ಕನ್ನೇರಿ ಸ್ವಾಮಿ ವಿರುದ್ಧ ಬೆಳಗಾವಿಯಲ್ಲಿ ಅಕ್ಟೊಬರ್ 17 ಬೃಹತ್ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ, ಬಸವಪರ ಸಂಘಟನೆಗಳ ಒಕ್ಕೂಟದಿಂದ, 17ರ ಶುಕ್ರವಾರ ಮುಂಜಾನೆ 11ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ನಿರ್ಧಾರ ಮಾಡಲಾಗಿದೆ.

ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಕಚೇರಿಯಲ್ಲಿಂದು ಸೇರಿದ್ದ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಸಂಘಟನೆ, ರಾಷ್ಟ್ರೀಯ ಬಸವದಳ, ಲಿಂಗಾಯತ ಸೇವಾ ಸಮಿತಿ, ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಮತ್ತಿತರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ತಿಳಿಸಿದ್ದಾರೆ.

ಈಚೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಬಸವಪರ ಸಂಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಸಂಸ್ಕೃತಿ ಅಭಿಯಾನವನ್ನು ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಟೀಕಿಸುತ್ತಾ, ಅದರಲ್ಲಿ ಭಾಗವಹಿಸಿದ್ದ 500ಕ್ಕೂ ಅಧಿಕ ಮಠಾಧಿಪತಿಗಳನ್ನು ಅವಾಚ್ಯ, ಅಸಂವಿಧಾನಿಕ ಶಬ್ದಗಳಿಂದ ಅತ್ಯಂತ ಹೇಯವಾಗಿ ನಿಂದಿಸಿದ್ದನ್ನು ಖಂಡಿಸಿ, ಪ್ರತಿಭಟಿಸಲು‌ ನಡೆದ ಬಸವಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಂದು ನೂರಾರು ಸಂಖ್ಯೆಯಲ್ಲಿ ನಡೆಯುವ ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಯ ಸಮಸ್ತ ಬಸವಪರ, ಲಿಂಗಾಯತಪರ ಸಂಘಟನೆಗಳು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಒಕ್ಕೂಟದ ಪರವಾಗಿ ಸಂಘಟನೆಗಳ ಪದಾಧಿಕಾರಿಗಳು ಕರೆ ನೀಡಿದ್ದಾರೆ.

ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಈರಣ್ಣ ದೇಯಣ್ಣವರ, ಮುರುಗೇಶ ಶಿವಪೂಜಿ, ಸತೀಶ ಚೌಗಲಾ, ಪ್ರವೀಣ ಚಿಕಲಿ, ಮೋಹನ ಗುಂಡ್ಲೂರ, ಸುರೇಶ ನರಗುಂದ, ಶೋಭಾ ಶಿವಳ್ಳಿ, ರಾಜಶ್ರೀ ದೇಯಣ್ಣವರ, ನಾನಾಗೌಡ ಬಿರಾದಾರ, ಶಿವಾನಂದ ವಾಗರವಾಡಿ, ಬಸವರಾಜ ಮಿಂಡೊಳ್ಳಿ, ಈರಣ್ಣ ಚಿನುಗುಡಿ, ಕೆಂಪಣ್ಣ ರಾಮಾಪುರಿ, ಬಿ. ಎಸ್. ಮತ್ತಿಕೊಪ್ಪ ಮತ್ತು ಬಸವರಾಜ ಜಮಖಂಡಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
Leave a comment

Leave a Reply

Your email address will not be published. Required fields are marked *