ಪರೋಪಜೀವಿಗಳಿಗೆ ಇಂದು ತಮ್ಮ ಅಸ್ಥಿತ್ವದ ಪ್ರಶ್ನೆಯಾಗಿದೆ. ಮತ್ತೆ ಮತ್ತೆ ಹೊಸತನವನ್ನು ನೀಡುವ ಶರಣರ ತತ್ವ ಸಿದ್ದಾಂತಗಳಿಗೆ ಭಂಡ ಧೈರ್ಯದಿಂದ ದಾಳಿ ಮಾಡುವ ಪ್ರಯತ್ನ ಭಾಗ ಈ ದಿಕೆಟ್ಟ ದಿಂಗಾಲೇಶ್ವರ ಸ್ವಾಮಿಗಳ ಇಂದಿನ ಮಾತುಗಳು.
“ಅರಿವಂ ಪೊಸಯಿವೂದೆ ಧರ್ಮಂ
ಅದಂ ಕೆಡಿಪುದೇ ಅಧರ್ಮಂ”
ಎನ್ನುವ ಆದಿ ಕವಿ ಪಂಪನ ಈ ಮಾತುಗಳು ದಿಂಗಾಲೇಶ್ವರ ಸ್ವಾಮಿಗಳಿಗೆ ನೆನಪಾಗಲಿಲ್ಲವೆ?
ಇಂದಿಗೂ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಸಮಾಜ ಮತ್ತು ಸಮುದಾಯವನ್ನು ಅಜ್ಞಾನದ ಕತ್ತಲೆಯಲ್ಲಿಟ್ಟು ಅವರನ್ನು ವಿಚಾರ ಶೂನ್ಯರನ್ನಾಗಿಸಿ ತಾವು ಬದುಕು ಕಟ್ಟಿಕೊಂಡ ಕೆಲವೊಬ್ಬ ಮಠಾಧೀಶರಿಗೆ ಇಂದು ಬಸವಣ್ಣ ಅವರ ಅಳಿವು ಉಳಿವಿನ ಪ್ರಶ್ನೆಯಾಗಿದ್ದಾರೆ.
ಬಸವಣ್ಣನವರ ಧರ್ಮ ಜನಸಾಮಾನ್ಯರ ಧರ್ಮ. ಇಲ್ಲಿ ಖಾವಿ ತೊಟ್ಟ ಯಾವ ಗುರು ವಿರಕ್ತರ ಮಠಗಳ ಕುರಿತಾಗಿ ಇಡಿಯಾಗಿ ವಚನ ಸಾಹಿತ್ಯದಲ್ಲಿ ಎಲ್ಲಿಯೂ ಹೇಳಿಲ್ಲ, ವಚನಗಳನ್ನು ಬರೆದಿಲ್ಲ. ಇಂದಿನ ಬಹುತೇಕ ವಿರಕ್ತ ಪರಂಪರೆಯ ಸ್ವಾಮಿಗಳು ಬಸವಣ್ಣನೆ ಧರ್ಮ ಗುರು, ವಚನಗಳೆ ಧರ್ಮ ಗ್ರಂಥ, ಲಿಂಗಾಯತ ಸ್ವತಂತ್ರ ಧರ್ಮವೆಂದು ಒಪ್ಪಿಕೊಂಡು ನಡೆದಿದ್ದಾರೆ ಅದರಂತೆ ಬದುಕುತ್ತಿದ್ದಾರೆ.
ಆದರೆ ಜಾತಿ ಶ್ರೇಷ್ಠತೆಯ ವ್ಯಸನ ತುಂಬಿಕೊಂಡಂತ ದಿಂಗಾಲೇಶ್ವರರು ಮತ್ತವರ ಪಟಲಾಂ ಮತ್ತೆ ಸಮಾಜದಲ್ಲಿ ಗೊಂದಲ ಹರಡಲು ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ ಗೊಂದಲದ ಸಮಾವೇಶವನ್ನು ಮಾಡಲು ಹೊರಟಿದ್ದಾರೆ.
ವೀರಶೈವ ಮತ್ತು ಲಿಂಗಾಯತ ತದ್ವಿರುದ್ದ
*ಇತಿಹಾಸ ಪುರುಷ ಬಸವಣ್ಣ ಲಿಂಗಾಯತಕ್ಕೆ ಧರ್ಮಗುರು.
ವೀರಶೈವಕ್ಕೆ ಲಿಂಗೋದ್ಭವ ರೇಣುಕಾಚಾರ್ಯ ಧರ್ಮ ಗುರು.
*ಲಿಂಗಾಯತದಲ್ಲಿ 770 ಅಮರಗಣಂಗಳೆಲ್ಲ ನಾಯಕರು.
ವೀರಶೈವದಲ್ಲಿ 770 ಅಮರಗಣಂಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
*ಲಿಂಗಾಯತರು ಏಕದೇವೋಪಾಸಕರು. ಇಷ್ಟಲಿಂಗಯೋಗವೆ ಅವರ ಪೂಜಾ ವಿಧಾನ.
ವೀರಶವದಲ್ಲಿ ಬಹುದೇವತೋಪಾಸಕರು.
*ಲಿಂಗಾಯತದಲ್ಲಿ ಹೋಮ ಹವನ ಮತ್ತು ವೇದ ಘೋಷಗಳಿಲ್ಲ. ವೀರಶೈವರಲ್ಲಿ ಇವೆಲ್ಲ ಇವೆ.
*ಮೂಢನಂಬಿಕೆಗಳ ಅಗರಗಳಾದ ಜ್ಯೋತಿಷ್ಯ ಮತ್ತು ಪಂಚಾಂಗವನ್ನು ಲಿಂಗಾಯತರು ನಂಬುವುದಿಲ್ಲ. ವೀರಶೈವ ಇವು ಎಲ್ಲವನ್ನೂ ಒಪ್ಪುತ್ತೆ.
- ಲಿಂಗಾಯತದಲ್ಲಿ ಆಚಾರವೆ ಸ್ವರ್ಗ , ಅನಾಚಾರವೆ ನರಕ ವೆಂದು ಸ್ವರ್ಗ ನರಕಗಳ ಪರಿಕಲ್ಪನೆ ಇಲ್ಲ. ವೀರಶೈವ ಎಲ್ಲವನ್ನು ಒಪ್ಪುತ್ತಾರೆ.
*ಲಿಂಗಾಯತದಲ್ಲಿ ಕಾಯಕವೆ ಪ್ರಧಾನ ಸಿದ್ದಾಂತ. ವೀರಶೈವರಲ್ಲಿ ಕರ್ಮ ಸಿದ್ಧಾಂತವೆ ಪ್ರಧಾನ.
*ಲಿಂಗಾಯತರಿಗೆ ಅರಿವೆ ಗುರು. ವೀರಶೈವರಿಗೆ ಜಾತಿ ಜಂಗಮರೆ ಗುರು.
*ಲಿಂಗಾಯತದಲ್ಲಿ ಎನಗಿಂತ ಕಿರಿಯರಿಲ್ಲ ಎನ್ನುವ ಸಿದ್ದಾಂತ. ವೀರಶೈವರರಲ್ಲಿ ಶ್ರೇಷ್ಠತೆ ವ್ಯಸನದ ಸಿದ್ದಾಂತ.
ಹೀಗೆ ಬರೆಯುತ್ತಾ ಹೋದರೆ ಎಂದೂ ವೀರಶೈವ ಮತ್ತು ಲಿಂಗಾಯತ ಒಂದಾಗಲು ಸಾಧ್ಯವೆ ಇಲ್ಲ.
ಇಷ್ಟಾದರೂ ದಿಂಗಾಲೇಶ್ವರ ಮತ್ತವರ ಬಳಗದ ಹಿಂದಿನ ಕುತಂತ್ರಗಳನ್ನು ಲಿಂಗಾಯತ ಸಮುದಾಯ ಅರಿಯಬೇಕು. ತಮ್ಮ ಹೊಟ್ಟೆ ಪಾಡಿನ ಮತ್ತು ತಮ್ಮ ಅಸ್ಥಿತ್ವದ ಪ್ರಶ್ನೆಯಾಗಿ ಈ ಸಮಾವೇಶವನ್ನು ಮಾಡುತ್ತಿದ್ದಾರೆ. ಇದರಿಂದ ಯಾವ ಲಿಂಗಾಯತನಿಗೂ ಏನೂ ಒಳಿತಾಗುವುದಿಲ್ಲ.
ಮತ್ತೆ ಸಮುದಾಯವನ್ನು ಅಜ್ಞಾನದಲ್ಲಿರಿಸಿ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎನ್ನುವುದರ ಹುನ್ನಾರದ ಭಾಗ. ಇಂದು ಲಿಂಗಾಯತ ಸಮುದಾಯ ಮತ್ತು ಯುವಜನತೆ ಏಚ್ಚೆತ್ತುಗೊಂಡಿದೆ. ಇವರ ಇಂತಹ ಕುತಂತ್ರಕ್ಕೆ ಲಿಂಗಾಯತ ಸಮುದಾಯ ಮತ್ತು ಯುವಜನತೆ ಬಲಿಯಾಗುವುದಿಲ್ಲ.
ಇತರರನ್ನು ದೂಶಿಸುವದನ್ನು ಬಿಟ್ಟು ಬಸವಣ್ಣ ನವರ ಮಾರ್ಗದರ್ಶನದಂತೆ ಕೆಲವರ್ಗದವರ ಉನ್ನತಿಗಾಗಿ ಶ್ರಮಿಷಿ. ಭಾಷಣ ಕೊಡುವದನ್ನು ಬಿಟ್ಟು ಬಸವಣ್ಣ ನವರ ಚಳುವಳಿ ಸಾರ್ಥಕ ಮಾಡಿ
ಅರಿವೇ ಗುರು ಎಲ್ಲಿ, ಕಾವಿಯೇ ಗುರು ಎಲ್ಲಿ? ಎಲ್ಲಾ ಗೊತ್ತಿದ್ದು ಈ ರೀತಿಯ ಹುನ್ನಾರ ಮಾಡುವದು ಎಷ್ಟು ಸರಿ. ಸ್ವಾಮಿಗಳೇ ಈ ನಿಮ್ಮ ಕುಚೋದ್ಯದ ಆಟ ನಡೆಯದು, ಲಿಂಗಾಯತರಿಗೆ ಬುದ್ದಿಹೇಳಲು ಸಂಘಟನೆಗಳಿವೆ, ಲಿಂಗಾಯತ ಸ್ವಾಮಿಗಳಿದ್ದಾರೆ. ನಿಮಗೆ ಹೇಳುವದನ್ನು ವೇದಿಕೆಗಳ ಮುಖಾಂತರ ಬಸವಪರ ಚಿಂತನೆಗಳ ಮುಖಾಂತರ ಈಗಾಗಲೇ ಅನೇಕ ಬಾರಿ ಹೇಳಿಯಾಗಿದೆ. ನೀವೇಕೆ ವೀರಶೈವದ ಉಧ್ಧಾರ ಮಾಡಬಾರದು? ಸಾಕು ನಮ್ಮನ್ನು ಕೖಬಿಡಿ ನಮ್ಮ ಉಧ್ಧಾರ ನಮಗೆ ಗೊತ್ತಿದೆ. ಇಲ್ಲ ಬಸವಣ್ಣನವರನ್ನು ಧರ್ಮಗುರುವೆಂದು ಒಪ್ಪಿ ಲಿಂಗಾಯತ ಧರ್ಮ ಪ್ರಚಾರ ಮಾಡಿ.
*ದಿಂಗಾಲೇಶ್ವರ ಸ್ವಾಮಿಗಳು ಮತ್ತು ಎರಡು ಡಜನ್ ವೀರಶೈವ ಸ್ವಾಮಿಗಳು ಪತ್ರಿಕಾಗೋಷ್ಟಿ ನಡೆಸಿ ಬೇಡ ಜಂಗಮ ಕುತಂತ್ರ ನಡೆಸಿದ್ದಕ್ಕಾಗಿ ಸಮಸ್ತ ಸಮಾಜದ ಕ್ಷಮೆ ಕೇಳಲಿ ಸ್ಪಷ್ಟೀಕರಣ ಕೊಡಲಿ*
ಲಿಂಗಾಯತರ ಅವೈದಿಕ ಅಸ್ಮಿತೆ ಕುರಿತು ನಿರಾಕರಿಸುವ ಕರಾರುವಕ್ಕಾಗಿ ೨ ಡಜನ್ ವೀರಶೈವ ಸ್ವಾಮಿಗಳನ್ನು ಸೇರಿಸಿಕೊಂಡು ಹೇಳುವ ದಿಂಗಾಲೇಶ್ವರ ಸ್ವಾಮಿ
ಬೇಡ ಜಂಗಮರು ದಲಿತರಲ್ಲ, ಬೇಡ ಜಂಗಮ ಹೆಸರಲ್ಲಿ ರಂಭಾಪುರಿಗಳ ನೇತ್ರತ್ವದಲ್ಲಿ ವೀರಶೈವರು ಕುತಂತ್ರ ಮಾಡಿದ್ದು, ದಲಿತರ ಮೇಲೆ ವೀರಶೈವರು ನಡೆಸಿದ ದೌರ್ಜನ್ಯ, ಅದಕ್ಕಾಗಿ ಆ ಎರಡು ಡಜನ್ ಸ್ವಾಮಿಗಳನ್ನು ಸೇರಿಸಿಕೊಂಡು ಕ್ಷಮೆ ಕೇಳುತ್ತಾನೆಯೇ ? ಇದಕ್ಕೆ ಪತ್ರಿಕಾ ಗೋಷ್ಟಿ ಕರೆಯಲಿ.
ಈ ವೀರಶೈವ ಸ್ವಾಮಿಗಳಿಗೆ ಲಿಂಗಾಯತರ ಮೇಲೆ ಸವಾರಿ ಮಾಡಲು ಮಠಗಳು ಬೇಕು ಪೌರೋಹಿತ್ಯ ಬೇಕು , ಅತ್ತ ಮೀಸಲಾತಿಗಾಗಿ ದಲಿತರ ಹೊಟ್ಟೆ ಮೇಲೆ ಹೊಡೆಯುವ ಕುತಂತ್ರ. 😡
ದಿಂಗಾಲೇಶ್ವರನ ಜೊತೆ ಸೇರಿಕೊಂಡುಬರುವ ಎಲ್ಲ ಜಾತಿ ಜಂಗಮ ಮಠಾಧಿಪತಿಗಳು ಬೇಡ ಜಂಗಮದ ಹುನ್ನಾರ ಕುರಿತು ಪ್ರಶ್ನೆಗೆ ಉತ್ತರ ಕೊಡಬೇಕು , ಇವರು ಬೇಡ ಜಂಗಮ ಎಂದೇ ಹೇಳುವುದಾದರೆ ಮಠ ಬಿಟ್ಟು ಹೊರಗೆ ನಡೆಯಲಿ ,ಲಿಂಗಾಯತರಿಗೆ ಮತ್ರ ದಲಿತರಿಗೆ ಅನ್ಯಾಯ ಮಾಡುವ ಇವರ ವಿರುಧ್ದ ದಲಿತರು ಮತ್ತು ಲಿಂಗಾಯತರು ಪ್ರತಿಭಟಿಸಲೇಬೇಕು. ಇಂತಹ ಕುಟಿಲ ಹುನ್ನಾರದ ಅಮಾನವೀಯ ಮಠಾಧೀಶರ ಅಗತ್ಯ ಸಮಾಜಕ್ಕೆ ಬೇಕಾಗಿಲ್ಲ
ವೀರಶೈವ ಲಿಂಗಾಯತವೇ ಅಂತಿಮ.
ಎಸ್ಟು ನಿಂದಿಸುತ್ತೀರಿ ನಿಮ್ಮ ನಮ್ಮ ಬಸವಣ್ಣ ಪರರ ನಿಂದಿಸಬೇಡ ಇದಿರು ಹಳಿಯಲು ಬೇಡ ಅಂಥ ಹೇಳಿದ್ದನ್ನ ಮರೆತಿರಾ. ಸಾಲದೆಂಬಂತೆ ವೀರಶೈವ ಅಲ್ಲವೇ ಅಲ್ಲ ಎನ್ನುತ್ತಿರಲ್ಲ ಬಸವಣ್ಣನಿಗೆ ಜಾತವೇದ ಮುನಿಗಳು ಹೇಗೆ ಲಿಂಗಧಾರಣೆ ಮಾಡಿದರು ಜಾತವೇದ ಮುನಿಗಳಿಗೆ ಯಾರು ಲಿಂಗ ಕಟ್ಟಿದರು ಇದಕ್ಕೆ ನಿಮ್ಮಲ್ಲಿ ಉತ್ತರ ಇದೆ.ಇಂಥ ಸಣ್ಣ ವಿಷಯ ಆಡುವ ಹುಡುಗರಿಗೆ ತಿಳಿಯುತ್ತೆ ನಿಮಗೆ ಗೊತ್ತಿಲ್ಲದೆ ಏನೇನೋ ಹೇಳುತ್ತಿರಲ್ಲ ನೀವು ಮಠಗಳ ಬಿಟ್ಟು ಗುಡಿಗಳಲ್ಲಿ ವಾಸಿಸುತ್ತಾ ನೀವು ಹೇಳುವ ಬಸವ ತತ್ವ ಪ್ರಚಾರ ಮಾಡಿ ಇದು ಮಾಡಿ ತೋರಿಸಿ ಆಮೇಲೆ ನಿಮ್ಮನ್ನ ಒಪ್ಪಿಕೊಳ್ಳೋಣ
*ದಿಂಗಾಲೇಶ್ವರ ಸ್ವಾಮಿಗಳು ಮತ್ತು ಎರಡು ಡಜನ್ ವೀರಶೈವ ಸ್ವಾಮಿಗಳು ಪತ್ರಿಕಾಗೋಷ್ಟಿ ನಡೆಸಿ ಬೇಡ ಜಂಗಮ ಕುತಂತ್ರ ನಡೆಸಿದ್ದಕ್ಕಾಗಿ ಸಮಸ್ತ ಸಮಾಜದ ಕ್ಷಮೆ ಕೇಳಲಿ ಸ್ಪಷ್ಟೀಕರಣ ಕೊಡಲಿ*
ಲಿಂಗಾಯತರ ಅವೈದಿಕ ಅಸ್ಮಿತೆ ಕುರಿತು ನಿರಾಕರಿಸುವ ಕರಾರುವಕ್ಕಾಗಿ ೨ ಡಜನ್ ವೀರಶೈವ ಸ್ವಾಮಿಗಳನ್ನು ಸೇರಿಸಿಕೊಂಡು ಹೇಳುವ ದಿಂಗಾಲೇಶ್ವರ ಸ್ವಾಮಿ
ಬೇಡ ಜಂಗಮರು ದಲಿತರಲ್ಲ, ಬೇಡ ಜಂಗಮ ಹೆಸರಲ್ಲಿ ರಂಭಾಪುರಿಗಳ ನೇತ್ರತ್ವದಲ್ಲಿ ವೀರಶೈವರು ಕುತಂತ್ರ ಮಾಡಿದ್ದು, ದಲಿತರ ಮೇಲೆ ವೀರಶೈವರು ನಡೆಸಿದ ದೌರ್ಜನ್ಯ, ಅದಕ್ಕಾಗಿ ಆ ಎರಡು ಡಜನ್ ಸ್ವಾಮಿಗಳನ್ನು ಸೇರಿಸಿಕೊಂಡು ಕ್ಷಮೆ ಕೇಳುತ್ತಾನೆಯೇ ? ಇದಕ್ಕೆ ಪತ್ರಿಕಾ ಗೋಷ್ಟಿ ಕರೆಯಲಿ.
ಈ ವೀರಶೈವ ಸ್ವಾಮಿಗಳಿಗೆ ಲಿಂಗಾಯತರ ಮೇಲೆ ಸವಾರಿ ಮಾಡಲು ಮಠಗಳು ಬೇಕು ಪೌರೋಹಿತ್ಯ ಬೇಕು , ಅತ್ತ ಮೀಸಲಾತಿಗಾಗಿ ದಲಿತರ ಹೊಟ್ಟೆ ಮೇಲೆ ಹೊಡೆಯುವ ಕುತಂತ್ರ. 😡
ದಿಂಗಾಲೇಶ್ವರನ ಜೊತೆ ಸೇರಿಕೊಂಡುಬರುವ ಎಲ್ಲ ಜಾತಿ ಜಂಗಮ ಮಠಾಧಿಪತಿಗಳು ಬೇಡ ಜಂಗಮದ ಹುನ್ನಾರ ಕುರಿತು ಪ್ರಶ್ನೆಗೆ ಉತ್ತರ ಕೊಡಬೇಕು , ಇವರು ಬೇಡ ಜಂಗಮ ಎಂದೇ ಹೇಳುವುದಾದರೆ ಮಠ ಬಿಟ್ಟು ಹೊರಗೆ ನಡೆಯಲಿ ,ಲಿಂಗಾಯತರಿಗೆ ಮತ್ರು ದಲಿತರಿಗೆ ಅನ್ಯಾಯ ಮಾಡುವ ಇವರ ಮೇಲೆ ದಲಿತರು ಮತ್ತು ಲಿಂಗಾಯತರು ಪ್ರತಿಭಟಿಸುತ್ತಾರೆ, *ಇಂತಹ ಕುಟಿಲ ಹುನ್ನಾರದ ಅಮಾನವೀಯ ಮಠಾಧೀಶರ ಅಗತ್ಯ ಸಮಾಜಕ್ಕೆ ಬೇಕಾಗಿಲ್ಲ*
ಸರಿಯಾದ ವಿವರಣೆ, ಇನ್ನೂ ಕಠಿಣವಾಗಿದ್ದರೂ ಪರವಾಗಿಲ್ಲ
ಏಕತೆ ಬಗ್ಗೆ ಸ್ಪಷ್ಟವಾದ ಯಾವುದೇ ವಿಷಯ ಪ್ರಸ್ಥಾಪಿಸಿಲ್ಲ. ನಾವು ಲಿಂಗಾಯತರು, ನಮ್ಮ ಧರ್ಮ ಲಿಂಗಾಯತ. ನಮಗೆ ಮೊದಲು ಸಮಾನತೆ ಮತ್ತು ವಿಷಯಾಧಾರಿತ ಎಕತೆ ಬಯಸುವುವರು. ಎಲ್ಲಕ್ಕಿಂತಲೂ ಮಿಗಿಲಾಗಿ ಬಸವಾಧಿಶರಣರ ಮಾರ್ಗದಲ್ಲಿ ಮುನ್ನಡೆಯುವವರ ಜೊತೆ ಮಾತ್ರ ನಮ್ಮ ನಡೆ. ನಾವು ಬಸವಣ್ಣ ಮತ್ತು ವಚನಸಾಹಿತ್ಯ ಮಾತ್ರ ತಲೆಬಾಗುವುವರು. ನಮ್ಮ ಲಿಂಗಾಯತ ಧರ್ಮಕ್ಕೆ ಚ್ಯುತಿ ಬಾರದ ಇತರೆ ಒಳ್ಳೆಯ ಉದ್ದೇಶದ ಏಕತೆಗೆ ಮಾತುಕತೆಗೆ ಕೂರಬಹುದು
Dr. Rajshekar, sariya vivarane kottiddare
ಇವರು ವೀರಶೈವರೋ ಲಿಂಗಾಯತರೋ, dingaleswara ಸ್ವಾಮಿಗಳೇ? ಎರಡನ್ನೂ ನೀವು ಹೇಗಾಗುತ್ತೀರಿ!