ಕನ್ನೇರಿ ಸ್ವಾಮಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧ ಸರಿಯಲ್ಲ: ಶ್ರೀಶೈಲ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಶಹಾಪುರ ವೀರಶೈವ ಮಠದಲ್ಲಿ ಕನ್ನೇರಿ ಸ್ವಾಮಿ ಬೆಂಬಲ ಸಭೆ

ವಿಜಯಪುರ:

ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗೆ ಕೆಲವು ಜಿಲ್ಲೆಗಳಲ್ಲಿ ನಿರ್ಬಂಧ ಹೇರಿರುವುದು ಸರಿಯಲ್ಲ. ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡು ಮಾತಾಡಿದ್ದಾರೆ, ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಿಲ್ಲೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನೇರಿ ಸ್ವಾಮಿ ಬಳಸಿದ ಭಾಷೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಭಾಷೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕಿತ್ತು. ಆದರೆ ಅವರ ವಿಚಾರಧಾರೆ ಸರಿಯಿದೆ,  ಎಂದರು.

ಬಸವ ಸಂಸ್ಕೃತಿ ರಥಯಾತ್ರೆ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಮುನ್ನೆಲೆಗೆ ಬಂದಿದೆ, ಆದರೆ ಪ್ರತ್ಯೇಕ ಲಿಂಗಾಯತ ಧರ್ಮ ಎನ್ನುವುದು 10-20 ವರ್ಷಗಳಿಂದ ಹುಟ್ಟಿಕೊಂಡಿದೆ. ಪ್ರತ್ಯೇಕ ಲಿಂಗಾಯತ ಧರ್ಮವೆಂದು ಹೇಳುವವರ ಶಾಲಾ ದಾಖಲಾತಿಯಲ್ಲಿ ವೀರಶೈವ ಇರುವುದನ್ನು ನೋಡುತ್ತೇವೆ ಎಂದು ಹೇಳಿದರು.

ವೀರಶೈವ ಮಠದಲ್ಲಿ ಕನ್ನೇರಿ ಸ್ವಾಮಿ ಬೆಂಬಲ ಸಭೆ

ಶ್ರೀಶೈಲ ಶ್ರೀಗಳ ಹೇಳಿಕೆಯ ಹಿನ್ನೆಲೆಯಲ್ಲಿಯೇ ಕನ್ನೇರಿ ಸ್ವಾಮಿ ಬೆಂಬಲಿಸಿ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಹಿಂದೂ ಹಾಗೂ ವೀರಶೈವ ಸಮಾಜದ ಮುಖಂಡರ ಸಭೆ ಮಂಗಳವಾರ ನಡೆದಿದೆ.

ಪಟ್ಟಣದ ಕುಂಬಾರಗೇರಿ ಹಿರೇಮಠದಲ್ಲಿ ನಡೆದ ಸಭೆಯಲ್ಲಿ ಮಠದ ಸುಗೂರೇಶ್ವರ ಶಿವಾಚಾರ್ಯರು ಮಾತನಾಡಿ, ಕನ್ನೇರಿ ಸ್ವಾಮಿ ಹಿಂದೂ ಸಮಾಜದ ಸಂಸ್ಕಾರ, ಸಂಸ್ಕೃತಿ ಪ್ರೀತಿಸುವುದರ ಜತೆಯಲ್ಲಿ ಪಾಲಿಸಿಕೊಂಡು ಬಂದಿದ್ದಾರೆ. ಅವರ ಸಾಧನೆ ಗೊತ್ತಿಲ್ಲದ ಕೆಲವರು ಅವರ ವಿರುದ್ಧ ಅಜೆಂಡಾ ರೂಪಿಸಿದ್ದಾರೆ. ಸದ್ಯದಲ್ಲೆ ಎಲ್ಲಾ ಸಮಾಜಗಳ ಸ್ವಾಮೀಜಿಗಳನ್ನು ಸೇರಿಸಿಕೊಂಡು ಸರಕಾರಕ್ಕೆ ಮನವಿ ಪತ್ರ ಕೊಡಲಾಗುವುದೆಂದು ಎಂದು ದೂರಿದರು.

ಗುಂಬಳಾಪುರ ಮಠದ ಸಿದ್ದಲಿಂಗೇಶ್ವರ ಶಿವಾಚಾರ್ಯರು, ವಿಶ್ವಕರ್ಮ ಸಮಾಜದ ಅಜೇಂದ್ರ ಸ್ವಾಮೀಜಿ, ಕಾಳಹಸ್ತೇಂದ್ರ ಸ್ವಾಮೀಜಿ, ಚರಬಸವೇಶ್ವರ ಗದ್ದುಗೆ ಬಸವಯ್ಯ ಶರಣರು, ಸಿದ್ದೇಶ್ವರ ಸ್ವಾಮೀಜಿ, ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಸಂಘ ಪರಿವಾರದ ಪ್ರಮುಖರು, ಪಂತಜಲಿ ಯೋಗ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
10 Comments
  • ನಿಮಗೂ ಅದೇ ಪದ ಬಳಸಿದರೆ ಗೊತ್ತಾಗುತ್ತೆ. ದೊಡ್ಡೋರಾಗಿ ಬಕೀಟ್ ಹಿಡಿತಿರಲ್ಲ ನಾಚಿಕೆ ಆಗಲ್ವಾ

  • ಶ್ರೀಶೈಲ ಜಗದ್ಗುರು ಸ್ವಾಮೀಜಿಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಅದಕ್ಕೆ ಸುಳ್ಳುಗಾರ ಮತಾಂಧ ಕನ್ನೇರಿ ಸ್ವಾಮೀಜಿಗೆ ಬೆಂಬಲ ಸೂಚಿಸಿದ್ದಾರೆ.
    ಇತ್ತಿಚೀನ 10-20 ವರ್ಷಗಳಿಂದ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಮಾಡುತ್ತಿದ್ದಾರೆ ಅವರ ಸರ್ಟಿಫಿಕೇಟ್ನಲ್ಲಿ
    ವೀರಶೈವ ಇದೆ ನೋಡಿ ಎಂದು ಹೇಳುವವರು 1904 ರಿಂದ
    ತಮ್ಮ ಎಸ್ ಎಸ್ ಎಲ್ ಸಿ ವರ್ಗಾವಣೆ ( Transfer certificate) ಪತ್ರಿಕೆಯಲ್ಲಿ ಲಿಂಗಾಯತ ಎಂದು ಬರೆಸಿಕೊಂಡಿದ್ದು ಕಣ್ಣು ಬಿಟ್ಟು ನೋಡಿಕೊಳ್ಳಿ ಸ್ವಾಮೀಜಿ
    12ನೇ ಶತಮಾನದಲ್ಲಿ ಸ್ವತಂತ್ರವಾಗಿ ಹುಟ್ಟಿದ್ದು ಲಿಂಗಾಯತ ಧರ್ಮ ಇಂದು ಭಾರತ ಸರ್ಕಾರದ ಸಾಂವಿಧಾನಿಕ ಮಾನ್ಯತೆಗೆ ಹೋರಾಟ ಸುಮಾರು ವರ್ಷಗಳಿಂದ ನಡೆಯುತ್ತಿದೆ. ವೀರಶೈವ ಲಿಂಗಾಯತ ಧರ್ಮದ ಒಂದು
    ಭಾಗವಷ್ಟೇ ಇನ್ನಾದರೂ ನಿಮಗೆ ಸತ್ಯದ ಅರಿವಾಗಲಿ
    ಅರಿವು ಆಗದಿದ್ದರೆ ವೀರಶೈವ ಪದದ ಜೊತೆಗೆ ಅಂಟಿಸಿಕೊಂಡ ಲಿಂಗಾಯತ ಪದ ಬಿಟ್ಟು ವೀರಶೈವರಾಗಿ
    ಬದುಕಿ. ನೀವು ಪರಾವಲಂಬಿಗಳು.
    ಲಿಂಗಾಯತರು ಸ್ವಾವಲಂಬಿಗಳು ಲಿಂಗಾಯತರು ಹಿಂದೂಗಳಲ್ಲ, ಲಿಂಗಾಯತರು ವೀರಶೈವರಲ್ಲ
    ಇದು ಕರ್ನಾಟಕದ ಎಲ್ಲ ಲಿಂಗಾಯತರ ಗಟ್ಟ ನಿಲುವು

      • ಶ್ರೀ ಶೈಲ ಸ್ವಾಮಿ ಕನೆರಿ ಆಡಿರುವ ಭಾಷೆ ನಿಮಗೆ ಆಡಿದರೆ ?? ಉರಿಯುತ್ತೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಆದರೆ ಅದರಲ್ಲಿ ಇತಿ ಮಿತಿ ಇರಬೇಕು

  • ಶ್ರೀಶೈಲ ಜಗದ್ಗುರು ಸ್ವಾಮೀಜಿಗಳು ಮತ್ತು ಕನ್ನೇರಿ…ಗಳು …ಬದಲಾವಣೆ ಆಗದ ಕುಳಗಳು.
    ನಾವೇ ಸಮಾಜದಲ್ಲಿ ಬದಲಾವಣೆ ತರಬೇಕೆ ಹೊರತು ಮತ್ತೊಬ್ಬರನ್ನು ದೂಷಿಸುವದರಲ್ಲಿ ಸಮಯ ಕಳೆಯಬಾರದು ಶರಣರೇ…

  • ಇವರೆಲ್ಲಾ ನಮ್ಮನ್ನು ಶಿಶುಮಕ್ಕಳೆಂದು ಕರೆದು ಕರೆದು, ಕಾಲಿಟ್ಟು ಕೈ ಇಟ್ಟು, ಗುದ್ದಿಗುದ್ದಿ, ಹಲ್ಕಟ ಹಲ್ಕಟ ಬೈಯುತ್ತಾ ಬೈಯುತ್ತಾ ಬೆಳೆಸಿ ಪೋಷಿಸಿದ್ದಾರೆ. ಇಂತವರ ಬದಲಾವಣೆ ಸಹೋವರೆಗೂ ಆಗಲ್ಲ

  • ಕನ್ನೇರಿ ಸ್ವಾಮಿ ಯಾವುದು ಅದ್ಭುತ ಅನುಭವ ಹಾಗು ಅವರ ವಿಚಾರದಲ್ಲಿ ಎರಡು ಮಾತು ಇಲ್ಲ. ಆದರೆ ಅವರು ಸಮರ್ಥನೆ ನಮ್ಮ ಮನಸ್ಸು ಗಾಯಗೊಂಡಿದ್ದಾರೆ. ಇನ್ನಾದರು ಬಹಿರಂಗವಾಗಿ ತಪ್ಪು ಅಂತ ಅಂದರೆ ಸಾಕು ಅವರ ಕ್ಷಮೆ ಕೇಳುವ ಅವಶ್ಯಕತೆ ಇಲ. 12 ಶತಮಾನದಿಂದ ಇಲ್ಲಿಯವರೆಗೂ ನಮ್ಮನ್ನು ಲಿಂಗಾಯತ ಒಂದು ಪ್ರತ್ಯೇಕ ಮಾಡಲು ಬೇರೆಯವರು ಬಿಡಲಿಲ್ಲ. ವೀರಶೈವರು ವೈದಿಕರು ಆದಕಾರಣ ಲಿಂಗಾಯತರು ವೀರಶೈವರು ಅಲ್ ಆದರೆ ವೀರಶೈವರು ಲಿಂಗಾಯತರಲ. ವೀರಶೈವರು ಲಿಂಗಾಯತರ ಭಾಗ. ಅವರು ವೈದಿಕರು ಅಂಟಿಕೊಂಡಿರುವವರು.

  • ಯಾರಿಗೂ ‘ಕೇಡಿಲ್ಲವಾಗಿ’ ಆನು ಒಲಿದಂತೆ ಹಾಡುವೆನಯ್ಯಾ ಕೂಡಲಸಂಗಮದೇವಾ
    * ಬಸವಣ್ಣನವರು.
    (ಇದು ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ).

  • Kanneri swami has been defending himself telling untruth to society Now uniting all the parasites who are enemies of
    Lingayats community since 12th century.

Leave a Reply

Your email address will not be published. Required fields are marked *