ಲಿಂಗಾಯತ ಮಠಾಧೀಶರ ಒಕ್ಕೂಟ ಹೋರಾಟಕ್ಕೆ ಕರೆ ನೀಡಲಿ

ನಮ್ಮ ವಿರೋಧಿಗಳು ಒಬ್ಬೊಬ್ಬ ಸ್ವಾಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ

ಬಸವ ಕಲ್ಯಾಣ

ವಚನ ಶಾಸ್ತ್ರದ ಆಧಾರಿತವಾಗಿ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂಬುದನ್ನು ನಮ್ಮ ಹಿಂದಿನ ಪೂಜ್ಯರು, ಸಮಾಜದ ಹಿರಿಯ ಸಾಹಿತಿಗಳು, ಧರ್ಮದ ಮುತ್ಸದ್ಧಿಗಳು ಅತ್ಯಂತ ಸಮರ್ಥವಾಗಿ ಸಾಬೀತುಪಡಿಸುತ್ತಾ ಬಂದಿದ್ದಾರೆ.

ಸ್ವಾಮಿ ಲಿಂಗಾನಂದರ ಮತ್ತು ಪೂಜ್ಯ ಮಾತೆ ಮಹಾದೇವಿಯವರ, ಇಲಕಲ್ ಶ್ರೀಗಳ, ಗದುಗಿನ ಶ್ರೀಗಳ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ, ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಯಿತು. ಸಿದ್ಧೇಶ್ವರ ಶ್ರೀಗಳೂ ತಮ್ಮ “ಜಾಗತಿಕ ಧರ್ಮಗಳ ಸಾರ ಸೂಕ್ತಿಗಳು” ಪುಸ್ತಕದಲ್ಲಿ ಲಿಂಗಾಯತವೂ ಒಂದು ಸ್ವತಂತ್ರ ಧರ್ಮವೆಂದು ಹೇಳಿ, ಬಸವಣ್ಣನವರೇ ಲಿಂಗಾಯತ ಧರ್ಮದ ಸ್ಥಾಪಕರು ಎಂದು ಒಪ್ಪಿಕೊಂಡು, ಧರ್ಮದ ಆರು ಸೂಕ್ತಿಗಳನ್ನು ಗುರುತಿಸಿದ್ದಾರೆ.

ಎರಡು ದಶಕಗಳ ಕಾಲ ಜಗದ್ಗುರು ಮಾತೆ ಮಹಾದೇವಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಬಸವದಳವು ಏಕಾಂಗಿಯಾಗಿ ಹೋರಾಟ ಮಾಡುತ್ತಾ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂತು.

2017 ಮತ್ತು 2018ರ ಬೃಹತ್ ಲಿಂಗಾಯತ ರ್ಯಾಲಿಗಳ ಹೋರಾಟದ ನಂತರ, ಲಿಂಗಾಯತ ಧರ್ಮದ ಹೋರಾಟಕ್ಕಾಗಿಯೇ ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ಜಾಗತಿಕ ಲಿಂಗಾಯತ ಧರ್ಮ ಮಹಾಸಭಾ ಹುಟ್ಟಿಕೊಂಡಿತು.

ಈ ಸಂಘಟನೆಗೆ ಬಲ ತುಂಬಲು ಅನೇಕ ಬಸವಪರ ಸಂಘಟನೆಗಳು ಕೈಜೋಡಿಸಿದವು. ಕೆಲವೇ ವರ್ಷದಲ್ಲಿ ವೀರಶೈವ ಮಹಾಸಭಾಕ್ಕಿಂತಲೂ ಹೆಚ್ಚಿನ ಸದಸ್ಯತ್ವ ಹೊಂದಿ ಹೆಮ್ಮರವಾಗಿ ಬೆಳೆಯಿತು.

ಲಿಂಗಾಯತ ಧರ್ಮದ ಮುಖಂಡರಾದ ಎಸ್. ಎಂ. ಜಾಮದಾರ, ಸಚಿವ ಎಂ.ಬಿ. ಪಾಟೀಲರಂತವರು ಬಸವಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಶ್ರಮಿಸುತ್ತಿರುವುದಕ್ಕೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ.

ಲಿಂಗಾಯತ ಮಠಾಧೀಶರ ಒಕ್ಕೂಟದ ಕರೆಗೆ ಓಗೊಟ್ಟು ಲಿಂಗಾಯತ ಧರ್ಮದ ಪ್ರಸಾರ ಮತ್ತು ಪ್ರಚಾರ ಮಾಡಲು ಐದುನೂರಕ್ಕೂ ಹೆಚ್ಚು ಪೂಜ್ಯರು ಬಸವ ಸಂಸ್ಕೃತಿ ಅಭಿಯಾನಕ್ಕೆ ಕೈಜೋಡಿಸಿದ್ದು ಐತಿಹಾಸಿಕ ಬೆಳವಣಿಗೆ.

ಅಭಿಯಾನದಲ್ಲಿ ಒಂದು ತಿಂಗಳು ಪರ್ಯಂತರ ರಾಜ್ಯಾದ್ಯಾಂತ ಲಿಂಗಾಯತ ಧರ್ಮ ಪ್ರಚಾರ ಮಾಡಿ ನಿಮ್ಮ ಬದ್ಧತೆಯನ್ನು ಮೆರೆದಿರುವಿರಿ. ನಿಮ್ಮ ಸೇವಾ ಕೈಂಕರ್ಯಕ್ಕೆ ಧನ್ಯವಾದಗಳನ್ನು ಸಮರ್ಪಿಸಲೇಬೇಕು.

ಅಭಿಯಾನವು ಅಭೂತಪೂರ್ವ ಯಶಸ್ವಿಯಾಗುತ್ತಲೇ ಬಿಲ ಸೇರಿಕೊಂಡಿದ್ದ ಸನಾತನ ಧರ್ಮದ ಏಜೆಂಟರೆಂಬಂತೆ ವರ್ತಿಸುವ ಕೆಲ ಸ್ವಾಮಿಗಳು ಅಪಸ್ವರ ಎತ್ತಿದರು.

ಮಾಧ್ಯಮಗಳಲ್ಲಿ ಬೊಬ್ಬಿಟ್ಟುಕೊಂಡು ದಿಂಗಾಲೇಶ್ವರ ಸ್ವಾಮಿಗಳು ಮತ್ತೊಂದು ಸಮಾವೇಶ ಮಾಡಲು ಹೋದರು. ಅದಕ್ಕೆ ಬಂದ ಪ್ರತಿಕ್ರಿಯೆ ಎಲ್ಲರೂ ನೋಡಿದ್ದೀವಿ.

ಕನ್ನೇರಿ ಶ್ರೀಗಳು ತಾವೂ ಒಬ್ಬ ಕಾವಿಧಾರಿ ಸ್ವಾಮಿಗಳು ಎಂಬುದನ್ನು ಮರೆತು, ಮೈಮೇಲೆ ಪಿಶಾಚಿ ಬಂದಂತೆ ವರ್ತಿಸುತ್ತಾ, ಕೀಳುಪದ ಬಳಸಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳನ್ನು ಸಾರಾಸಗಟಾಗಿ ನಿಂದಿಸಿದರು. ಇದರಿಂದ ಸಾರ್ವಜನಿಕವಾಗಿ ಟೀಕೆ, ಪ್ರತಿಭಟನೆಗೆ ಗುರಿಯಾಗಿ ಎರಡು ಜಿಲ್ಲೆಯಿಂದ ನಿರ್ಬಂಧಕ್ಕೆ ಒಳಗಾಗಿದ್ದಲ್ಲದೆ ಹೈ ಕೋರ್ಟಿನಿಂದಲೂ ಛೀಮಾರಿ ಹಾಕಿಸಿಕೊಂಡು, ಮುಖಭಂಗ ಅನುಭವಿಸಿದರು.

ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಯಾದರೂ ಲಿಂಗಾಯತ ಮಠಾಧೀಶರ ಒಕ್ಕೂಟ ಬೆಂಗಳೂರಿನಲ್ಲಿ ಒಂದು ಸುದ್ದಿಗೋಷ್ಠಿ ನಡೆಸಿದ್ದು ಬಿಟ್ಟರೆ ಕಾನೂನಾತ್ಮಕವಾಗಿ ಯಾವುದೇ ರೀತಿಯ ಹೋರಾಟಕ್ಕೆ ಮುಂದಾಗಿಲ್ಲವೆಂಬುದು ಬೇಸರದ ಸಂಗತಿ.

ಇದರಿಂದ ಹರಕುಬಾಯಿ ಬಸವನಗೌಡ ಪಾಟೀಲ ಯತ್ನಾಳ, ಈಶ್ವರಪ್ಪರಂತವರಿಗೆ ಕಡಿವಾಣವಿಲ್ಲದಂತಾಗಿದೆ. ಸಾಣೆಹಳ್ಳಿ ಶ್ರೀ, ನಿಜಗುಣಾನಂದ ಶ್ರೀ, ಭಾಲ್ಕಿ ಶ್ರೀ, ಗದಗಿನ ಶ್ರೀಗಳನ್ನು ಗುರಿಮಾಡಿಕೊಂಡು ಮಾತನಾಡಲು ನಾವೇ ಅವಕಾಶ ಮಾಡಿಕೊಟ್ಟಂತಾಗಿದೆ. ಮಾಧ್ಯಮಗಳನ್ನು ಬಳಸಿಕೊಂಡು ಲಿಂಗಾಯತ ಪೂಜ್ಯರನ್ನೇ ತಪ್ಪಿತಸ್ಥರು ಎಂದು ಬಿಂಬಿಸಲು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ.

ಇದರಿಂದ ರಾಜ್ಯದ ಬಸವಭಕ್ತರಿಗೆ ಸಹಿಸಲಾಗದಷ್ಟು ನೋವಾಗಿದೆ.

ಈ ಸಂದರ್ಭದಲ್ಲಿ ನಮ್ಮ ಗುರುಗಳಾದ ಜಗದ್ಗುರು ಮಾತೆ ಮಹಾದೇವಿಯವರು ಎಷ್ಟೇ ಅಪಮಾನ, ಅವಮಾನಗಳು ಬಂದರೂ ದಿಟ್ಟತನದಿಂದ “ಎನ್ನ ವಾಮ ಕ್ಷೇಮ ನಿಮ್ಮದಯ್ಯ ಎನ್ನ ಮಾನ ಅಪಮಾನ ನಿಮ್ಮದಯ್ಯ..” ಎಂದು ಐದು ದಶಕಗಳ ಹೋರಾಟ ಮಾಡಿದ್ದನ್ನು ಸ್ಮರಿಸಿಕೊಳ್ಳಬೇಕು.

ತಮ್ಮ ಜ್ಞಾನ ಪ್ರತಿಭೆಯಿಂದ ಪಂಚಾಚಾರ್ಯರನ್ನ, ಕನ್ನೇರಿ ಸ್ವಾಮಿಯಂತಹ ನರಿ ಬುದ್ಧಿಯ ಅನೇಕ ಸ್ವಾಮಿಗಳ ಬಾಯಿ ಮುಚ್ಚಿಸಿ ಲಿಂಗಾಯತ ಧರ್ಮ ಹೋರಾಟದ ರಥವನ್ನು ದೆಹಲಿಯವರೆಗೆ ಕೊಂಡೊಯ್ದು ತಮ್ಮ ಗುರಿಯನ್ನು ಮುಟ್ಟಿದರು. “ನಾರಿಯೊಬ್ಬಳು ಬಂದು ಬಾರಿ ಅಬ್ಬರ ಹೊತ್ತು ಆರೂಢ ಬಿಕ್ಷೆ ಬೇಡ್ಯಾಳ ಸುವ್ವಿ ಮತ್ತಿನ್ನು ವೀರ ಬಸವಣ್ಣ ಬರುವಾಗ ಸುವ್ವಿ” ಎಂಬ ಕಾಲಜ್ಞಾನ ವಚನಕ್ಕೆ ಸಾಕ್ಷಿಯಾದರು.

ಲಿಂಗಾಯತ ಧರ್ಮವನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿರುವ ಪೂಜ್ಯರು ಸತ್ಯವಾದಿಗಳು, ಬಸವ ಸಂತಾನಿಗಳು. ಅವರ ಜೊತೆ ಲಕ್ಷಾಂತರ ಬಸವಭಕ್ತರಿದ್ದಾರೆ, ಅವರು ಧೈರ್ಯವಾಗಿ ಮುನ್ನಡೆಯಬೇಕು.

ಒಬ್ಬೊಬ್ಬ ಸ್ವಾಮಿಗಳನ್ನು ಟಾರ್ಗೆಟ್ ಮಾಡಿ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲು ನಮ್ಮ ಸೈದ್ಧಾಂತಿಕ ವಿರೋಧಿಗಳು ಮುಂದಾಗಿದ್ದಾರೆ.

ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆದಷ್ಟು ಬೇಗನೆ ಮತ್ತೊಂದು ಸುತ್ತಿನ ಸಭೆ ಕರೆದು ಕನ್ನೇರಿ ಶ್ರೀ ಮತ್ತು ಯತ್ನಾಳರಂತವರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕು ಎನ್ನುವುದು ನೂರಾರು ಕಿರಿಯ ಸ್ವಾಮಿಗಳ ಅಭಿಪ್ರಾಯ.

ಈ ನಿಟ್ಟಿನಲ್ಲಿ ಒಕ್ಕೂಟ ಏನು ನಿರ್ಧರಿಸಿದರೂ ನಾಡಿನ ಅಸಂಖ್ಯಾತ ಬಸವಭಕ್ತರು, ಸಾವಿರಾರು ಬಸವ ಸಂಘಟನೆಗಳ ಬೆಂಬಲವಿದೆ ಎನ್ನುವುದನ್ನು ಯಾರೂ ಮರೆಯಬಾರದು.

ಒಕ್ಕೂಟದ ಒಂದು ಕರೆಗೆ ಓಗೊಟ್ಟು ಜಿಲ್ಲೆ ಜಿಲ್ಲೆಗಳಲ್ಲಿಯೂ ಸಾವಿರಾರು ಜನ ಸೇರಿದ್ದರು. ಅವರಿಗೆಲ್ಲಾ ಈಗ ಮತ್ತೆ ಮಾರ್ಗದರ್ಶನ ಅಗತ್ಯವಿದೆ.

ಇದು ಸುಮ್ಮನೆ ಕೂರುವ ಸಮಯವಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
8 Comments
  • ಬಸವ ಪ್ರಭು ಶ್ರೀಗಳ ಕಾಳಜಿ ಅರ್ಥವಾಗುತ್ತದೆ ಮತ್ತು ಮೆಚ್ಚುತ್ತೇವೆ. ಸದ್ಯಕ್ಕೆ ಹೋರಾಟದ ಅವಶ್ಯಕತೆ ಇಲ್ಲ. ಡಾ. ಜಾಮದಾರ್ ರವರು ಸುಮ್ಮನೆ ಕುಳಿತಿಲ್ಲ. ಇದಕ್ಕಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ಸ್ವಲ್ಪ ಸಮಾದಾನವಾಗಿ ಅವರ ಸೂಚನೆ ಕಾಯೋಣ. ಮಠಾಧೀಶರ ಒಕ್ಕೂಟವು ಅವರ ಸಂಪರ್ಕದಲ್ಲಿದ್ದು ಈ ಬಗ್ಗೆ ಸಮಾಲೋಚನೆಗಳು ನಡೆಯುತ್ತಲೇ ಇದೆ.

    • ಜಾಮದಾರ ಸರ್ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯವಿದೆ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಲಿಂಗಾಯತ ಧರ್ಮ ಮಾನ್ಯತೆಗೆ ವರದಿ ಕೇಂದ್ರ ಸರ್ಕಾರಕ್ಕೆ ಕಳುಹಿದಾಗ ಇಲ್ಲಿಯ ಹಲ ಸ್ವಾಮಿಗಳು, ಬಿಜೆಪಿ ರಾಜಕಾರಣಿಗಳು ಧರ್ಮ ಒಡೆದರು ಎಂಬ ಹುಯಿಲನ್ನು ತಡೆಯಲು ಜಾಲಿಂಮ , ಅಷ್ಟೊಂದು ಸಮರ್ಥವಾಗಿ ಕೆಲಸ ಮಾಡಲಿಲ್ಲ ಎಂಬ ಅಭಿಪ್ರಾಯ ಬಸವಾಭಿಮಾನಿಗಳಲ್ಲಿ ವ್ಯಾಪಕವಾಗಿದೆ. ಸಿದ್ದು ಸರ್ಕಾರಕ್ಕೆ ಅದು ತುಸು ನಷ್ಟ ತಂದಿತು.
      ಈಗ ವ್ಯಾಪಕವಾಗಿ ಯತ್ನಾಳ, ಈಶ್ವರಪ್ಪ ಸೇರಿದಂತೆ ಹಲವರು ನಮ್ಮವರನ್ನು ಬಾಯಿಗೆ ಬಂದಂತೆ ಬಯ್ದರೂ ತೆಪ್ಪಗಿರುವುದೆಂದರೇನರ್ಥ. ಕಾನೂನಾತ್ಮಕ ಕ್ರಮ, ಪ್ರತಿಭಟನೆಗಳು ಅಗತ್ಯವಿದೆ.

  • ನಿಜವಾದ ನುಡಿಗಳು, ಎಲ್ಲಾ ಲಿಂಗಾಯತ ಮಠಾಧೀಶರು ಇಂಥಹ ಸುಳ್ಳು ಹೇಳಿಕೆಗಳಿಗೆ ಖಂಡನೆ ಗೈದು, ಅವರ ವಿರುದ್ಧ ಹೋರಾಟ ಮಾಡುವುದು ಒಳಿತು, ಇಲ್ಲವಾದರೆ ಇಂಥಹ ಲಿಂಗಾಯತ ವಿರೋಧಿಗಳು ದಿನಕ್ಕೊಂದು ಬಾಲ ಬಿಚ್ಚುತಲೇ ಇರುತ್ತಾರೆ.ಈ ಬಿಜೆಪಿ ಯವರಿಗೆ ಲಿಂಗಾಯತರು ಬೇಕಿಲ್ಲ ವೆಂಬಂತೆ ಮಾತನಾಡುತ್ತಿದ್ದಾರೆ,ಇದೇ ರೀತಿ ಹೇಳಿಕೆ ಕೊಟ್ಟು ಕೊಟ್ಟು ಕರ್ನಾಟಕದಲ್ಲಿ ನೆಲಕಚ್ಚಿದೆ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ಇವರಿಗೇನು ನಷ್ಟವಾಗುತ್ತದೆ,ಹಿಂದೆ ಸಿಖ್,ಜೈನ ಧರ್ಮಗಳಿಗೆ ಮಾನ್ಯತೆ ಸಿಕ್ಕಾಗ ಹಿಂದು ಧರ್ಮ ಒಡೆದಿದೆಯೇ,ಭಾರತ ದೇಶದಲ್ಲಿ ಇರುವವರೆಲ್ಲಾ ಹಿಂದು ಜನಾಂಗದವರೆ,ಹಿಂದು ಎಲ್ಲವನ್ನು ಒಳಗೊಂಡಿದೆ.ಇದನ್ನು ಅರಿತುಕೊಂಡು ನಡೆದರೆ ಮಾತ್ರ ಎಲ್ಲರಿಗೂ ಒಳಿತು.

  • ನೂರು ವರ್ಷದ ಇತಿಹಾಸವಿರುವ ವೀರಶೈವ ಮಹಾಸಭಾ ಕೂಡ ೨೦೨೩ ರ ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಲಿಂಗಾಯತರು ವೀರಶೈವರು ಹಿಂದೂಗಳಲ್ಲ , ನಮ್ಮದು ಸ್ವತಂತ್ರ ಧರ್ಮ ಎಂದು ಠರಾವು ಪಾಸು ಮಾಡಿದ್ದು ಈ ಬಾಯಿಹರುಕ ಯತ್ನಾಳನಿಗೆ ಏಕೆ ಕಾಣುವುದಿಲ್ಲ?

    ಕನ್ಹೇರಿ ಸ್ವಾಮಿ ವೀರಶೈವ ಮಹಾಸಭಾದ ಠರಾವಿನ ಕುರಿತು ಏಕೆ ಮಾತನಾಡಲ್ಲ ? ಪಂಚಪೀಠದ ಸ್ವಾಮಿಗಳ ಎದುರೇ ಈ ಠರಾವು ಪಾಸಾಗಿತ್ತಲ್ಲ ? ಇದರ ಕುರಿತು ಕನ್ಹೇರಿ ಸ್ವಾಮಿ ಏಕೆ ಮಾತನಾಡಲ್ಲ ?

    ಬಿಜೆಪಿಯಲ್ಲಿರುವ ಲಿಂಗಾಯತ ಮುಖಂಡರು , ಲಿಂಗಾಯತರನ್ಬೇ ಬೈಯ್ಯತ್ತ, ಲಿಂಗಾಯತ ಸ್ವಾಮೀಜಿಗಳನ್ನೇ ಹೀಯಾಳಿಸುತ್ತಾ ಯಾರನ್ನೋ ಮೆಚ್ಚುಸಲು ಹೋಗಿ ತಮ್ಮ ಸಮುದಾಯದ ಅಸ್ಮಿತೆಯಿಂದ ದೂರ ಹೋಗುತ್ತಿವೆ, ಮನೆಗೆ ಮಾರಿಯಾಗಿರುವ ಇಂತಹ ಅಂಜಬುರುಕ ರಾಜಕಾರಣಿಗಳಿಗೆ ಅದ್ಯಾವ ಭವಿಷ್ಯವೂ ಇಲ್ಲ .

  • ಹರಕಲು ಬಾಯಿಗೆ ಹೊಲಿಗೆ ಹಾಕೋಣ. ನಮ್ಮ ಮಠಾಧೀಶರು ಸಂಯಮ ಸಂಯಮ ಅಂತ ಹೇಳೋದು ನಿಲ್ಲಿಸಬೇಕು. ಮನಸ್ಸಿಗೆ ಬಹಳ ನೋವಾಗಿದೆ.

    ರಾಜಶೇಖರ್

  • ಸಂವಿಧಾನಕ್ಕೆ ವಿರೋಧಿಯಾಗಿ, ಕಾನೂನನ್ನೇ ಕೈಗೆ ತೆಗೆದುಕೊಳ್ಳುವ ದಂಗೆಯೇಳುವ ಮಾತುಗಳನ್ನಾಡುತ್ತಿರುವವರ ಹೇಳಿಕೆ ಮತ್ತು ಮಾತುಗಳನ್ನು ಸ್ವಾಗತಿಸಬೇಕು ಮತ್ತು ಮತ್ತು ಕಾನೂನಾತ್ಮಕವಾಗಿ ದಂಗೆಕೋರರ ಹುಟ್ಟಡಗಿಸಬೇಕು.

  • ಈ ಎರಡೂ ಸವಕಲು, ತಿಪ್ಪೆಸೇರಿದ ಅಗ್ಗದರಾಜಕಾರಣಿಗಳಿಗೆ ಕಾನೂನಾತಮ್ಕವಾಗಿ ಬುದ್ದಿ ಕಲಿಸಬೇಕು. ಆವಾಗ ಮಾಾತ್ರ ಮುಕುಳಿ ಮುಚ್ಚಿಕೊಂಡು ತೆಪ್ಪಗೆ ಇರುತ್ತಾರೆ.

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.