ಪುಂಡರ ಗೋಷ್ಟಿ: ಲಿಂಗಾಯತ ಪೂಜ್ಯರ ಮೇಲೆ ಕಿಡಿಕಾರಿದ ಪ್ರತಾಪ ಸಿಂಹಗೆ ತಿರುಗೇಟು

ಎಸ್. ಎಂ. ಜಾಮದಾರ್
ಎಸ್. ಎಂ. ಜಾಮದಾರ್

ಬೆಂಗಳೂರು

ಮೊನ್ನಿನ ಪ್ರಜಾವಾಣಿ ಪತ್ರಿಕೆಯಲ್ಲಿ ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಅವರು “ಕಾವಿಧಾರಿಗಳೆ ನಿಮ್ಮ ದೇವರು ಯಾವುದು?ʼ ಎಂದು ಲಿಂಗಾಯತ ಗುರುಗಳನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಇದು ಉತ್ತರ.

೧) ಪ್ರತಾಪ ಅವರೆ, ಕ್ರೈಸ್ತ, ಇಸ್ಲಾಮ ಮತ್ತು ಯಹೂದಿ ಈ ಮೂರೂ ಧಮ೯ಗಳು ಯಹೂದಿ ಧಮ೯ದ ಹಳೆಯ ಬೈಬಲ್ಲಿನ ಜೆನಿಸಿಸ್‌ ಕತೆಯನ್ನು ಸಂಪೂಣ೯ವಾಗಿ ಒಪ್ಪತ್ತವೆ ಎನ್ನುವುದು ನಿಮಗೆ ತಿಳಿದಿರಲೇಬೇಕು. ಇಲ್ಲವಾದರೆ ಮತ್ತೊಮ್ಮೆ ಓದಿಕೊಳ್ಳಿ. ಅಂದ ಮಾತ್ರಕ್ಕೆ ಇಸ್ಲಾಮವು ಯಹೂದಿ ಧಮ೯ದ ಒಂದು ಶಾಖೆಯೇ? ಹಾಗೆಯೇ, ಕ್ರೈಸ್ತ ಧಮ೯ವೂ ಯಹೂದಿ ಧಮ೯ದ ಮತ್ತೊಂದು ಶಾಖೆಯೇ? ಉತ್ತರಿಸಿ. ನೀವೇನಾದರೂ ಹಾಗೆ ಹೇಳಿದರೆ, ಅವರು ನಿಮ್ಮನ್ನು ಸೂಕ್ತ ಸ್ಥಳಕ್ಕೆ ರವಾನಿಸುತ್ತಾರೆ.

೨) ಇದೇ ತರಹದ ವಾದವನ್ನು ನಿಮ್ಮ ಪಟಾಲಮ್ಮದವರು ಇತೀಚಿನ ವರೆಗೂ ಭಾರತದಲ್ಲಿ ಹುಟ್ಟಿ ಬೆಳೆದು ವೈದಿಕ ಧಮ೯ಕ್ಕೆ ಪಯಾ೯ಯವಾಗಿರುವ ಸಿಖ್ಖ, ಬೌದ್ಧ ಮತ್ತು ಜೈನ ಧಮ೯ಗಳಿಗೂ ನೀಡುತ್ತಿದ್ದದ್ದನ್ನು ಯಾರೂ ಮರೆತಿಲ್ಲ. ನಿಮ್ಮ ದುದೈ೯ವದಿಂದ ೧೯೬೩ರಲ್ಲಿ ನಡೆದ ರಾಜಕೀಯ ಪರಿಹಾರದ ಅಂಗವಾಗಿ ಸಿಖ್ಖರಿಗೆ “ಪ್ರತ್ಯೇಕ ಧಮ೯”ದ ಮಾನ್ಯತೆ ದೊರೆಯಿತು. ಹೊಸದಾಗಿ ೧೯೯೨ರಲ್ಲಿ ರಚನೆಯಾದ ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಕಾನೂನಿನ ಅಡಿಯಲ್ಲಿ ಬೌದ್ಧ ಧಮ೯ಕ್ಕೆ ೧೯೯೩ರಲ್ಲಿ “ಅಲ್ಪಸಂಖ್ಯಾತ ಧಮ೯ದ” ಮಾನ್ಯತೆ ನೀಡಲಾಯಿತು. ಅದೇ ಕಾನೂನಿನ ಅಡಿಯಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾಗುವ ಕೆಲವೇ ತಿಂಗಳ ಹಿಂದೆ ೨೦೧೪ರಲ್ಲಿ ಜೈನರನ್ನು “ಅಲ್ಪಸಂಖ್ಯಾತ ಸಮುದಾಯ”ವೆಂದು ಘೋಷಿಸಲಾಯಿತು. ಹೀಗೆ ಮೂರೂ ಸಲ ನೀವು ಸೋತ ನಂತರ ಈಗ ಲಿಂಗಾಯತ ಸ್ವಾಮಿಗಳ ವಿರುದ್ಧ ಕಿಡಿಕಾರುತ್ತಿದ್ದೀರಿ.

ಮೂರೂ ಸಲ ನೀವು ಸೋತ ನಂತರ ಈಗ ಲಿಂಗಾಯತ
ಸ್ವಾಮಿಗಳ ವಿರುದ್ಧ ಕಿಡಿಕಾರುತ್ತಿದ್ದೀರಿ.

೩) ಈಗ ನಿಮ್ಮ ಪ್ರಶ್ನೆಗೆ ನೇರವಾಗಿ ಉತ್ತರಿಸುತ್ತೇನೆ. ಲಿಂಗಾಯತರ ʼಶಿವʼ ಎಂಬ ದೇವರು ʼವೈದಿಕʼರ ಶಿವನಲ್ಲ. ಹೇಗೆ ಎಂಬುದಕ್ಕೆ ಈ ಕೆಳಗಿನ ಸಂಗತಿಗಳನ್ನು ಓದಿ:

(ಅ) ಲಿಂಗಾಯತ ಶಿವನಿಗೆ ದಾಕ್ಷಾಯಣಿ, ಗಂಗೆ, ಪಾವ೯ತಿಯಂತಹ ಹೆಂಡತಿಯರಿಲ್ಲ. ಗಣೇಶ ಮತ್ತು ಕುಮಾರರಂತಹ ಮಕ್ಕಳಿಲ್ಲ. ಅವನು ಸ್ವಗ೯/ಕೈಲಾಸವಾಸಿಯಲ್ಲ. ಅವನು ಬೂದಿಬಡಕನಲ್ಲ, ಸ್ಮಶಾನದಲ್ಲಿ ಪಿಶಾಚಿಯಂತೆ ತಿರುಗುವನಲ್ಲ. ನೀಲಕಂಠನಲ್ಲ, ಇವೆಲ್ಲ ಒಂದು ಸಾವಿರಕ್ಕು ಹೆಚ್ಚು ಶಿವನಿಗೆ ಕೊಟ್ಟ ಹೆಸರುಗಳು ಮತ್ತು ಹೆಸರಿಗೊಂದಂದರಂತೆ ಬರೆದ ಸಾವಿರ ಕತೆಗಳು ಹತ್ತು ಶೈವ ಪುರಾಣಗಳ (ಶಿವ ಪುರಾಣ, ಲಿಂಗ ಪುರಾಣ, ಸ್ಕಂದ ಪುರಾಣ, ಭವಿಷ್ಯ ಪುರಾಣ, ಮಾಕ೯೦ಡೆಯ ಪುರಾಣ, ವರಾಹ ಪುರಾಣ, ಕೂಮ೯ ಪುರಾಣ, ವಾಮನ ಪುರಾಣ, ಬ್ರಹ್ಮಾಂಡ ಪುರಾಣ, ಮತ್ಸ್ಯ ಪುರಾಣಗಳ) ಸೃಷ್ಟಿಗಳು.

ಲಿಂಗಾಯತ ಶರಣರು ಪುರಾಣಗಳನ್ನು “ಪುಂಡರ ಗೋಷ್ಟಿಗಳು” ಎಂದು ಕರೆದು ಅಂತಹ ಪುರಾಣಗಳನ್ನು ಮತ್ತು ಅವುಗಳಲ್ಲಿ ಬರುವ ಕತೆಗಳನ್ನು ತಿರಸ್ಕರಿಸಿದ್ದಾರೆ.

(ಆ) ಲಿಂಗಾಯತರಿಗೆ ನೂರೆಂಟು ದೇವರಿಲ್ಲ. ಓಬ್ಬನೆ ದೇವನು. ಬಸವಣ್ಣನವರು ಹೇಳಿದಂತೆ “ದೇವನೊಬ್ಬ ನಾಮ ಹಲವು” ಅದಕ್ಕಾಗಿ ಶರಣರ ವಚನಗಳಲ್ಲಿ ಶಿವನನ್ನು ವಿವಿಧ ಹೆಸರುಗಳಿಂದ ಅವರವರ ಇಷ್ಟದಂತೆ ಕರೆದಿದ್ದಾರೆ ಅವುಗಳಿಗೆ ಪುರಾಣಗಳು ಆಧಾರವಲ್ಲ.

(ಇ) ಬಸವಣ್ಣನವರ ವಚನ ವಿವರಿಸುವಂತೆ, ಲಿಂಗಾಯತ ಶಿವನು

“ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ,
ಪಾತಾಳದಿಂದವೇ ಅತ್ತತ್ತ ನಿಮ್ಮ ಶ್ರೀ ಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀ ಮುಕುಟ,
ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೇ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ”

ಇಲ್ಲಿ ಒಂದೊಂದು ಶಬ್ದಕ್ಕೂ ವಿಶಾಲವಾದ ಆಳವಾದ ಅಥ೯ ಮತ್ತು ಹಿನ್ನೆಲೆಯಿದೆ. ಪಾಪ, ಹೆಚ್ಚೆಚ್ಚು ವಚನಗಳನ್ನು ಓದದೇ ಬಾಯಿಗೆ ಬಂದಂತೆ ಮಾತನಾಡುವ ನಿಮ್ಮಂಥವರಿಗೆ ಇದನ್ನು ಹೇಳುವುದೆಂದರೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ.

ನಿಮ್ಮಂಥವರಿಗೆ ಇದನ್ನು ಹೇಳುವುದೆಂದರೆ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ.

(ಈ) ವಿಶ್ವವ್ಯಾಪಿಯಾದ ಶಿವನನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದ ಶರಣರು ಬಯಲು ಸಿದ್ಧಾಂತವನ್ನು ಪ್ರತಿಪಾದಿಸಿದರು. ಬಸವಣ್ಣವವರ ಒಂದೇ ವಚನ ಅದನ್ನು ಸ್ಪಷ್ಟ ಪಡಿಸಬಲ್ಲದು.

“ಪಾಪ-ಪುಣ್ಯಗಳೆಂಬ ಉಭಯದ ನಡುವಿನ ಭೇದವ ಬಲ್ಲವರಾರು?”
ಇದನಾರುಂಬರು? (ಪಾಪದ ಫಲವನ್ನು)
ದೇಹವೆಂದಡೆ ದೇಹ ತಾ ಮಣ್ಣು!
ಜೀವವೆಂದರೆ ಜೀವ ತಾ ಬಯಲು”

ಬಯಲು ಸಿದ್ಧಾಂತದ ಇನ್ನೊಂದು ವಚನವು ಅಲ್ಲಮ ಪ್ರಭುಗಳದು:

“ಬಯಲು ಜೀವನ,
ಬಯಲು ಭಾವನ
ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲಲ್ಲಿ ಬಯಲಾದರು”

(ಈ) ಶಿವನು ವೇದ ಮೂಲದವನಲ್ಲ ಎನ್ನುವುದಾದರೂ ಗೊತ್ತಿದೆಯೇ ನಿಮಗೆ? ಋಗ್ವೇದದಲ್ಲಿ ಬರುವ ರುದ್ರನನ್ನು ನೀವೇ ಬಹುಕಾಲದ ನಂತರ ಶಿವ ಎಂಬು ಹಲುಬಿದಿರಿ. ಆಗಮ ಮೂಲದ ಶಿವನೂ ನಿಮ್ಮ ಅನಥ೯ ಅಥೈ೯ಸುವಿಕೆಯಿಂದ ಭಗ್ನನಾದನು. ಆ ನಂತರ ಬಂದ ಶ್ವೇತಾಶ್ವರ ಉಪನಿಷತ್ತಿನಲ್ಲಿ ಶಿವನ ಬಗ್ಗೆ ಒಂದಿಷ್ಟು ಮಾಹಿತಿಯಿದೆ. ಆದಾಗ್ಯೂ, ಹರಪ್ಪ, ಮೊಹೆಂಜೆದಾರೋಗಳ ಉತ್ಖನನದಲ್ಲಿ ದೊರೆತ ಶಿವಲಿಂಗಗಳು ವೇದಪೂವ೯ ಕಾಲೀನದವುಗಳೆಂದು ಜಗತ್ತೇ ತಿಳಿದಿದೆ.

(ಎ) ಬಹುತೇಕ ವಚನಗಳಲ್ಲಿ ಶರಣರು ಸ್ವಗ೯ ನರಕಗಳನ್ನು ಅಲ್ಲಗಳೆದರು. ಅಲ್ಲಮರ ವಚನಗಳಂತೂ ಕಮ೯ ಸಿದ್ಧಾಂತ ಮತ್ತು ಪುನಜ೯ನ್ಮ ಸಿದ್ಧಾಂತಗಳನ್ನು ತಿರಸ್ಕರಿಸುತ್ತವೆ.

(ಏ) ಲಿಂಗಾಯತರು ಮೋಕ್ಷವನ್ನು ಇದೇ ಜನ್ಮದಲ್ಲೆ ಪಡೆಯುತ್ತಾರೆ. “ನುಡಿದಂತೆ ನಡೆದರೆ ಇದೇ ಜನ್ಮ ಕಡೆ” ಎಂಬುದು ನಡೆ-ನುಡಿ ಸಿದ್ಧಾಂತದ ತಾತ್ಪಯ೯. ಆದ್ದರಿಂದ ಲಿಂಗಾಯತರು ಸತ್ತಾಗ “ಲಿಂಗೈಕ್ಯ”ರಾಗುತ್ತಾರೆ. ವೀರಶೈವರು ಸತ್ತರೆ “ಸ್ವಗ೯ವಾಸಿ” ಇಲ್ಲವೆ “ಕೈಲಾಸ ವಾಸಿ”ಯಾಗುತ್ತಾರೆ!

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
16 Comments
  • ಇಂತಹ ಸೈದ್ಧಾಂತಿಕ ವಿಷಯ ಅವರಿಗೆ ಅರ್ಥವಾಗುವುದು ಕಷ್ಟ. ಅವರ ಸಿದ್ಧಾಂತವೇ ಬೇರೆಯವರನ್ನು ಹೀಯಾಳಿಸುವುದು ಅವಮಾನಿಸುವುದು, ಗೂಂಡಾಗಿರಿ ಮಾಡುವುದು, ಕೋಮು ದಳ್ಳುರಿ ಹಚ್ಚುವುದು ಆ ಬಿಸಿಯಲ್ಲಿ ಕೆಳವರ್ಗದ ಮಕ್ಕಳನ್ನು ಜೈಲಿಗೆ ಕಳುಹಿಸಿ ಮೇಲ್ವರ್ಗದ ಜನ ಸುಖವಾಗಿರುವುದು ಇವರ ನೈಜ ಗುಣ. ಆದ್ದರಿಂದ ಇಂತಹದ್ದೆಲ್ಲಾ ಇವರಿಗೆ ಅರ್ಥವಾಗುವುದಿಲ್ಲ.

  • ಪ್ರತಾಪ್ ಸಿಂಹ, ಸುಮ್ನ್ ಇದ್ದರೆ ಒಳ್ಳೆಯದು

  • ಸರಿಯಾಗಿ ಉತ್ತರಿಸಿದ್ದೀರಿ ಮತ್ತು ಈ ತಿವಿತಕ್ಕೆ ಪೇಪರ್ ತಿಮ್ಮ ವಿಲವಿಲ

  • ನೇಪಾಳ ಪರಿಸ್ಥಿತಿ ತಂದ್ಕೊಂಡರೆ ಯಾರೇನು ಮಾಡಲಿಕ್ಕಗದು

    • It’s the food that matters and make somebody think the way mr pratak thinks and talk about respectful personalities of the society.

  • ಪರಿಶುದ್ಧವಾಗಿರುವ ಬಸವಣ್ಣನವರ ವಚನಧರ್ಮ ನಿಮ್ಮಿಂದ ಬಹು ದೂರ… ನೀವು ನಿಮ್ಮ ಚೌಕಟ್ಟಿನಲ್ಲಿ ಇರುವುದು ಉತ್ತಮ…
    ಹಾಗು ನಿಮಗೆ ತುಂಬಾ ಇಷ್ಟ ಇರುವವರು ಲಕ್ಷ್ಮಣ್, ಸಂತೋಷ ಲಾಡ್, ಪ್ರಿಯಾಂಕಾ ಖರ್ಗೆ…ಇವರೊಂದಿಗೆ ವಾದ ಮಾಡಿ… ಆದರೆ ಬಸವಣ್ಣ ತತ್ವ… ಬಸವಣ್ಣನವರ ವಚನಗಳು… ಬಸವಣ್ಣನವರ ಧರ್ಮಕ್ಕು… ನಿಮಗೂ ಬಹಳ ಬಹಳ ಅಂತರವಿದೆ
    🙏 🌹 ❤️ ಶ್ರೀಗುರು ಬಸವಲಿಂಗಾಯನಮಃ ❤️ 🌹 🙏

    • ಶ್ರೀ ಪ್ರತಾಪ ಸಿಂಹ ಅವರು, ಈ ದೇಶದ ನೈಜ ಇತಿಹಾಸ ತಿಳಿದುಕೊಂಡವರು ಅಂತಾ ತಿಳಿಯುತ್ತಿಲ್ಲ… ಬೇಕಂತಲೇ, ಈ ಸಿಂಹ ರು, ಸಂಘಿ ಗಳನ್ನು, rss ದ ಅತೀ ಆಯಕಟ್ಟಿನವರನ್ನು,, ತನ್ನ ಭಾಗದ, ಪ್ರಿಂಟ್, ದ್ರಶ್ಯ ಮಾಧ್ಯಮದವರನ್ನು, ಈ ದೇಶದ ಮೂಲ ನಿವಾಸಿಗಳನ್ನು ದಾರಿ ತಪ್ಪಿಸಿಸಿದ, ಡೋಂಗಿ ಹುಸಿ ಧರ್ಮದ, “ಗುಡಿ, ಮಂದಿರ, ಮಠ, ದೇವಸ್ಥಾನದ, ಧಾರ್ಮಿಕೋದ್ಯಮಿಗಳನ್ನು ಮೆಚ್ಚಿಸಲು,,,” ಈ ಶೂದ್ರ ವರ್ಗದ ನಮ್ಮ ಸಿಂಹ ಹಿಂಗ ss ಮಾತಾಡುವರು.. ಪ್ರತಾಪ!? ಸಿಂಹ =ಬರೀ ಲಿಂಗಾಯತರ ವಿರುದ್ಧ ಘರ್ಜಿಸುವ..

  • ಅವಿವೇಕಿಗಳಿಗೆ ಬಸವಣ್ಣ ಅರ್ಥ ಆಗಲ್ಲ ಸರ್. ಪೂರ್ವಗ್ರಹ ಪೀಡಿತರಂತೂ ಎಲ್ಲ ಬಲ್ಲವರಂತೆ ವರ್ತಿಡುತ್ತಾರೆ. ಅದೇ ಪಂಗಡಕ್ಕೆ ಸೇರಿದ ಇವನಿಗೆ ಬಸವ ಸಂಸೃತಿ ಅಭಿಯಾನದ ಮಹತ್ವ ತಿಳಿಯಲ್ಲ..

  • ಸಿಂ ರವರೆ ನಾನು ಬಾಜಪ ಪಕ್ಷದವನೆ, ಆಗಂತ ನಮ್ಮ ಗುರುಗಳ ಬಗ್ಗೆ ಮಾತನಾಡಿದರೆ ಸುಮ್ನೆ ಇರುವದಕ್ಕೆ ಆಗಲ್ಲ,

    • ಉತ್ತರ ಬಹಳ ಖಾರವಾಗಿದೆ ಇಂಥವರಿಗೆ ಇಂತಹ ಉತ್ತರ ಕೊಟ್ಟರೆ ಮುಂದೆ ಕೆಟ್ಟ ಮಾತಾಡುವುದನ್ನು ನಿಲ್ಲಿಸಬಹುದು…

  • ಪ್ರತಾಪ್ ಸಿಂಹ ಒಬ್ಬ ಮನುವಾದಿ ಮನಸ್ಸಿನ ಕೊಳಕು ವ್ಯಕ್ತಿ

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ