ಧಾರವಾಡ
ಧಾರವಾಡ ಜಿಲ್ಲೆಗೆ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿ ಬರುವುದನ್ನು ನಿರ್ಬಂಧಿಸಿ ಆದೇಶಿಸಬೇಕೆಂದು, ಬಸವಪರ ಸಂಘಟನೆಗಳ ವತಿಯಿಂದ ಜಿಲ್ಲಾ ಉಸ್ತುವಾರಿ ಮಂತ್ರಿ ಸಂತೋಷ ಲಾಡ್ ಅವರನ್ನು ಇಲ್ಲಿನ ಸರ್ಕ್ಯೂಟ್ ಹೌಸ್ ನಲ್ಲಿ ಶನಿವಾರ ಭೇಟಿಯಾಗಿ ಮನವಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರಿಗೆ ಸಚಿವರು ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲು ಸೂಚಿಸಿದರು.

ಸಂಘಟನೆಯ ಬಿ.ಎಸ್. ತೋಟದ, ಪ್ರಭು ನಡಕಟ್ಟಿ, ಶಿವಾನಂದ ಶೆಟ್ಟನ್ನವರ್, ಸಿ.ಜಿ. ಪಾಟೀಲ, ಅನೀಲ ಅಂಗಡಿ, ಅಭಿಷೇಕ ರಾಯಕೊಪ್ಪ, ಶಿವರುದ್ರಗೌಡ ಪಾಟೀಲ, ಅರುಣ ಮೂಡಿ ಮತ್ತಿತರರು ಇದ್ದರು.
ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ನವೆಂಬರ್ 7 ಕನ್ನೇರಿ ಸ್ವಾಮಿ ಬರಲಿದ್ದಾರೆಂದು ತಿಳಿದು ಬಂದಿದೆ. ಅವರು ಜಿಲ್ಲೆಗೆ ಬಂದರೆ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆಯೆಂದು ಅಣ್ಣಿಗೇರಿ ಮತ್ತು ಧಾರವಾಡದಲ್ಲಿ ಬಸವ ಸಂಘಟನೆಗಳು ಸರಕಾರವನ್ನು ಎಚ್ಚರಿಸಿವೆ.
