ಬೆಂಗಳೂರು
“ಆರೆಸ್ಸೆಸ್ನವರು ಒಳ್ಳೇ ಕೆಲಸ ಮಾಡುತ್ತಿದ್ದಾರೆ ಅಂತ ಲಿಂಗಾಯತ ಹುಡುಗರು ಅಲ್ಲಿಗೆ ಹೋಗಿದ್ದಾರೆ. ನಮಗೆ ಅನ್ಯಾಯವಾಗುತ್ತಿದೆ ಅಂತ ಗೊತ್ತಾದರೆ ಹೊರಗೆ ಬರುತ್ತಾರೆ,” ಎಂದು ಬಸವಧರ್ಮ ಪೀಠದ ಪೂಜ್ಯ ಮಾತೆ ಗಂಗಾದೇವಿ ಭಾನುವಾರ ಹೇಳಿದರು.
ನಗರದಲ್ಲಿ ನಡೆದ ರಾಷ್ಟ್ರೀಯ ಬಸವದಳದ ಜಿಲ್ಲಾ ಸಮ್ಮೇಳನದ ದಿವ್ಯ ಸಾನಿಧ್ಯವಹಿಸಿದ್ಧ ಗಂಗಾ ಮಾತಾಜಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಆರೆಸ್ಸೆಸ್ನಲ್ಲಿರುವ ಲಿಂಗಾಯತ ಹುಡುಗರನ್ನು ಬಸವ ತತ್ವದ ಕಡೆ ತರುತ್ತೀರಾ ಎಂದು ಪತ್ರಕರ್ತರೊಬ್ಬರು ಕೇಳಿದರು. ಅದಕ್ಕೆ ಉತ್ತರಿಸುತ್ತಾ ಗಂಗಾ ಮಾತಾಜಿ “ನಾವೇಕೆ ಕರೆಯಬೇಕು, ಅವರಾಗಿಯೇ ಬರುತ್ತಾರೆ. ನಮಗೆ ಅನ್ಯಾಯವಾಗುತ್ತಿದೆ ಎಂದು ನಮ್ಮ ಮಕ್ಕಳಿಗೆ ಗೊತ್ತಾದಾಗ ತಾವೇ ಬರುತ್ತಾರೆ,” ಎಂದು ಹೇಳಿದರು.

ಅದಕ್ಕಿಂತ ಮುಂಚೆ ಮಾತನಾಡಿದ ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್ ಕನ್ನೇರಿ ಸ್ವಾಮಿಗೆ ಸುಪ್ರೀಂಕೋರ್ಟ್ ಚೀಮಾರಿ ಹಾಕಿದೆ. ಆದರೂ ಆರೆಸ್ಸೆಸ್ (ಯತ್ನಾಳ್), ರಾಮಕೃಷ್ಣ ಆಶ್ರಮದಿಂದ (ಚಕ್ರವರ್ತಿ ಸೂಲಿಬೆಲೆ) ಬಂದವರು ಅವರನ್ನು ಬೆಂಬಲಿಸುತ್ತಿರುವುದನ್ನು ಅವರ ನೈತಿಕ ಅಧಃಪತನ ತೋರಿಸುತ್ತದೆ, ಎಂದರು.
“ರಾಷ್ಟ್ರೀಯ ಬಸವದಳದ ಹುಡುಗರು ಆರೆಸ್ಸೆಸ್, ಯುವ ಬ್ರಿಗೇಡ್ ನಲ್ಲೂ ಇದ್ದಾರೆ. ಎಲ್ಲೆಲ್ಲಿ ಒಳ್ಳೆ ಕೆಲಸ ನಡೆಯುತ್ತದೋ ಅಲ್ಲೆಲ್ಲ ಹೋಗ್ರಿ ಅಂತ ಹೇಳ್ತೀವಿ. ಆದರೆ ಲಿಂಗಾಯತ ಧರ್ಮದ ತಂಟೆಗೆ ಬಂದರೆ ಬಸವ ಸಂಘಟನೆಗಳು ಸುಮ್ಮನಿರೋದಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇವೆ,” ಎಂದು ಹೇಳಿದರು.

ನಾನು ಸುಮಾರು, ಒಂದು ವರ್ಷ ಯುವಾ ಬ್ರಿಗೆಡನಲ್ಲಿದ್ದೆ. ಸೂಲಿಬೆಲೆಯವರು, ದೇಶಭಕ್ತಿ ಬಗ್ಗೆ ಚೆನ್ನಾಗಿ ಮಾತಾಡ್ತಾರೆ, ಆದರೆ ಇವತ್ತು ಅದರ ಹೊರಗಡೆ ಬಂದು ನೊಡಿದಾಗ, ಅವರ ಯಾವ ಭಾಷಣದಲ್ಲೂ ಬಸವಾದಿ-ಶರಣರ ವಚನಗಳ ಬಗ್ಗೆ, ಅವರಿಗಾದ ನೋವು, ಕೊಲೆ, ವಚನಗಳ ನಾಶ ಬಗ್ಗೆ ಮಾತನಾಡುವ ಗೊಜಿಗೆ ಹೊಗಲಿಲ್ಲ, ಯಾಕೆ ಅವು ಈ ದೇಶದ ಸಂಪತ್ತು ಅಲ್ವಾ? ಲಿಂಗಾಯತರ ನೋವು, ಇತಿಹಾಸಕ್ಕೆ ಬೆಲೆ ಇಲ್ವಾ? , ಎಲ್ಲೊ ಒಂದು-ಎರಡು ಬಿಟ್ಟರೆ, ಗಾಂಧಿ, ಅಂಬೆಡ್ಕರ ಬಗ್ಗೆಯು ಅವರ ಭಾಷಣಗಳು ಅತಿ ವಿರಳ.
ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ, ದೇಶಭಕ್ತಿ ಅಂದರೆ, ಈ ಎಲ್ಲ ಜನಾಂಗದ ಮಧ್ಯೆ ಸಹಬಾಳ್ವೆ, ಸೌಹಾರ್ದತೆ ಕಾಪಾಡಿ ಹೇಗೆ ದೇಶ ಕಟ್ಟಬೇಕು ಎಂಬ ಚಿಂತನೆ ನಡೆಯಬೇಕು.
ಆದರೆ, ಇತ್ತಿಚೆಗೆ ಅವರು ಕೂಡ, ಒಂದು ಧರ್ಮದಿಂದ ದೇಶ ಕಟ್ಟಬಹುದು ಅಂತ ಹೊರಟ ಹಾಗೆ ಕಾನುತ್ತೆ.