ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧಿಪತಿಗಳು ಮತ್ತು ಲಿಂಗಾಯತ ಧರ್ಮದ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಮೋಹನ ಕುಮಾರ್ ಬಸವರಾಜ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕನ್ನೇರಿ ಶ್ರೀಗಳು ಲಿಂಗಾಯತ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿ, ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ ನಾಲಿಗೆ ಹರಿಬಿಟ್ಟಿದು ಅತ್ಯಂತ ನಾಚಿಕೆ ಹಾಗೂ ತಲೆತಗ್ಗಿಸುವಂತ ವಿಚಾರ ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ ಇದೇ ಶ್ರೀಗಳು ಲಿಂಗಾಯತರು ತಾಲಿಬಾನಿಗಳು ಅಂತ ಹೇಳಿದ್ರು, ಮತ್ತೆ ಇವಾಗ ನಾಲಿಗೆ ಹರಿಬಿಟ್ಟು ಲಿಂಗಾಯತ ಸ್ವಾಮಿಗಳಿಗೆ ಅಸಂವಿಧಾನಿಕ ಪದಗಳನ್ನು ಬಳಸಿ ಅವಮಾನಿಸಿದ್ದು ಅಕ್ಷ್ಯಮ್ಮ ಅಪರಾಧವಾಗಿದೆ.
ಇವರ ವರ್ತನೆಯನ್ನು ಎಲ್ಲಾ ಬಸವ ಅನುಯಾಯಿಗಳು ಖಂಡಿಸಲೇಬೇಕು ಮತ್ತು ಇವರ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸರಕಾರಕ್ಕೆ ಪತ್ರ ಬರೆಯುವ ಮುಖೇನ ಮೋಹನಕುಮಾರ ಒತ್ತಾಯಿಸಿದ್ದಾರೆ.