ಸಂಘರ್ಷದ ದಿನಗಳು 2: ಕನ್ನೇರಿ ಸ್ವಾಮಿಯ ಜೊತೆ ಸೋಮಣ್ಣ ಸಂಧಾನ ವಿಫಲ

ಬಸವ ಮೀಡಿಯಾ
ಬಸವ ಮೀಡಿಯಾ

ಕನ್ನೇರಿ ಸ್ವಾಮಿ ಕ್ಷಮೆ ಹೋಗಲಿ, ವಿಷಾದ ವ್ಯಕ್ತಪಡಿಸಲೂ ಸಿದ್ದವಿಲ್ಲ. ಯಾಕೆ?

ಬೆಂಗಳೂರು

ಕಳೆದ ವಾರ ಬಿಜೆಪಿಯ ಒಬ್ಬ ಜಿಲ್ಲಾಧ್ಯಕ್ಷರು ಸಿಕ್ಕಿ ಕನ್ನೇರಿ ಸ್ವಾಮಿ ವಿವಾದದ ಬಗ್ಗೆ ಮಾತನಾಡಿದರು. ಈ ವಿವಾದ ನಮ್ಮ ಸಮಾಜಕ್ಕೆ ಒಳ್ಳೆಯದಲ್ಲ. ಲಿಂಗಾಯತ ಮಠಾಧೀಶರ ಒಕ್ಕೂಟ ಇದನ್ನು ಬೆಳೆಯಲು ಬಿಡದೆ, ಬೇಗ ಬಗೆಹರಿಸಿಕೊಳ್ಳಬೇಕಿತ್ತು ಎಂದು ಹೇಳಿದರು.

ಅದಕ್ಕಿಂತ ಮುಂಚೆ ಒಬ್ಬ ಲಿಂಗಾಯತ ಸ್ವಾಮೀಜಿಯವರೂ ಇದೇ ಮಾತನ್ನು ಹೇಳಿದರು.

ಈ ಅಭಿಪ್ರಾಯ ಸರಿಯಲ್ಲ. ಈ ವಿವಾದವನ್ನು ಬಗೆಹರಿಸಿಕೊಳ್ಳಲು ಒಕ್ಕೂಟದ ಕಡೆಯಿಂದ ಕನಿಷ್ಠ ಎರಡು ಪ್ರಯತ್ನಗಳು ನಡೆದಿವೆ. ಆದರೆ ಕನ್ನೇರಿ ಸ್ವಾಮಿ ಮೊಂಡಾಗಿ ಹಠ ಹಿಡಿದು ಕುಳಿತಿರುವುದರಿಂದ ಎರಡೂ ಪ್ರಯತ್ನಗಳು ವಿಫಲವಾಗಿವೆ.

ಮೊದಲನೇ ಪ್ರಯತ್ನದಲ್ಲಿ ಕೇಂದ್ರ ಸಚಿವ ಸೋಮಣ್ಣ ಒಬ್ಬರು ಪ್ರಮುಖ ಲಿಂಗಾಯತ ಪೂಜ್ಯರ ಜೊತೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ವಿವಾದವನ್ನು ಕೊನೆಗೊಳಿಸುವಂತೆ ಪೂಜ್ಯರಿಗೆ ಸಲಹೆ ನೀಡಿ ತಾವೇ ಕನ್ನೇರಿ ಸ್ವಾಮಿಗೆ ಫೋನ್ ಹಚ್ಚಿ, ಪೂಜ್ಯರಿಗೆ ನೀಡಿದರು.

ಕನ್ನೇರಿ ಸ್ವಾಮಿಯ ಜೊತೆ ಸೌಜನ್ಯದಿಂದಲೇ ಮಾತನಾಡಿ ಪೂಜ್ಯರು ವಿವಾದ ಶುರುವಾಗಿದ್ದು ನಿಮ್ಮಿಂದ, ಎರಡು ಸಾಲು ವಿಷಾದ ವ್ಯಕ್ತಪಡಿಸಿಬಿಡಿ, ಮುಗಿದು ಹೋಗುತ್ತೆ ಎಂದು ಹೇಳಿದರು. ಅದಕ್ಕೆ ಉದ್ದಟತನದ ಪ್ರತಿಕ್ರಿಯೆ ನೀಡಿದ ಕನ್ನೇರಿ ಸ್ವಾಮಿ ‘ಬೇಕಾದರೆ ನೀವೇ ವಿಷಾದ ಕೇಳಿ’ ಎಂದು ಹೇಳಿ ಫೋನಿಟ್ಟರು. ಅವರ ಮಾತಿನಿಂದ ಸೋಮಣ್ಣನವರೂ ಬೇಸರಪಟ್ಟುಕೊಂಡರು ಎಂದು ತಿಳಿದು ಬಂದಿದೆ.

ಅದಕ್ಕಿಂತ ಮುಂಚೆ ಕನ್ನೇರಿ ಸ್ವಾಮಿಗೆ ಆಪ್ತರಾಗಿದ್ದ ಇನ್ನೊಬ್ಬ ಪೂಜ್ಯರು ಮಹಾರಾಷ್ಟ್ರಕ್ಕೆ ಹೋಗಿ ಅವರನ್ನು ಭೇಟಿಯಾದರು. ಅವರೂ ಕೂಡ ಕ್ಷಮೆ ಕೇಳಿ ವಿವಾದ ಮುಗಿಸಿ ಎಂದು ಸಲಹೆ ನೀಡಿದರು. ಆಗ ಕನ್ನೇರಿ ಸ್ವಾಮಿ ಅದೇ ಉದ್ಧಟತನದಿಂದ ‘ಒಕ್ಕೂಟದವರೇ ಕ್ಷಮೆ ಕೇಳಲಿ’ ಎಂದರು ಎಂದು ಪೂಜ್ಯರ ಆಪ್ತರೊಬ್ಬರು ಹೇಳಿದರು.

ಸಮಾಜದ ಮುಖಂಡರ ಜೊತೆ ವಿಶ್ವಾಸದಲ್ಲಿ ನಡೆದ ಮಾತುಕತೆಯಲ್ಲಿ ಈ ಮಾಹಿತಿ ಸಿಕ್ಕಿದ್ದರಿಂದ ಯಾವ ಪೂಜ್ಯರ ಹೆಸರನ್ನೂ ಬಹಿರಂಗಪಡಿಸುತ್ತಿಲ್ಲ.

ಇಷ್ಟು ಮಾಹಿತಿ ಹಂಚಿಕೊಂಡಾಗ ಬಿಜೆಪಿಯ ಜಿಲ್ಲಾಧ್ಯಕ್ಷರು ‘ಕೆಲವರು ಈ ವಿವಾದವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಉರಿಗೆ ತುಪ್ಪ ಹಾಕುವ ಕೆಲಸ ಒಳ್ಳೆಯದಲ್ಲ,’ ಎಂದು ಬೇಸರಪಟ್ಟುಕೊಂಡು ಹೇಳಿದರು.

ಕನ್ನೇರಿ ಸ್ವಾಮಿಯ ಭಂಡತನಕ್ಕೆ ಕಾರಣವೇನು? ಈ ವಿವಾದವನ್ನು ಬೆಳೆಸುತ್ತಿರುವವರು ಯಾರು? ಅವರ ಉದ್ದೇಶವೇನು? ಇದು ಈಗ ಲಿಂಗಾಯತ ಸಮಾಜದ ಮುಂದಿರುವ ಪ್ರಶ್ನೆಗಳು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
7 Comments
  • ಮನುಷ್ಯರನ್ನು ಧರ್ಮಗಳ ಆಧಾರದಲ್ಲಿ ವಿಭಜಿಸಿ ಮಾತೇಯವಾದ ಬಿತ್ತುತ್ತಿರುವ ದೇಶದ್ರೋಹಿ ಸನಾತನಿಗಳು.

  • ಈ ವಿವಾದ ನೋಡಿದರೆ ಗಿಡ ಮೊದಲೋ ಬೀಜ ಮೊದಲೋ ಗಾದೆ ಮಾತಿನಂತಿದೆ. ಬಗೆ ಹರಿಯುವದು ಹೇಗೆ?

  • ಕನ್ನೇರಿ ಶ್ರೀಗಳು ಲಿಂಗಾಯತ ಮಠಾಧೀಶರ ಒಕ್ಕೂಟದ ಪ್ರತಿಷ್ಠೆಯನ್ನೇ ಕೆಣುಕವ ರೀತಿ ಕಾಣುತ್ತಿದೆ. ಮತ್ತು ಕನ್ನೇಶ್ರೀಗಳು ಲಿಂಗಾಯತ ಮಠಾಧೀಶರನ್ನ ವಿರೋಧಿಸಿ ಬಿಜೆಪಿ ಪಕ್ಷ ಮತ್ತು ಸಂಘ ಪರಿವಾರದ ಮುಖಂಡತ್ವ ದೊರೆಕಿಸಿಕೊಳ್ಳುವ ಕನಸು ಕಂಡಂತೆ ಕಾಣುತ್ತಿದೆ. ಈ ಕನ್ನೇರಿ ಶ್ರೀ ಉದ್ಧಟತನಕ್ಕೆ ಸರಿಯಾದ ಉತ್ತರ ಕೊಟ್ಟು ಕ್ರಮ ಕೈಗೊಳ್ಳದಿದ್ದರೆ ಉಳಿದ ಸಣ್ಣ ಪುಟ್ಟ ಕ್ರಿಮಿಗಳೆಲ್ಲಾ ಲಿಂಗಾಯತ ಧರ್ಮದ ವಿರುಧ್ಧ ಹರಿಹಾಯಲು ಶುರು ಮಾಡುವತ್ತವೆ. ಏನೇ ಆಗಲಿ ಕನ್ನೇರಿ ಶ್ರೀ ಮತ್ತು ಕನ್ನೇರಿ ಶ್ರೀಗಳಿಗೆ ಸಫೋರ್ಟ್ ಮಾಡುತ್ತಿರುವವರಿಗೆ ಸರಿಯಾಗಿ ಪಾಠಕಲಿಸಲು ಜಾಗೃತಿ ಮೂಡಿಸಲೇ ಬೇಕಿದೆ ಒಬ್ಬ ಸ್ವಾಮೀಜಿಯಾಗಿ ಮತ್ತೊಬ್ಬ ಸ್ವಾಮೀಜಿಗಳನ್ನ ಅವ್ಯಾಚ ಶಬ್ದ ಬಳಸಿ ಮಾತನಾಡಿರುವುದು ಘನಘೋರ ಅಪರಾಧ

  • pseudo swamiji is highly egoistic
    He doesn’t know about relative(conditional) truth.
    Time , people & society will teach him a lesson.

  • ಕನ್ನೇರಿಯ ಶಿವದಾರದ ಕರಡಿಗೆ ಬಿಚ್ಚಿ ಜನಿವಾರ ಧರಿಸುವಂತೆ RSS BJPಗಳು ಮಾಡಿವೆ. ಇದು ಇತ್ತೀಚಿನದೇನಲ್ಲ… 2023ರ ಬಕ ಸಮಾವೇಶ 2005 ರ ಅಭಿಯಾನ ಸಮಾವೇಶದಲ್ಲಿ ಸೇರಿದ್ದ ಸಾಗರದೋಪಾದಿಯ ಬಸವಾಭಿಮಾನಿಗಳ ಸಮ್ಮಿಳನ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ದಿನದಂತೆ ನಡೆದ ಜಾಗ್ರುತಿ ಸಭೆ ಸಮಾರಂಭಗಳೆಲ್ಲವೂ ಹಿಂದೂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಅಸಹನೆ ಅಸೂಯೆಗಳ ಉರಿ ತಾಳಲಾಗದೆ ಕನ್ನೇರಿಯ ಮೂಲಕ ವಾಂತಿ ಮಾಡಿಕೊಂಡಿದೆ !

    ಶತಶತಮಾನಗಳಿಂದ ಬಸವಾಭಿಮಾನಿ ಕನ್ನೇರಿ ಪೂರ್ವಜರ ಕಾಯಕ ದಾಸೋಹ ನಿಷ್ಠೆಯಿಂದ ಭಕ್ತಾದಿಗಳು ಬೆಳೆಸಿದ ಮಠದ ಆಸ್ತಿಪಾಸ್ತಿಗಳಿಗೆ ಕ್ರಿಮಿನಲ್ ಹಿನ್ನೆಲೆಯ ವಾಹನ ಚಾಲಕನ ಹಿನ್ನಲೆ ಅರಿಯದೇ ಉಸ್ತುವಾರಿಗೆ ಈತನನ್ನು ನಿಯುಕ್ತಿಗೊಳಿಸಿದವರು ಮಾಡಿದ ತಪ್ಪಿನ ಪ್ರತಿಫಲ ಲಿಂಗಾಯತ ಭಕ್ತರು ಈಗ ಅನುಭವಿಸುವಂತಾಗಿದೆ …

    ಬಹಿರಂಗದಲ್ಲಿ ತಾನು ಶಿವಧಾರವೆಂದು ಬಿಂಬಿಸಿಕೊಳ್ಳುತ್ತಿರುವ ಕನ್ನೇರಿಯ ಅಂತರಂಗದಲ್ಲಿ ಸುತ್ತಿಕೊಂಡಿರುವುದು ಜನಿವಾರವೇ ! 12 ರಲ್ಲಿ ಅಂದು ಬಿಸಾಕಿ ಹೊರನಡೆದ ಅಣ್ಣನಂತೆ 21 ರಲ್ಲಿ ಬಸವಾಭಿಮಾನಿಗಳು ಒಗ್ಗೂಡಿ ಈ ಹಿಂದೂ ಮೂಲಭೂತವಾದಿಗಳ ಬ್ರಾಹ್ಮಣ್ಯದ ಜನಿವಾರದ ಭಾವನೆಯನ್ನು ಮನಗಳಿಂದ ಕಿತ್ತು ಬಿಸಾಡಬೇಕಿದೆ ಮಾನ್ಯತೆ ಪಡೆಯಲೇ ಬೇಕಿದೆ ! ಕನ್ನೇರಿಯಂತಹ ಹುಚ್ಚು ನಾಯಿಗಳ ಬೊಗಳಿಕೆಗಳಿಗೆ ಹೆದರದೇ ಬಸವಾಭಿಮಾನಿಗಳು ಚೆಡ್ಡಿಗಳ ದೊಣ್ಣೆ ಕಿತ್ತು ಬಡಿಯಬೇಕಿದೆ !

  • ಒಬ್ಬ ಒರಟ ಹುಂಬನನ್ನು ಪೀಠಕ್ಕೆ ಕರೆತಂದದ್ದು ತಪ್ಪಾಗಿದೆ. ಕೃಷಿ ಮಾಡಿ ಒಳ್ಳೆಯ ಕೃಷಿಕನಾಗುವ ಹುಂಬತನವನ್ನು ಬೆಳೆಸಿಕೊಂಡು ಆರ್ಎಸ್ಎಸ್ ಆಗಲೂ ಹೊರಟಿದ್ದಾನೆ. ಇವನನ್ನು ಕಾಲಿನ ಆಳಾಗಿ ನಡೆಸಿಕೊಳ್ಳುತ್ತಾರೆ.ಮನುವಾದಿಗಳು

Leave a Reply

Your email address will not be published. Required fields are marked *