ವಿಜಯಪುರ
ಕನ್ನೇರಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಖಂಡನೀಯ. ಹೀಗಾಗಿ ಕೂಡಲೇ ಅವರ ಮೇಲಿನ ನಿರ್ಬಂಧ ತೆರವುಗೊಳಿಸಬೇಕೆಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಕ್ರಾಂತಿವೀರ ಬ್ರಿಗೇಡ್ ನೇತೃತ್ವದ ನಿಯೋಗದೊಂದಿಗೆ ಶುಕ್ರವಾರ ಜಿಲ್ಲಾಡಳಿತಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸ್ವಾಮಿಯ ಮೇಲಿನ ನಿರ್ಬಂಧ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನೇರಿ ಸ್ವಾಮಿ ಒಂದು ಕರೆ ಕೊಟ್ಟರೆ ರಾಜ್ಯದಲ್ಲಿ ದಂಗೆ ಏಳುತ್ತದೆ. ಯಾರ ಮುಲಾಜಿಗೂ ಒಳಗಾಗದೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಸನ್ಯಾಸಿ ಅವರು. ಹಿಂದೂ ಸಮಾಜದಲ್ಲಿ ಲಿಂಗಾಯತರಲ್ಲಿ ಗುಂಪುಗಾರಿಕೆ ಆಗಲು ಕಾರಣವೇ ಈ ರಾಜ್ಯ ಕಾಂಗ್ರೆಸ್ ಸರ್ಕಾರ.
ಕನ್ನೇರಿ ಸ್ವಾಮಿ ನಮ್ಮೆಲ್ಲರಿಗೂ ದೇವರ ಸ್ವರೂಪ, ದೇವರು ಮಾಡದ ಹಾಗೂ ಸರ್ಕಾರ ಮಾಡದ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಸಾವಯವ ಕೃಷಿ, ಶೈಕ್ಷಣಿಕ ಸೇವೆ, ಸಾಮಾಜಿಕ ಸೇವೆ, ಆರೋಗ್ಯ ಸೇವೆ ಸೇರಿ ಅನೇಕ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅಂತಹ ಶ್ರೀಗಳಿಗೆ ರಾಜ್ಯ ಸರ್ಕಾರ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ನಿರ್ಬಂಧ ಹಾಕಿದ್ದು ಕೋಟಿ ಕೋಟಿ ಹಿಂದೂಗಳಿಗೆ ನೋವಾಗಿದೆ. ತಕ್ಷಣ ನಿರ್ಬಂಧ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಸಂಘ-ಪರಿವಾರ ಇಲ್ಲದೇ ಹೋಗಿದ್ದರೆ ಹಿಂದುಗಳೆಲ್ಲರೂ ಮುಲ್ಲಾಗಳಾಗಿರುತ್ತಿದ್ದೆವು. ಸರ್ಕಾರ ಮಾಡುವ ಕೆಲಸವನ್ನು ಸಂಘ-ಪರಿವಾರ ಮಾಡುತ್ತಿದೆ. ಸಂಘ-ಪರಿವಾರದ ಮೇಲೆ ಈ ಸರ್ಕಾರಕ್ಕೇಕೆ ದ್ವೇಷ ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇನ್ನೊಂದೆಡೆ ಸಚಿವ ಡಾ.ಎಂ.ಬಿ. ಪಾಟೀಲ ಸಹ ಹಿಂದು ಸಮಾಜವನ್ನು ಒಡೆಯುವಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಈ ವೇಳೆ ಕ್ರಾಂತಿವೀರ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ಕಾರ್ಯಾಧ್ಯಕ್ಷ ಕೆ.ಇ.ಕಾಂತೇಶ, ವೀರಣ್ಣ ಹಳೆಗೌಡರ, ರಾಹುಲ ಔರಂಗಾಬಾದ, ಕಾಶಿನಾಥ ಚನವೀರ, ರಾಜು ಬಿರಾದಾರ ಮುಂತಾದವರು ಹಾಜರಿದ್ದರು.

Whom ishwarappa is trying to threaten ?
ಇಂಥಹ ಮೂರ್ಖತನದ ಹೇಳಿಕೆಗಳಿಂದಲೇ ಮೂಲೆ ಗುಂಪಾಗಿರುವ ಈಶ್ವರಪ್ಪನವರೆ ನಿಮ್ಮಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ,ಕನ್ನೇರಿ ಸ್ವಾಮಿಯು ಸಮಾನ ವೃಂದದ ಸ್ವಾಮಿಯವರಿಗೆ ತುಚ್ಛ ಭಾಷೆ ಬಳಸಿ ಬೈದದ್ದು ಸರಿಯೇ ?, ಹೆಣ್ಣು ಮಕ್ಕಳಿಗೆ,ತಾಯಂದಿರಿಗೆ ಸೂ..ಎಂದು ಉಚ್ಛರಿಸಿದ ಶಬ್ದಗಳು ಎಷ್ಟು ಸರಿ ? ನೀವು ಒಬ್ಬ ರಾಜಕಾರಣಿಯಾಗಿ ಒಬ್ಬ ಸ್ವಾಮೀಜಿಯನ್ನು ಎತ್ತಿ ಕಟ್ಟಿ,ಜನರ ನಡುವೆ ನಡುವೇ ಬೆಂಕಿ ಹಚ್ಚುವುದು ಬಿಟ್ಟು, ಎಲ್ಲರನ್ನೂ ಒಂದಾಗಿಸಲು ಮುಂದಾಗಿ.
ಕನ್ನೇರಿ ಸ್ವಾಮೀಜಿ ಒಬ್ಬರು ಕರೆ ಕೊಟ್ಟರೆ ದಂಗೆ ಏಳುತ್ತದೆ ಎನ್ನುವ ದಂಗೆಕೋರ ಈಶ್ವರಪ್ಪನವರೇ ವಿರಕ್ತ ಮಠಗಳ ಮಠಾಧೀಶರ ಒಕ್ಕೂಟ ಕರೆ ಕೊಟ್ಟರೆ ಏನಾಗಬಹುದು ಅನ್ನುವ ಅರಿವು ನಿಮಗಿದೆಯಾ? ಇರಲಿ ನಾವು ಸಂವಿಧಾನದ ಅಡಿಯಲ್ಲಿ ಬದುಕುವವರು ಅಂತಹ ದಂಗೆಯೇಳುವ ಕರೆ ಕೊಡುವುದಿಲ್ಲ.