ಕನ್ನೇರಿ ಸ್ವಾಮಿಗೆ ಕಾಲವೇ ಉತ್ತರ ಕೊಡಲಿದೆ: ಡಾ. ಅಲ್ಲಮಪ್ರಭು ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಕನಿಷ್ಟ ಮಾನವೀಯತೆ ಇರಲಾರದ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮಿಗೆ ಕಾಲವೇ ಉತ್ತರ ಕೊಡುವ ಸಮಯ ಬಂದಿದೆ ಎಂದು ನಾಗನೂರ-ಬೆಳಗಾವಿ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ಹೇಳಿದ್ದಾರೆ.

ಬಸವ ಸಂಸ್ಕೃತಿ ಅಭಿಯಾನದ ಮೂಲಕ ಸಮಾಜದ ಜಾಗೃತಿಗಾಗಿ ಹಗಲಿರುಳು ಶ್ರಮಿಸಿದ ಮಠಾಧೀಶರ ಕುರಿತು ಅಸಾಂವಿಧಾನಿಕ ಶಬ್ದಗಳನ್ನು ಬಳಸಿ ತನ್ನ ವ್ಯಕ್ತಿತ್ವವನ್ನು ತೋರಿಸಿಕೊಂಡ ಇಂತಹ ವ್ಯಕ್ತಿಯ ಕುರಿತು ಸಮಾಜ ಬಾಂಧವರು ಜಾಗೃತರಾಗಿರಬೇಕು.

ದ್ವೇಷ ತನ್ನನ್ನೆ ಹಾಳು ಮಾಡುತ್ತದೆ ಎಂಬ ಕಲ್ಪನೆ ಇರಲಾರದ ಈ ವ್ಯಕ್ತಿಯು ಪ್ರತಿ ಸಂದರ್ಭದಲ್ಲೂ ಮಠಾಧೀಶರನ್ನು ತೆಗಳುವ ಭರದಲ್ಲಿ ತನ್ನ ಸಂಸ್ಕೃತಿ, ಸಂಸ್ಕಾರ ಎಂತಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ.

ದೇವರ ಕುರಿತಾಗಿ, ದೇವಸ್ಥಾನಗಳ ಕುರಿತಾಗಿ, ಭಾರತೀಯ ಸಂಸ್ಕೃತಿಯ ಕುರಿತಾಗಿ ಅಭಿಯಾನದಲ್ಲಿ ಯಾವುದೇ ಮಠಾಧೀಶರು ಏನು ಮಾತನಾಡಿರದೆ ಇದ್ದರು, ಅವರೆಲ್ಲ ದೆವಾಲಯಗಳ ವಿರೋಧಿಗಳು, ಭಾರತೀಯ ಸಂಸ್ಕೃತಿಯ ವಿರೋಧಿಗಳು ಎಂಬ ಹಸಿಸುಳ್ಳನ್ನು ಹೇಳಿ ತನ್ನ ವ್ಯಕ್ತಿತ್ವ ಅನಾವರಣ ಮಾಡಿಕೊಂಡಿದ್ದಾನೆ.

ಬಸವಾದಿ ಶರಣರ ವಿಚಾರಧಾರೆಗಳನ್ನು ಆಚರಣೆಯಲ್ಲಿ ತರುವ ಹಾಗು ಪ್ರಸಾರ ಮಾಡುವುದಷ್ಟೆ ನಮ್ಮ ಕಾಯಕವಾಗಿದೆ.

ಸುಳ್ಳು ಹೇಳಿದ ಇಂತಹ ಸಮಾಜಘಾತುಕ, ಕೀಳು ನಾಲಿಗೆಯ ವ್ಯಕ್ತಿಗಳಿಂದ ಸಮಾಜ ಬಾಂಧವರು ಎಚ್ಚರಿಕೆಯಿಂದ ಇರಬೇಕೆಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
1 Comment
  • ಇಂತಹ ಕುತ್ಸಿತ ಮನೋಸ್ಥಿತಿಯ ಕಾವಿಧಾರಿ ಸ್ವಾಮಿ ಈ ರೀತಿಯಲ್ಲಿ ಮಾತನಾಡುವದು ಇದು ಕೇವಲ ಅವರ ಹೇಳಿಕೆಯಾಗಿಲ್ಲ. ಅದರ ಹಿಂದಿನ ಮನುವಾದಿ RSS ಕೆಲಸ ಮಾಡಿರುತ್ತದೆ. ಅವರ ಎಂಜಲಿಗೆ ಬಾಯಿಚಾಚಿ ಈ ರೀತಿಯಾಗಿ ಬೊಗಳುತ್ತಾರೆ. ಇವರಿಗೆ ತಕ್ಕ ಪಾಠಕಲಿಸಬೇಕು.

Leave a Reply

Your email address will not be published. Required fields are marked *