ಬೀದರ
ಕನ್ನೇರಿ ಸ್ವಾಮಿ ಬೆಂಬಲಿಸುತ್ತಿರುವ ಲಿಂಗಾಯತ ನಾಯಕರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸುವ ಕಾಲ ಬಂದಿದೆ ಎಂದು ಬಸವ ಸಂಘಟನೆಗಳು ಎಚ್ಚರಿಕೆ ನೀಡಿವೆ.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಬಸವ ಸಂಘಟನೆಗಳ ಮುಖಂಡರು ಮಾತನಾಡಿದರು.
ಆರೆಸ್ಸೆಸ್ ನವರು ತಮ್ಮ ನಿಯತ್ತಿನ ನಾಯಿ ಕನ್ನೇರಿ ಸ್ವಾಮಿಯ ಮೂಲಕ ಲಿಂಗಾಯತ ಮಠಾಧೀಶರಿಗೆ ಕೆಟ್ಟದಾಗಿ ನಿಂದಿಸಿದ್ದಾರೆ. ಇದನ್ನು ಟೀಕಿಸುವುದನ್ನು ಬಿಟ್ಟು ಕನ್ನೇರಿ ಸ್ವಾಮಿ ಬೆನ್ನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿಯಂತವರು ನಿಂತಿದ್ದಾರೆ. ಇವರುಗಳು ತಮ್ಮ ನಡೆಯನ್ನು ಸುಧಾರಿಸಿಕೊಳ್ಳಬೇಕು, ಎಂದು ಎಚ್ಚರಿಸಿದರು.
ಲಿಂಗಾಯತರನ್ನು ತಂತ್ರ ಕುತಂತ್ರಗಳಿಂದ ಹಣಿಯಲು ಲಿಂಗಾಯತ ನಾಯಕರನ್ನೇ ಬಳಸಿಕೊಂಡು ಆರೆಸ್ಸೆಸ್ ಹೊರಟಿದ್ದು ಗೊತ್ತಿದ್ದರೂ, ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಸವತತ್ವವನ್ನು, ಲಿಂಗಾಯತ ಧರ್ಮ ಹೋರಾಟವನ್ನು ತಾವು ವಿರೋಧಿಸುತ್ತಿದ್ದೀರಿ. ಮುಗ್ಧ ಲಿಂಗಾಯತರಿಗೆ ಧರ್ಮ ಒಡೆಯುತ್ತಿದ್ದಾರೆ ಎಂದು ಅಪಪ್ರಚಾರ ಮಾಡತ್ತಿದ್ದೀರಿ.
ಲಿಂಗಾಯತರನ್ನು ಬಸವ ತಾಲಿಬಾನಿಗಳು ಎಂದು ಈ ಹಿಂದೆ ಕನ್ನೇರಿ ಸ್ವಾಮಿ ಕರೆದಿದ್ದರು. ಅದಕ್ಕೂ ಏನು ಮಾತಾಡದೇ ಲಿಂಗಾಯತರ ಬೆನ್ನಿಗೆ ಚೂರಿ ಇಡುತ್ತಿದ್ದೀರಿ. ಇನ್ನು ಮುಂದೆ ನಿಮ್ಮ ಸಭೆ ಸಮಾರಂಭಗಳಲ್ಲಿ ಕಪ್ಪು ಬಾವುಟ ಹಾರಿಸಿ ಪ್ರತಿಭಟಿಸುವ ಕಾಲ ಬಂದಿದೆ.
ಕನ್ನೇರಿ ಸ್ವಾಮಿ ಕೃಷಿ ಸಾಧನೆಯ ಹೆಸರಿನಲ್ಲಿ ಕೇಂದ್ರ ಸರಕಾರದಿಂದ ಹಣ ಲೂಟಿ ಹೊಡೆಯಲು, ಸಂಘ ಪರಿವಾರದವರನ್ನು ಓಲೈಸಿಕೊಳ್ಳುವ ಭರದಲ್ಲಿ, ಲಿಂಗಾಯತ ಮಠಾಧೀಶರನ್ನು ಕೆಟ್ಟ ಪದಗಳ ಮೂಲಕ ನಿಂದನೆ ಮಾಡಿದ್ದಾರೆ.
ಹಿಂದೂ ಧರ್ಮದ ಹೆಸರಿನಲ್ಲಿ ಬಹುತ್ವ ಭಾರತದ ಶ್ರಮಿಕರ ಬೆವರಿನ ಹಣವನ್ನು ರಾಮ ಮಂದಿರ ಹೆಸರಿನಲ್ಲಿ ದಂಧೆ ಮಾಡಿದ್ದನ್ನು ಪ್ರಶ್ನಿಸಿ ಅದರ ಲೆಕ್ಕವನ್ನು ಕೇಳುವುದು ಬಿಟ್ಟು, ಮೂಢನಂಬಿಕೆ, ಅಂಧಶ್ರದ್ದೆ ಬಿತ್ತುವುದನ್ನು ಮಾಡುತ್ತಿದ್ದೀರಿ.
ಅದನ್ನೆಲ್ಲ ಬಿಟ್ಟು ಶರಣ ಸಿದ್ದಾಂತ ಅಳವಡಿಸಿಕೊಳ್ಳುತ್ತೇನೆ ಎಂದು ಹೇಳಿ ಕ್ಷಮೆ ಕೇಳಲು ಕಲ್ಯಾಣ ನಾಡಿಗೆ ಬನ್ನಿ ಎಂದು ಸ್ವಾಮಿಗೆ ಹೇಳಿದರು.
ಇನ್ನು ಮುಂದೆ ಲಿಂಗಾಯತ ಮಠಗಳ ಇತಿಹಾಸ ತಿಳಿದುಕೊಂಡು ಮಾತನಾಡಬೇಕು. ಲಿಂಗಾಯತ ಮಠಗಳ ಮಠಾಧೀಶರ ಬಗ್ಗೆ ಅಪಪ್ರಚಾರ ಬಿಡಬೇಕು. ಇಲ್ಲವಾದರೆ ನಾವೆಲ್ಲ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ಸಂಘಟನೆಗಳ ಮುಖಂಡರು ನೀಡಿದರು.
ಭಾರತೀಯ ಬಸವದಳ ಬೀದರ ಜಿಲ್ಲಾಧ್ಯಕ್ಷ ಜಗದೀಶ ಬಿರಾದಾರ, ಭಾಲ್ಕಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶ್ರೀಕಾಂತ ಭರೋಳೆ, ಭಾಲ್ಕಿ ಜಾ.ಲಿಂ.ಮಹಾಸಭಾ ರಾಜ್ಯ ಕಾರ್ಯದರ್ಶಿ ಕಿರಣ್ ಖಂಡ್ರೆ ಮತ್ತು ವಿಶ್ವಗುರು ಬಸವ ಧರ್ಮ ಕೇಂದ್ರದ ಅಧ್ಯಕ್ಷರಾದ ಓಂಪ್ರಕಾಶ ರೊಟ್ಟೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
 
							 
			     
			
 
                                 
                             
ಪಾಟೀಲರು ಬಂದರೆ ಆನೆ ಬಲ ಬಂದಂತೆ
jai basavanna
ನಾನು ಈ ಹಿಂದೆ ತಿಳಿಸಿದಂತೆ ಇವರನ್ನು ಬಸವ ವಿರೋಧಿಗಳು ಎಂದು ಪರಿಗಣಿಸಿ ಬಸವ ಕಾರ್ಯಕ್ರಮ ಗಳಿಂದ ದೂರ ಇರಿಸಬೇಕು ಶರಣಾರ್ಥಿಗಳು
Swamiji Avru jnana bandari 64 Vidya yennu helikodtare,Adre avru marhadi heliro prakara adhu ondhu ketta galigge antha thilidhu yella sarvajanika mareyiri,Avru niskalmasha vagi helidare adhu tappu agi anisidde.adhu yellaru kshemisi..