ಭಾರತೀಯ ಪ್ರಜೆ ಎನ್ನಲ್ಲಿಕ್ಕೆ ಯೋಗ್ಯನಲ್ಲ: ಸುಪ್ರೀಂ ಕೋರ್ಟ್
ಇತ್ತಿಚೀನ ದಿನಗಳಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ಕುರಿತು ಅಶ್ಲೀಲ ಮಾತುಗಳನ್ನು ಆಡಿದ ಪ್ರಯುಕ್ತ ವಿಜಯಪುರ, ಬಾಗಲಕೋಟೆ ಜಿಲ್ಲಾ ಪ್ರವೇಶಕ್ಕೆ ಆಯಾ ಜಿಲ್ಲಾಧಿಕಾರಿಗಳು ನಿರ್ಬಂಧ ಮಾಡಿದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಕನ್ನೇರಿ ಸ್ವಾಮಿ ಅರ್ಜಿ ಸಲ್ಲಿಸಿದಾಗ ಅದು ತೀರಸ್ಕರಿಸಲ್ಪಟ್ಟು, ಒಬ್ಬ ಸ್ವಾಮೀಜಿಯಾಗಿ ಕೆಳಹಂತದಮಾತುಗಳನ್ನು ಆಡಿದ್ದು ಸರಿಯಲ್ಲ ಎಂದು ಆತನ ಅರ್ಜಿ ತೀರಸ್ಕರಿಸುತ್ತಾರೆ.
ತದನಂತರ ಕನ್ನೇರಿ ಶ್ರೀಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ಮಾತುಗಳು ನಾಗರಿಕ ಸಮಾಜ ತಲೆತಗ್ಗಿಸುವ ಮಾತುಗಳು. ನೀವು ಕೆಲವು ದಿವಸ ಮಠದಲ್ಲಿದ್ದು ಧ್ಯಾನ ಮಾಡಿ, ನೀವು ಮಠ ಬಿಟ್ಟು ಹೋಗಬೇಡಿ ನೀವು ಭಾರತೀಯ ಪ್ರಜೆ ಎನ್ನಲ್ಲಿಕ್ಕೆ ಯೋಗ್ಯನಲ್ಲ ಎಂದು ದೇಶದ ಘನತೆವೆತ್ತ ಸುಪ್ರೀಂ ಕೋರ್ಟ್ ಉಗಿದು ಉಪ್ಪಿನಕಾಯಿ ಮಾಡಿದ್ದು ಆತನಿಗೆ ಅರ್ಥವಾಗಿಲ್ಲ.
ಮತ್ತೆ ಇಂದು ಕನ್ನೇರಿ ಸ್ವಾಮೀಜಿ ನಾಯಿಬಾಲ ಡೊಂಕು ಎಂಬಂತೆ ಹಳೆ ಚಾಳಿ ಮುಂದುವರಿಸಿ ತನ್ನ ಹರಕು ಬಾಯಿಯ ಈ ಮತಾಂಧ, ಮನುವಾದಿ ಕಾಲಾಳು ಮಾನಸಿಕ ರೋಗಿಯಂತೆ ಚೀರಾಟ, ಕೂಗಾಟ ಮಾಡುತ್ತಿದ್ದಾನೆ.
ಈ ರೀತಿ ಮಾತನಾಡುವುದರಿಂದ ಲಿಂಗಾಯತರು ವಿಚಲಿತರಾಗುತ್ತಾರೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ. ಇಂಥ ಕುತಂತ್ರಗಳನ್ನು ಲಿಂಗಾಯತರು ೧೨ನೇ ಶತಮಾನದಿಂದ ಎದುರಿಸುತ್ತಾ ಬಂದಿದ್ದಾರೆ. ಲಿಂಗಾಯತರು ಎಂದೂ ವಿಚಲಿತರಾಗುವುದಿಲ್ಲ. ಇನ್ನು ಗಟ್ಟಿಯಾಗಿ ನಿಮ್ಮ ಹರಕು ಬಾಯಿಗೆ ಹೊಲಿಗೆ ಹಾಕುವ ಮೂಲಕ ಉತ್ತರ ನೀಡುತ್ತಾರೆ.
ಹಾಗೇ ನೀವು ಆಪಾದನೆ ಮಾಡುತ್ತಿರುವ ವಿಚಾರಗಳ ಕುರಿತು ಸಾಕ್ಷಿ, ಆಧಾರದೊಂದಿಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಈ ಮೂಲಕ ಸವಾಲು ಹಾಕುತ್ತದೆ.
ಬಸವ ತತ್ವದವರು ತಾಲಿಬಾನಿಗಳು ಅಲ್ಲ. ತಾಲಿಬಾನಿಗಳನ್ನು ಮಟ್ಟಹಾಕುವ ರಾಷ್ಟ್ರವಾದಿಗಳು. ನಿಮ್ಮದು ವಿನಾಶಕಾಲೇ ವಿಪರೀತ ಬುದ್ಧಿ. ಈ ಬಗ್ಗೆ ಎಚ್ಚರವಿರಲಿ.
