ಮೋಹನ್ ಭಾಗವತ್ ಮೇಲೆ ಕನ್ನೇರಿ ಸ್ವಾಮಿ ಈ ಭಾಷೆ ಬಳಸ್ತಾರ: ಎಂ.ಬಿ. ಪಾಟೀಲ್

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಾಯತ ಧರ್ಮ ನನ್ನ ಅಸ್ಮಿತೆ. It is my father, my mother, ಎಂದ ಸಚಿವರು

ಬೆಂಗಳೂರು

ಲಿಂಗಾಯತ ಮಠಾಧೀಶರನ್ನು ಅಶ್ಲೀಲವಾಗಿ ನಿಂದಿಸಿರುವ ಕನ್ನೇರಿ ಸ್ವಾಮಿಯ ವಿರುದ್ಧ ಸ್ಪೋಟವಾಗುತ್ತಿರುವ ಶರಣ ಸಮಾಜದ ಆಕ್ರೋಶಕ್ಕೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಧ್ವನಿಗೂಡಿಸಿದ್ದಾರೆ.

‘ಲಿಂಗಾಯತ ನಾಯಕ’ ಎಂದು ಬೋರ್ಡು ಹಾಕಿಕೊಂಡಿರುವವರು ಬಾಯಿಗೆ ಬೀಗ ಹಾಕಿಕೊಂಡು ಮಲಗಿರುವಾಗ ಎಂ.ಬಿ. ಪಾಟೀಲರ ಸಿಟ್ಟಿನ ಪ್ರತಿಕ್ರಿಯೆ ಎಲ್ಲೆಲ್ಲೂ ವೈರಲ್ ಆಗಿದೆ.

ಇತ್ತೀಚಿಗೆ ಸುವರ್ಣ ಟಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜಯಪುರ ಜಿಲ್ಲೆಯಲ್ಲಿ ಕನ್ನೇರಿ ಸ್ವಾಮಿಯ ಮೇಲೆ ವಿಧಿಸಿರುವ ನಿರ್ಬಂಧವನ್ನು ಸಚಿವರು ಸಮರ್ಥಿಸಿಕೊಂಡರು. ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಸ್ಥಳೀಯ ಆಡಳಿತ ನಿರ್ಣಯ ತೆಗೆದುಕೊಂಡಿದೆ ಎಂದು ಹೇಳಿದರು.

‘ಕನ್ನೇರಿ ಸ್ವಾಮಿಯ ವಿರುದ್ಧ ಬಸವ ಜನ್ಮಸ್ಥಳ ವಿಜಯಪುರ ಜಿಲ್ಲೆ ಮತ್ತು ರಾಜ್ಯದ ಇತರ ಕಡೆ ಹೋರಾಟ ಶುರುವಾಗಿದೆ. ಲಿಂಗಾಯತರಿಗೆ ಮಾತ್ರವಲ್ಲ ಯಾವುದೇ ಜಾತಿಯ ಸ್ವಾಮೀಜಿಯವರಿಗೆ ಈ ರೀತಿಯ ಭಾಷೆ ಬಳಸಿದರೆ ಸಮಸ್ಯೆಯಾಗುತ್ತದೆ,’ ಎಂದು ಹೇಳಿದರು.

ಕನ್ನೇರಿ ಸ್ವಾಮಿ ***ನಲ್ಲಿ ಹೊಡೀತಾರಂತೆ, ಅಷ್ಟು
ದೊಡ್ಡವರಾ ಇವರು… ಯಾರನ್ನೋ ಮೆಚ್ಚಿಸಲು ಈ ರೀತಿ ಮಾತಾಡಿದ್ದಾರೆ

‘ಲಿಂಗಾಯತ ಸ್ವಾಮಿಗಳನ್ನು ಕರೆದು ಕನ್ನೇರಿ ಸ್ವಾಮಿ ***ನಲ್ಲಿ ಹೊಡೀತಾರಂತೆ, ಅಷ್ಟು ದೊಡ್ಡವರಾ ಇವರು. ಈ ರೀತಿ ಮಾತಾಡಿ ಪೌರುಷ ತೋರಿಸಿಕೊಳ್ಳಲು ಹೋಗಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ರೀತಿ ಮಾತಾಡಿದ್ದಾರೆ, ಅದು ಯಾರು ಎಂದು ನಿಮಗೂ ಹೊತ್ತು,’ ಎಂದು ಅಲ್ಲಿದ್ದ ಪತ್ರಕರ್ತರಿಗೆ ಹೇಳಿದರು.

ಆಗ ಬಿಜೆಪಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದ ಉದ್ದಟತನದ ಮಾತು ಎಂ.ಬಿ. ಪಾಟೀಲರನ್ನು ಮತ್ತಷ್ಟು ಕೆರಳಿಸಿತು.

‘ಕನ್ನೇರಿ ಸ್ವಾಮಿ ಬಿಜಾಪುರದ ಆಡು ಭಾಷೆ ಬಳಸಿದ್ದಾರೆ, ಅದನ್ನು ಒಪ್ಪಬೇಕೋ ಬೇಡವೋ ಅನ್ನುವುದು ಚರ್ಚೆ ಮಾಡಬಹುದಾದ ವಿಷಯ,’ ಎಂದು ಹನುಮಕ್ಕನವರ್ ವಾದಿಸಿದರು. ಅಂದರೆ ಕನ್ನೇರಿ ಸ್ವಾಮಿಯ ಮಾತು ಆಕ್ರೋಶ ಪಡುವ ವಿಷಯವೇನಲ್ಲ ಎಂದು ಸೂಚಿಸಿದರು.

ಒಬ್ಬ ಯೋಗ್ಯ ಪತ್ರಕರ್ತನ ಬಾಯಿಂದ ಬರಬಾರದ ಮಾತಿದು. ಆದರೆ ಹನುಮಕ್ಕನವರ್ ಬಿಜೆಪಿ ವಕ್ತಾರರಾಗಿ ಕೆಲಸ ಮಾಡುತ್ತಿರುವುದು ರಹಸ್ಯವಾಗೇನೂ ಉಳಿದಿಲ್ಲ.

ಇದರಿಂದ ಸಿಟ್ಟಿಗೆದ್ದ ಎಂ.ಬಿ. ಪಾಟೀಲ್ ಚರ್ಚೆ ಮುಂದುವರೆಯಲು ಬಿಡಲಿಲ್ಲ. ‘ಒಂದು ನಿಮಿಷ ನಿಲ್ಲಿಸಿ’ ‘ಒಂದು ನಿಮಿಷ ನಿಲ್ಲಿಸಿ’ ಎಂದು ಬೆಟ್ಟು ತೋರಿಸಿ ಹೇಳಿ ಹನುಮಕ್ಕನವರ ದುರುದ್ದೇಶದ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

‘ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೇಲೆ ಕನ್ನೇರಿ ಸ್ವಾಮಿ ಇದೇ ಭಾಷೆ ಪ್ರಯೋಗ ಮಾಡಲಿ ನೋಡೋಣ. ಅವರ ಮೇಲೆ, ಬಿ.ಎಲ್. ಸಂತೋಷ್ ಮೇಲೆ ಕನ್ನೇರಿ ಸ್ವಾಮಿ ಇದೇ ಭಾಷೆ ಬಳಸಲಿದ್ರೆ ಸುಮ್ಮನಿರ್ತಾರಾ. ಎಲ್ಲಾ ಹತ್ತಿಕೊಂಡು ಉರಿಯುತ್ತಿತ್ತು.

ಇವರ ಮಾತನ್ನ ಸಮರ್ಥನೆ ಮಾಡ್ತಾ ಇದ್ದಾರಲ್ಲ ಯಡಿಯೂರಪ್ಪ, ವಿಜಯೇಂದ್ರ, ಶೆಟ್ಟರ್, ಯತ್ನಾಳ್… ಈ ಬಿಜೆಪಿ ನಾಯಕರಿಗೆ ತಾಯಂದರಿಲ್ಲವಾ. ಕನ್ನೇರಿ ಸ್ವಾಮಿಗೆ ತಾಯಿಯಿಲ್ಲವಾ. ಅವರ ಮೇಲೆ ಈ ಪದ ಬಳಸಿದರೆ ಸುಮ್ಮನೆ ಕೂರ್ತಾರ.

ಅಜಿತ್, ಪ್ರಶಾಂತ್ (ನಾತೂ) ನಿಮ್ಮ ಮೇಲೆ ಶಬ್ದ ಬಳಸಿದರೆ ಸುಮ್ಮನಿರ್ತೀರಾ.’ ಎಂದು ಅಲ್ಲಿದ್ದ ಇಬ್ಬರೂ ಬಿಜೆಪಿ ಪತ್ರಕರ್ತರನ್ನು ಪ್ರಶ್ನಿಸಿದರು.

ಸಚಿವರ ಸಿಟ್ಟಿನ ಮಾತುಗಳನ್ನು ಕೇಳುತ್ತ ತಗ್ಗಿಸಿದ್ದ ತಲೆಯನ್ನು ಎತ್ತದೆ ಹನುಮಕ್ಕನವರ್ ಕುಳಿತ್ತಿದ್ದರು.

ಬಿ.ಎಲ್. ಸಂತೋಷ್ ಮೇಲೆ ಕನ್ನೇರಿ ಸ್ವಾಮಿ ಇದೇ ಭಾಷೆ ಬಳಸಲಿದ್ರೆ ಸುಮ್ಮನಿರ್ತಾರಾ.

‘ಮುನ್ನೂರಕ್ಕೂ ಹೆಚ್ಚು ಸ್ವಾಮಿಗಳು ಸೇರಿ ಅಭಿಯಾನ ನಡೆಸಿದರು. ವೇದಿಕೆಯಲ್ಲಿ ಗದಗ, ಭಾಲ್ಕಿ, ಸಿದ್ದಗಂಗಾ, ಮಾದಾರ ಚನ್ನಯ್ಯ, ಭೋವಿ ಸ್ವಾಮೀಜಿಯವರಿದ್ದರು. ಕನ್ನೇರಿ ಸ್ವಾಮಿ ಇವರನ್ನೆಲ್ಲ ನಿಂದಿಸಿದ್ದಾರೆ.

ಬಿಜೆಪಿ, ಆರೆಸ್ಸೆಸ್ ನವರು ಮೊದಲು ಕನ್ನೇರಿ ಸ್ವಾಮಿ ಬಳಸಿದ ಭಾಷೆ ತಪ್ಪು ಅಂತ ಹೇಳಬೇಕಿತ್ತು. ನಂತರ ನಿರ್ಬಂಧನ ವಿರೋಧಿಸಬಹುದಿತ್ತು. ಹಾಗೆ ಮಾಡಿದ್ರೆ ಅವರು ಇವರು ದೊಡ್ಡವರಾಗ್ತಿದ್ರು. ಆದರೆ ಕನ್ನೇರಿ ಸ್ವಾಮಿ ಮಾಡಿದ್ದು ತಪ್ಪು ಅಂತ ಯಾರೂ ಹೇಳ್ತಾ ಇಲ್ಲ.

ಬಿಜೆಪಿ, ಆರೆಸ್ಸೆಸ್ ನವರು ಮೊದಲು ಕನ್ನೇರಿ ಸ್ವಾಮಿ
ಬಳಸಿದ ಭಾಷೆ ತಪ್ಪು ಅಂತ ಹೇಳಬೇಕಿತ್ತು.

ಅಭಿಯಾನ ಸಿದ್ದರಾಮಯ್ಯ ಕೃಪಾಪೋಷಿತ ಮಂಡಳಿಯ ಕೆಲಸವಾದರೆ ಕನ್ನೇರಿ ಸ್ವಾಮಿ ಮಾತಾಡಿದ್ದು ಆರೆಸ್ಸೆಸ್ ಕೃಪಾಪೋಷಿತವೇ, ಮೋಹನ ಭಗವತ್ ಕೃಪಾಪೋಷಿತವೇ,’ ಎಂದು ಎಂ.ಬಿ. ಪಾಟೀಲ್ ಪ್ರಶ್ನಿಸಿದರು.

ನಂತರ ಸುವರ್ಣ ಟಿವಿಯ ಸಂವಾದ ಲಿಂಗಾಯತ ಧರ್ಮದ ಹೋರಾಟದ ಕಡೆ ತಿರುಗಿತು.

ಲಿಂಗಾಯತ ಧರ್ಮದ ಹೋರಾಟ ರಾಜಕೀಯಕ್ಕೆ ನಡೆಯುತ್ತಿದೆ ಎನ್ನುವ ಅಭಿಪ್ರಾಯವನ್ನು ಸಚಿವರು ಖಂಡಿಸಿದರು.

‘ಲಿಂಗಾಯತ ಧರ್ಮ ನನ್ನ ಅಸ್ಮಿತೆ, ನನ್ನ ಐಡೆಂಟಿಟಿ. It is my father, my mother,’ ಎಂದು ಎಂ.ಬಿ. ಪಾಟೀಲ್ ಹೇಳಿದರು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
7 Comments
  • M B ಪಾಟೀಲರ ಮಾತು ಖರೆ ಗಂಡು ಮೆಟ್ಟಿನ ಲಿಂಗಾಯತ ನಾಯಕನ ಮಾತು

  • ತುರ್ತಾಗಿ ನಾವು ಮಾಡ ಬೇಕಿರುವುದಿಷ್ಟೆ. ಅವನು‌ಬಳಸಿದ ಪದಗಳನ್ನು ಆಧಾರವಾಗಿ ಇಟ್ಡು ಕೊಂಡು, ಲಿಂಗಾಯತ ಒಕ್ಕೂಟದ ಪ್ರತಿಯೊಬ್ಬ ಸ್ವಾಮಿಗಳು ಪ್ರತ್ಯೇಕವಾಗಿ ಮಾನನಷ್ಟ ಮೊಕದಮ್ಮೆ ಹೂಡ ಬೇಕು. ಮಾನನಷ್ಡದ ಪರಿಹಾರ ಪ್ರತಿಯೊಬ್ಬರದು ೧೦ ಕೋಟಿ ಆಗಿರ ಬೇಕು. ಆಗ ನೋಡಿ ಮಜಾ. ಕನೇರಿ ಕುಂತ ಕೊಂಡ ಹೇಲಾಕ ಬರಲಾರದೆ ಓಡಾಡಿರ ಬೇಕು. ಆಗ ಮಾತ್ರ ನಮ್ಮ ಹತ್ತಿರ ಸುಳಿಯುವುದಿಲ್ಲ. ಇದರೊಂದಿಗಿ ಮಹಾರಾಷ್ಡ್ರದಲ್ಲಿ ಕೂಡ ಅವನ ವಿರುದ್ದ ಅಲ್ಲಿನ ಲಿಂಗಾಯತರು ತೀವ್ರತರವಾದ ಹೋರಾಟ ಪ್ರಾರಂಭಿಸ ಬೇಕು.

  • ಸಾಹೇಬರು ಗೊಂದಲದಲ್ಲಿದ್ದರು. ಈಗ ಸ್ಪಷ್ಟ ನಿಲುವು ಹೊಂದಿದ್ದಾರೆ. ನಾವೂ ಅವರನ್ನು ಗಟ್ಟಿಯಾಗಿ ಬೆಂಬಲಿಸಬೇಕು.

    • ನಿಜ ಸರ್. ನಮ್ಮ ರಾಜ್ಯದಲ್ಲಿ ಬಸವ್ವಣ್ಣನವರನವರ ಶಕ್ತಿ ಎಂತದು ಅಂತ ನಮ್ಮ ನಾಯಕರಿಗೆ ಇನ್ನೂ ಅರ್ಥವಾಗಿಲ್ಲ.

  • ತಮ್ಮೆಲ್ಲರಲ್ಲಿ ನನ್ನದೊಂದು ಕಳಕಳಿಯ ವಿನಂತಿ: ತಾವು ಯಾರಾಗಲಿ ತಮ್ಮ ಬಳಗ,ಗುಂಪುಗಳಲ್ಲಿ, ಆಪ್ತರಲ್ಲೂ , ಬಾಲಮಿತ್ರರrಅಲ್ಲಿ, ಗ್ರಾಮೀಣ ಪ್ರದೇಶಗಳ ಅವರ ಮನೆಯಲ್ಲಿ ಮಾತ್ರ ಕೊಂಕು ನುಡಿಯಾಗಲಿ, ಕಠೋರ ನುಡಿಗಳ ಬಳಕೆ ಸರಿಹೋಗಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲೂ , ವೇದಿಕೆಗಳಲ್ಲಿ, ಮೀಡಿಯಾ ಸಂವಹನ ನಡೆಸುವಲ್ಲಿ ಅವಹೇಳನಕಾರಿ ಪದಗಳನ್ನು ಬಳಸಬಾರದು. ಅಲ್ಲದೆ ಈಗ ಅನ್ಯಾದೇಶಗಳಲ್ಲಿ ಪ್ರಸಾರವಾಗುವ ಮಾದ್ಯಮ ತಪ್ಪು ಸಂದೇಶವನ್ನು ವಿದೇಶಗಳಿಗೆ ರವಾನೆಯಾಗುವಲ್ಲಿ ಸಹಕಾರಿಯಾಗಿದೆ.
    ಅದಕ್ಕಾಗಿ ರಾಷ್ಟ್ರೀಯತೆ ಮತ್ತು ಸಮಾಜದ ಹಿತ ಕಾಪಾಡುವಲ್ಲಿ ಅಡೆತಡೆಯಾಗದಂತೆ ಎಚ್ಚರ ವಹಿಸಬೇಕಾಗಿ ವಿನಂತಿ. ಎಲ್ಲರಿಗೂ ಶುಭವಾಗಲಿ. ದೇವರು ಒಳ್ಳೆಯದು ಮಾಡಲಿ. ಶರಣು ಶರಣಾರ್ಥಿ.

  • ಪಾಟೀಲರೇ, ಲಿಂಗಾಯತ ಚಳುವಳಿಗೆ ಬದ್ಧತೆಯಿರುವ ರಾಜಕೀಯದ ನಾಯಕರ ಅಗತ್ಯವಿದೆ. ತಾವು ಸಕ್ರಿಯವಾಗಿ ಸಂಘಟನೆ ಕಾರ್ಯಕ್ಕೆ ಪ್ರವೇಶಿಸುತ್ತೀರೆಂದು ನಮ್ಮ ನಿರೀಕ್ಷೆಯಿದೆ. ಹೋದ ಕಡೆಯೆಲ್ಲ ನಾವೀಗ ಒಂದು ಸಾವಿರ ಜನ ಇದ್ದೀವಿ, ನೀವು ಬಂದರೆ ಹತ್ತು ಸಾವಿರವಾಗತ್ತೆ.

Leave a Reply

Your email address will not be published. Required fields are marked *