ವೀರಶೈವ ಲಿಂಗಾಯತ ಮಹಾಸಭೆಯಿಂದ ರಾಜಕುಮಾರ ತರಿ ಅವರಿಗೆ ಸನ್ಮಾನ

ಚಿಂಚೋಳಿ:

ಕಲ್ಯಾಣ ಕರ್ನಾಟಕ ಭಾಗದಿಂದ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ನಿರ್ದೇಶಕರಾಗಿ ನಾಮನಿರ್ದೇಶನರಾದ ರಾಜಕುಮಾರ ತರಿ, ಮೀನಕೇರಾ ಅವರಿಗೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭೆಯ ಘಟಕದಿಂದ ಆದರ ಪೂರ್ವಕವಾಗಿ ಸನ್ಮಾನಿಸಲಾಯಿತು.

ರಾಜಕುಮಾರ ತರಿ ಲಿಂಗಾಯತ ಸಮಾಜದ ಮೀಸಲಾತಿ ಹೋರಾಟದಲ್ಲಿ ‌ಸಕ್ರಿಯವಾಗಿ ದಶಕಗಳ ಕಾಲ ತೊಡಗಿಸಿಕೊಂಡು ಅಖಂಡ ಲಿಂಗಾಯತ ಸಮಾಜದ ಸಂಘಟನೆ ಮಾಡುತ್ತಾ ಬಂದಿದ್ದಾರೆ.

ತರಿ ಅವರ ಮೂಲಕ ಸಮಾಜದ ಕೆಲಸಗಳು ನಡೆಯಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳ್ಗೆಗೆ ಶ್ರಮಿಸಲಿ ಎಂದು  ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ದುಬಲಗುಂಡಿ ಶುಭ ಕೋರಿದರು.

ಇದೇ ವೇಳೆ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಚಿಂಚೋಳಿ ತಾಲ್ಲೂಕಿನ ಸಮಾಜದ ಕೆಲಸ ಕಾರ್ಯಗಳಿಗೆ ನಿಗಮದ ಮೂಲಕ ನೆರವು ನೀಡಬೇಕೆಂದು ಮನವಿ ಮಾಡಿದರು.

ಶಿವರಾಜ ಪಾಟೀಲ, ನಂದಿಕುಮಾರ ಪಾಟೀಲ, ಸುರೇಶ ದೇಶಪಾಂಡೆ , ರಾಜಶೇಖರ ಹಿತ್ತಲ್ , ಮಲ್ಲಿಕಾರ್ಜುನ ಬುಶೆಟ್ಟಿ, ಶಂಕರ ಶಿವಪುರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *