ರಾಯಚೂರು
ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತು ಬಸವ ಸಂಸ್ಕೃತಿ ಅಭಿಯಾನವನ್ನು ಕೀಳುಮಟ್ಟದ ಭಾಷೆಯಲ್ಲಿ ನಿಂದಿಸಿರುವುದನ್ನು ವಿರೋಧಿಸಿ ಬಸವಪರ ಸಂಘಟನೆಗಳ ಸದಸ್ಯರು ಶನಿವಾರ ಪ್ರತಿಭಟನೆ ಮಾಡಿದವು.
ಬಸವಾಭಿಮಾನಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರ ಸಲ್ಲಿಸಿ, ಕನ್ನೇರಿ ಸ್ವಾಮಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದವು.

ಬಸವ ಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ, ಜಾಲಿಂಮ ತಾಲೂಕಾಧ್ಯಕ್ಷ ಜೆ. ಬಸವರಾಜ, ನೇತೃತ್ವದಲ್ಲಿ ಬಸವ ಕೇಂದ್ರದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಲ್ಲಿ ಬಸವಪರ ಘೋಷಣೆ ಕೂಗಿ, ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಎದುರಿಗೆ ಓದಿ ಹೇಳಿ ಸಲ್ಲಿಸಲಾಯಿತು.
ಸ್ವಾಮಿಯ ಹೇಳಿಕೆಯಿಂದ ಬಸವ ಅಭಿಮಾನಿಗಳು, ಬಸವ ಭಕ್ತರಿಗೆ ತೀವ್ರ ನೋವು, ಆಕ್ರೋಶ, ಆಘಾತ ಉಂಟು ಮಾಡಿದೆ ಎಂದು ಮನವಿಪತ್ರದಲ್ಲಿ ಹೇಳಿವೆ.
ಕೆ. ಶಾಂತಪ್ಪ ಅಧ್ಯಕ್ಷರು ಕರ್ನಾಟಕ ಸಂಘ, ಎಂ. ವಿರುಪಾಕ್ಷ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರು, ಚನ್ನಬಸವ ಇಂಜನಿಯರ್, ಚೆನ್ನಬಸವಣ್ಣ ಮಹಾಜನಶೆಟ್ಟಿ ಬಸವ ಕೇಂದ್ರ ಕಾರ್ಯದರ್ಶಿ, ಸೂಗಪ್ಪ ಸಾಹು ಚುಕ್ಕಿ ಸಿರವಾರ, ಶಂಕರಗೌಡ ಹರವಿ ಮತ್ತಿತರ ಬಸವಭಕ್ತರು ಉಪಸ್ಥಿತರಿದ್ದರು.