ಕನ್ನೇರಿ ಸ್ವಾಮಿ ಕ್ಷಮೆ ಕೇಳಬೇಕು: ಗಂಗಾ ಮಾತಾಜಿ

ಕೂಡಲಸಂಗಮ

ರಾಜ್ಯದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಡೆದ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನಿಂದ ಹತಾಶಗೊಂಡ ಕೊಲ್ಲಾಪೂರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧಿಪತಿಗಳಿಗೆ **ಮಕ್ಕಳು, **ನಿಂದ ಹೊಡೆಯಬೇಕು, ಮುಖ್ಯಮಂತ್ರಿ ಕೃಪಾಪೋಷಿತ ನಾಟಕತಂಡ ಎಂದು ಅವಹೇಳನ ಮಾಡಿರುವುದು ಖಂಡನೀಯ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ಮಂಗಳವಾರ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು ಬಳಸಿದ ಪದಗಳು ಅಸಾಂವಿಧಾನಿಕವಾಗಿದ್ದು, ಅವರ ಪದಗಳೇ ಅವರ ಯೋಗ್ಯತೆಯನ್ನು ತಿಳಿಸುವುದು.

ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳೇ ಮಠದ ಸಂಸ್ಕೃತಿಯನ್ನು ಬಿಟ್ಟು ರಾಜಕೀಯ ಪಕ್ಷದ ಗುಲಾಮರಾಗಿ ಲಿಂಗಾಯತ ಮಠಾಧೀಶರನ್ನು ಟೀಕಿಸಿರುವುದು ಸರಿಯಲ್ಲ.

ಲಿಂಗಾಯತ ಮಠಾಧೀಶರು ಯಾವ ರಾಜಕೀಯ ಪಕ್ಷದ ಕೃಪಾಪೋಷಣೆಯಲ್ಲಿ ಇಲ್ಲ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವವರೆಗೂ ಹೋರಾಟ ನಿರಂತರವಾಗಿರುವುದು.

ಶ್ರೀಗಳು ಕೂಡಲೇ ಕ್ಷಮೆ ಕೆಳಬೇಕು ಇಲ್ಲವಾದರೆ ಲಿಂಗಾಯತ ಭಕ್ತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *