ಈ ಸ್ವಾಮಿಯ ಬೆಂಬಲಕ್ಕೆ ನಿಂತಿರುವ ಲಿಂಗಾಯತ ನಾಯಕರ ರಾಜಕೀಯ ತಲೆದಂಡವಾಗಲಿ
ಬೆಂಗಳೂರು
ಕನ್ನೇರಿ ಅದೃಶ್ಯ ಕಾಡಸಿದ್ಧೇಶ್ವರ ತಾಲಿಬಾನಿಯು ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ಧ ಲಿಂಗಾಯತ ಸ್ವಾಮೀಜಿಗಳಿಗೆ ** ಮಕ್ಕಳು ಎಂದು ಕರೆದದ್ದು ಕೇವಲ ಪೂಜ್ಯರಿಗೆ ಮಾಡಿದ ಅವಮಾನವಲ್ಲ.
** ಮಕ್ಕಳು ಎಂಬ ನಿಂದನಾ ಪರಿಭಾಷೆಯು ನೇರವಾಗಿ ಸಮಸ್ತ ಮಹಿಳೆಯರಿಗೆ ಮಾಡಿದ ಅವಮಾನ. ಈ ಭಾಷೆ ಅಕ್ಕಮಹಾದೇವಿಯವರನ್ನು ಸೇರಿಸಿಕೊಂಡು ಮಹಿಳಾ ವಚನಕಾರ್ತಿಯರಿಗೆ, ಶಿವಶರಣೆಯರಿಗೆ ಮಾಡಿದ ಅವಮಾನ.
ಕನ್ನೇರಿ ಸ್ವಾಮಿಗೆ ಮತ್ತು ಅವರನ್ನು ಪೋಷಿಸುತ್ತಿರುವ ಆರ್ಎಸ್ಎಸ್ಗೆ ಮಹಿಳೆಯರ ಬಗ್ಗೆ ಕಿಂಚತ್ತೂ ಗೌರವವಿಲ್ಲ.
ಆರ್ಎಸ್ಎಸ್ನಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಅವರಿಗೆ ಬೇರೆ ಒಂದು ಸಂಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಅಲ್ಲಿನ ಕಾರ್ಯಕರ್ತರೆಲ್ಲ ಸನ್ಯಾಸಿಗಳು. ಆರ್ಎಸ್ಎಸ್ ನದು ಪುರುಷಶಾಹಿ ಸಂಸ್ಕೃತಿ. ಮಹಿಳೆಯರ ಬಗೆಗಿನ ಅದರ ಹೀನ ಮನೋಭಾವಕ್ಕೆ ಇದಕ್ಕಿಂತ ಮತ್ತೇನು ಸಾಕ್ಷಿ ಬೇಕು?
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ನಡೆದ ಚಳುವಳಿಯಲ್ಲಿ ಮುಂಚೂಣಿಯಲ್ಲಿದ ಸಂಸ್ಥೆ ಆರ್ಎಸ್ಎಸ್. ಆರ್ಎಸ್ಎಸ್ ಜಗತ್ತು “ತಾಯಂದಿರಿಲ್ಲದ ಜಗತ್ತು”. ಈ ಕಾರಣಕ್ಕೆ ಅದರಿಂದ ತರಬೇತಿ, ಮಾರ್ಗದರ್ಶನ ಪಡೆದ ಕನ್ನೇರಿ ಸ್ವಾಮಿಯು ಯಾವ ಸಂಕೋಚವಿಲ್ಲದೆ ** ಮಕ್ಕಳು ಎಂಬ ಪದವನ್ನು ಬಳಸಿದ್ದಾರೆ.
ತಾಯಿಯ ಹೊಟ್ಟೆಯಲ್ಲಿಯೇ ಹುಟ್ಟಿ ಬಂದ ವಿಜಯೇಂದ್ರ, ಬೊಮ್ಮಾಯಿ, ಅರವಿಂದ ಬೆಲ್ಲದ, ಜಗದೀಶ ಶೆಟ್ಟರ್, ಯತ್ನಾಳ್ ಮುಂತಾದವರಿಗೆ ಕನ್ನೇರಿ ಸ್ವಾಮಿ ಬಳಸಿದ ** ಮಕ್ಕಳು ಎಂಬ ಪದಪುಂಜವು ತಮ್ಮ ತಾಯಂದಿರಿಗೂ ಅನ್ವಯವಾಗುತ್ತದೆ ಎಂಬುದು ತಿಳಿದಂತೆ ಕಾಣುವುದಿಲ್ಲ.
ಅಧಿಕಾರಕ್ಕಾಗಿ, ಹಣಕ್ಕಾಗಿ, ಸ್ಥಾನಮಾನಕ್ಕಾಗಿ ಮೂರು ಬಿಟ್ಟು ಕನ್ನೇರಿ ಸ್ವಾಮಿಯ ಬೆಂಬಲಕ್ಕೆ ನಿಂತ ಲಿಂಗಾಯತ ರಾಜಕಾರಣಿಗಳಿಗೆ ಲಿಂಗಾಯತ ಮಹಿಳೆಯರು ಪಾಠ ಕಲಿಸುವ ಪ್ರತಿಜ್ಞೆ ಮಾಡಬೇಕು.

ಬಸವಣ್ಣನವರು ಒಂದು ವಚನದಲ್ಲಿ “ಲಿಂಗಜಂಗಮ ಒಂದೆ ಎಂದು ನಂಬಿದ ಬಳಿಕ ಅವರಂಗನೆಯರು ಲಿಂಗದ ರಾಣಿವಾಸ” ಎಂದು ಹೇಳಿ ಮುಂದುವರಿದು “ಮೊಲೆಯುಂಬ ಭಾವ ತಪ್ಪಿ (ತಾಯ) ಅಪ್ಪಿದರೆ ತಲೆಯ ಕೊಂಬ ಕೂಡಲಸಂಗಮದೇವಾ” ಎನ್ನುತ್ತಾರೆ. ಈ ಎಚ್ಚರಿಕೆಯನ್ನು ಮರೆತವರ ತಲೆಯನ್ನು ಕೂಡಲಸಂಗಮದೇವ ಪಡೆಯುತ್ತಾನೆ ಎಂಬುದು ಬಸವ ಭಾಷ್ಯ.
ನೈತಿಕತೆಯನ್ನೇ ಅಧಿಕಾರಕ್ಕಾಗಿ ಬಿಟ್ಟುಕೊಟ್ಟಿರುವ ಅರೆಬರೆ ಲಿಂಗಾಯತ ನಾಯಕರು ತಮ್ಮ ತಾಯಂದಿರಿಗೆ, ಅಕ್ಕಂದಿರಿಗೆ, ತಂಗಿಯರಿಗೆ ಮಾಡಿರುವ ಅವಮಾನವನ್ನು ನಿರ್ಲಕ್ಷಿಸುತ್ತಿದ್ದಾರೆ.
ಈ ಬಸವ ಭಾಷ್ಯವನ್ನು ನಿಜವಾಗಿಸುವ ಜವಾಬ್ದಾರಿ ನಮ್ಮ ಮಹಿಳಾ ಲೋಕದ ಮೇಲಿದೆ. ಈ ತಾಲಿಬಾನಿಯ ಜೊತೆಗೆ ನಿಂತಿರುವ ಅರೆಬರೆ ಲಿಂಗಾಯತ ನಾಯಕರ ರಾಜಕೀಯ ತಲೆದಂಡವನ್ನು ತೆಗೆದುಕೊಳ್ಳಬೇಕಾಗಿದೆ.
ಕನ್ನೇರಿ ಸ್ವಾಮಿ ಮತ್ತವರ ಬೆಂಬಲವಾಗಿ ನಿಂತಿರುವವರನ್ನು ಮನಸ್ಸಿನಲ್ಲಿಟ್ಟುಕೊಂಡೇ ೧೨ ನೆಯ ಶತಮಾನದಲ್ಲಿ ಗುರು ಸಿದ್ಧರಾಮರು “ಒಬ್ಬರ ಮನವ ನೋಯಿಸದವನೇ, ಒಬ್ಬರ ಘಾತವ ಮಾಡದವನೇ ಪರಮ ಪಾವನ ನೋಡಾ ಕಪಿಲ ಸಿದ್ಧಮಲ್ಲಿಕಾರ್ಜುನ” ಎಂದು ಬೋಧಿಸಿದ್ದಾರೆ.
ಕನ್ನೇರಿ ಸ್ವಾಮಿಗೆ ಬಸವಣ್ಣನವರನ್ನು, ಗುರು ಸಿದ್ಧರಾಮರನ್ನು, ಶಿವಶರಣರನ್ನು, ಶಿವಶರಣೆಯರನ್ನು ಪ್ರತಿನಿಧಿಸುವ ಹಕ್ಕಿಲ್ಲ.
 
							 
			     
			
 
                                 
                             
ಬರೀ ಲಿಂಗಾಯತ ಸಮಾಜದ ಮಹಿಳೆಯರಿಗಷ್ಟೇ ಅಲ್ಲ ಇಡೀ ಮಹಿಳಾ ಸಂಕುಲಕ್ಕೆ ಅವಮಾನ ಮಾಡಿದ್ದಾರೆ. ಅವರ ಮಾತಿನ ವಿರುದ್ಧ ಒಂದೇ ಒಂದು ಮಾತಿನ ವಿರೋಧವನ್ನೂ ವ್ಯಕ್ತಪಡಿಸಿದ ಬಿಜೆಪಿ ಪಕ್ಷದಲ್ಲಿರುವ ಲಿಂಗಾಯತ ರಾಜಕಾರಣಿಗಳಿಗೆ ಬುದ್ಧಿ ಕಲಿಸುವ ಸಮಯ ಬಂದಿದೆ. ಈ ಸ್ವಾಮೀಜಿ ಅಕಸ್ಮಾತ್ತಾಗಿ ಆಡಿರುವ ಮಾತುಗಳಲ್ಲ ಇವು. ಈ ಹಿಂದೆ ಬಸವ ತಾಲಿಬಾನಿಗಳು ಎಂದು ಹೇಳಿದಾಗಲೇ ದೊಡ್ಡ ಮಟ್ಟದ ಪ್ರತಿಭಟನೆ ದಾಖಲಿಸಿದ್ದರೆ ಇಂದು ಇಂತಹ ಭಾಷಾ ಪ್ರಯೋಗಕ್ಕೆ ಅವರು ಮುಂದಾಗುತ್ತಿರಲಿಲ್ಲ. ಇಂದು ಧರ್ಮವಲ್ಲದ ಧರ್ಮ “ಹಿಂದೂ ಧರ್ಮ”ದ ಗುತ್ತಿಗೆದಾರರು ಲಿಂಗಾಯತ ಪರಂಪರೆಯ ಮಠಾಧೀಶರುಗಳನ್ನೇ ಉಪಯೋಗಿಸಿಕೊಂಡು, ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟಿ, ಅವರವರಲ್ಲೇ ಬೆಂಕಿಹಚ್ಚಿ ಲಿಂಗಾಯತ ಧರ್ಮವನ್ನೇ ನಿರ್ನಾಮ ಮಾಡಿ ಸ್ವಾಹಾ ಮಾಡುವ ಹುನ್ನಾರದಲ್ಲಿದ್ದಾರೆ. ಇದು ಅವರು ಹಾಕಿಕೊಟ್ಟಿರುವ “ಟೂಲ್ ಕಿಟ್” ಒಂದು ಭಾಗ. ಇಂತಹ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಅರಿವು ಮತ್ತು ಎಚ್ಚರ ವಹಿಸುವುದು ಮತ್ತು ಲಿಂಗಾಯತ ಧರ್ಮದ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕಾಗಿದೆ.
ಇಲ್ಲಿ ಬರುವ ಎಲ್ಲ ಲೇಖನಗಳನ್ನು ಗಮನಿಸಿದಾಗ, ಹೆಸರಿಗಷ್ಟೇ ಇದು ಬಸವ ಮೀಡಿಯಾ. Infact ಇದು ಕಾಂಗ್ರೆಸ್ ಕೃಪಾ ಪೋಷಿತ ಮೀಡಿಯಾ ಅಂತ ಕನ್ಫರ್ಮ್ ಆಯಿತು
ತಾವು ಬಿಜೆಪಿ ಕೃಪಾ ಪೊಷಿತ ಚಿಂತಕರು ಇರಬವುದು RSS ನ ಚಿಲಾ ಇರಬವುದು ನಿಮಗೆ ನೀವು ಈ ಗ್ರೂಪ್ ನಿಂದ ನಿರ್ಗಮಸಿ ನಿಮಗೆ ಸ್ವಭೀಮಾನ ಇದ್ದರೆ ಒಂದು ಗಮನದಲ್ಲಿ ಇಟ್ಟುಕೊಳ್ಳಿ ಧರ್ಮಸ್ಥಳದ ಕೇಸ್ ಗಳಿಗೆ ಕಾಂಗ್ರೆಸ್ ಪಕ್ಷ ನ್ಯಾಯ ಕೊಡಿಸಿಲ್ಲ ಅಂದರೆ ನಾವು ಬಿಜೆಪಿ ಜೆಡಿಎಸ್ ಗೆ ಧಿಕ್ಕಾರಿಸಿದಂತೆ ಕಾಂಗ್ರೆಸಿಗುನು ಧಿಕ್ಕಾರ ಹೇಳುವೆವು .
ಗ್ರೂಪುನಿಂದ ನಿರ್ಗಮಿಸಿ ಎಂದು ಹೇಳುವ ಅಗತ್ಯವಿಲ್ಲ, ನಾನು ಬಸವಾಭಿಮಾನಿಯಾಗಿ ಗ್ರೂಪ್ ಸೇರಿದ್ದೇನೆ. ಆದರೆ ಬಸವ ತತ್ವದ ಚರ್ಚೆಗಳ ಬದಲು, ರಾಜಕೀಯ ಕೆಸರೆರಚಾಟ ನೋಡಿ ನನ್ನ ಅಭಿಪ್ರಾಯ ತಿಳಿಸಿದೆ. ಬಸವ ತತ್ವದ ಚರ್ಚೆಗೆ ಗಮನ ಕೊಡಿ. ರಾಜಕೀಯ ಮಾಡೋದಕ್ಕೆ ಬೇರೆ ವ್ಯಕ್ತಿಗಳು ಬೇರೆ ವೇದಿಕೆಗಳಿವೆ
ಸಹೋದರ ಬಸ ಮೀಡಿಯಾದ ಲೇಖನಗಳು ಯಾವದೇ ರಾಜಕೀಯ ಪಕ್ಷಗಳಿಂದ ಕೃಪಾಪೋಷಿತವಾಗಿಲ್ಲ ಅದು ಲಿಂಗಾಯತ ಧರ್ಮ ಹಾಗೂ ಬಸವ ಮಾರ್ಗವನ್ನು ಅನುಸರಿಸುವವರ ಅಭಿಪ್ರಾಯ,ಅನಿಸಿಕೆ, ವ್ಯಕ್ತಪಡಿಸುವ ವೇದಿಕೆಯಾಗಿದೆ, ಆಗದಾರೇ ಕನ್ನೇರಿ ಸ್ವಾಮಿ ” RSS ನಾಟ್ಯ ಸಂಘ ನಾಗಪೂರದ ” ಪಾತ್ರದಾರಿಯೇ ?
ಬಸವ ಸಂಸ್ಕೃತಿ ಅಭಿಯಾನದ ಮೂಲ ಉದ್ದೇಶ ಬದಿಗಿಟ್ಟು ಕೇವಲ ಆರಕ್ಷಣೆ ಪಡೆಯುವ ಸಲುವಾಗಿ ಬಸವಣ್ಣನವರ ಸಮಾನತೆಗೆ ವಿರುದ್ಧವಾಗಿ ಜಾತಿ ಗಣತಿ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ಬೆನ್ನು ತಟ್ಟುತ್ತಿರುವದು ಎಷ್ಟು ಸರಿ.
ನಿಮಗೆ ಬೇರೆಯವರಿಗೆ ಸರ್ಟಿಫಿಕೇಟ್ ಕೊಡುವ ಜವಾಬ್ದಾರಿಯನ್ನು ಯಾರೂ ಕೊಟ್ಟಿಲ್ಲ. ನಿಮಗೆ ಆಸಕ್ತಿಯಿದ್ದಲ್ಲಿ ಕನೇರಿಯವರು ಮಾತನಾಡಿರುವ ವಿಷಯದಲ್ಲಿ ಏನಾದರೂ ಪ್ರತಿಕ್ರಿಯಿಸುವುದಿದ್ದರೆ ಪ್ರತಿಕ್ರಿಯಿಸಿ. ಇಲ್ಲವಾದಲ್ಲಿ ಆಸಕ್ತರು ಅವರವರ ಚಿಂತನೆಗೆ ಅನುಗುಣವಾಗಿ ಚರ್ಚಿಸುತ್ತಾರೆ ಅವರನ್ನು ಬಿಡಿ. ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವುದಿದ್ದರೆ ಮಾತನಾಡಿ. 🙏
ಸರ್, ನೇರವಾಗಿ ಈ ಬರಹದ ವಿಷಯಕ್ಕೆ ಬನ್ನಿ.
ಓಂ ಶ್ರೀ ಗುರು ಬಸವಲಿಂಗಾಯ ನಮಃ
ಶರಣು ಶರಣಾರ್ಥಿಗಳು ಸರ್ವರಿಗೂ
ಕನ್ನೆರಿಯ ಪೂಜ್ಯರು ಬಸವ ತಾಲಿಬಾನಿಗಳು ಅಂದಾಗಲೆ ಲಿಂಗಾಯತರು ಎಲ್ಲ ವಿರಕ್ತ ಮಠದ ಪೂಜ್ಯರು ಹಾಗೂ ಬಸವ ಭಕ್ತರು ಪ್ರತಿಬಟಿಸಬೇಕಿತ್ತು.
ಬಸವ ಸಂಸ್ಕೃತಿ ಅಭಿಯಾನದಲ್ಲಿ ನಾಲ್ಕು ಜನಾ ಸ್ವಾಮಿಜಿಗಳು ಮಾತ್ರಾ ಪ್ರಮುಖರು ಉಳದವರೆಲ್ಲಾ ಸಾದಕರನ್ನಾ ಬಟ್ಟೆ ಹಾಕಿಸಿಕೊಂಡು ಕರೆದಕೊಂಡು ಬಂದು ಕುಡಿಸಿದ್ದಾರೆ ಅನತಿರಲ್ಲಾ ತಾವು ಇದು ಸರಿನಾ ಪೂಜ್ಯರೆ ಕಾವಿಗೆ ಅದರದೆ ಆದ ಮಹತ್ವವಿದೆ ಎಲ್ಲರಿಗೂ ಕಾವಿ ಹಾಕಿಸಿಕೊಂಡು ಬಂದು ಕುಡಸೊದಾದರೆ ಜಗತ್ತನಲ್ಲಿ ಎಲ್ಲರೂ ಕಾವಿ ಹಾಕೊಂಡಬಿಡತಾರೆ ಅದಕ್ಕೆ ಅದರದ ಮಹತ್ವವಿದೆ.
ಬಸವ ಭೂಮಿಯು ಮತ್ತೆ ಬಸವಾದಿ ಪ್ರಮತರಿಂದ ವೈಭವದಿ ಮೆರೆಯಬೇಕು
ಬಸವ ತತ್ವ ಕ್ರಾಂತಿ ಅದು ಜಗದಲ್ಲಿ ತಾ ಮೊಳಗಬೇಕು
ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ
ಸಾಮಾಜಿಕ ಪರಿವರ್ತನೆಯ ಹರಿಕಾರ ದಿನ ದಲಿತ್ತೊದ್ದಾರಕ
ವಚನ ರಚನೆಯ ಕೃತ ಅಪ್ಪ ಬಸವಣ್ಣನವರು ಒಬ್ಬ ವ್ಯಕ್ತಿ ಅಲ್ಲಾ ಈ ಜಗದ ಶಕ್ತಿ
ಇಲ್ಲಿ ಪೂಜ್ಯರನ್ನು ಮಕ್ಕಳು ಬಸವತಾಲಿಬಾನಿಗಳು ಅನ್ನುವುದು ಅಷ್ಟೊಂದು ಅಸಮಂಜಸ ಅನಸ್ತಿಲ್ಲಾ ಪುಜ್ಯರೆ ತಾವು ಕಾವಿದಾರಿಗಳಾಗಿ ಮತ್ತೋಬ್ಬ ಕಾವಿದಾರಿಗೆಳ ಬಗ್ಗೆ ಮಾತಾಡುವುದು ತಪ್ಪು ನಮ್ಮ ಪ್ರಕಾರಾ
ನಾವು ಮೊದಲು ಇತಿಹಾಸದ ಪ್ರಕಾರ ಅಭ್ಯಾಸ ಮಾಡಿ ಯಾವುದು ಧರ್ಮ ಲಿಂಗಾಯತ ಅಥವಾ ಹಿಂದೂನಾ ಮೊದಲು ಅರಿತು ಸತ್ಯ ಸತ್ಯತೆ ಅರಿತು ನಂತರ ಮಾತನಾಡಬೇಕು.
ಬಸವ ಮೀಡಿಯಾ = ಬಸವ ತತ್ವ
ಸರಿಯಾದ ದಾರಿಯಲ್ಲಿ ಹೋಗುತ್ತಾ ಇದೆ. ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವಂಥ ಕೆಲಸ ಹೆಚ್ಚು ಹಚ್ಚು ಮಾಡಬೇಕು.
ವೇದಿಕೆ ಇಷ್ಟವಾಗದಿದ್ದರೆ ನಿರ್ಗಮಿಸುವುದು ನಿಮ್ಮ ಹಕ್ಕು.