ಬೆಳಗಾವಿಯಲ್ಲಿ 29 ಸಭೆ; ಲಕ್ಷಾಂತರ ಜನ ಸೇರಿಸಲು ಚಿಂತನೆ
ವಿಜಯಪುರ
ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿಯ ಮೇಲೆ ವಿಧಿಸಿರುವ ನಿರ್ಬಂಧ ಹಿಂದೆ ಪಡೆಯದಿದ್ದರೆ ರಾಜ್ಯದಲ್ಲಿ ಶಾಂತಿ ‘ಕದಡುವ’ ಸಾಧ್ಯತೆಯಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಢಿ ನಡೆಸಿ ರಾಜ್ಯದಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಈಶ್ವರಪ್ಪ ಸರಕಾರಕ್ಕೆ ಕರೆ ನೀಡಿದರು.
“ಕನ್ನೇರಿ ಸ್ವಾಮಿಯ ಮೇಲೆ ವಿಧಿಸಿರುವ ನಿರ್ಬಂಧದಿಂದ ಇಡೀ ಹಿಂದೂ ಸಾಮಾಜದಲ್ಲಿ ಮುಖ್ಯವಾಗಿ ವೀರಶೈವ ಲಿಂಗಾಯತ ಸಮಾಜದಲ್ಲಿ ಆಕ್ರೋಶವಿದೆ. ಇದನ್ನು ವಾಪಸ್ಸು ತೆಗೆದುಕೊಂಡರೆ ಕರ್ನಾಟಕ ರಾಜ್ಯದಲ್ಲಿ ಶಾಂತಿ ಕಾಪಾಡುತ್ತದೆ. ಇಲ್ಲಾಂದರೆ ಮುಂದಿನ ಕಾರ್ಯಕ್ರಮಗಳನ್ನು ಅಕ್ಟೊಬರ್ 29ರ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.
ಆಕ್ರೋಶ ಹೊರಬರುವ ಮುಂಚೆ ನಿರ್ಬಂಧ ವಾಪಸ್ಸು ತೆಗೆದುಕೊಳ್ಳಲು ರಾಜ್ಯದಲ್ಲಿ ಶಾಂತಿ ಕದಡದ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ,” ಎಂದು ಹೇಳಿದರು.
ಬೆಳಗಾವಿಯಲ್ಲಿ ಸಭೆ
ಕನ್ನೇರಿ ಸ್ವಾಮಿಗೆ ಹಾಕಿದ ನಿರ್ಭಂದದ ಕುರಿತು ಮುಂದೆ ಹೇಗೆ ಹೋರಾಟ ಮಾಡಬೇಕು ಎಂದು ಅಕ್ಟೊಬರ್ 29ರಂದು ಬೆಳಗ್ಗೆ 11ಕ್ಕೆ ಬೆಳಗಾವಿಯ ವೆಲಕಮ್ ಹೊಟೇಲ್ ನಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಹಿಂದೂ, ಲಿಂಗಾಯತ, ವೀರಶೈವ ಮುಖಂಡರು ಭಾಗವಹಿಸಲಿದ್ದಾರೆ, ಎಂದು ಹೇಳಿದರು.
ಚಕ್ರವರ್ತಿ ಸುಲಿಬೆಲೆ, ಬಸನಗೌಡ ಪಾಟೀಲ ಯತ್ನಾಳ, ಪ್ರಮೋದ ಮುತಾಲಿಕ, ಸಿ.ಟಿ.ರವಿ, ಪ್ರತಾಪಸಿಂಹ, ಅರವಿಂದ ಬೆಲ್ಲದ, ನಾರಾಯಣಸಾ ಭಾಂಡಗೆ, ಈರಣ್ಣ ಕಡಾಡಿ, ಅಭಯ ಪಾಟೀಲ, ಸಂಜಯ ಪಾಟೀಲ, ಅರುಣ ಶಹಾಪುರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಕನ್ನೇರಿ ಸ್ವಾಮಿ ಹಾಗೂ ಅನೇಕ ಸಾಧು ಸಂತರು ಸಹ ಇದರಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ನಿರ್ಬಂಧದ ಬಗ್ಗೆ ಏನೇನು ರೂಪುರೇಷೆಗಳನ್ನು ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಲಿದ್ದೇವೆ.
ರಾಜ್ಯ ಸರಕಾರದ ಕಿವಿ ಹಿಂಡಲು ಲಕ್ಷಾಂತರ ಜನ ಸೇರಿಸುವುದೋ ಅಥವಾ ಮೌನವಾಗಿ ಹೋರಾಟ ಮಾಡಬೇಕೊ ಎಂಬ ವಿಚಾರ ಚರ್ಚಿಸಲಾಗುವುದು.
ಇದರ ಜೊತೆಗೆ ಕೋರ್ಟ್ ನಲ್ಲಿ ಏನು ಹೋರಾಟ ಮಾಡಬೇಕೋ ಅದನ್ನು ಮಾಡಲಾಗುತ್ತಿದೆ.

ವೀರಶೈವ, ಲಿಂಗಾಯತರಿಗೆ ‘ನೋವು’
ರಾಜ್ಯ ಸರಕಾರ ಹಿಂದೂ ಸಮಾಜವನ್ನು, ವೀರಶೈವ ಲಿಂಗಾಯತ ಸಮಾಜಗಳಿಗೆ ತೊಂದರೆ ಕೊಡುತ್ತಿದೆ, ಎಂದು ಈಶ್ವರಪ್ಪ ಆರೋಪಿಸಿದರು.
ಜಾತಿ ಗಣತಿ ಬಳಸಿಕೊಂಡು ವೀರೈಶವ ಲಿಂಗಾಯತ ಸಮಾಜಗಳನ್ನು ತುಂಡು ತುಂಡು ಮಾಡಿದೆ. ಕನ್ನೇರಿ ಸ್ವಾಮಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬರದಂತೆ ನಿರ್ಬಂಧ ಹಾಕಿದ್ದಾರೆ.
ವೀರಶೈವ, ಲಿಂಗಾಯತ, ಹಿಂದೂ ಸಮಾಜಗಳಿಗೆ ನೋವಾಗಿದ್ದು ಇದನ್ನು ಯಾರೂ ಕ್ಷಮಿಸುವುದಿಲ್ಲ.
ಕ್ಷಮೆ ಕೇಳಿದರೆ ನಿರ್ಬಂದ ವಾಪಸ್ ಎಂದು ಎಂ.ಬಿ.ಪಾಟೀಲ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅವರೊಬ್ಬರೇ ವಾಪಸ್ ಪಡೆಯಲು ಅಧಿಕಾರವಿದೆಯೆ?. ಕ್ಯಾಬಿನೆಟ್ ಇದೆ, ಅಲ್ಲಿ ತೀರ್ಮಾನ ಆಗಬೇಕಲ್ಲವಾ?
ನಿರ್ಬಂಧ ವಾಪಸ್ಸು ಪಡೆಯಲು ರಾಜ್ಯ ಸರ್ಕಾರದಲ್ಲಿ ಎಂ.ಬಿ.ಪಾಟೀಲ ಒಬ್ಬರಿಗೆ ಅಧಿಕಾರ ಕೊಟ್ಟಿದ್ದಾರಾ?. ಇಷ್ಟೆಲ್ಲ ಸಮಸ್ಯೆಗಳಿಗೆ ಅವರೊಬ್ಬರೆ ಇದರ ಮೂಲಪುರುಷ ಎಂದರು.
ರಾಜು ಕಂಬಾಗಿ, ರಾಹುಲ ಔರಂಗಾಬಾದ, ಪ್ರಭುಲಿಂಗ ದೊಡ್ಡಿನ, ಗುರುನಾಥ, ಬಿ.ಹೆಚ್.ಜೋಗಿ ಉಪಸ್ಥಿತರಿದ್ದರು.

ಕನ್ನೇರಿ ಸ್ವಾಮಿ ಬೆಂಬಲಕ್ಕೆ ನಿಂತಿರುವವರೆಲ್ಲಾ ಕೋರ್ಟ್ ಗಿಂತ ದೊಡ್ಡವರಾ ಇವರು?.ಇದನ್ನೆಲ್ಲಾ ವಿರೋಧಿಸುವವರು ಕೋರ್ಟ್ ಸಿಜೆಐ ಮೇಲೆ ಚಪ್ಪಲಿ ಎಸೆದಾಗ ಇವರೆಲ್ಲ ಯಾಕೆ ವಿರೋಧಿಸಲಿಲ್ಲ.ಈ ದೇಶದ ಜನರಿಗೊಂದು ನ್ಯಾಯ ಅವರಿಗೊಂದು ನ್ಯಾಯವೇ?ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ ನೂರಾರು ಸ್ವಾಮಿಗಳಿಗೆ ಈ ಕನ್ನೇರಿ ಸ್ವಾಮಿ ಸೂಳೆ ಹೊಕ್ಕಳು ಅವರಿಗೆಲ್ಲಾ ಚಪ್ಪಲಿಲೆ ಹೊಡಿಬೇಕು.ಈ ಅನಾಗರಿಕ ಕೀಳು ಭಾಷೆಯನ್ನು ಒಬ್ಬ ಮಠಾಧೀಶರು ಬಳಸುವುದು ಎಷ್ಟು ಸೂಕ್ತ.ಕನ್ನೇರಿ ಸ್ವಾಮಿ ಬೆಂಬಲಿಸುವವರೆಲ್ಲಾ ಈ ಭಾಷೆ ಬಳಸಿದ್ದಕ್ಕೆ ಕನ್ನೇರಿ ಸ್ವಾಮಿಯನ್ನು ಖಂಡಿಸಬಹುದಿತ್ತಲ್ಲಾ.ಇಂತಹವರ ಬೆಂಬಲಕ್ಕೆ ನಿಂತಿರುವವರೆಲ್ಲಾ ಇವರು ಸಹ ಅನಾಗರಿಕರು ಇರಬಹುದು?ಈ ಭಾಷೆ ಬಳಸಿದ ಕನ್ನೇರಿ ಸ್ವಾಮಿಯನ್ನು ಯಾವ ಬುದ್ಧಿವಂತರೂ ಒಪ್ಪುವುದಿಲ್ಲ.ಒಪ್ಪುವವರಿಗೆ ರಾಜಕಾರಣ ಬೇಕಾಗಿದೆ ಎಂಬುದು ತಿಳಿಯುತ್ತದೆ.
ಈ ನಾಲ್ವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ಇವೆ. ಇವರೇ ಶಾಂತಿ ಕದಡುವವರು. ನಿರ್ಬಂಧ ಹೇರಿದಾಗ ಶಾಂತಿಯಾಗಿ ಇದೆ. ಇವರೇ ಬೆಂಕಿ ಹಚ್ಚುತ್ತಾರೆ ಎಂದು ಹೇಳುತ್ತಿದ್ದಾರೆ
ಸಮಾಜದ ಶಾಂತಿಭಂಗ ಮಾಡುವರೆಲ್ಲರೂ ಭಯೋತ್ಪಾದಕರು ಇವರೆಲ್ಲ ಮನುವಾದಿ ಭಯೋತ್ಪಾದಕ ಸಂಘಿಗಳು
ಈಶ್ವರಪ್ಪ ಅಂಡ್ ಯತ್ನಾಳ್ ಭಯೋತ್ಪಾದಕರು. ಇವರು ಇದ್ದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ. ಇಂತಹ ಮಹಾನುಭಾವರಿಂದ ಕನ್ನೇರಿಗೆ ಪ್ರೋತ್ಸಾಹ ಸಿಗುತ್ತಿದೆ.
ಈಶ್ವರಪ್ಪ ಹೇಳಿಕೆ ಒಂದೇ ಸಾಕು ರಾಜ್ಯದಿಂದ ಗಡಿಪಾರು ಮಾಡಲು….
ಅಂದರೆ ಕನ್ನೇರಿಯ ಕಾಡನ್ನು ಶಾಶ್ವತವಾಗಿ ರಾಜ್ಯದಿಂದ ಕಳುಹಿಸಲು ಇವರೆಲ್ಲ ಅಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ 😂😂😂
ಇದು ಲಿಂಗಾಯತರ ಸಮಸ್ಯೆ.
ಲಿಂಗಾಯತರ ಈ ಸಮಸ್ಯೆಯಲ್ಲಿ ಲಿಂಗಾಯತರು ಅಲ್ಲದವರಿಗೇನು ಕೆಲಸ?
ಅವರ ಧರ್ಮದ ಬಗ್ಗೆ, ಅವರ ಜಾತಿಯ ವಿಷಯದಲ್ಲಿ ಲಿಂಗಾಯತರು ಮೂಗು ತೂರಿಸಿದರೆ ಸುಮ್ಮನೆ ಇರುತ್ತಾರೆಯೇ?
ಇವರು ಸಮಾಜದ ಶಾಂತಿ ಕದಡುವ ವಿಷಯಗಳಲ್ಲಿ ನಿಪುಣತೆ ಹೊಂದಿದ್ದು ನೆಲದ ಕಾನೂನು ಕಟ್ಟಳೆಗಳನ್ನು ಮುರಿಯುವ ವಿಷಯಗಳಲ್ಲಿ ನೈಪುಣ್ಯತೆ ಗಳಿಸಿದ್ದಾರೆ. ಇವರು ಕೊಟ್ಟಿರುವ ಪಟ್ಟಿಯಲ್ಲಿರುವ ಎಲ್ಲರಿಗೂ ಇಂತಹ ಸಾಮರ್ಥ್ಯವಿದೆ. ಇಂತಹ ವಿಷಯಗಳು ಯಾರಿಗೆ ಸಂಬಂಧಿಸಿರಲಿ ಅದಕ್ಕೆ ಹಿಂದೂ ಧರ್ಮದ ಬಣ್ಣ ಕೊಟ್ಟು ಕಾಂಟ್ರಾಕ್ಟ್ ತೆಗೆದುಕೊಳ್ಳುತ್ತಾರೆ. ಕಂಟ್ರಾಕ್ಟಿನ ಟರ್ಮ್ ಅಂಡ್ ಕಂಡೀಷನ್ ಪ್ರಕಾರ ಕಾರ್ಯಾಚರಿಸುತ್ತಾರೆ.
ಕನೇರಿಗೆ ಬೆಂಬಲ ನೀಡುವ ಈ ಎಲ್ಲಾ ಹಲ್ಕಾ ಸುಳೆಮಕ್ಕಳನ್ನು ಒದ್ದು ಒಳಗೆ ಹಾಕಿ ರಾಜ್ಯದಲ್ಲಿ ಶಾಂತಿ ಕಾಪಾಡಲು ಸರಕಾರಕ್ಕೆ ಎಚ್ಚರಿಕೆ ಇಲ್ಲದಿದ್ದರೆ ಇವರೇನ್ನಲ್ಲಾ ಬಸವ ಧರ್ಮದವರು ನೋಡಿಕೊಳ್ಳಬೇಕಾಗುತ್ತದೆ