ದಾವಣಗೆರೆ
ಲಿಂಗಾಯತ ಮಠಾಧೀಶರು ಮತ್ತು ಬಸವ ಸಂಸ್ಕೃತಿ ಅಭಿಯಾನವನ್ನು ಅವಹೇಳನ ಮಾಡಿರುವ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಬಸವಪರ ಸಂಘಟನೆಗಳ ಸದಸ್ಯರು ಇಂದು ನಗರದ ಜಯದೇವ ವೃತ್ತದ ಬಳಿ ಪ್ರತಿಭಟನೆ ನಡೆಸಿದವು.

ಕನ್ನೇರಿ ಸ್ವಾಮಿಯ ಹಿಂದಿರುವ ಶಕ್ತಿಗಳು ಅವರ ಬಾಯಿಯಲ್ಲಿ ಈ ರೀತಿಯ ಹೇಳಿಕೆ ನೀಡಿಸಿವೆ. ಅವರಿಂದ ಕ್ಷಮೆ ಕೇಳಿಸಿ ಪ್ರಯೋಜನವಿಲ್ಲ. ಲಕ್ಷಾಂತರ ಜನ ಲಿಂಗಾಯತರು ಕನ್ನೇರಿ ಚಲೋ ಎಂದು ಹೋಗಿ ಅಲ್ಲಿ ಮಠದಿಂದ ಅವರನ್ನು ಉಚ್ಚಾಟಿಸುವಂತೆ ಮಾಡಬೇಕು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಛೇರಿಯವರೆಗೂ ಪ್ರತಿಭಟನಾಕಾರರು ಘೋಷಣೆ ಕೂಗುತ್ತ ಪಾದಯಾತ್ರೆಯಲ್ಲಿ ಸಾಗಿದರು. ಅಲ್ಲಿ ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
“ಕಾಡಸಿದ್ದೇಶ್ವರ ಸ್ವಾಮಿಯ ಮಾತಿನಿಂದ ಕೋಟ್ಯಂತರ ಲಿಂಗಾಯತರಿಗೆ ಅಪಮಾನವಾಗಿದ್ದು, ಇವರ ಮಾತು ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತಿವೆ. ಕೋಮುದ್ವೇಷ, ಸಾಮಾಜಿಕ ಶಾಂತಿಗೆ ಭಂಗ ತರುವಂತೆ ಮಾತನಾಡಿ ಕಾನೂನು ಸುವ್ಯವ̧ಸ್ಥೆಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇಂತಹ ಕಿಡಿಗೇಡಿಗಳಿಂದ ಸಮಾಜದ ಸಹಬಾಳ್ವೆ ಸೌಹಾರ್ದ, ಸಹೋದರತ್ವದ ಮೂಲದಂತಿರುವ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಈ ಕೃತ್ಯವು ದೇಶದ್ರೋಹಿ ಕೃತ್ಯಕ್ಕೆ ಸಮಾನವಾಗಿರುತ್ತದೆ.
ಲಿಂಗಾಯತ ಮಠಾಧೀಶರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಮಾಜಿಕ ಶಾಂತಿಗೆ ದಕ್ಕೆ ಉಂಟು ಮಾಡಿರುವ ಸ್ವಾಮಿಯ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ದೇಶದಿಂದ ಗಡಿಪಾರು
ಮಾಡಬೇಕು.

ಇವರ ಮೇಲೆ ಸೂಕ್ತ ಕ್ರಮ ಜರುಗಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದೆಂದು,” ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಕನ್ನೇರು ಶ್ರೀಗಳ ಮಾತುಗಳು ಸ್ತ್ರೀ ಕುಲಕ್ಕೆ ಮಾರಕವಾಗಿವೆ, ಹಾಗಾಗಿ ಅವರು ಕ್ಷಮೆಕೋರುವವರೆಗೂ ಹೋರಾಟ ಮಾಡುತ್ತೇವೆ ಎಂದು ಮಹಿಳಾ ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯ ನೇತೃತ್ವವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ, ಬಸವ ಬಳಗದ ಅಧ್ಯಕ್ಷರಾದ ಹುಚ್ಚಪ್ಪ ಮಾಸ್ತರ, ವೀಣಾ ಮಂಜುನಾಥ, ಶರಣತತ್ವ ಚಿಂತಕ ಹೆಚ್. ಎಂ. ಸೋಮಶೇಖರಪ್ಪ, ಶರಣ ಸಾಹಿತ್ಯ ಪರಿಷತ್ತಿನ ಭರಮಪ್ಪ ಮೈಸೂರು, ಸಿದ್ದೇಶಪ್ಪ, ಪರಮೇಶ್ವರಪ್ಪ ಸಿರಿಗೆರೆ, ಕಲಿವೀರ ಕಳ್ಳಿಮನೆ, ನಾಗರಾಜ ಕಕ್ಕರಗೊಳ್ಳ, ಜಾಗತಿಕ ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಪ್ರಭು ಕಲ್ಬುರ್ಗಿ, ಮಾನವ ಬಂಧುತ್ವ ವೇದಿಕೆಯ ಹನುಮಂತಪ್ಪ ಕರೂರು, ರೈತ ಮುಖಂಡರಾದ ಆವರಗೆರೆ ರುದ್ರಮುನಿ, ವೀರ ಗಣಾಚಾರಿ ಪಡೆಯ ಟಿ.ಎಂ. ಶಿವಮೂರ್ತಯ್ಯ, ಹಿರೆಮೆಗಳಗೆರೆ, ವನಜಾ ಮಹಾಲಿಂಗಯ್ಯ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಮಮತಾ ನಾಗರಾಜ, ಪೂರ್ಣಿಮಾ ಪ್ರಸನ್ನ, ಯುವ ಮುಖಂಡರಾದ ಲಿಂಗಾನಂದ ಕಂಬತ್ತಳ್ಳಿ, ಶಿವರಾಜ ಕಬ್ಬೂರು, ಅವಿನಾಶ ನವೀನ ಮಲ್ಲೇಶಪ್ಪ ಆಕಾಶ ಬಿ. ಎಂ. ಹೆಮ್ಮನಬೇತೂರು, ಸಂತೋಷ ಮೆಳ್ಳೆಕಟ್ಟೆ, ಶ್ರೀನಿವಾಸ ಮೆಳ್ಳೆಕಟ್ಟೆ, ಬಸವಲಿಂಗಪ್ಪ ಕಲ್ಪನಹಳ್ಳಿ ಸೇರಿದಂತೆ ಅನೇಕ ಬಸವಾಭಿಮಾನಿಗಳು ವಹಿಸಿ ಪಾಲ್ಗೊಂಡಿದ್ದರು.
ನಿಮ್ಮ ಈ ಕಾರ್ಯ ಶ್ಲಾಘನೀಯ.
ಉತ್ತಮ ಕೆಲಸ , ಇದೇ ರೀತಿ ಕಾರ್ನಾಟಕದಾದ್ಯಂತ ಈ ದುರಹಂಕಾರಿ ದುರುಳನ ವಿರುದ್ಧ ಆಂದೋಲನಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಪೋಚಮ್ಮ ಸ್ವಾಮಿಗೆ ಬುದ್ಧಿ ಕಲಿಸಬೇಕು.