ಕನ್ನೇರಿ ಸ್ವಾಮಿಯ ಭಾವಚಿತ್ರ ದಹಿಸಿ, ಚಪ್ಪಲಿಯೇಟು ನೀಡಿದ ರಾಷ್ಟ್ರೀಯ ಬಸವದಳ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಲಿಂಗಾಯತ ಪೂಜ್ಯರನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿರುವ ಕನ್ನೇರಿ ಸ್ವಾಮಿಯನ್ನು ತೀವ್ರವಾಗಿ ಖಂಡಿಸಿ ರಾಷ್ಟ್ರೀಯ ಬಸವದಳದ ಸದಸ್ಯರು ಅವರ ಭಾವಚಿತ್ರವನ್ನು ದಹಿಸಿ, ಚಪ್ಪಲಿಯಿಂದ ಹೊಡೆದು ಭಾನುವಾರ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಲಿಂಗಾಯತ ಧರ್ಮ ಮಹಾಸಭೆಯ ರಾಜ್ಯಾಧ್ಯಕ್ಷರಾದ ಈಶ್ವರ ಲಿಂಗಾಯತ ಅವರು ಮಾತನಾಡಿ, ಬಸವ ತತ್ವದ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡಿದರೆ ಲಿಂಗಾನಂದ ಸ್ವಾಮಿಜಿ, ಮಾತಾಜಿಯವರ ಆತ್ಮಗಳು ಹೋರಾಟಕ್ಕೆ ನಿಲ್ಲುತ್ತವೆ ಎಂದು ಹೇಳಿದರು.

ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಕೆ. ವೀರೇಶ ಅವರು ಮಾತನಾಡಿ, ಕನ್ನೇರಿ ಶ್ರೀಗಳು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರು ಆದಷ್ಟು ಬೇಗ ವೈದ್ಯರ ಭೇಟಿ ಮಾಡಿ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಕನ್ನೇರಿ ಮಠ ಲಿಂಗಾಯತ ಪರಂಪರೆಯ ಮಠ. ಮೂಲ ಕನ್ನೇರಿ ಶ್ರೀಗಳು ವಚನಕಾರರಾಗಿದ್ದರು. ಈಗಿನ ಕನ್ನೇರಿ ಶ್ರೀಗಳು ಮನಸ್ಸು ಮನುಸ್ಮೃತಿಮಯವಾಗಿದೆ ಎಂದು ಹೇಳಿದರು.

ಬಸವ ಕಲ್ಯಾಣ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ರವೀಂದ್ರ ಕೋಳಕೂರ ಮಾತನಾಡಿ, ಕನ್ನೇರಿ ಸ್ವಾಮಿ ಕ್ಷಮೆ ಕೆಳದಿದ್ದರೆ ಗಣಚಾರ ದಳದ ಪರಿಚಯ ಮಾಡಿಕೊಡುತ್ತೇವೆ, ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.

ಹೋರಾಟದಲ್ಲಿ ಭಾಗಿಯಾದ ಅನೇಕ ಯುವಕರು ಕನ್ನೇರಿ ಶ್ರೀಗಳ ಫೋಟೋಕ್ಕೆ ಪಾದರಕ್ಷೆಯಿಂದ ಹೊಡೆದು, ಅವರ ಫೋಟೋಗಳನ್ನು ಸುಟ್ಟುಹಾಕಿ ಆಕ್ರೋಶ ಹೊರಹಾಕಿದರು.

ಹೋದಡೆಯೆಲ್ಲ ಉಗ್ರ ಪ್ರತಿಭಟನೆ ನಡೆಸುವುದಾಗಿ ಕನ್ನೇರಿ ಶ್ರೀಗೆ ರಾಷ್ಟ್ರೀಯ ಬಸವದಳ ಎಚ್ಚರಿಕೆ ನೀಡಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
8 Comments
  • ರಾಷ್ಟ್ರೀಯ ಬಸವದಳದ ಎಲ್ಲಾ ಕಾರ್ಯಕರ್ತರಿಗೂ ಅನಂತ ಭಕ್ತಿಯ ಶರಣು ಶರಣಾರ್ಥಿಗಳು ಕನ್ನೆರಿ ನೀಚ ಸ್ವಾಮಿಯ ಭಾವಚಿತ್ರವನ್ನು ಸುಟ್ಟ ಹಾಕಿದ ತಮಗೆ ಮತ್ತೊಮ್ಮೆ ಧನ್ಯವಾದಗಳು

    • ಕನೇರಿ ಸ್ವಾಮಿ ಕಾವಿ ಹಾಕಲು ಯೋಗ್ಯೆತೆಇಲಾ ಇವರು ಆ ಲಿಂಗಾಯತ ಮಠಕೆ ಯೋಗ್ಯರಲ ಭಕ್ತರು ಅವರನ್ನು ಮಠದಿಂದ.ಹೋರಹಾಕಬೇಕು

  • ಅವರು ಮಾಡಿದ ತಪ್ಪನ್ನು ನೀವು ಸಹ ಮಾಡುತ್ತಿದ್ದೀರಿ

  • ಇದು ಬಸವ ಸಂಸ್ಕೃತಿಯೇ?. ಲಿಂಗಾಯತರು ಆತ್ಮ ಶೋಧನೆ ಮಾಡಿ ಕೋಬೇಕು

  • ಲಿಂಗಾಯತ ಮಠಗಳಲ್ಲಿ ಸ್ವಾಮೀಜಿಗಳಾಗಿ ಈ‌ಕನ್ಹೇರಿ ನಂತಹ ರೌಡಿ ಭಾಷೆಯ ಸ್ವಾಮಿ ಬಂದಿದ್ದು ದುರಂತ, ಈತನಿಗೆ ರಾಷ್ರೀಯ ಬಸವದಳದ ಕಾರ್ಯಕರ್ತರು ಪ್ರತಿಭಟಿಸಿ ಗಾಣಾಚಾರ ಎತ್ತಿ ಹಿಡಿದಿದ್ದಾರೆ, ಈ ಕನ್ಹೇರಿ ಸ್ವಾಮಿ ಹೋದಲ್ಲೆಲ್ಲ ಪ್ರತಿಭಟನೆ ಮಾಡಬೇಕು, ಅವನು ಬೇಷರತ್ ಕ್ಷಮೆ ಕೇಳುವವರೆಗೆ ಪ್ರತಿಭಟನೆ ನಡೆಯುತ್ತಲೇ ಇರಲಿ.

  • ಇದು ತಪ್ಪು, a ಸ್ವಾಮಿ ಮಾಡಿದ ಅಂತ ನಾವು ಅತರ ಮಾಡುವುದು ತಪ್ಪು.
    ನಾವು ಬಸವಣ್ಣನವರ ಅನುಯಾಯಿಗಳು.
    ಈ ಸ್ವಾಮೀಜಿ ಮಾಡಿದ ಕರ್ಮ ಅನುಭವಿಸುತ್ತಾರೆ.

  • ಉಚ್ಚೆ ಕುಡಿಯಲು ಹೇಳುತ್ತಾನೆ ಈ ಸ್ವಾಮಿ, ಆಕಳ ಮೂತ್ರದಲ್ಲಿ ಅಮೃತ ಇರುತ್ತದೆ, ಇದರಲ್ಲಿ ಅನೇಕ ರೋಗಗುಣಕಾರಕ ಔಷದಿ ಇವೆಯಂದು ಹೇಳುತ್ತಾ ವಂಚಿಸುತ್ತಿದ್ದಾನೆ ನಾವು ಈ ಕುಂಕುಮ ಧಾರಿಗೆ ತಕ್ಕಪಾಠ ಮಾಡಬೇಕು.

Leave a Reply

Your email address will not be published. Required fields are marked *