ಬೆಂಗಳೂರು
“‘ಖಾವಿ ಬಟ್ಟೆ ಹಾಕಿಕೊಂಡ ನನ್ನ ಬಾಯಿಂದ ಇಂತಹ ಶಬ್ದ ಬರಬಾರದಿತ್ತು’ ಎಂದು ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನಾಡಿನ ಜನರಲ್ಲಿ ಕ್ಷಮೆಯಾಚಿಸಬೇಕು. ನಮಗೆ ಅವರ ಕ್ಷಮೆ ಬೇಕಾಗಿಲ್ಲ,” ಎಂದು ಹಂದಿಗುಂದದ ಪೂಜ್ಯ ಶಿವಾನಂದ ಶ್ರೀಗಳು ಶುಕ್ರವಾರ ಹೇಳಿದರು.
ನಗರದ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಪರವಾಗಿ ಶಿವಾನಂದ ಶ್ರೀಗಳು ಮಾತನಾಡಿದರು.
“ನೆನ್ನೆ ಹೈಕೋರ್ಟ್ ಕೂಡ ಜನ ಸಾಮಾನ್ಯರೂ ಬಳಸದ ಕೀಳು ಭಾಷೆಯನ್ನು ಕನ್ನೇರಿ ಸ್ವಾಮೀಜಿ ಬಳಸಿದ್ದಾರೆ ಎಂದು ಹೇಳಿದೆ. ನಾವೇ ಈ ರೀತಿ ಮಾತನಾಡಿದರೆ ಜನ ಪೂಜ್ಯರೆಂದು ನಮಗೆ ಯಾಕೆ ಕೈ ಮುಗಿಯಬೇಕು. ಇಂತಹ ಕೀಳು ಮಟ್ಟಕ್ಕೆ ಸ್ವಾಮಿಗಳು ಇಳಿಯುತ್ತಾರಾ, ಇಂತಹ ಭಾಷೆ ಮಠಾಧಿಪತಿಗಳು ಬಳಸುತ್ತಾರಾ ಎಂದು ಮಠದ ಭಕ್ತರಿಗೆ ಆಘಾತವಾಗಿದೆ.
“ನಮ್ಮ ವಿಚಾರ ಒಪ್ಪಿಕೊಳ್ಳಬೇಕೆಂಬ ನಿಯಮವಿಲ್ಲ. ನಾವು ಮಾಡಿದ್ದು ತಪ್ಪೆನಿಸಿದರೆ ಇನ್ನೊಂದು ಅಭಿಯಾನ ಮಾಡಲಿ. ಆದರೆ ಈ ರೀತಿಯ ಭಾಷೆಯಿಂದ ಆಘಾತವಾಗಿದೆ.
ಸಿದ್ದೇಶ್ವರ ಶ್ರೀಗಳ ಗರಡಿಯಲ್ಲಿ ಬೆಳೆದಿರುವ ಕನ್ನೇರಿ ಸ್ವಾಮೀಜಿ ಸಿದ್ದೇಶ್ವರ ಶ್ರೀಗಳಿಗೂ ದ್ರೋಹ ಮಾಡಿದ್ದಾರೆ,” ಎಂದು ಶಿವಾನಂದ ಶ್ರೀಗಳು ಹೇಳಿದರು.
ಮುಂದುವರೆದು “ಕನ್ನೇರಿ ಶ್ರೀಗಳು ಅಭಿಯಾನದಲ್ಲಿ ನಾವು ಮದ್ಯ ಕುಡಿಯುವಂತೆ, ಮಾಂಸ ತಿನ್ನುವಂತೆ ಪ್ರಚೋದಿಸಿದ್ದೇವೆ ಎಂದು ಆಪಾದನೆ ಮಾಡಿದ್ದಾರೆ. ಇದು ಸುಳ್ಳು. ಯೂಟ್ಯೂಬ್ ನಲ್ಲಿ ಅಭಿಯಾನದ ಸಂಪೂರ್ಣ ಲೈವ್ ರೆಕಾರ್ಡಿಂಗ್ ಇದೆ. ಅದನ್ನು ಯಾರೂ ಬೇಕಾದರೂ ಪರಿಶೀಲಿಸಬಹುದು,” ಎಂದು ಹೇಳಿದರು.
ಕನ್ನೇರಿ ಸ್ವಾಮಿಯ ಬೆಂಬಲಕ್ಕೆ ನಿಂತಿರುವ ಕೆಲ ರಾಜಕಾರಣಿಗಳ ಬಗ್ಗೆಯೂ ಮಾತನಾಡಿದರು.
“ಕೆಲವು ಬಿಜೆಪಿ ನಾಯಕರು ಕನ್ನೇರಿ ಶ್ರೀಗಳ ಮೇಲಿನ ನಿರ್ಬಂಧ ವಿರೋಧಿಸುತ್ತಿದ್ದಾರೆ. ಆದರೆ ಮಠಾಧೀಶರ ಬಗ್ಗೆ ಅವರು ಬಳಸಿರುವ ಭಾಷೆಯ ಬಗ್ಗೆ ಅಪ್ಪಿತಪ್ಪಿಯೂ ಮಾತನಾಡುತ್ತಿಲ್ಲ. ಇಂತಹ ನಡೆಯನ್ನೂ ಸಮರ್ಥಿಸಿಕೊಳ್ಳುವುದು ಭಾರತ ಸಂಸ್ಕೃತಿಯೇ?” ಎಂದು ಕೇಳಿದರು.
ಇದೇ ಮೊದಲ ಬಾರಿಯಲ್ಲ, ಈ ಮುಂಚೆಯೂ ನಮ್ಮನ್ನು ಬಸವ ತಾಲಿಬಾನ್ ಎಂದು ಕನ್ನೇರಿ ಸ್ವಾಮೀಜಿ ಕರೆದಿದ್ದಾರೆ ಎಂದು ಶಿವಾನಂದ ಶ್ರೀ ಹೇಳಿದಾಗ ಪತ್ರಕರ್ತರೊಬ್ಬರು ಯಾಕೆ ಕನ್ನೇರಿ ಸ್ವಾಮಿ ಈ ರೀತಿ ಲಿಂಗಾಯತ ಪೂಜ್ಯರನ್ನು ಮತ್ತೆ ಮತ್ತೆ ನಿಂದಿಸುತ್ತಿದ್ದಾರೆ ಎಂದು ಕೇಳಿದರು.
ಅದಕ್ಕೆ ಶಿವಾನಂದ ಶ್ರೀಗಳು ಕನ್ನೇರಿ ಸ್ವಾಮೀಜಿಯ ಮನಸ್ಥಿತಿ ಅರ್ಥವಾಗಿಲ್ಲ, ಅರ್ಥವಾಗಿದ್ದರೆ ಹೇಳುತ್ತಿದ್ದೆ ಎಂದರು
ವಿಜಯಪುರಕ್ಕೆ ಹೋಗದಿರುವಂತೆ ಕನ್ನೇರಿ ಸ್ವಾಮಿಯ ಮೇಲೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ನಿಮ್ಮ ಸಮರ್ಥನೆಯಿದೆಯೇ ಎಂದು ಇನ್ನೊಬ್ಬ ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಗದಗಿನ ತೋಂಟದಾರ್ಯ ಮಠದ ಡಾ ಸಿದ್ದರಾಮ ಶ್ರೀಗಳು ಇದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸರಕಾರ ತೆಗದುಕೊಂಡಿರುವ ನಿರ್ಣಯ, ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯನವರನ್ನು ಇಂದ್ರ, ಚಂದ್ರ ಎಂದು ಹೊಗಳುವ ಅಗತ್ಯವೇನಿತ್ತು ಎಂಬ ಮತ್ತೊಂದು ಪ್ರಶ್ನೆಗೆ ಅನೇಕ ಪೂಜ್ಯರು ಸಿದ್ದರಾಮಯ್ಯ ಬಸವ ತತ್ವಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಹೇಳಿದರು.
ಭಾಲ್ಕಿಯ ಡಾ ಬಸವಲಿಂಗ ಪಟ್ಟದೇವರು ಅಭಿಯಾನ ಪಕ್ಷಾತೀತವಾಗಿ ನಡೆಯಿತು ಸರಕಾರದಿಂದ ಅಥವಾ ಯಾವುದೇ ಮಂತ್ರಿಯಿಂದ ಹಣ ತೆಗೆದುಕೊಂಡಿಲ್ಲ, ಎಂದು ಹೇಳಿದರು.
ಸುದ್ದಿಗೋಷ್ಠಿಯ ಆರಂಭದಲ್ಲಿ ಕನ್ನೇರಿ ಸ್ವಾಮಿಯ ವಿವಾದಿತ ಭಾಷಣದ ತುಣುಕನ್ನು ಪತ್ರಕರ್ತರಿಗೆ ಕೇಳಿಸಲಾಯಿತು.
ಗದಗದ ಪೂಜ್ಯ ತೋಂಟದ ಸಿದ್ದರಾಮ ಶ್ರೀ, ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದ್ದೇವರು, ಹಂದಿಗುಂದ ಪೂಜ್ಯ ಶಿವಾನಂದ ಶ್ರೀ, ಸಾಣೆಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಮೋಟಗಿಯ ಪೂಜ್ಯ ಪ್ರಭುಚೆನ್ನಬಸವ ಶ್ರೀ, ಭಾಲ್ಕಿಯ ಪೂಜ್ಯ ಗುರುಬಸವ ಪಟ್ಟದ್ದೇವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪೂಜ್ಯರೆ ಶರಣಾರ್ಥಿಗಳು..
ಬೆತ್ತಲೆ ಪ್ರಪಂಚದಲ್ಲಿ ಬಟ್ಟೆ ತೊಟ್ಟವನೆ ಹುಚ್ಚ ಎನ್ನುವಂತೆ ಆಗಿದೆ. ವಾಸ್ತವ ಬದುಕಿನ ಚಿತ್ರಣವನ್ನು ಬಸವ ಸಂಸ್ಕೃತಿ ಅಭಿಯಾನ ಅನಾವರಣ ಮಾಡಿದೆ. ಅವನು ಕನ್ನೇರಿ ಹಿಂದುತ್ವದ ಅಮಲೇರಿಸಿಕೊಂಡಿದ್ದಾನೆ.
ವೀರಶೈವರನ್ನು ತೆಗೆಳಿರುವದಕ್ಕೆ ಮೊದಲು ನೀವು ಕ್ಷಮೆ ಕೇಳಿ
ಯಾವಾಗ ತೆಗಳೀದ್ದಾರೆ ? ವಿವರ ಕೊಡಿ
ವೀರಶೈವ ಮಠಾಧೀಶರಿಗೆ ನಾವು ಸೂಳೆಮಕ್ಕಳು ಎಂದು ಕರೀಲಿಲ್ಲ ಅವರನ್ನು ಮೆಟ್ಟಿನಿಂದ ಹೊಡೆಯಿರಿ ಎಂದು ಹೇಳಲಿಲ್ಲ ನಾವು ಅವರನ್ನ ಅಶ್ಲೀಲವಾಗಿ ಬೈಯಲಿಲ್ಲ ಅಂದಮೇಲೆ ನಾವೇಕೆ ಕ್ಷಮೆ ಕೇಳಬೇಕು?
ವೀರಶೈವರು ಲಿಂಗಾಯತರು ಒಂದೇ ಹೇಳುವಾಗ ಲಿಂಗಾಯತ ಮಠಾಧೀಶರನ್ನು ಅವ್ಯಾಚವಾಗಿ ನಿಂದಿಸಿದಾಗ ವೀರಶೈವರೇಕೆ ಹಾಗೆ ಬಯ್ಯುದು ಸರಿಯಲ್ಲವೆಂದು ಏಕೆ ಹೇಳಲಿಲ್ಲ.ಲಿಂಗಾಯತ ಸ್ವಾಮಿಗಳಿಗೆ ಬಯ್ದಾಗ ವೀರಶೈವರಿಗೂ ಬಯ್ದಂತಾಗಲಿಲ್ಲವೆ. ಮತ್ತು ನೀವು ಸಮರ್ಥಿಸಿಕೊಳ್ಳುವುದು ಸರಿಯೇ.ಹೋಗಿದ್ದಾಗ ಒಂದಾಗುವುದು ಹೇಗೆ?
ಈ ಮಾಧ್ಯಮೆಳಲ್ಲಿ ಕಾರ್ಯನಿರ್ವಹಿಸುವವರಿ ನಾವು ಸರಿಯಾಗಿ ತಿಳಿಸಬೆಕು, ಮುಕ್ಕಾಲುಬಾಗ ಮಾಧ್ಯಮಗಳು ಮನೂವಾದಿಗಳಾಗಿರೋದ್ರಿಂದ ಅವರಿಗೆ ಮರುಪ್ರಶ್ನೇ ಮಾಡಬೆಕು ನಿವು ನಮ್ಮನ್ನು ಸಂಪರ್ಕಿಸಿದಹಾಗೆ ಅಂಥಹ ಸ್ವಾಮಿಜಿಗಳನ್ನು ನಿವು ಯಾಕೆ ಪ್ರಶ್ನೆ ಮಾಡೋದಿಲ್ಲಾ ಯೀದು.