ದಾವಣಗೆರೆ
ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತ ಮಠಾಧೀಶರು ಮತ್ತು ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಹಗುರವಾಗಿ, ಕೀಳು ಭಾಷೆಯಲ್ಲಿ ಮಾತನಾಡಿರುವುದನ್ನು ವಿರೋಧಿಸಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಜಯದೇವ ವೃತ್ತದ ಬಳಿ ನಡೆಯಲಿರುವ ಪ್ರತಿಭಟನೆಯಲ್ಲಿ ಶರಣ ಸಾಹಿತ್ಯ ಪರಿಷತ್ತು, ವೀರ ಗಣಾಚಾರಿ ಪಡೆ, ರಾಷ್ಟ್ರೀಯ ಬಸವ ದಳ, ಮಾನವ ಬಂಧುತ್ವ ವೇದಿಕೆ, ಮತ್ತಿತರ ಬಸವಪರ ಸಂಘಟನೆಗಳ ಸದಸ್ಯರು ಭಾಗವಹಿಸಲಿದ್ದಾರೆ.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ, ತಾಲೂಕು ಅಧ್ಯಕ್ಷರಾದ ರುದ್ರೇಗೌಡರು, ಮಾನವ ಬಂಧುತ್ವ ವೇದಿಕೆಯ ಕರೂರು ಹನುಮಂತಪ್ಪ, ವೀರ ಗಣಾಚಾರಿ ಪಡೆಯ ಟಿ. ಎಂ. ಶಿವಮೂರ್ತಯ್ಯ, ವನಜಾ ಮಹಾಲಿಂಗಯ್ಯ, ರಾಷ್ಟ್ರೀಯ ಬಸವ ದಳದ ವೈ. ನಾರೇಶಪ್ಪ, ಹಾಗೂ ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಯುವ ಮುಖಂಡರಾದ ಲಿಂಗಾನಂದ ಕಂಬತ್ತಳ್ಳಿ ಮತ್ತಿತರರು ನೇತೃತ್ವ ವಹಿಸಲಿದ್ದಾರೆ.

ನಾವು ಈ ಪ್ರತಿಭಾಟನೆಯನ್ನು ಕನ್ನೇರಿ ಮಠದ ಆ ಸ್ವಾಮಿಗೆ ತಲುಪಬೇಕು. ಹೊರಗೆ ನಮ್ಮ ಭಾಗಕ್ಕೆ ಬಂದರೆ ನಿನಗೆ ಫಜೀತಿ ಮಾಡುವಾದಾಗಿ ಎಚ್ಚರಿಕೆ ನೀಡಬೇಕು.