ಬೀದರ
ಬಸವತತ್ವ ಹಾಗೂ ಲಿಂಗಾಯತ ಮಠಾಧೀಶರ ವಿರುದ್ಧ ತುಚ್ಛ ಮತ್ತು ಅಶ್ಲೀಲ ಹೇಳಿಕೆ ನೀಡಿರುವ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ವಿರುದ್ಧ ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೀದರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಮೆಟ್ಟಿನ ಏಟು ನೀಡಿ ಆಕ್ರೋಶ ಹೊರಹಾಕಿದರು. ಸ್ವಾಮಿ ವಿರುದ್ಧ ಧಿಕ್ಕಾರ, ಧಿಕ್ಕಾರ ಎಂದು ಘೋಷಣೆ ಕೂಗಿದರು.
ಕಾಡಸಿದ್ದೇಶ್ವರ ಸ್ವಾಮೀಜಿಯ ಕರ್ನಾಟಕ ಪ್ರವೇಶ ನಿರ್ಬಂಧಿಸಬೇಕು ಮತ್ತು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ಸಿದ್ದರಾಮೇಶ್ವರ ಸ್ವಾಮೀಜಿ, ಲಾವಣ್ಯ ಮಾತಾಜಿ ಸೇರಿದಂತೆ ಲಿಂಗಾಯತ, ಬಸವಪರ ಸಂಘಟನೆಗಳ ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ಕುಶಾಲರಾವ ಪಾಟೀಲ, ಬಸವರಾಜ ಧನ್ನೂರ, ಶ್ರೀಕಾಂತ ಸ್ವಾಮಿ, ಗಣೇಶ ಬಿರಾದಾರ, ಬಸವರಾಜ ಬುಳ್ಳಾ, ಸಿದ್ದು ಶೆಟ್ಕಾರ, ಶ್ರೀನಾಥ ಕೋರೆ, ಯೋಗೇಂದ್ರ ಯಾದ್ಯಾಪುರೆ, ವಿಲಾಸಕುಮಾರ ಪಾಟೀಲ, ಶಿವಶಂಕರ್ ಟೋಕರೆ, ಕುಶಾಲ ಪಾಟೀಲ, ರಾಜೇಂದ್ರ ಜೊನ್ನಿಕೇರಿ, ಪ್ರಕಾಶ ಸಾವಳಗಿ, ರವೀಂದ್ರ ಕೋಳಕೂರ ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದರು. ಅನೇಕ ಶರಣ ಬಂಧುಗಳು ಭಾಗವಹಿಸಿದ್ದರು.