ವಿಜಯಪುರ
ಲಿಂಗಾಯತ ಮಠಾಧಿಪತಿಗಳನ್ನು ನಿಂದಿಸಿ ಬಸವಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿರುವ ಕನ್ನೇರಿ ಸ್ವಾಮಿಗೆ ಇಂದು ಚಪ್ಪಲಿ ಭಾಗ್ಯ ದೊರೆಯಿತು.
ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಭಟನೆಕಾರರು ಮಠಾಧೀಶರ ಮೇಲೆ ಅಸಂವಿಧಾನಾತ್ಮಕ ಹೇಳಿಕೆ ನೀಡಿರುವ ಕನ್ನೇರಿ ಸ್ವಾಮಿಯನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಚಪ್ಪಲಿ ಸೇವೆ ನಾಡಿದರು.
ಪ್ರತಿಭಟನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್, ಬಸವಾದಿ ಶರಣರಿಗೆ ಜಯಘೋಷಗಳನ್ನು ಕೂಗಲಾಯಿತು.
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಬೂಟು ಎಸೆದ ಪ್ರಕರಣವನ್ನು ಖಂಡಿಸಲು ಇಂದು ವಿಜಯಪುರದಲ್ಲಿ ಬಂದ್ ಆಚರಿಸಲಾಗುತ್ತಿದೆ.
ದಲಿತ, ಅಹಿಂದ ಮತ್ತು ಲಿಂಗಾಯತ ಗುಂಪುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.