ಸಿಂಧನೂರು
ಕನ್ನೇರಿ ಸ್ವಾಮಿ ಹೇಳಿಕೆ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಹಲವಾರು ಬಸವ ಮತ್ತು ಪ್ರಗತಿಪರ ಸಂಘಟನೆಗಳ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.
ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ರಾಷ್ಟ್ರೀಯ ಬಸವದಳ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ತಹಶೀಲ್ದಾರ ಕಾರ್ಯಾಲಯದವರೆಗೆ ಕನ್ನೆರಿ ಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗತ್ತಾ ಮೆರವಣಿಗೆಯಲ್ಲಿ ಸಾಗಿದರು.

ತಹಶೀಲ್ದಾರ ಕಾರ್ಯಾಲಯದ ಮುಂದೆ ನಡೆದ ಸಭೆಯಲ್ಲಿ, ಪ್ರಗತಿಪರ ಹೋರಾಟಗಾರ ಚಂದ್ರಶೇಖರ್ ಗೊರೆಬಾಳ ಅವರು ಮಾತನಾಡುತ್ತಾ, ನಾಡಿನ ಅಲ್ಪಸಂಖ್ಯಾತರನ್ನು ಹಾಗೂ ದುರ್ಬಲರನ್ನು ಅಪ್ಪಿಕೊಂಡ ತತ್ವ ಬಸವತತ್ವ. ಸಮಾನತೆಯನ್ನು ಬಿತ್ತರಿಸುವವರ ಮೇಲೆ ಆಕ್ರಮಣಗಳು ನಡೆಯುತ್ತಲೇ ಬಂದಿವೆ. ಇಂತಹ ಆಕ್ರಮಗಳ ಹಿಂದೆ ಯಾರಿದ್ದಾರೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಎಂ. ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಶಕ್ತಿಗಳು ಈ ಸ್ವಾಮಿಯ ಹಿಂದೆ ಕಾಣದ ಕೈಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ನಾವು ತಿಳಿಯಬೇಕಾಗಿದೆ.
ಹಿಂದುತ್ವ ಎಂದರೆ ಅಸಮಾನತೆ. ಸಮಾನತೆ ಎಂದರೆ ಬಸವ ತತ್ವ. ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ ಅದಕ್ಕೆ ಅದರದೇ ಆದ ವೈಶಿಷ್ಟ್ಯಗಳಿವೆ ಎಂದು ನುಡಿದರು.
ರಾಯಚೂರು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಪಿ. ರುದ್ರಪ್ಪನವರು, ಲಿಂಗಾಯತ ಎನ್ನುವುದು ಸಿದ್ಧಾಂತ, ಈ ಸಿದ್ಧಾಂತದ ವಿರುದ್ಧ ಇಂತಹ ಒಂದು ಹುಚ್ಚುನಾಯಿಯನ್ನು ಒದರಲು ಬಿಟ್ಟಿದ್ದಾರೆ. ನಮ್ಮ ಲಿಂಗಾಯತ ಮಠಾಧೀಶರು ವೈಚಾರಿಕ ಪ್ರಜ್ಞೆ ಉಳ್ಳವರು, ಈ ವೈಚಾರಿಕ ಪ್ರಜ್ಞೆಯನ್ನು ಹತ್ತಿಕ್ಕಲು ಇಂತಹ ದುಷ್ಟ ಶಕ್ತಿಗಳನ್ನು ಕೆಲವರು ಹುಟ್ಟು ಹಾಕಿದ್ದಾರೆ. ನಮ್ಮ ಆಸ್ಮಿತೆ ಹಾಗೂ ಅಸ್ತಿತ್ವದ ಬಗ್ಗೆ ಜಾಗೃತರಾಗಿರಬೇಕೆಂದು ಕರೆ ನೀಡಿದರು.
ರಾಯಚೂರಿನಿಂದ ಆಗಮಿಸಿದ ಬಸವ ಕೇಂದ್ರದ ಅರವಿ ನಾಗನಗೌಡ್ರು ಮಾತನಾಡುತ್ತ, ಬಸವ ತತ್ವ ಶ್ರಮಿಕರ ಒಕ್ಕೂಟದ ಸೈದ್ದಾಂತಿಕ ಕಲ್ಪನೆಯಾಗಿದೆ. ನಾವು ಸಿದ್ದರಾಮಯ್ಯನವರನ್ನು ಸನ್ಮಾನಿಸಿರುವುದು ಇಂತಹ ಅಯೋಗ್ಯ ಸ್ವಾಮಿಗಳು ಸಹಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯನವರು ಬಸವಣ್ಣನವರನ್ನು ಜಗತ್ತಿಗೆ ಹಾಗೂ ಇಡೀ ಮನುಕುಲಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ನಾವು ಅದಕ್ಕಾಗಿ ಅವರನ್ನು ಗೌರವಿಸಿದ್ದೇವೆ.

ಇದನ್ನು ಸಹಿಸಿಕೊಳ್ಳುವ ಶಕ್ತಿ ಇಂತಹ ಸ್ವಾಮಿಗಳಿಗೆ ಆಗುತ್ತಿಲ್ಲ. ಸ್ವಾಮಿ ಬಳಸಿದ ಅಸಂವಿಧಾನಿಕ ಪದ ಕ್ರಿಮಿನಲ್ ಮೊಕದ್ದಮೆಯಾಗುತ್ತದೆ. ನಾವು ಇಂತಹ ಗೊಡ್ಡು ಹೇಳಿಕೆಗಳಿಗೆ ಹಾಗೂ ಹೆದರಿಕೆಗಳಿಗೆ ಬಗ್ಗದೆ ಮುನ್ನಡೆಯಬೇಕು ಎಂದು ಕರೆ ನೀಡಿದರು.
ನಿರುಪಾದಪ್ಪ ಗುಡಿಹಾಳ ವಕೀಲರು ಮಾತನಾಡುತ್ತಾ, ಬಸವ ತತ್ವದ ಗಂಧ ಗಾಳಿ ಗೊತ್ತಿಲ್ಲದ ಅವಿವೇಕಿ ಸ್ವಾಮಿ ಈ ಕನ್ನೇರಿ ಸ್ವಾಮಿ. ಇವನು ಸಾವಯವ ಕೃಷಿಯ ಹೆಸರಿನಲ್ಲಿ ವ್ಯಾಪಾರ ಮಾಡಿಕೊಂಡಿರುವ ಕಾವಿಧಾರಿ. ಕೃಷಿಯ ವಿಚಾರವಾಗಿಯೂ ಏನೂ ಗೊತ್ತಿಲ್ಲ. ನಮ್ಮ ಘನಮಠ ಶಿವಯೋಗಿಗಳು ಕೃಷಿ ಪ್ರದೀಪಿಕೆ ಬರೆದು ಕೃಷಿ ಋಷಿಗಳು ಎನಿಸಿಕೊಂಡಿದ್ದಾರೆ.
ಈ ಕನ್ನೇರಿ ಸ್ವಾಮಿ ನಕಲಿ ಕೃಷಿ ಋಷಿ. ಇವನದು ಮುಗ್ಧ ರೈತರ ಮುಂದೆ ಜಂಬ ಕೊಚ್ಚಿಕೊಳ್ಳುವುದೇ ಉದ್ಯೋಗ. ಇಂತಹ ಸ್ವಾಮಿಗಳು ದೇಶಕ್ಕೆ ಹಾಗೂ ಸಮಾಜಕ್ಕೆ ಬಹುದೊಡ್ಡ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವ ಕೇಂದ್ರದ ಚಂದ್ರೇಗೌಡ ಹರೇಟನೂರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಓದಿದರು. ಸಂಘಟನೆಗಳ ಪ್ರಮುಖರು ಮಾನ್ಯ ತಹಶೀಲ್ದಾರರಿಗೆ ಮನವಿ ಪತ್ರವನ್ನು ನೀಡಿದರು.
ಪ್ರತಿಭಟನೆಯಲ್ಲಿ ಬಸವ ಕೇಂದ್ರದ ಹಿರಿಯರಾದ ನಾಗಭೂಷಣ ನವಲಿ, ಕರೇಗೌಡ ಕುರಕುಂದ, ರಾಯಚೂರು ಹಾಗೂ ಮಾನ್ವಿ ಪಟ್ಟಣದಿಂದ ಬಂದ ಬಸವ ಅನುಯಾಯಿಗಳು ಹಾಗೂ ನೂರಾರು ಸ್ಥಳೀಯ ಬಸವ ಭಕ್ತರು ಪಾಲ್ಗೊಂಡಿದ್ದರು.
ಈ ಕನ್ನೇರಿ ಮಠದ ಸ್ವಾಮಿಯ ಹಿಂದೆ ಸಂಘ ಪರಿವಾರದ RSS ವಿಶ್ವಾಹಿಂದು ಪರಿಷತ್ತು ಕೆಲಸ ಮಾಡುತ್ತಿದೆ. ಇವರೆಲ್ಲ ಮಾನವ ದ್ವೇಷಿ ಮನುವಾದಿ ಜಾತಿ ಹುಳುಗಳು. ಈ ದುಷ್ಟರ ಕೂಟವನ್ನು ನಾವು ಎಚ್ಚರಿಕೆಯನ್ನು ಕೊಡಬೇಕು. ಅವರು ಎಂದೂ ಬಾಲ ಬಿಚ್ಚಾದಂತೆ ನೋಡಿಕೊಳ್ಳಬೇಕು.
ಕನ್ನೆರಿ ಶ್ರೀಗಳು ಒಬ್ಬ ಒಳ್ಳೆಯ ಶ್ರೀಗಳು ಸಾದರು ಮತ್ತು ಸಂತರು ಅವರ ಒಳ್ಳೆಯತನ ಮಾತೇ ಮಾದೇವಿಯ ಹಾಗೂ ಮಾತೇ ಮಾದೇವಿಯ ಸೃಷ್ಟಿ ಮಾಡಿದ ಸ್ವಾಮೀಜಿಗಳಲ್ಲಿ ಮತ್ತು ಅವರ ಅಂದ ಭಕ್ತರಲ್ಲಿ ಕನ್ನೆರಿ ಶ್ರೀಗಳ ಗುಣಗಳು ಮತ್ತು ಅವರ ನಡೆ ನುಡಿ ಮಾತು ಅವುಗಳನ್ನು ಮಾತೆ ಮಾದೇವಿಯ ಸೃಷ್ಟಿ ಮಾಡಿದ ಸಾಧು ಸ್ವಾಮಿ ಜಿಗಳಲ್ಲಿ ಕನ್ನೆರಿ ಶ್ರೀಗಳ ಒಂದೇ ಒಂದು ಪರ್ಸೆಂಟು ಇವರಲ್ಲಿ ಇಲ್ಲವೇ ಇಲ್ಲಇಲ್ಲವೇ ಇಲ್ಲ ಬಾಯಿಗೆ ಬಂದಂತೆ ಬೊಗಳುವುದು ಬಿಟ್ಟುಬಿಡಿ ನಿಮಗೆ ನಾಚಿಕೆ ಶರ್ಮ ಅನ್ನೋದು ತಲೆಗೆ ಸುತ್ತಿದಿರಿ ಕನ್ನೆರಿ ಶ್ರೀಗಳನ್ನು ಏನು ಮಾಡೋದು ನಿಮ್ಮಿಂದ ಆಗುವುದಿಲ್ಲ ನೀವು ಉಂಡ ಮನೆಯನ್ನು ಜಂತಿ ಎಣಿಸುವ ಜನ ಇದು ಒಂದು ನಿಮ್ಮ ಗುಣ ಮಾತೆ ಮಾದೇವಿ ಬಿದ್ದಿದ ಬೀಜವನ್ನು ಈ ಗುಣಗಳನ್ನು ನೀವು ನಿಮ್ಮ ತೆರೆಯಲ್ಲಿ ತುಂಬಿಕೊಂಡು ಮನಬಂದಂತೆ ಮಾತಾಡುತ್ತಾ ನಡೆಯುತ್ತಿದ್ದೀರಿ ಮೊದಲು ನಿಮ್ಮ ಬೆನ್ನು ನೀವೇ ನೋಡಿಕೊಳ್ಳಿ ಆಮೇಲೆ ಮತ್ತೊಂದು ಧರ್ಮದ ವಿಚಾರವನ್ನು ಹೇಳುವಿರಿ ಮೂರ್ಖರೇ