ಬಸವ ಸಂಸ್ಕೃತಿ ಅಭಿಯಾನಕ್ಕೆ ಪ್ರತಿಯಾಗಿ ಹಿಂದುತ್ವ ಸಂಘಟನೆಗಳ ಆಂದೋಲನ
ಬೆಳಗಾವಿ
ಇಂದು ಸುಪ್ರೀಂ ಕೋರ್ಟಿನಿಂದಲೂ ಛೀಮಾರಿ ಹಾಕಿಸಿಕೊಂಡಿರುವ ಕನ್ನೇರಿ ಸ್ವಾಮಿಗೆ ಬೆಂಬಲ ಸೂಚಿಸಲು ‘ಬಸವಾದಿ ಶರಣರ ಹಿಂದೂ ಸಮಾವೇಶ’ವನ್ನು ಹಿಂದೂ ಸಂಘಟನೆಗಳು ನಡೆಸಲಿವೆ ಎಂದು ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆ ಬುಧವಾರ ಹೇಳಿದರು.
ನೇರವಾಗಿ ಹೇಳದಿದ್ದರೂ ಬಸವ ಸಂಸ್ಕೃತಿ ಅಭಿಯಾನಕ್ಕೆ ಪ್ರತಿಯಾಗಿ, ಲಿಂಗಾಯತ ಮಠಾದೀಶರ, ಮುಖಂಡರ ವಿರುದ್ಧವಾಗಿಯೂ ಆಂದೋಲನ ನಡೆಯಲಿದೆ ಎಂದು ಸ್ಪಷ್ಟವಾಗಿ ಸೂಚಿಸಿದರು.
ಇಂದು ನಗರದಲ್ಲಿ ಕನ್ನೇರಿ ಸ್ವಾಮಿ ಪರವಾಗಿ ನಡೆದ ಹಿಂದೂ ಸಂಘಟನೆಗಳ ಸಭೆಯ ನಂತರ ಮಾಧ್ಯಮಗಳ ಜೊತೆ ಕೆಲವು ಮುಖಂಡರು ಮಾತನಾಡಿದರು.
ಹಿಂದೂ ಸಮಾಜವನ್ನು ಮತ್ತು ‘ವೀರಶೈವ ಹಿಂದೂ’ ಸಮಾಜವನ್ನು ಚೂರು ಚೂರು ಮಾಡಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ, ಎಂದು ಸೂಲಿಬೆಲೆ ಆರೋಪಿಸಿದರು. ಇದಕ್ಕೆ ವಿರುದ್ಧವಾಗಿ ಹಿಂದೂ ಸಂಘಟನೆಗಳು ಎಲ್ಲಾ ತಾಲೂಕುಗಳಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಿವೆ. ಕನ್ನೇರಿ ಸ್ವಾಮಿ ಮೇಲಿನ ನಿರ್ಬಂಧವನ್ನು ರದ್ದು ಪಡಿಸಲು 5,000 ವ್ಯಕ್ತಿಗಳಿಂದ ಹಸ್ತಾಕ್ಷರ ಪಡೆಯಲಾಗುವುದು. ನಂತರ 500 ಜನರ ನಿಯೋಗ ತಹಶೀಲ್ದಾರರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು.
ಜೊತೆಗೆ ಪ್ರತಿ ತಾಲೂಕಿನಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ವನ್ನೂ ಆಯೋಜಿಸಲಾಗುವುದು. ಇದರಲ್ಲಿ ‘ವೀರಶೈವ ಹಿಂದೂ’ ಸಮಾಜ ಮಾತ್ರವಲ್ಲದೆ ಇಡೀ ಹಿಂದೂ ಸಮಾಜ ಭಾಗವಹಿಸಲಿದೆ ಎಂದು ಸೂಲಿಬೆಲೆ ಹೇಳಿದರು.
ಸಚಿವ ಎಂ.ಬಿ. ಪಾಟೀಲ್ ಅವರ ಕ್ಷೇತ್ರ ಬಬಲೇಶ್ವರದಲ್ಲಿ ಶುರುವಾಗಿ ಬಸವಾದಿ ಶರಣರ ಹಿಂದೂ ಸಮಾವೇಶ ದಾವಣಗೆರೆಯಲ್ಲಿ ಸಮಾರೋಪಗೊಳ್ಳುವುದು. “ಎಲ್ಲಿ ಸಮಸ್ಯೆಗಳು ಆರಂಭವಾದವೋ ಅಲ್ಲೇ ಪರಿಹಾರ ಹುಡುಕಬೇಕು. ಈ ಕ್ಷಣದಿಂದಲೇ ಸಮಾವೇಶಕ್ಕೆ ಶುರು ಮಾಡಲಾಗುವುದು,” ಎಂದು ಸೂಲಿಬೆಲೆ ಹೇಳಿದರು.
ಎಲ್ಲೆಡೆ ಸಮಾವೇಶದಲ್ಲಿ ಭಾವಹಿಸುವಂತೆ ಕನ್ನೇರಿ ಸ್ವಾಮಿಗೂ ಆಹ್ವಾನಿಸಲಾಗುವುದು. ನಂತರದ ದಿನಗಳಲ್ಲಿ ಬಸವಾದಿ ಶರಣರ ತತ್ವವನ್ನು intellectual ಆಗಿ ಜನರಿಗೆ ತಿಳಿಸಲು ಪ್ರತ್ಯೇಕ ಪ್ರಯತ್ನ ಮಾಡಲಾಗುವುದು ಎಂದು ಸೂಲಿಬೆಲೆ ತಿಳಿಸಿದರು.
ಅದಕ್ಕೆ ಮುಂಚೆ ಮಾತನಾಡಿದ ವಕೀಲ ಎಂ.ಬಿ. ಜಿರ್ಲಿ “ಇಂದಿನ ಸಭೆಯ ಸಾನಿಧ್ಯವನ್ನು ಕನ್ನೇರಿ ಸ್ವಾಮಿ ವಹಿಸಿದ್ದರು. ಅವರ ಹಿಂದೆ ಇಡೀ ಹಿಂದೂ ಸಮಾಜವಿದೆ ಎಂದು ಧೈರ್ಯ ತುಂಬಿದ್ದೇವೆ,” ಎಂದು ಹೇಳಿದರು.
“ಬಸವಾದಿ ಶರಣರ ಮೂಲ ಚಿಂತನೆಯಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಮಠ ನಡೆಸುತ್ತಿದ್ದಾರೆ. ಕನ್ನೇರಿ ಸ್ವಾಮಿ ಹಿಂದೂ ಸಮಾಜ ಮುಂದೆ ತೆಗೆದುಕೊಂಡು ಹೋಗುತ್ತಿರುವ ಆಧುನಿಕ ರಾಮದಾಸರು,” ಎಂದು ಜಿರ್ಲಿ ತಿಳಿಸಿದರು.
ಅಲ್ಲಿದ್ದ ಪತ್ರಕರ್ತರು ಲಿಂಗಾಯತ ಮಠಾಧೀಶರ ವಿರುದ್ಧ ಅವಾಚ್ಯ ಪದ ಬಳಸಿದ್ದರ ಬಗ್ಗೆ ನೀವು ಯಾರೂ ವಿಷಾದ ವ್ಯಕ್ತ ಪಡಿಸುತ್ತಿಲ್ಲ ಎಂದು ಕೇಳಿದರು.
ಅದಕ್ಕೆ ಸೂಲಿಬೆಲೆ ಲಿಂಗಾಯತ ಸ್ವಾಮೀಜಿಗಳು ಹಿಂದೂ ದೇವರನ್ನು ಅವ್ಯಾಚ ಪದಗಳಲ್ಲಿ ನಿಂದಿಸಿದ್ದಾರೆ. ಅದಕ್ಕೆ ಕನ್ನೇರಿ ಸ್ವಾಮಿ ಸಹಜವಾದ ಸಾತ್ವಿಕ ಆಕ್ರೋಶದಿಂದ ಮಾತನಾಡಿದ್ದಾರೆ, ಎಂದು ಹೇಳಿದರು.
ಯಾವ ಯಾವ ಕಾಲದಲ್ಲೋ ನಡೆದ ಘಟನೆಗಳನ್ನು ಬಳಸಿಕೊಂಡು ಅಭಿಯಾನದಲ್ಲಿ ಪಾಲ್ಗೊಂಡ ಪೂಜ್ಯರನ್ನು ಯಾಕೆ ಟಾರ್ಗೆಟ್ ಮಾಡುತ್ತಿದೀರ ಎಂದು ಹಲವಾರು ಪತ್ರಕರ್ತರು ಕೇಳಿದರು.
ಸೂಲಿಬೆಲೆ ಉತ್ತರ ಕೊಡಲು ಚಡಪಡಿಸುತ್ತಿದ್ದಂತೆ, ಅದೇ ದಿಕ್ಕಿನಲ್ಲಿ ಹಲವಾರು ಪ್ರಶ್ನೆಗಳು ಬಂದು ಸುದ್ದಿಗೋಷ್ಠಿಯಲ್ಲಿ ಗೊಂದಲವಾಯಿತು. ಮುಂದುವರೆಯಲು ಸಾಧ್ಯವಾಗದೆ ಸೂಲಿಬೆಲೆ ‘ಕೇಳ್ರಪ್ಪ ಕೇಳ್ರಪ್ಪ’ ಎನ್ನುವುದು ಕೇಳಿಸಿತು.
ಪಕ್ಕದಲ್ಲಿ ಕುಳಿತಿದ್ದ ಬಸನ ಗೌಡ ಯತ್ನಾಳ್ – “ಉತ್ತರ ಕೇಳ್ತಾ ಇಲ್ಲ, ನೀವೇ ಪ್ರಶ್ನೆ ಕೇಳ್ತೀರಾ. ಪ್ರಶ್ನೆಗೆ ಉತ್ತರ ಕೊಡುವ ತನಕ ಸುಮ್ಮನಿರಬೇಕು” ಎಂದು ಪತ್ರಕರ್ತರ ಮೇಲೆ ಕಿಡಿ ಕಾರಿದರು.

“ಉತ್ತರ ಕೇಳಿಸಿಕೊಳ್ಳಲಿಲ್ಲ ಅಂತಂದ್ರೆ ನೀವು ಕನ್ನೇರಿ ಶ್ರೀಗಳಿಗಿಂತ ಕೆಟ್ಟದಾಗಿ ಮಾತಾಡುತ್ತಿದ್ದೀರಾ ಅಂತ ಅರ್ಥ,” ಎಂಬ ಮಾತೂ ಸೂಲಿಬೆಲೆ ಅವರ ಬಾಯಿಂದ ಬಂದಿತು.
ಆಗ ಮಾತನಾಡಿದ ಜಿರ್ಲಿ “ವೀರಶೈವ ಲಿಂಗಾಯತ ಸ್ವಾಮಿಗಳು ನೀವು ಮಾಂಸ ತಿನ್ನಿ, ಸೆರೆ ಕುಡೀರಿ, ದೇವರಗಳನ್ನ ಹೊಳೆಗೆ ಒಗೀರಿ, ಕುಂಕುಮ ಅರಿಶಿನ ಬಳೆ ಹಾಕೋಬೇಡ್ರಿ ಅಂತ ಹೇಳ್ತಾರೆ. ಇಲ್ಲಿಯವರಿಗೆ ಸಹಿಸಿಕೊಂಡು ಬಂದಿದ್ದೇವೆ.
ಇಲ್ಲಿಯವರೆಗೆ ಸ್ವಾಮೀಜಿಗಳು ಮಾತಾಡಿದ್ದಾರೆ, ಇನ್ನು ಮುಂದೆ ಸಮಾಜ ಮಾತನಾಡುತ್ತದೆ ಎಂದು ಎಚ್ಚರಿಕೆ ಕೊಡ್ತಾ ಇದ್ದೀವಿ. ಇಡೀ ವೀರಶೈವ ಲಿಂಗಾಯತ ಸಮಾಜದ ಆಕ್ರೋಶ ಕನ್ನೇರಿ ಸ್ವಾಮಿಯ ಬಾಯಿಂದ ಬಂದಿದೆ. ಇಲ್ಲಿಗೆ ಅವರು ನಿಲ್ಲಿಸದಿದ್ದರೆ ಇದು ಮುಂದುವರೆಯುತ್ತದೆ,” ಎಂದು ಹೇಳಿದರು.
ನಂತರ ಎಲ್ಲಾ ಮುಖಂಡರು ಎದ್ದು ನಿಂತು ಸುದ್ದಿಗೋಷ್ಠಿಯನ್ನು ಅರ್ಧದಲ್ಲಿಯೇ ಮುಗಿಸಿದರು.
ಚಕ್ರವರ್ತಿ ಸೂಲಿಬೆಲೆ, ಅರವಿಂದ ಬೆಲ್ಲದ, ಸಿ.ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಕತ್ತಿ, ಅಪ್ಪು ಪಟ್ಟಣಶೆಟ್ಟಿ, ವಕೀಲ ಎಂ.ಬಿ. ಜಿರ್ಲಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕನ್ನೇರಿ ಸ್ವಾಮಿ ಸುದ್ದಿಗೋಷ್ಠಿಗೆ ಹಾಜರಾಗಲಿಲ್ಲ.


ಲಿಂಗಾಯತ ಸ್ವಾಮೀಜುಗಳಿಗೆ ಸೂ- ಮಕ್ಕಳು ಎಂದಿದ್ದನ್ನು ಸಮರ್ಥಿಸಲು ಅಲ್ಲಿ ಹೋದ ಲಿಂಗಾಯತ ರಾಜಕಾರಣಿಗಳು ಎಲ್ಲಿ ಸಿಕ್ಕಿದರೂ ಅವರಿಗೆ ಪ್ರಶ್ನೆ ಕೇಳುತ್ತೇವೆ , ಇವರ ರಾಜಕಾರಣ ಜೀವನ ಇಲ್ಲೇ ಮುಗಿಯಲಿ, ಶಶಿಕಲಾ ಜೊಲ್ಲೆ ಇವರಿಗೆ ಲಿಂಗಾಯತ ಮಠಗಳಿಂದ ಸನ್ಮಾನ ಆಗಿದೆ ,ನಾಚಿಕೆ ಆಗಬೇಕು ಇವರು ಆ ಚಕ್ರವರ್ತಿ ಸೂಲಿಬೆಲೆ ನಿರ್ದೇಶನದಲ್ಲಿ ನಮ್ಮ ಸ್ವಾಮೀಜಿಗಳಿಗೆ ಅವಮಾನ ಮಾಡಿದ ಇಂತಹ ಅಸಹ್ಯ ಘಟನೆಯನ್ನು ರಾಜಕಾರಣಕ್ಕೆ ಬಳಸುವ ಇವರ ರಾಜಕೀಯ ಜೀವನ ಇಲ್ಲಿಂದ ಹಾಳಾಗಲಿದೆ .
ಹಣೆಯ ಮೇಲಿನ ಸನಾತನ ಕುಂಕುಮ ಅಳಿಸಿ ಶರಣರ ವಿಭೂತಿ ಧರಿಸಿ ತಮ್ಮ ಮಠದೊಳಗೆ ಏಕಾಂತದಲ್ಲಿ ಕೂತು ಮೂರುದಿನ ಇಷ್ಟಲಿಂಗ ಪೂಜೆ ಮಾಡಿರಿ ಕಳ್ಳೇರಿಸ್ವಾಮಿಗಳೆ.
ಪಶ್ಚಾತ್ತಾಪದ ನಂತರ ಸಾಣೇಹಳ್ಳಿಗೆ ಬಂದು ನಾಲಗೆಯನ್ನ ಸಾಣೆಹಿಡಿಸಿಕೊಂಡು ಹೋಗಿರಿ. ಇಲ್ಲಿ ಸಲ್ಲದವನು ಎಲ್ಲೂ ಸಲ್ಲುವುದಿಲ್ಲ. ಇಲ್ಲಿ ಸಲ್ಲುವರು ಎಲ್ಲೂ ಸಲ್ಲುವರು.
ತಮ್ಮನ್ನು ಮುಂದೆ ಹೊಗಳಿ ಹಿಂದೆ ತೆಗಳುತ್ತ ಪಟ್ಟಕ್ಕೇರಿಸಿದವರು ಕರೆದೊಯ್ದು ಹಾಳುಬಾವಿಗೆ ನೂಕಿದ ಮೇಲೂ ಹಣೆಗೆ ಬಳಿದ ದುಂಡು ಕುಂಕುಮ ನಾಮವಾಗುವಂತೆ ತಿಕ್ಕಿಕೊಂಡು ಲಿಂಗಾಯತ ಮಠಾಧೀಶರ ಎದುರು ಸಮರಕಲೆ ಪ್ರದರ್ಶಕ್ಕೆ ಇಳಿಯಬರಬೇಡಿ.
ತಮ್ಮಿಂದ ದೂರಾದ ಅಭಿಮಾನಿಗಳ ವಿರಹ ವೇದನೆ ಕಾಡಿದರೆ ಸನ್ಯಾಸ ತ್ಯಜಿಸಿ ಮಠ ತೊರೆದು ಸರ್ಕಸ್ ಕಂಪನಿಕಟ್ಟಿ ರಿಂಗ್ ಮಾಸ್ಟರ್ ಆಗಿರಿ. ನಾವು ಖಂಡಿತ ಪ್ರೇಕ್ಷಕರಾಗಿ ಬರುತ್ತೇವೆ.
ಯಾರೂ ಮಾಡದ ಸಾಧನೆ ಮಾಡಿದೆನೆಂಬ ಗರ್ವವನ್ನು ನಿಮ್ಮ ನಾಲಗೆಯೆ ಸಹಿಸದೆ ಕಡುದರ್ಪದ ಕೆಟ್ಟನುಡಿಗಳ ಒದರಿಸಿ ಮೂಗು ಮುರಿಸಿದೆ. ಪಂಚೇಂದ್ರಿಯಗಳು ಹಿಡಿತ ತಪ್ಪಿದರೆ ಹೇಗೆ ಮಣ್ಣು ಮುಕ್ಕಿಸುತ್ತವೆ ಎಂಬ ಪಾಠವನ್ನು ಸಮಾಜದ ಎಲ್ಲ ಭಕ್ತರಿಗೆ ಗುರುಗಳಿಗೆ ಕಲಿಸಿದೆ. ಹೀಗಾಗಿ ನೀವೊಬ್ಬ ಮಾಡೆಲ್ ಗುರೂಜಿ ಆದಿರಿ. ಶರಣಾರ್ಥಿಗಳು ಕನ್ನೆ ಗುರೂಜಿ.🙏💐
ಹೈಕೊರ್ಟನಿಂದ ಸುಪ್ರಿಮ್ ಕೊರ್ಟನಿಂ ದಛೀಮಾರಿ ಹಾಕಿಸಿದ ಪುಣ್ಯಾತ್ಮರಿಗೆ ಇನ್ನೂ ಸಮಾಧಾನ ಆಗಿಲ್ವ
ಹೈಕೊರ್ಟನಿಂದ ಸುಪ್ರೀಮ್ರ ಕೋರ್ಟನಿಂದ ಛೀಮಾರಿ ಹಾಕಿಸಿದರೂ ಅವರಿಗೆ ಇನ್ನೂ ಸಮಾಧಾನ ಆಗಿಲ್ಲ. ವೀರಶೈವ ಲಿಂಗಾಯತ ಸ್ವಾಮಿಗಳಿಗೆ ಇನ್ನೂ ಊರೂರಿಗೆ ತೆರಳಿ ಛೀಮಾರಿ ಹಾಕಿಸಬೇಕೆನ್ನುತ್ತಿದ್ದಾರೆನೋ. ಇಷ್ಟಾದರೂ ನಮ್ಮ ಪೂಜ್ಯರು ರಾಜಕೀಯ ನೇತಾರರು ಅವರ ಒಳಾರ್ಥ ಅರಿತುಕೊಳ್ಳದೆ ಎಚ್ಚರಾಗದಿರುವುದು ಕಲಿಯುಗದ ಸೋಜಿಗ.
ಭಯ ಶುರುವಾಗಿದೆ ಬ್ರಹಾಂನರಿಗೆ ದೇಶ ಬಿಡ್ಬೇಕಾಗುತ್ತದೆ ಎಂದು ಲಿಂಗಾಯತ ಧರ್ಮ ಮಾನ್ಯತೆ ಸಿಕರೇ
ಇನ್ನೇಲಿ ಪತ್ತಿಕಾ ಗೋಷ್ಟಿಗೆ ಹಾಜರಾಗುತ್ತಾನೆ.
ಹರಿದ ಚಡ್ಡಿ ಹೊಲೊಕೋತ ಮೂಲ್ಯಾಗ ಕುಂತಿರುತ್ತಾನೆ?
ಇವನು ಯಾರು ಲಿಂಗಾಯತ ಧರ್ಮದ ವಿಷಯ ದಲ್ಲಿ ಬರಲು. ? ಒಂದು ಮಾತು ಮಿಸ್ಟರ್ ಸುಳಿ ಬೆಲೆ. ನಿಂಗೆ ಒಂದು ಮಾತು ಹೇಳುತ್ತಿವೆ ನಾವೂ ಲಿಂಗಾಯತ ಧರ್ಮದ ಜನರು. ಹುಚ್ಚು ಹುಚ್ಚು ಲಿಂಗಾಯತ r ವಿಷಯದಲ್ಲಿ ಬಂದರೆ. ಒದೆ ಬೀಳುತ್ತವೆ ಎಚ್ಚರಿಕೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಏಕೆ ಹಿಂದೂ ಧರ್ಮ ತೇಜಿಸಿದರು ಎಂದು ಹೆಂಗ ಪುಂಗ್ಲಿ ಅವರು ಹೇಳಬೇಕು
ಸುಪ್ರೀಂ ಕೋರ್ಟ್ ಕನ್ನೇರಿ ನಾಲಿಗೆಗೆ ಕಡಿವಾಣ ಹಾಕಿದೆ,ಇದು ಸಂವಿಧಾನದ ತೀರ್ಪು, ಸಂವಿಧಾನಕ್ಕೆ ಬೆಲೆ ಕೊಡುವವರೆಲ್ಲರೂ ತೀರ್ಪಿನ್ನು ಒಪ್ಪಿಕೊಂಡು ನಡೆಯುವುದು ಒಳಿತು.ಇವರು ಹಿಂದುತ್ವವಾದಿಗಳಾಗಿ ಲಿಂಗಾಯತರನ್ನು ಹಿಂದು ಸಮಾಜದಿಂದ ದೂರ ಮಾಡಲು ಹೊರಟಿದಂತೆ ಕಾಣುತಿದೆ.ಇದು ಒಳ್ಳೆಯದಲ್ಲ, ನಮ್ಮನ್ನು ನಾವೇ ಹೀಯಾಳಿಸಿಕೊಂಡು ಬೇರೆಯವರಿಗೆ ಆಸ್ಪದ ಕೊಟ್ಟಂತೆ ಆಗುತ್ತಿದೆ.ತಪ್ಪು ಯಾರೇ ಮಾಡಲಿ ಅವರನ್ನು ಕೂಡಿಸಿ ಚರ್ಚಿಸಿ ಜಾರಿ ಕಂಡುಕೊಳ್ಳುವುದು ಒಳಿತು, ಇಲ್ಲದಿದ್ದರೆ ಮುಂದೊಂದು ದಿನ ನಮಗೆ ಗಂಡಾಂತರ ಖಚಿತ.
300 ಜನ ಮಠಾಧೀಶರ ಪೂಜ್ಯ ತಾಯಂದಿರಿಗೆ ಅವಾಚ್ಯ ಶಬ್ದ ಬಳಸಿ ಅಗೌರವ ತೋರಿದ್ದಕ್ಕೆ ಹೈಕೋರ್ಟ್, ಸುಪ್ರೀಮ್ ಕೋರ್ಟ್ ಛೀಮಾರಿ ಹಾಕಿದ್ದರು salade? ಅವರನ್ನು ಮೌನವಾಗಿ ಕುಳಿತು ಇರಲು ತಿಳಿಹೇಳಿದ್ದಾರೆ. ಅದಕ್ಕೆ ಸೂಕ್ತ ಕಾರಣ ನೀಡಿದ್ದರಲ್ಲವೇ ?
ಶರಣು ಶರಣಾರ್ಥಿ. ಎಲ್ಲರಿಗೂ ಶುಭವಾಗಲಿ
ತುಳಿತಕ್ಕೆ ಒಳಗಾದವರೆಲ್ಲರಿಗೂ ದೇವರ ಅರಿವನ್ನು ಪೂಜಿಸುವ ಸ್ವಾತಂತ್ರ್ಯವನ್ನು ನೀಡಿದ ಬಸವಣ್ನ ಹಾಗೂ ಬಸವಾದಿ ಶರಣರ ಖಗ್ಗೋಲೆ ಕಲ್ಲಾಣ ಹಾಳು ಮಾಡಿದವರ ಬಗ್ಗೆನು ಬಹಳ ವಿಸ್ತಾರವಾಗಿ ಬಸವಾದಿ ಶರಣರ ಸಮಾವೇಶ ಮಾಡಿ ಸತ್ಯ ಹೇಳಲಿ.
ಈ ಸಭೆಯಲ್ಲಿ ನಮ್ಮ ಲಿಂಗಾಯತ ನಾಯಕರು ಸೇರ್ಕೊಂಡು ಬಸವಣ್ಣನವರಿಗೆ ದ್ರೋಹ ಬಗೆಯುತ್ತಿದ್ದಾರೆ ಲಿಂಗಾಯಿತ ಧರ್ಮಕ್ಕೆ ದ್ರೋಹ ಎಸ್ಕೊತಿದ್ದಾರೆ ಇದ್ದಾರೆ ಇವರಿಗೆ ಕನಿಷ್ಠ ಜ್ಞಾನವು ಇಲ್ಲ ಅವನು ಮಾತಾಡಿದ್ದನ್ನು ಸಮರ್ಥನೆ ಮಾಡ್ಕೊಳ್ಳತಕ್ಕಂತಹ ಅಂದರೆ ಇವರು ತಾಯಿಗೂ ಅದು ಅನ್ವಯಿಸಲ್ವೇ