ಬಸವನಬಾಗೇವಾಡಿ
ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರು, ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ನೀಡಿದ ಅವಮಾನಕರ ಹೇಳಿಕೆ ಖಂಡಿಸಿ, ಬಸವ ಜನ್ಮಸ್ಥಳದಲ್ಲಿ ವಿವಿಧ ಬಸವಪರ ಸಂಘಟನೆಗಳು ಹಾಗೂ ಬಸವಭಕ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನೇರಿ ಸ್ವಾಮಿಯ ಮೇಲೆ ಸೂಕ್ತ ಕಾನೂನ ಕ್ರಮ ಜರುಗುವಂತೆ ಆಗ್ರಹಿಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವಿರಕ್ತಮಠದಲ್ಲಿ ಜಮಾಯಿಸಿದ ಬಸವಭಕ್ತರು ಅಲ್ಲಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಅಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಮಸಬಿನಾಳದ ಸಿದ್ರಾಮ ಸ್ವಾಮೀಜಿ, ಬಸವ ಸೈನ್ಯದ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಮಾತನಾಡುತ್ತ, ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡುವ ಮೂಲಕ ಅಪಾರ ಬಸವ ಭಕ್ತರ ಬಹುದಿನದ ಕನಸನ್ನು ನನಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಎಲ್ಲ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಬಸವ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ಅಭಿಯಾನ ಮಾಡಲಾಗಿದೆ.
ಆದರೆ ಬಸವ ವಿರೋಧಿಗಳಿಗೆ ಇದೆಲ್ಲವನ್ನು ಸಹಿಸಲಾಗದೆ ಮಠಾಧೀಶರ ಒಕ್ಕೂಟದ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಹಾಗೆ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರ ಬಗ್ಗೆ ತೀರಾ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ನೋವನ್ನುಂಟು ಮಾಡಿದ್ದಾರೆ.
ಕೂಡಲೇ ಉನ್ನೇರಿ ಸ್ವಾಮೀಜಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಅವರು ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಲ.ರು. ಗೊಳಸಂಗಿ, ಸಂಗಮೇಶ ಓಲೇಕಾರ, ಎಫ್.ಡಿ. ಮೇಟಿ, ವೀರಣ್ಢ ಮರ್ತೂರ, ಎಸ್.ಎಸ್. ಜಳಕಿ, ವಿವೇಕಾನಂದ ಕಲ್ಯಾಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಸಿ.ಎಲ್. ಮುರಾಳ, ಮಹಾಂತೇಶ ಮಡಿಕೇಶ್ವರ, ಆರ್.ಜೆ. ಅಳ್ಳಗಿ, ಎಚ್.ಎಸ್. ಬಿರಾದಾರ, ಶೇಖರ ಗೊಳಸಂಗಿ, ಪ್ರಶಾಂತ ಮುಂಜಾನೆ, ಎಸ್.ಕೆ. ಸೋಮನಕಟ್ಟಿ, ಸಂಕನಗೌಡ ಪಾಟೀಲ, ಎಸ್.ಎ. ದೇಗಿನಾಳ, ಬಸವರಾಜ ಹಾರಿವಾಳ, ಮಲ್ಲಿಕಾರ್ಜುನ ಹಡಪದ, ಬಸವರಾಜ ಏವೂರ, ಬಸವರಾಜ ಗೊಳಸಂಗಿ, ಶೇಖರಗೌಡ ಪಾಟೀಲ, ಕಸ್ತೂರಿ ಕಪ್ಪಣ್ಣನವರ, ಬಸಮ್ಮ ಪಡಶೆಟ್ಟಿ, ಶೋಬಾ ರೇವಡಕರ, ಸಾವಿತ್ರಿ ಅರಸನಾಳ, ಯಮನಕ್ಕ ಸಜ್ಜನ, ಕಮಲಾ ಸಜ್ಜನ, ಶಾಂತಾ ಬಸರಕೋಡ, ಯಮನಕ್ಕ ಅಂಬಳನೂರ, ಸಂತೋಷ ನಿಡಗುಂದಿ, ರವಿ ರಾಠೋಡ, ಶ್ರೀಕಾಂತ ಕೊಟ್ರಶೆಟ್ಟಿ, ನಾಗಪ್ಪ ಬಶೆಟ್ಟಿ, ಪ್ರವೀಣ ಪೂಜಾರಿ, ಪ್ರಭಾಕರ ಖೇಡದ, ಮುರಗೆಪ್ಪ ಚಿಂಚೂಳಿ ಸೇರಿದಂತೆ ಅನೇಕರು ಹೋರಾಟದ ನೇತೃತ್ವ ವಹಿಸಿದ್ದರು. ಬಸವಪರ ಸಂಘಟನೆಗಳ ನೂರಾರು ಸದಸ್ಯರು ಭಾಗವಹಿಸಿದ್ದರು.